ಬ್ಯಾಂಕ್ ಖಾತೆದಾರರೇ ಗಮನಿಸಿ , ನಾಲ್ಕು ಲಕ್ಷ ನಷ್ಟವಾಗದಂತೆ ತಡೆಯಲು ಇಂದೇ ಮಾಡಿ ಮುಗಿಸಿ ಈ ಕೆಲಸ

ಪ್ರೀಮಿಯಂ ಪಾವತಿಸುವ ಮೂಲಕ ಈ ಯೋಜನೆಗಳ ಲಾಭವನ್ನು ಪಡೆಯಬಹುದು.  ಪ್ರತಿ ವರ್ಷ ಮೇ 31 ರೊಳಗೆ ಈ ಯೋಜನೆಗಳನ್ನು ನವೀಕರಿಸಲಾಗುತ್ತದೆ. ಇದಕ್ಕಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅಗತ್ಯವಿರುವಷ್ಟು ಮೊತ್ತವನ್ನು ಇಟ್ಟಿರಬೇಕಾಗುತ್ತದೆ

Written by - Ranjitha R K | Last Updated : May 27, 2022, 11:57 AM IST
  • ಜನಸಾಮಾನ್ಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದ ಸರ್ಕಾರ
  • ಆಟೋ ಡೆಬಿಟ್ ಆಗುತ್ತದೆ ರಿನ್ಯುವಲ್ ಹಣ
  • ಎರಡೂ ಯೋಜನೆಗಳ ಪ್ರೀಮಿಯಂ 342 ರೂ. ಪಾವತಿಸಬೇಕು
ಬ್ಯಾಂಕ್ ಖಾತೆದಾರರೇ ಗಮನಿಸಿ , ನಾಲ್ಕು ಲಕ್ಷ ನಷ್ಟವಾಗದಂತೆ ತಡೆಯಲು ಇಂದೇ ಮಾಡಿ ಮುಗಿಸಿ ಈ ಕೆಲಸ   title=
PMJJBY Renewal

ಬೆಂಗಳೂರು :  ಜನಸಾಮಾನ್ಯರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಸಣ್ಣ ಪ್ರೀಮಿಯಂ ಪಾವತಿಸುವ ಮೂಲಕ ಈ ಕೆಲವು ಯೋಜನೆಗಳ ಲಾಭವನ್ನು ಪಡೆಯಬಹುದು. ಸಾಮಾನ್ಯ ಜನರಿಗಾಗಿ ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಅಂತಹ ಎರಡು ಯೋಜನೆಗಳೆಂದರೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ  ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ .

ಆಟೋ ಡೆಬಿಟ್ ಆಗುತ್ತದೆ ರಿನ್ಯುವಲ್ ಹಣ : 
ಪ್ರೀಮಿಯಂ ಪಾವತಿಸುವ ಮೂಲಕ ಈ ಯೋಜನೆಗಳ ಲಾಭವನ್ನು ಪಡೆಯಬಹುದು.  ಪ್ರತಿ ವರ್ಷ ಮೇ 31 ರೊಳಗೆ ಈ ಯೋಜನೆಗಳನ್ನು ನವೀಕರಿಸಲಾಗುತ್ತದೆ. ಇದಕ್ಕಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅಗತ್ಯವಿರುವಷ್ಟು ಮೊತ್ತವನ್ನು ಇಟ್ಟಿರಬೇಕಾಗುತ್ತದೆ. ರಿನ್ಯುವಲ್  ಸಂದರ್ಭದಲ್ಲಿ ಹಿಂದಿನ ವರ್ಷ ಈ ಯೋಜನೆಗಳಿಗೆ ಸೇರಿದವರ ಖಾತೆಯಿಂದ ನಿಗದಿತ ಮೊತ್ತವನ್ನು ಡೆಬಿಟ್ ಮಾಡಲಾಗುವುದು. 

ಇದನ್ನೂ ಓದಿ :  Arecanut Today: ರಾಜ್ಯದ ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಳಿತ

330 ರೂ.ಗೆ 2 ಲಕ್ಷ ಕವರ್ :
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಲ್ಲಿ 18 ರಿಂದ 50 ವರ್ಷ ವಯಸ್ಸಿನ ಜನರು ಸೇರಬಹುದು. ಈ ಯೋಜನೆ ಅಡಿಯಲ್ಲಿ ವರ್ಷಕ್ಕೆ 330 ರೂಪಾಯಿ ಪಾವತಿಸಿದರೆ 2 ಲಕ್ಷ ರೂಪಾಯಿ ಜೀವ ವಿಮೆ ಸಿಗುತ್ತದೆ. ಅದೇ ರೀತಿ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಲ್ಲಿ  18 ರಿಂದ 70 ವರ್ಷ ವಯಸ್ಸಿನವರೆಗಿನ ಜನರು ಸೇರಬಹುದು. ಇದರಲ್ಲಿ ವರ್ಷಕ್ಕೆ 12 ರೂ. ಪಾವತಿಸಿದರೆ 2 ಲಕ್ಷ ರೂ. ವಿಮೆ ಲಭ್ಯವಾಗುತ್ತದೆ. 

ಎರಡೂ ಯೋಜನೆಗಳ ಪ್ರೀಮಿಯಂ 342 ರೂ :
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ, ಅಪಘಾತದಿಂದ ಮರಣ ಅಥವಾ ಅಂಗವೈಕಲ್ಯವಾದರೆ ಈ ವಿಮೆ ಮೊತ್ತ ಸಿಗುತ್ತದೆ. ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾದಾರರ ಕುಟುಂಬಕ್ಕೆ  2 ಲಕ್ಷ ರೂ. ಮತ್ತು ಭಾಗಶಃ ಅಂಗವೈಕಲ್ಯ ಉಂಟಾದರೆ ವಿಮಾದಾರರಿಗೆ 1 ಲಕ್ಷ ರೂ.ಗಳನ್ನು ನೀಡುವ ನಿಬಂಧನೆ ಇದೆ. ಇದರ ಪ್ರಕಾರ ಮೇ 31ರವರೆಗೆ ಎರಡೂ ಯೋಜನೆಗಳಿಗೆ ವಾರ್ಷಿಕ 342 ರೂ. ಪ್ರೀಮಿಯಂ ಪಾವತಿಸಬೇಕು.

ಇದನ್ನೂ ಓದಿ : Komaki Electric Scooters: ಭಾರತದಲ್ಲಿ 2 ಹೊಸ ಸ್ಮಾರ್ಟ್ ಇ-ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ಕೊಮಾಕಿ

ನಿಮ್ಮ ಖಾತೆಯಲ್ಲಿ ಅಗತ್ಯ ಬ್ಯಾಲೆನ್ಸ್ ಇಲ್ಲದಿದ್ದರೆ, ಈ ಎರಡು ವಿಮಾ ರಕ್ಷಣೆಯನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಹೀಗಾದಾಗ 4 ಲಕ್ಷ ರೂಪಾಯಿ ವಿಮಾ ರಕ್ಷಣೆಯಿಂದ ವಂಚಿತರಾಗಬೇಕಾಗುತ್ತದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News