ಬೆಂಗಳೂರು: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕರ್ನಾಟಕದ ಜನರು ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಕರ್ನಾಟಕದಿಂದ ಕಿತ್ತೆಸೆಯಲಿದ್ದಾರೆ ಎಂದರು.
ದಲಿತರ ವಿಷಯವಾಗಿ ಮೌನ ವಹಿಸಿರುವ ಪ್ರಧಾನಿ ಮೋದಿ ನಿಲುವಿನ ಬಗ್ಗೆ ಕಿಡಿ ಕಾರಿರುವ ರಾಹುಲ್ ಗಾಂಧಿ" ಪ್ರಧಾನಿ ಮೋದಿಯವರು ಒಂದು ಕಡೆ ಬಿಆರ್ ಅಂಬೇಡ್ಕರ್ ಅವರನ್ನು ಸ್ಮರಿಸುತ್ತಾರೆ ಇನ್ನೊಂದೆಡೆ ದಲಿತರರು ಹಲ್ಲೆಗೊಳಗಾದಾಗ ಮೌನವಹಿಸುತ್ತಾರೆ ಎಂದರು. ಆದ್ದರಿಂದ ಕರ್ನಾಟಕದ ಜನರು ಬಿಜೆಪಿ ಮತ್ತು ನರೇಂದ್ರ ಮೋದಿ ರಾಜ್ಯದಿಂದ ಕಿತ್ತೆಸೆಯಲಿದ್ದಾರೆ ಎಂದರು.
ಮೋದಿ ಸಚಿವ ಸಂಪುಟದಲ್ಲಿರುವ ಸಚಿವರು ಸಂವಿಧಾನವನ್ನು ಬದಲಿಸಲಿದ್ದೇವೆ ಎಂದು ಹೇಳುತ್ತಾರೆ,ಆದರೆ ಏನೇ ಆಗಲಿ ನಾವು ಆ ರೀತಿ ಆಗಲು ಬಿಡುವುದಿಲ್ಲ ಎಂದು ತಿಳಿಸಿದರು.ರಾಹುಲ್ ಗಾಂಧಿ ಚುನಾವಣಾ ಪ್ರಚಾರಕ್ಕೂ ಮೊದಲು ನಗರದಲ್ಲಿನ ಹಜರತ್ ತವಾಕ್ಕಲ್ ಮಸ್ತಾನ್ ಷಾ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.