ನಿಮಗೆ 40 ಲಕ್ಷ ಮೌಲ್ಯದ ಗಡಿಯಾರ ನೀಡಿದವರು ಯಾರು? ಸಿದ್ದುಗೆ ಶಾ ಪ್ರಶ್ನೆ

ಕರ್ನಾಟಕ ವಿಧಾನಸಭೆ ಚುನಾವಣೆಗಳ ದಿನಾಂಕ ಸಮೀಪಿಸುತ್ತಿದ್ದಂತೆ, ಪರಸ್ಪರರ ಮೇಲಿನ ದಾಳಿಗಳು ರಾಜ್ಯದಲ್ಲಿ ತೀಕ್ಷ್ಣವಾಗ ತೊಡಗಿವೆ.

Last Updated : May 7, 2018, 03:15 PM IST

Trending Photos

ನಿಮಗೆ 40 ಲಕ್ಷ ಮೌಲ್ಯದ ಗಡಿಯಾರ ನೀಡಿದವರು ಯಾರು? ಸಿದ್ದುಗೆ ಶಾ ಪ್ರಶ್ನೆ  title=
Photo: PTI

ನರಗುಂದ: ಕರ್ನಾಟಕ ವಿಧಾನಸಭೆ ಚುನಾವಣೆಗಳ ದಿನಾಂಕ ಸಮೀಪಿಸುತ್ತಿದ್ದಂತೆ, ಪರಸ್ಪರರ ಮೇಲಿನ ದಾಳಿಗಳು ರಾಜ್ಯದಲ್ಲಿ ತೀಕ್ಷ್ಣವಾಗ ತೊಡಗಿವೆ. ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಕೈಗೊಂಡಿರುವ ಪ್ರಚಾರಾಂದೋಲನದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಳಿಕ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿದ್ದಾರೆ. 

ನರಗುಂದದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರಾಹುಲ್ ಬಗ್ಗೆ ಮಾತನಾಡುತ್ತಾ, ಸ್ವತಃ ಓಡಿಹೋಗುವವರು ಇತರರಿಗೆ ಏನು ಕಲಿಸುತ್ತಾರೆ ಎಂದು ವ್ಯಂಗ್ಯವಾಡಿದರು. ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು ರಾಜ್ಯದಲ್ಲಿ 24 ಬಿಜೆಪಿ ಕಾರ್ಯಕರ್ತರು ಕೊಲ್ಲಲ್ಪಟ್ಟರು, ಆದರೆ ಸಿದ್ದರಾಮಯ್ಯ ಸರ್ಕಾರ ಯಾರನ್ನೂ ಬಂಧಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹಾಡಾದ ವಂದೇ ಮಾತರಂ ಅನ್ನು ಕಾಂಗ್ರೆಸ್ ಅವಮಾನಿಸಿದೆ ಎಂದು ಆರೋಪಿಸಿರುವ ಅಮಿತ್ ಶಾ, ನಾವು ಅಂತಹ ಜನರಿಗೆ ಪಾಠ ಕಲಿಸುತ್ತೇವೆ ಎಂದು ಹೇಳಿದರು. ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸಿದ್ಧರಾಮಯ್ಯ ಅವರನ್ನು ಗೆಲ್ಲಿಸುತ್ತಾರೆ ಎಂದು ಭಾವಿಸಿದ್ದಾರೆ. ಸಿದ್ದರಾಮಯ್ಯ ಸ್ವತಃ ಸೋತು ಸುಣ್ಣವಾಗುತ್ತಾರೆ, ಅವರು ಪಕ್ಷವನ್ನು ಹೇಗೆ ಗೆಲ್ಲಿಸುತ್ತಾರೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರವನ್ನು ಬಿಟ್ಟು, ಬಾದಾಮಿಗೆ ಓಡಿಬಂದಿದ್ದಾರೆ. ಸಿದ್ದರಾಮಯ್ಯನವರೇ ನಿಮ್ಮ ಕಿವಿ ತೆರೆದು ಕೇಳಿರಿ, ಬದಾಮಿಯಲ್ಲೂ ಶ್ರೀರಾಮುಲು ನಿಮ್ಮನ್ನು ಮಣಿಸಲಿದ್ದಾರೆ ಎಂದು ತಿಳಿಸಿದರು. ಮುಂದುವರೆದು ಮಾತನಾಡಿದ ಅವರು, ನಾನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಲು ಬಯಸುತ್ತೇನೆ " 40 ಲಕ್ಷ ಗಡಿಯಾರವನ್ನು ನಿಮಗೆ ಯಾರು ನೀಡಿದರು? ಯಾರು ನೀಡಿದರು ಮತ್ತು ಏತಕ್ಕಾಗಿ ನೀಡಿದರು?" ಎಂದು ಪ್ರಶ್ನಿಸಿದರು.

Trending News