ಬೆಂಗಳೂರು: ಹೆಚ್ ಡಿ ಕುಮಾರಸ್ವಾಮಿಯವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಇಂದು ಅಕ್ಷರಶಃ ಎಲ್ಲ ತೃತೀಯ ರಂಗದ ನಾಯಕರ ಉಪಸ್ಥಿತಿಗೆ ಸಾಕ್ಷಿಯಾಯಿತು.
Bengaluru: Opposition leaders, including Congress' Sonia Gandhi & Rahul Gandhi, SP's Akhilesh Yadav, AP CM Chandrababu Naidu, WB CM Mamata Banerjee, RJD's Tejashwi Yadav, CPI(M)'s Sitaram Yechury, NCP's Sharad Pawar, & newly sworn in Karnataka CM HD Kumaraswamy at Vidhana Soudha. pic.twitter.com/nCTbqqkGqZ
— ANI (@ANI) May 23, 2018
#WATCH Opposition leaders, including Congress' Sonia Gandhi & Rahul Gandhi, SP's Akhilesh Yadav, RJD's Tejashwi Yadav, CPI(M)'s Sitaram Yechury and NCP's Sharad Pawar, with newly sworn-in Chief Minister of Karnataka HD Kumaraswamy at Vidhana Soudha. pic.twitter.com/kTnFBQ0cqC
— ANI (@ANI) May 23, 2018
ಆ ಮೂಲಕ ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಎದುರಿಸಲು ಇಂದಿನ ವೇದಿಕೆ ಸಾಕ್ಷಿಯಾಗಿದೆ.ಇಂದಿನ ಕುಮಾರಸ್ವಾಮಿಯವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮಾಯಾವತಿ, ಅಖಿಲೇಶ್ ಯಾದವ್, ಸೀತಾರಾಂ ಯೆಚೂರಿ, ತೇಜಸ್ವಿ ಯಾದವ್, ಮಮತಾ ಬ್ಯಾನರ್ಜೀ, ಚಂದ್ರಬಾಬು ನಾಯ್ಡು ,ಶರದ್ ಯಾದವ್ ರಂತಹ ಘಟಾನುಘಟಿಗಳು ಇಂದಿನ ಸಮಾರಂಭದಲ್ಲಿ ಭಾಗವಹಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ದ ಈ ಎಲ್ಲ ಪಕ್ಷಗಳ ಒಗ್ಗಟ್ಟಿ ಮಂತ್ರವು ವಿಪಕ್ಷಗಳ ಭವಿಷ್ಯದ ಕಾರ್ಯತಂತ್ರಕ್ಕೆ ಇದು ಮುನ್ನಡಿ ಬರೆಯಲಿದೆ ಎಂದು ಹೇಳಲಾಗುತ್ತಿದೆ. ಈ ವೇದಿಕೆ ನಿರ್ಮಿಸಲು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ ಎಂದು ತಿಳಿದುಬಂದಿದೆ.
Bengaluru: JD(S)'s HD Kumaraswamy with Governor Vajubhai Vala, after taking oath as Chief Minister of Karnataka at Vidhana Soudha. pic.twitter.com/JAI7DNbdfG
— ANI (@ANI) May 23, 2018
ಒಂದೆಡೆ ಪ್ರಾದೇಶಿಕ ಪಕ್ಷಗಳು ಬಿಜೆಪಿ ವಿರುದ್ದ ಅಸಮಾಧಾನಗೊಂಡಿದ್ದು ತಮ್ಮ ಅಸ್ತಿತ್ವದ ಉಳುವಿಗಾಗಿ ಮುಂಬರುವ ಚುನಾವಣೆಯಲ್ಲಿ ಏಕತಾ ಮಂತ್ರದ ಮೂಲಕ ಮೋದಿ ಸರ್ಕಾರದ ವಿರುದ್ದ ರಣಕಹಳೆ ಊದಿವೆ. ಬಿಜೆಪಿಯ ಅಶ್ವಮೇಧ ಕುದುರೆಯನ್ನು ತಡೆಗಟ್ಟಲು ಪ್ರತಿಪಕ್ಷಗಳು ಕರ್ನಾಟಕ ಮಾದರಿಯ ಸೂತ್ರವನ್ನು ಅನುಸರಿಸಲಿವೆ ಎಂದು ಹೇಳಲಾಗಿದೆ.