ಮಹಿಳೆಯರಿಗಾಗಿಯೇ ಇದೆ 5 ಅತ್ಯುತ್ತಮ ಪಿಂಚಣಿ ಯೋಜನೆಗಳು ! ಈ ಯೋಜನೆಗಳಿಂದ ಸಿಗುವುದು ದುಪ್ಪಟ್ಟು ಲಾಭ !

ನಿಯಮಿತ ಪಿಂಚಣಿ ಪಡೆಯಲು ಇಂತಹ ಹಲವು ಯೋಜನೆಗಳಿವೆ. ನಾವು ಈ ಲೇಖನದಲ್ಲಿ ಮಹಿಳೆಯರಿಗಾಗಿ ಇರುವ ಉತ್ತಮ ಪಿಂಚಣಿ ಯೋಜನೆಗಳು ಮತ್ತು ಅವುಗಳಿಂದ ಪ್ರಯೋಜನಗಳೇನು ಎನ್ನುವ ಮಾಹಿತಿ ನೀಡುತ್ತಿದ್ದೇವೆ. 

Written by - Ranjitha R K | Last Updated : Nov 27, 2023, 08:43 AM IST
  • ಮಹಿಳೆಯರಿಗೆ 5 ಅತ್ಯುತ್ತಮ ಪಿಂಚಣಿ ಯೋಜನೆಗಳು
  • ಮಹಿಳೆಯರು ಹೆಚ್ಚು ಹೆಚ್ಚು ಸ್ವಾವಲಂಬಿಗಳಾಗುತ್ತಿದ್ದಾರೆ
  • ನಿವೃತ್ತಿಯ ನಂತರವೂ ಸ್ವಾವಲಂಬಿ ಜೀವನ ನಡೆಸಲು, ಉತ್ತಮ ಯೋಜನೆ ಅಗತ್ಯ.
ಮಹಿಳೆಯರಿಗಾಗಿಯೇ ಇದೆ 5 ಅತ್ಯುತ್ತಮ ಪಿಂಚಣಿ ಯೋಜನೆಗಳು ! ಈ ಯೋಜನೆಗಳಿಂದ ಸಿಗುವುದು ದುಪ್ಪಟ್ಟು ಲಾಭ ! title=

ಬೆಂಗಳೂರು : ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸ್ವಾವಲಂಬಿಗಳಾಗುತ್ತಿದ್ದಾರೆ. ಅವರು ತಮ್ಮ ಅಗತ್ಯಗಳಿಗಾಗಿ ಪತಿ ಅಥವಾ ಮಕ್ಕಳನ್ನು ಅವಲಂಬಿಸಬೇಕಾಗಿಲ್ಲ. ನಿವೃತ್ತಿಯ ನಂತರವೂ ಸ್ವಾವಲಂಬಿ ಜೀವನ ನಡೆಸಲು, ಉತ್ತಮ ಯೋಜನೆ ಅಗತ್ಯ.  ಹೀಗೆ ಮಾಡಿದರೆ ವೃದ್ಧಾಪ್ಯದಲ್ಲಿ ಸಣ್ಣಪುಟ್ಟ ಅಗತ್ಯಗಳಿಗಾಗಿ ಯಾರ ಬಳಿಯೂ ನೆರವಿಗೆ ಕೈ ಚಾಚಬೇಕಿಲ್ಲ.  ನಿಯಮಿತ ಪಿಂಚಣಿ ಪಡೆಯಲು ಇಂತಹ ಹಲವು ಯೋಜನೆಗಳಿವೆ. ನೀವು ಎಷ್ಟು ಬೇಗನೆ ಹೂಡಿಕೆ ಮಾಡಲು ಪ್ರಾರಂಭಿಸುತ್ತೀರೋ ಅಷ್ಟು ಸುಲಭವಾಗುತ್ತದೆ. ನಿಮ್ಮ ಖರ್ಚು ಮತ್ತು ಆದಾಯವನ್ನು ಪರಿಗಣಿಸಿ ನಿವೃತ್ತಿ ಯೋಜನೆಯನ್ನು ನೀವು ಆರಿಸಿಕೊಳ್ಳಬೇಕು. ಇಂದು ನಾವು ಈ ಲೇಖನದಲ್ಲಿ ಮಹಿಳೆಯರಿಗಾಗಿ ಇರುವ ಉತ್ತಮ ಪಿಂಚಣಿ ಯೋಜನೆಗಳು ಮತ್ತು ಅವುಗಳಿಂದ ಪ್ರಯೋಜನಗಳೇನು  ಎನ್ನುವ ಮಾಹಿತಿ ನೀಡುತ್ತಿದ್ದೇವೆ. 

ಮಹಿಳೆಯರಿಗೆ 5 ಅತ್ಯುತ್ತಮ ಪಿಂಚಣಿ ಯೋಜನೆಗಳು:
ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಪ್ಲಾನ್:

ಯುನಿಟ್ ಲಿಂಕ್ಡ್ ವಿಮಾ ಯೋಜನೆ ಮಹಿಳೆಯರಿಗೆ ಉತ್ತಮ ಹೂಡಿಕೆಯ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಜೀವ ವಿಮೆ ಜೊತೆಗೆ ಹೂಡಿಕೆ ಸೌಲಭ್ಯವೂ ಇದೆ. ಮೆಚ್ಯುರಿಟಿ ನಂತರ ಸಾಮಾನ್ಯ ಪಿಂಚಣಿಯ ಪ್ರಯೋಜನವೂ ಲಭ್ಯವಿದೆ. ಎಲ್ಐಸಿ ಸೇರಿದಂತೆ ಹಲವು ವಿಮಾ ಕಂಪನಿಗಳು ಪ್ರಸ್ತುತ ಈ ಯೋಜನೆಗಳನ್ನು ನಡೆಸುತ್ತಿವೆ. Mayumi ULIP ಎಂಬ ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಪಾಲಿಸಿಯು ಷೇರು ಮಾರುಕಟ್ಟೆಯಲ್ಲಿ ವಿಮೆಯೊಂದಿಗೆ ಸಿಗುವ ಹೂಡಿಕೆ ಯೋಜನೆಯಾಗಿದೆ. ಐದು ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ಯುಲಿಪ್ ಪಾಲಿಸಿಗೆ ಪಾವತಿಸಿದ ಪ್ರೀಮಿಯಂಗೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ.

ಇದನ್ನೂ ಓದಿ : ಸರ್ಕಾರಿ ಸಣ್ಣ ಉಳಿತಾಯ ಯೋಜನೆಗಳಲ್ಲಿ ಸಿಗುವ ಈ ಲಾಭಗಳು ಬಹುತೇಕರಿಗೆ ತಿಳಿದಿರುವುದಿಲ್ಲ, ಇಲ್ಲಿದೆ ಪಟ್ಟಿ

ಮ್ಯೂಚುವಲ್ ಫಂಡ್:
ಮ್ಯೂಚುವಲ್ ಫಂಡ್‌ಗಳಲ್ಲಿ ಹೆಚ್ಚು ಆದಾಯವನ್ನು ಪಡೆಯಬಹುದು. SIP ಅಡಿಯಲ್ಲಿ ಮಾಸಿಕ ಪ್ರೀಮಿಯಂ ಪಾವತಿಸಬಹುದು. ಅದೇ ಸಮಯದಲ್ಲಿ, SWP ಮೂಲಕ,ಆದಾಯವನ್ನು ಪಡೆಯಬಹುದು. ಅಂದರೆ ನಿರ್ದಿಷ್ಟ ಅವಧಿಗೆ ಪಿಂಚಣಿ ಪಡೆಯಬಹುದು. 

ಅಟಲ್ ಪಿಂಚಣಿ ಯೋಜನೆ:
ಅಟಲ್ ಪಿಂಚಣಿ ಯೋಜನೆ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯು ಕಡಿಮೆ ಆದಾಯ ಹೊಂದಿರುವ ಜನರಿಗೆ ಸೂಕ್ತವಾಗಿದೆ. 18 ವರ್ಷದಿಂದ 40 ವರ್ಷದೊಳಗಿನ ಯಾರು ಬೇಕಾದರೂ ಈ ಪ್ರಯೋಜನ ಪಡೆಯಬಹುದು. ಈ ಯೋಜನೆಯಡಿ, 60 ವರ್ಷ ವಯಸ್ಸಿನ ನಂತರ, ಅವರು 1000 ರಿಂದ 5000 ರೂ.ವರೆಗೆ ಪಿಂಚಣಿ ಪಡೆಯುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : ಸೆಬಿ ಒಂದೇ ದಿನದ ವ್ಯಾಪಾರ ಇತ್ಯರ್ಥದ ಯೋಜನೆ: ಮಾರ್ಚ್‌ 2024ರೊಳಗೆ ಚಾಲನೆ!

ರಾಷ್ಟ್ರೀಯ ಪಿಂಚಣಿ ಯೋಜನೆ:
ರಾಷ್ಟ್ರೀಯ ಪಿಂಚಣಿ ಯೋಜನೆ ಮಹಿಳೆಯರಿಗೆ ಅತ್ಯುತ್ತಮ ಪಿಂಚಣಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮತ್ತು ವಯಸ್ಸಿನ ಆಧಾರದ ಮೇಲೆ ಪಿಂಚಣಿ ಲಭ್ಯವಿದೆ. ಮಹಿಳೆ ತನ್ನ 30ರ ಹರೆಯದಲ್ಲಿ ಪ್ರತಿ ತಿಂಗಳು 5000 ರೂಪಾಯಿ ಹೂಡಿಕೆ ಮಾಡಿದರೆ, 60 ವರ್ಷ ಪೂರೈಸಿದ ನಂತರ ಆಕೆಗೆ ಸುಮಾರು 45,000 ರೂಪಾಯಿ ಪಿಂಚಣಿ ಸಿಗುತ್ತದೆ.

LIC ಜೀವನ್ ಅಕ್ಷಯ್ 7 ಪಿಂಚಣಿ ಯೋಜನೆ :
LICಯ ಈ ವರ್ಷಾಶನ ಯೋಜನೆಯು ಉತ್ತಮ ಹೂಡಿಕೆಯ ಆಯ್ಕೆಯಾಗಿದೆ. 30 ನೇ ವಯಸ್ಸಿನಲ್ಲಿ ಪಾಲಿಸಿಯನ್ನು ಖರೀದಿಸಬಹುದು. ಕನಿಷ್ಠ ಖರೀದಿ ಬೆಲೆ 1 ಲಕ್ಷ ರೂ. ಗರಿಷ್ಠ ಹೂಡಿಕೆ ಮಿತಿ ಇಲ್ಲ.

ಇದನ್ನೂ ಓದಿ : Good News: ಮಹಿಳೆಯರ ಸ್ವಯಂ ಉದ್ಯೋಗಕ್ಕೆ 'ಮೈಕ್ರೋ ಕ್ರೆಡಿಟ್ ಯೋಜನೆ'ಯಡಿ ಸಾಲ ಸೌಲಭ್ಯ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News