Aadhaar Card Update: ಆಧಾರ್ ಗೆ ಸಂಬಂಧಿಸಿದ ಈ ಮಹತ್ವದ ಸೇವೆಯನ್ನು ಸ್ಥಗಿತಗೊಳಿಸಿದ ಯುಐಡಿಎಐ, ನಿಮ್ಮ ಮೇಲೆ ನೇರ ಪ್ರಭಾವ

Aadhaar Card Update: ಆಧಾರ್ ಗೆ ಸಂಬಂಧಿಸಿದ ಎರಡು ಮಹತ್ವದ ಸೇವೆಗಳನ್ನು ಯುಐಡಿಎಐ ಸ್ಥಗಿತಗೊಳಿಸಿದೆ. ಇದರಿಂದ ಎಲ್ಲಾ ಆಧಾರ್ ಕಾರ್ಡ್ ಧಾರಕರ ಮೇಲೆ ನೇರ ಪ್ರಭಾವ ಉಂಟಾಗಲಿದೆ. ಯಾವ ಎರಡು ಮಹತ್ವದ ಸೇವೆಗಳು ತಿಳಿಯಲು ಸುದ್ದಿ ಓದಿ  

Written by - Nitin Tabib | Last Updated : Jun 26, 2022, 07:12 PM IST
  • ಆಧಾರ್ ಗೆ ಸಂಬಂಧಿಸಿದ ಎರಡು ಮಹತ್ವದ ಸೇವೆಗಳನ್ನು ಯುಐಡಿಎಐ ಸ್ಥಗಿತಗೊಳಿಸಿದೆ.
  • ಇದರಿಂದ ಎಲ್ಲಾ ಆಧಾರ್ ಕಾರ್ಡ್ ಧಾರಕರ ಮೇಲೆ ನೇರ ಪ್ರಭಾವ ಉಂಟಾಗಲಿದೆ.
  • ಯಾವ ಎರಡು ಮಹತ್ವದ ಸೇವೆಗಳು ತಿಳಿಯಲು ಸುದ್ದಿ ಓ
Aadhaar Card Update: ಆಧಾರ್ ಗೆ ಸಂಬಂಧಿಸಿದ ಈ ಮಹತ್ವದ ಸೇವೆಯನ್ನು ಸ್ಥಗಿತಗೊಳಿಸಿದ ಯುಐಡಿಎಐ, ನಿಮ್ಮ ಮೇಲೆ ನೇರ ಪ್ರಭಾವ title=
Aadhaar Card Latest Update

Aadhaar Card Update: ಇಂದು ಆಧಾರ್ ಕಾರ್ಡ್ ಒಂದು ಮಹತ್ವದ ಸರ್ಕಾರಿ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರಿ ಕೆಲಸದಿಂದ ಹಿಡಿದು ಬ್ಯಾಂಕಿಂಗ್ ಅಥವಾ ಇತರ ಪ್ರಮುಖ ಕೆಲಸಗಳಿಗೆ ಆಧಾರ್ ಹೊಂದಿರುವುದು ಕಡ್ಡಾಯವಾಗಿದೆ. ಅಲ್ಲದೆ, ಆಧಾರ್ ಕಾರ್ಡ್‌ನಲ್ಲಿ ನೀಡಲಾಗುವ ಮಾಹಿತಿಯನ್ನು ನಾವು ಕಾಲಕಾಲಕ್ಕೆ ಸಂಪೂರ್ಣವಾಗಿ ನವೀಕರಿಸುವುದು ಬಹಳ ಮುಖ್ಯವಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಕಾಲಕಾಲಕ್ಕೆ ಆಧಾರ್‌ಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ನವೀಕರಣಗಳನ್ನು ಜಾರಿಗೊಳಿಸುತ್ತಲೇ ಇರುತ್ತದೆ. ಏತನ್ಮಧ್ಯೆ, UIDAI ಆಧಾರ್‌ಗೆ ಸಂಬಂಧಿಸಿದ ಎರಡು ಮಹತ್ವದ ಸೇವೆಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ. ಇದು ಎಲ್ಲಾ ಆಧಾರ್ ಕಾರ್ಡ್ ಧಾರಕರ ಮೇಲೆ ಪ್ರಭಾವ ಬೀರಲಿದೆ.

ವಿಳಾಸ ದೃಢೀಕರಣ ಪತ್ರ
ಮುಂದಿನ ಆದೇಶದವರೆಗೆ ವಿಳಾಸ ದೃಢೀಕರಣ ಪತ್ರದ ಮೂಲಕ ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ನವೀಕರಿಸುವ ಸೌಲಭ್ಯವನ್ನು UIDAI ನಿಲ್ಲಿಸಿದೆ. ಈ ಮೊದಲು ಕಾರ್ಡ್ ಧಾರಕರು ಬಾಡಿಗೆದಾರರು ಅಥವಾ ಇತರ ಆಧಾರ್ ಕಾರ್ಡ್ ಹೊಂದಿರುವವರ ಮೂಲಕ ತಮ್ಮ ವಿಳಾಸವನ್ನು ಸುಲಭವಾಗಿ ನವೀಕರಿಸಬಹುದಾಗಿತ್ತು. ಆದರೆ, ಇದೀಗ UIDAI ತನ್ನ ವೆಬ್‌ಸೈಟ್‌ನಿಂದ ವಿಳಾಸ ದೃಢೀಕರಣ ಪತ್ರಕ್ಕೆ ಸಂಬಂಧಿಸಿದ ಆಯ್ಕೆಯನ್ನೇ ಸಹ ತೆಗೆದುಹಾಕಿದೆ. UIDAI ಪ್ರಕಾರ, ಮುಂದಿನ ಆದೇಶದವರೆಗೆ ವಿಳಾಸ ದೃಢೀಕರಣ ಪತ್ರದ ಸೌಲಭ್ಯವನ್ನು ನಿಲ್ಲಿಸಲಾಗಿದೆ.

https://uidai.gov.in/images/commdoc/valid_documents_list.pdf ನಲ್ಲಿ ನೀಡಲಾಗಿರುವ ಮಾನ್ಯತೆ ಹೊಂದಿರುವ ವಿಳಾಸ ಪುರಾವೆಗಳ ಪಟ್ಟಿಯಿಂದ ಯಾವುದೇ ಒಂದು ವಿಳಾಸ ಪುರಾವೆಯ ಮೂಲಕ ನೀವು ನಿಮ್ಮ ವಿಳಾಸವನ್ನು ನವೀಕರಿಸಬಹುದು 

ಎಲ್ಲರ ಮೇಲೆ ಪ್ರಭಾವ ಬೀರಲಿದೆ 
ಈ ನಿರ್ಧಾರದಿಂದ ಜನರು ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ನವೀಕರಿಸಲು ತೊಂದರೆ ಅನುಭವಿಸಬೇಕಾಗಲಿದೆ. ಅದರಲ್ಲಿಯೂ ವಿಶೇಷವಾಗಿ ಬಾಡಿಗೆ ಮನೆಯಲ್ಲಿ ವಾಸಿಸುವ ಅಥವಾ ದೀರ್ಘಕಾಲದವರೆಗೆ ಕೆಲಸದ ನಿಮಿತ್ತ ಸ್ಥಳ ಬದಲಾಯಿಸುತ್ತಿರುವ ಜನರು, ಇದೀಗ ಆಧಾರ್‌ನಲ್ಲಿ ವಿಳಾಸವನ್ನು ನವೀಕರಿಸುವಲ್ಲಿ ತೊಂದರೆ ಅನುಭವಿಸಬೇಕಾಗಬಹುದು. ವಿಳಾಸವನ್ನು ಮಾರ್ಪಡಿಸಲು ಬೇರೆ ಯಾವುದೇ ಪುರಾವೆಗಳಿಲ್ಲದವರಿಗೆ, ಇದೊಂದು ದೊಡ್ಡ ಸಮಸ್ಯೆಯಾಗಿ ಕಾಡಲಿದೆ.

ಇದನ್ನೂ ಓದಿ-Earn Money: 1 ರೂ. ಮುಖಬೆಲೆಯ ಈ ನೋಟಿನಿಂದ ನೀವು ಲಕ್ಷಾಧಿಪತಿಯಾಗಬಹುದು

ಆಧಾರ್ ಕಾರ್ಡ್ ಮರುಮುದ್ರಣ ಸಹ ಸ್ಥಗಿತಗೊಳಿಸಲಾಗಿದೆ
UIDAI ಹಳೆಯ ಶೈಲಿಯಲ್ಲಿ ಆಧಾರ್ ಕಾರ್ಡ್ ಮರುಮುದ್ರಣ ಸೇವೆಯನ್ನು ಕೂಡ ಸ್ಥಗಿತಗೊಳಿಸಿದೆ. ಪ್ರಸ್ತುತ ಹಳೆಯ ಕಾರ್ಡ್‌ಗೆ ಬದಲಿಗೆ, UIDAI ಇದೀಗ ಪ್ಲಾಸ್ಟಿಕ್ PVC ಕಾರ್ಡ್‌ಗಳನ್ನು ನೀಡುತ್ತದೆ. ಈ ಕಾರ್ಡ್ ಅನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಲು ಸುಲಭವಾಗಿದೆ. ಇದು ಡೆಬಿಟ್ ಕಾರ್ಡ್‌ನಂತೆಯೇ ಇದ್ದು. ಆಧಾರ್ ಕಾರ್ಡ್ ಅಗತ್ಯವಿರುವ ಜಾಗದಲ್ಲಿ, ಇದೀಗ ನೀವು ಈ ಹೊಸ ಕಾರ್ಡ್ ಅನ್ನು ಪಾಕೆಟ್ ಮತ್ತು ವ್ಯಾಲೆಟ್ನಲ್ಲಿ ಸುಲಭವಾಗಿ ಇರಿಸಬಹುದು.

ಇದನ್ನೂ ಓದಿ-New Wage Code: ನೌಕರರ ಪಾಲಿಗೊಂದು ಬಿಗ್ ನ್ಯೂಸ್, ನಿಮ್ಮ ಖಾತೆ ಸೇರಲಿವೆ 1.16 ಕೋಟಿ ರೂ. ಇಲ್ಲಿದೆ ಲೆಕ್ಕಾಚಾರ

ಈ ಕುರಿತು ಟ್ವಿಟರ್‌ನಲ್ಲಿ ಬಳಕೆದಾರರ ಪ್ರಶ್ನೆಗೆ ಪ್ರತಿಕ್ರಿಯಿಸಿಯಿಸಿರುವ ಆಧಾರ್ ಸಹಾಯ ಕೇಂದ್ರ,  ಆತ್ಮೀಯ ನಾಗರಿಕರೆ, ಆಧಾರ್ ಮರುಮುದ್ರಣ ಸೇವೆಯನ್ನು ಅಮಾನತುಗೊಳಿಸಲಾಗಿದೆ ಎಂದು ಟ್ವೀಟ್ ಮಾಡಿದೆ. ಬದಲಿಗೆ ನೀವು ಆನ್‌ಲೈನ್‌ನಲ್ಲಿ ಆಧಾರ್ ಪಿವಿಸಿ ಕಾರ್ಡ್ ಅನ್ನು ಆರ್ಡರ್ ಮಾಡಬಹುದು. ಇದೇ ವೇಳೆ ನೀವು ಬೇಕಾದರೆ, ಇ-ಆಧಾರ್‌ನ ಪ್ರಿಂಟ್ ಔಟ್ ಅನ್ನು ಸಹ ತೆಗೆದುಕೊಂಡು ಅದನ್ನು ಕಾಗದದ ರೂಪದಲ್ಲಿ ಇರಿಸಬಹುದು ಎಂದು ಹೇಳಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News