ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರ ಮೂಲದ ದತ್ತಾತ್ರೇಯ ಲೋಹರ್ ಎಂಬ ವ್ಯಕ್ತಿ ಕಳೆದ ಡಿಸೆಂಬರ್‌ನಲ್ಲಿ ಹಳೆಯ ವಾಹನದ ಬಿಡಿ ಭಾಗಗಳನ್ನ ಬಳಸಿ 'ಜೀಪ್' (Jeep) ತಯಾರಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral) ಆಗಿತ್ತು.
ಇದನ್ನೂ ಓದಿ: ಸಿಕ್ಕ ಸಿಕ್ಕ ಚಾರ್ಜರ್ ನಲ್ಲಿ ನಿಮ್ಮ Smartphone ಚಾರ್ಜ್ ಮಾಡುತ್ತೀರಾ? ಹಾಗಿದ್ದರೆ ಈ ಸುದ್ದಿಯನ್ನೊಮ್ಮೆ ಓದಿ
ಲೋಹರ್ ದ್ವಿಚಕ್ರ ವಾಹನದ ಎಂಜಿನ್, ರಿಕ್ಷಾ ಟೈರ್‌ಗಳು ಮತ್ತು ಅವರ ಫ್ಯಾಬ್ರಿಕೇಶನ್ ಅಂಗಡಿಯಲ್ಲಿ ತಯಾರಿಸಿದ ಸ್ಟೀರಿಂಗ್ ಸೇರಿದಂತೆ ವಿವಿಧ ಭಾಗಗಳಿಂದ 'ಜೀಪ್' ರೆಡಿ ಮಾಡಿದ್ದರು. ಲೋಹರ್ ತನ್ನ ಮಕ್ಕಳಿಗಾಗಿ ಈ 'ಜೀಪ್'ನ್ನು ನಿರ್ಮಿಸಿದ್ದರು. ಕಾರ್ ಬೇಕೆಂದು ಕೇಳಿದ್ದ ಮಕ್ಕಳ ಆಸೆ ಪೂರೈಸಲು ಲೋಹರ್ ಈ ಕಿಕ್-ಸ್ಟಾರ್ಟಿಂಗ್ ಜೀಪ್ ತಯಾರಿಸಿದ್ದರು.
ಇದನ್ನ ಶೇರ್ ಮಾಡಿಕೊಂಡಿದ್ದ ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ (Anand Mahindra), "ನಿಸ್ಸಂಶಯವಾಗಿ ಇದಕ್ಕೆ ಯಾವುದು ಹೋಲಿಕೆಯಿಲ್ಲ. ಆದರೆ, ನಮ್ಮ ಜನರ ಜಾಣ್ಮೆಯನ್ನು ನಾನು ಪ್ರಶಂಸಿಸುತ್ತೇನೆ. ಹೆಚ್ಚು ಹೆಚ್ಚು ಸಾಮರ್ಥ್ಯಗಳನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೇನೆ" ಎಂದು ಬರೆದುಕೊಂಡಿದ್ದರು. ಇದರ ಜೊತೆಗೆ ಹಳೆಯ ವಾಹನದ ಬದಲಾಗಿ ಬೊಲೆರೋ ಕಾರನ್ನು ಗಿಫ್ಟ್ ಆಗಿ ನೀಡುವುದಾಗಿ ತಿಳಿಸಿದ್ದರು.
Delighted that he accepted the offer to exchange his vehicle for a new Bolero. Yesterday his family received the Bolero & we proudly took charge of his creation. It will be part of our collection of cars of all types at our Research Valley & should inspire us to be resourceful. https://t.co/AswU4za6HT pic.twitter.com/xGtfDtl1K0
— anand mahindra (@anandmahindra) January 25, 2022
ಸೋಮವಾರ ಸಾಂಗ್ಲಿಯ ಸಹ್ಯಾದ್ರಿ ಮೋಟಾರ್ಸ್‌ನಿಂದ ಲೋಹರ್‌ಗೆ ಬೊಲೆರೊ (Bolero) ವಾಹನವನ್ನು ವಿತರಿಸಲಾಯಿತು. ಲೋಹರ್ ಮತ್ತು ಅವರ ಕುಟುಂಬ ಸದಸ್ಯರು ಇದರಿಂದ ತುಂಬಾ ಸಂತಸಗೊಂಡಿದ್ದಾರೆ. ಈ ಮೂಲಕ ಆನಂದ್ ಮಹಿಂದ್ರಾ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
ಲೋಹರ್ ತಮ್ಮ ಆವಿಷ್ಕಾರವನ್ನು ಸಹ್ಯಾದ್ರಿ ಮೋಟಾರ್ಸ್‌ಗೆ ಹಸ್ತಾಂತರಿಸಿದರು. ಅದನ್ನು ಮಹೀಂದ್ರಾ ರಿಸರ್ಚ್ ವ್ಯಾಲಿಗೆ ಸಾಗಿಸಲಾಯಿತು.
ಇದನ್ನೂ ಓದಿ: Aadhaar Cardಗೆ ಸಂಬಂಧಿಸಿದ ನಿಯಮಗಳಲ್ಲಿ ಭಾರಿ ಬದಲಾವಣೆ ಮಾಡಿದ UIDAI
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.