ನವದೆಹಲಿ: ನೀವು ‘ಕ್ಯಾಶ್ ಫಾರ್ ಗೋಲ್ಡ್’ನ ಜಾಹೀರಾತುಗಳನ್ನು ನೋಡಿರುತ್ತೀರಿ. ಆದರೆ ನೀವು ‘ಕ್ಯಾಶ್ ಫಾರ್ ಕ್ಯಾಶ್’ ಬಗ್ಗೆ ಯೋಚಿಸಿದ್ದೀರಾ? 2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ನಿಷೇಧಿಸಿದ ಹಳೆಯ 500 ರೂ. ಮುಖಬೆಲೆಯ ನೋಟು ನಿಮ್ಮ ಬಳಿ ಇದ್ದರೆ ನೀವು ಮನೆಯಲ್ಲಿಯೇ ಕುಳಿತು ಸುಲಭವಾಗಿ 10 ಸಾವಿರ ರೂ.ವರೆಗೂ ಹಣ ಗಳಿಸಬಹುದು.
ಕೇಂದ್ರ ಸರ್ಕಾರ ನವೆಂಬರ್ 2016 ರಲ್ಲಿ ನೋಟು ಅಮಾನ್ಯಗೊಳಿಸುವ ಮುನ್ನ 500 ರೂ.ನ ಹಳೆಯ ನೋಟು(Old Rs 500 Note)ಗಳು ದೇಶದಲ್ಲಿ ಚಲಾವಣೆಯಲ್ಲಿದ್ದವು. ಭಾರತೀಯ ರಿಸರ್ವ್ ಬ್ಯಾಂಕ್(RBI) ಕರೆನ್ಸಿಗೆ ಒಪ್ಪಿಗೆ ನೀಡಿದಾಗ ಅದನ್ನು ಸ್ಥಿರ ಮಾದರಿಯೊಂದಿಗೆ ಮುದ್ರಿಸಲಾಗುತ್ತದೆ. ಆದ್ದರಿಂದ ನೋಟುಗಳಲ್ಲಿ ಕೆಲವು ಟಿಪ್ಪಣಿಗಳು ಒಂದೇ ರೀತಿ ಕಾಣುವ ಸಾಧ್ಯತೆಯಿದೆ. ಆದರೆ ಅವುಗಳು ತಮ್ಮದೇ ಆದ ವಿಶಿಷ್ಟತೆಯನ್ನು ಹೊಂದಿವೆ. ಕರೆನ್ಸಿ ನೋಟುಗಳನ್ನು ಮುದ್ರಿಸುವ ವೇಳೆ ಕೆಲವು ತಪ್ಪುಗಳು ಕಂಡುಬಂದಲ್ಲಿ ಆ ನೋಟು ಅಮೂಲ್ಯವಾಗುತ್ತದೆ.
ಇದನ್ನೂ ಓದಿ: NPS Rule Change: NPS ನಿಯಮಗಳಲ್ಲಿ ಭಾರಿ ಬದಲಾವಣೆ
ಕೇಂದ್ರ ಸರ್ಕಾರ(Central Government) ನಿಷೇಧಿಸಿರುವ ಹಳೆಯ 500 ರೂ. ಮುಖಬೆಲೆಯ ನೋಟುಗಳನ್ನು ‘ಅಪರೂಪದ ಭಾರತೀಯ ಕರೆನ್ಸಿ’ ಎಂದು ವರ್ಗೀಕರಿಸಲಾಗಿದೆ. ನಿಮ್ಮ ಬಳಿ ಹಳೆಯ 500 ರೂ. ನೋಟು ಇದ್ದರೆ ಅದರ ಸರಣಿ ಸಂಖ್ಯೆಯನ್ನು ಪರೀಕ್ಷಿಸಬೇಕು. 500 ರೂ. ನೋಟಿನಲ್ಲಿ ಎರಡು ಬಾರಿ ಸರಣಿ ಸಂಖ್ಯೆಯನ್ನು ಮುದ್ರಿಸಿದ್ದರೆ ಅಥವಾ ಮುದ್ರಿಸಿಲ್ಲದಿದ್ದರೆ ಅದು ನಿಮಗೆ 5 ಸಾವಿರ ರೂ. ಗಳಿಸಲು ಸಹಾಯ ಮಾಡುತ್ತದೆ. 500 ರೂ. ನೋಟುಗಳ ಅಂಚು ಸಾಮಾನ್ಯಕ್ಕಿಂತ ದೊಡ್ಡದಾಗಿದ್ದರೆ ಅಂತಹ ನೋಟಿಗೆ ನಿಮಗೆ 10 ಸಾವಿರ ಸಿಗುತ್ತದೆ.
ಇದನ್ನೂ ಓದಿ: Online Passport Apply : ಈಗ ಮನೆಯಿಂದಲೇ Passport ಗೆ ಅರ್ಜಿ ಸಲ್ಲಿಸಬಹುದು - ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ!
ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ… Quickr ಅಥವಾ Coinbazzar.com ನಂತಹ ವೆಬ್‌ಸೈಟ್ ಗೆ ಹೋಗಿ ಅಲ್ಲಿ ನಿಮ್ಮ ಬಳಿ ಇರುವ ಹಳೆಯ, ವಿಶಿಷ್ಟ ನೋಟುಗಳನ್ನು ಮಾರಾಟ ಮಾಡಬಹುದು. Qucikr ಮತ್ತು Coinbazzr ಹೊರತಾಗಿ ಅನೇಕ ಇತರ ವೆಬ್‌ಸೈಟ್‌ಗಳಿವೆ. ಅಲ್ಲಿ ಹಳೆಯ, ಅಪರೂಪದ ನಾಣ್ಯಗಳು ಮತ್ತು ನೋಟುಗಳನ್ನು ಖರೀದಿ ಮತ್ತು ಮಾರಾಟ ಮಾಡಲಾಗುತ್ತದೆ. 1, 2 ಮತ್ತು 5 ರೂ. ಮುಖಬೆಲೆಯ ನೋಟುಗಳ ಬಳಿಕ ಇದೀಗ 500 ರೂ. ಮುಖಬೆಲೆಯ ನೋಟುಗಳಿಗೂ ಆನ್ಲೈನ್ ನಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.