ಅಮೆಜಾನ್‌ ನಲ್ಲಿ ಪಾಸ್ ಪೊರ್ಟ್‌ ಕವರ್‌ ಆರ್ಡರ್‌ ಮಾಡಿದರೆ ಮನೆಬಾಗಿಲಿಗೆ ಬಂದಿದ್ದು ಮಾತ್ರ....

ವಯನಾಡಿನ ವ್ಯಕ್ತಿ ಅಕ್ಟೋಬರ್ 30 ರಂದು ಅಮೆಜಾನ್‌ನಿಂದ ಪಾಸ್‌ಪೋರ್ಟ್ ಕವರ್ ಆರ್ಡರ್ ಮಾಡಿದ್ದರು. ನವೆಂಬರ್ 1 ರಂದು ಅವರ ಆರ್ಡ್ರ್‌ ಕೈ ಸೇರಿತ್ತು. 

Written by - Ranjitha R K | Last Updated : Nov 4, 2021, 04:19 PM IST
  • ಪಾಸ್‌ ಪೋರ್ಟ್‌ ಆರ್ಡರ್‌ ಮಾಡಿದರೆ ಬಂತು ಅಸಲಿ ಪಾಸ್‌ ಪೋರ್ಟ್‌
  • ಕೇರಳದ ವಯನಾಡ್ ಜಿಲ್ಲೆಯ ಕಣಿಯಂಬೆಟ್ಟಾ ದಲ್ಲಿ ನಡೆದ ಘಟನೆ
  • ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಉತ್ತರ ಕೇಳಿ ದಂಗಾದ ಗ್ರಾಹಕ
ಅಮೆಜಾನ್‌ ನಲ್ಲಿ ಪಾಸ್ ಪೊರ್ಟ್‌ ಕವರ್‌ ಆರ್ಡರ್‌ ಮಾಡಿದರೆ ಮನೆಬಾಗಿಲಿಗೆ ಬಂದಿದ್ದು ಮಾತ್ರ.... title=
ಪಾಸ್‌ ಪೋರ್ಟ್‌ ಆರ್ಡರ್‌ ಮಾಡಿದರೆ ಬಂತು ಅಸಲಿ ಪಾಸ್‌ ಪೋರ್ಟ್‌ (photo zee news)

ನವದೆಹಲಿ : ಆನ್‌ ಲೈನ್‌ ನಲ್ಲಿ ಏನನ್ನೋ ಆರ್ಡರ್‌ (Online order) ಮಾಡಿದರೆ ಇನ್ಯಾವುದೋ ಡೆಲಿವೆರಿ ಆಗುತ್ತದೆ ಎನ್ನುವುದನ್ನು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಕೆಲವೊಮ್ಮೆ ದುಬಾರಿ ಬೆಲೆ ಪಾವತಿಸಿದ್ದರೂ ಅಗ್ಗದ ಸರಕು ಕೈ ಸೇರುತ್ತದೆ. ಹೀಗಾದಾಗ ಕೆಲವರು ಅದರ ಬಗ್ಗೆ ದೂರು ನೀಡುತ್ತಾರೆ. ಇನ್ನು ಕೆಲವಾರು ಆನ್‌ ಲೈನ್‌ ಶಾಪಿಂಗ್‌ (Online shopping) ಉಸಾಬರಿ ಸಾಕು ಎಂದು ಸುಮ್ಮನಾಗಿ ಬಿಡುತ್ತಾರೆ. 

ಇಂಥಹದ್ದೇ ವಿಚಿತ್ರ ಘಟನೆಯೊಂದರಲ್ಲಿ, ಕೇರಳದ ವಯನಾಡ್ ಜಿಲ್ಲೆಯ ಕಣಿಯಂಬೆಟ್ಟಾ ಮೂಲದ ಮಿಥುನ್ ಬಾಬು ಎಂಬವರ ಜೊತೆ ನಡೆದಿದೆ. ಇವರು ಅಮೆಜಾನ್‌ ನಲ್ಲಿ  (Amazon) ಪಾಸ್‌ಪೋರ್ಟ್ ಕವರ್ ಅನ್ನು ಆರ್ಡರ್‌ ಮಾಡಿದ್ದರು. ಆದರೆ ಪಾಸ್‌ ಪೋರ್ಟ್‌ ಕವರ್‌ ಬದಲಿಗೆ ಇವರಗೆ ಅಸಲಿ  ಪಾಸ್‌ಪೋರ್ಟ್ ಡೆಲಿವೆರಿಯಾಗಿದೆ. 

ಇದನ್ನೂ ಓದಿ : ನಿಮ್ಮ ಬಳಿ 1,5, 10 ರೂ. ಯ ಇಂಥಹ ನೋಟುಗಳಿದ್ದರೆ ನೀವೂ ಆಗಬಹುದು ಲಕ್ಷಾಧಿಪತಿ..!

ವಯನಾಡಿನ ವ್ಯಕ್ತಿ ಅಕ್ಟೋಬರ್ 30 ರಂದು ಅಮೆಜಾನ್‌ನಿಂದ (Amazon) ಪಾಸ್‌ಪೋರ್ಟ್ ಕವರ್ ಆರ್ಡರ್ ಮಾಡಿದ್ದರು. ನವೆಂಬರ್ 1 ರಂದು ಅವರ ಆರ್ಡ್ರ್‌ ಕೈ ಸೇರಿತ್ತು. ಆದರೆ ಬಂದ ಪ್ಯಾಕೆಟ್‌ ಓಪನ್‌ ಮಾಡಿದರೆ ಅದರೊಳಗೆ ಇದ್ದ ಅಸಲಿ  ಪಾಸ್ಪೋರ್ಟ್ ಕಂಡು, ಮಿಥುನ್ ಬಾಬು  ಗಾಬರಿಯಾಗಿದ್ದಾರೆ. ಇನ್ನು ಕುತೂಹಲಕಾರಿ ಸಂಗತಿಯೆಂದರೆ ಆ ಪಾಸ್‌ ಪೋರ್ಟ್‌ (Passport) ತ್ರಿಶೂರ್‌ನ ಕುನ್ನಂಕುಲಂ ನಿವಾಸಿ ಮುಹಮ್ಮದ್ ಸಾಲಿಹ್ ಎಂಬವರದ್ದು. 

ಘಟನೆಯ ಬಗ್ಗೆ ರಿಪೊರ್ಟ್‌ ಮಾಡಲು ತಕ್ಷಣವೇ ಮಿಥುನ್‌ ಅಮೆಜಾನ್ ಗ್ರಾಹಕ ಸೇವೆಯನ್ನು ಸಂಪರ್ಕಿಸಿದ್ದಾರೆ. ಆದರೆ ಕಸ್ಟಮರ್ ಕೇರ್ ಕಾರ್ಯನಿರ್ವಾಹಕರ ಭವಿಷ್ಯದಲ್ಲಿ ಇಂತಹ ಘಟನೆ ಪುನರಾವರ್ತನೆಯಾಗುವುದಿಲ್ಲ ಮತ್ತು ಇನ್ನು ಮುಂದೆ ಹೆಚ್ಚು ಜಾಗರೂಕರಾಗಿರುವಂತೆ ಮಾರಾಟಗಾರರಿಗೆ ಸೂಚಿಸಲಾಗುವುದು ಎಂದಿದ್ದಾರೆ. 

ಇದನ್ನೂ ಓದಿ :Post Office ಸ್ಕೀಂನಲ್ಲಿ ಪ್ರತಿ ತಿಂಗಳು 1500 ರೂ. ಹೂಡಿಕೆ ಮಾಡಿದರೆ ಕೈ ಸೇರಲಿದೆ 35 ಲಕ್ಷ

ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ (Customer care executive) ಕೂಡ ತನಗೆ ಬಂದಿರುವ ಪಾಸ್ ಪೋರ್ಟ್ ಅನ್ನು ಏನು ಮಾಡಬೇಕೆಂದು ತಿಳಿಸಿಲ್ಲ ಎಂದಿದ್ದಾರೆ. ಆದರೆ, ಮಿಥುನ್ ಬಾಬು ಶೀಘ್ರದಲ್ಲೇ ಪಾಸ್ ಪೋರ್ಟ್ ಅನ್ನು ಮಾಲೀಕರಿಗೆ ಹಸ್ತಾಂತರಿಸಲು ಮುಂದಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News