ಈ ದೇಶಕ್ಕೆ ಭಾರತದಿಂದ ಸಿಗುತ್ತಿದೆ ಭಾರೀ ಆರ್ಥಿಕ ಸಹಾಯ: ಕೇಂದ್ರ ಬಜೆಟ್ ಮಂಡನೆ ವೇಳೆ ಹೊರಬಿತ್ತು ಮಹತ್ವದ ಮಾಹಿತಿ

Union Budget 2024-25 Important things: ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಬಜೆಟ್ ಅಂದಾಜು ಸ್ವಲ್ಪ ಕಡಿಮೆಯಾಗಿದೆ. 

Written by - Bhavishya Shetty | Last Updated : Jul 23, 2024, 04:44 PM IST
    • ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2024-25 ಅನ್ನು ಮಂಡಿಸಿದ್ದಾರೆ.
    • ಬಿಡುಗಡೆಯಾದ ದಾಖಲೆಗಳಿಂದ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ
    • ಭಾರತ ಸರ್ಕಾರವು ವಿದೇಶಿ ನೆರವಿಗೆ ಭಾರಿ ಮೊತ್ತವನ್ನು ಖರ್ಚು ಮಾಡುತ್ತಿದೆ
ಈ ದೇಶಕ್ಕೆ ಭಾರತದಿಂದ ಸಿಗುತ್ತಿದೆ ಭಾರೀ ಆರ್ಥಿಕ ಸಹಾಯ: ಕೇಂದ್ರ ಬಜೆಟ್ ಮಂಡನೆ ವೇಳೆ ಹೊರಬಿತ್ತು ಮಹತ್ವದ ಮಾಹಿತಿ title=
File Photo

Union Budget 2024-25 Important things: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಕೇಂದ್ರ ಬಜೆಟ್ 2024-25 ಅನ್ನು ಮಂಡಿಸಿದ್ದಾರೆ. ಬಜೆಟ್ ಘೋಷಣೆ ಬಳಿಕ ಬಿಡುಗಡೆಯಾದ ದಾಖಲೆಗಳಿಂದ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ದಾಖಲೆಗಳ ಪ್ರಕಾರ, ಭಾರತ ಸರ್ಕಾರವು ವಿದೇಶಿ ನೆರವಿಗೆ ಭಾರಿ ಮೊತ್ತವನ್ನು ಖರ್ಚು ಮಾಡುತ್ತಿದ್ದು, ಇದರಲ್ಲಿ ಭೂತಾನ್‌ಗೆ ಗರಿಷ್ಠ ಸಹಾಯವನ್ನು ನೀಡಲಾಗುತ್ತಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಬಜೆಟ್ ಅಂದಾಜು ಸ್ವಲ್ಪ ಕಡಿಮೆಯಾಗಿದೆ. FY 2024-25 ಕ್ಕೆ MEA ಗಾಗಿ ಬಜೆಟ್ ಅಂದಾಜು ₹22,155 ಕೋಟಿ. ಈ ಮೊತ್ತವು FY 2023-24 ರಲ್ಲಿ ನಿಗದಿಪಡಿಸಿದ ₹18,050 ಕೋಟಿಗಿಂತ ಹೆಚ್ಚು, ಆದರೆ ಅದೇ ಆರ್ಥಿಕ ವರ್ಷಕ್ಕೆ ₹29,121 ಕೋಟಿಗಳ ಪರಿಷ್ಕೃತ ಅಂದಾಜಿಗಿಂತ ಕಡಿಮೆ.

ಇದನ್ನೂ ಓದಿ:  ಬಜೆಟ್ ಮಂಡನೆಯಾಗುತ್ತಿದ್ದಂತೆಯೇ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ !ಚಿನ್ನಾಭರಣ ಖರೀದಿದಾರರು ನಿರಾಳ

ಪರಿಷ್ಕೃತ ಅಂದಾಜಿನ ಪ್ರಕಾರ, 2023-24ನೇ ಸಾಲಿನಲ್ಲಿ ಭಾರತ ಸರ್ಕಾರವು ವಿದೇಶಿ ಸರ್ಕಾರಗಳಿಗೆ ₹ 6,541.79 ಕೋಟಿ ಮೊತ್ತದ ನೆರವು ನೀಡಿತ್ತು. ಈ ಮೊತ್ತವು 2023-24ನೇ ಹಣಕಾಸು ವರ್ಷಕ್ಕೆ ನಿಗದಿಪಡಿಸಿದ ₹ 5,848.58 ಕೋಟಿ ಬಜೆಟ್‌ಗಿಂತ ಹೆಚ್ಚು. 2024-25ರ ಆರ್ಥಿಕ ವರ್ಷದ ಅಂದಾಜು ₹5,667.56 ಕೋಟಿ.

ಭೂತಾನ್‌ʼಗೆ ಗರಿಷ್ಠ ಸಹಾಯ

2024-2025ರ ಬಜೆಟ್ ಪ್ರಕಾರ, ಭೂತಾನ್‌ʼಗೆ ₹2,068.56 ಕೋಟಿಯಷ್ಟು ಹೆಚ್ಚಿನ ನೆರವು ಸಿಗುವ ನಿರೀಕ್ಷೆಯಿದೆ. ಈ ಮೊತ್ತ ಕಳೆದ ವರ್ಷದ ₹2,400 ಕೋಟಿಗಿಂತ ಕಡಿಮೆ. 2023-2024ರ ಆರ್ಥಿಕ ವರ್ಷದ ಪರಿಷ್ಕೃತ ಬಜೆಟ್‌ʼನಲ್ಲಿ ₹2,398.97 ಕೋಟಿ ವೆಚ್ಚವಾಗಿದೆ.

ಮಾಲ್ಡೀವ್ಸ್‌ಗೆ ಎಷ್ಟು ಸಹಾಯ?

ಕಳೆದ ವರ್ಷದಂತೆ ಈ ಬಾರಿಯೂ ಮಾಲ್ಡೀವ್ಸ್‌ಗೆ ₹ 400 ಕೋಟಿ ಅನುದಾನ ನೀಡಲಾಗುತ್ತದೆ. ಆದರೆ, 2023-2024ರ ಆರ್ಥಿಕ ವರ್ಷದ ಪರಿಷ್ಕೃತ ಬಜೆಟ್‌ನಲ್ಲಿನ ವೆಚ್ಚವು ₹770.90 ಕೋಟಿಗಳಷ್ಟಿತ್ತು, ಇದು ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು. ನೇಪಾಳ ಮತ್ತು ಮಾಲ್ಡೀವ್ಸ್‌ʼಗೆ ಕ್ರಮವಾಗಿ ₹700 ಕೋಟಿ ಮತ್ತು ₹400 ಕೋಟಿ ನೆರವು ಘೋಷಿಸಲಾಗಿದೆ. ಭಾರತ ಸರ್ಕಾರವು 2023-24ರಲ್ಲಿ ವಿದೇಶಿ ಸರ್ಕಾರಗಳಿಗೆ ₹6,541.79 ಕೋಟಿ ನೀಡಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರಲ್ಲಿ ವಿತ್ತೀಯ ಕೊರತೆಯ ಗುರಿಯನ್ನು 4.9% GDP ಯಲ್ಲಿ ನಿಗದಿಪಡಿಸಿದ್ದಾರೆ.

ಆಫ್ರಿಕಾ ರಾಷ್ಟ್ರಗಳಿಗೆ ₹200 ಕೋಟಿ
ಆಫ್ರಿಕನ್ ರಾಷ್ಟ್ರಗಳಿಗೆ ₹ 200 ಕೋಟಿ, ಬಾಂಗ್ಲಾದೇಶಕ್ಕೆ ₹ 120 ಕೋಟಿ, ಸೆಶೆಲ್ಸ್‌ʼಗೆ ₹ 40 ಕೋಟಿ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಿಗೆ ₹ 30 ಕೋಟಿ ನೆರವು ನೀಡಲಾಗುತ್ತದೆ. 2025-26ರ ವೇಳೆಗೆ ವಿತ್ತೀಯ ಕೊರತೆಯನ್ನು GDP ಯ 4.5% ಕ್ಕೆ ತಗ್ಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಭಾರತದಿಂದ ಸಹಾಯ ಪಡೆಯುತ್ತಿರುವ ಟಾಪ್ 10 ದೇಶಗಳು

1. ಭೂತಾನ್: ₹2,068.56 ಕೋಟಿ

2. ನೇಪಾಳ: ₹700 ಕೋಟಿ

2. ಮಾಲ್ಡೀವ್ಸ್: ₹400 ಕೋಟಿ

3. ಮಾರಿಷಸ್: ₹370 ಕೋಟಿ

4. ಮ್ಯಾನ್ಮಾರ್: ₹250 ಕೋಟಿ

5. ಶ್ರೀಲಂಕಾ: ₹245 ಕೋಟಿ

6. ಅಫ್ಘಾನಿಸ್ತಾನ: ₹200 ಕೋಟಿ

7. ಆಫ್ರಿಕನ್ ದೇಶ: ₹200 ಕೋಟಿ

8. ಬಾಂಗ್ಲಾದೇಶ: ₹120 ಕೋಟಿ

9. ಸೀಶೆಲ್ಸ್: ₹40 ಕೋಟಿ

10. ಲ್ಯಾಟಿನ್ ಅಮೆರಿಕ ದೇಶಗಳು: ₹30 ಕೋಟಿ

ಇದನ್ನೂ ಓದಿ:  ಮಂತ್ರಿ ಜೊತೆ ನನ್ನ ಪತ್ನಿಗೆ ಅಫೇರ್... ಅದಕ್ಕೆ ಅವಳನ್ನ ಕೊಂದುಬಿಟ್ಟೆ! ನಟ ಸಂಜಯ್‌ ದತ್‌ ಸೆನ್ಸೇಷನಲ್‌ ಹೇಳಿಕೆ ವೈರಲ್‌

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News