Viral Video: ಸವಾರಿ ಮಾಡಲು ಗೂಳಿ ಮೇಲೆ ಏರಿದವನಿಗೆ ಆಯಿತು ತಕ್ಕ ಶಾಸ್ತಿ

Viral Video: ಇಲ್ಲಿ ವ್ಯಕ್ತಿಯೊಬ್ಬ ಗೂಳಿಯ ಮೇಲೆ ಕುಳಿತುಕೊಂಡು ಅದನ್ನು ನಿಯಂತ್ರಿಸುತ್ತೇನೆ ಎಂದು ಅತಿಯಾದ ಆತ್ಮವಿಶ್ವಾಸದಿಂದ ಮುನ್ನುಗುತ್ತಾನೆ.  ಆದರೆ ಮರು ಕ್ಷಣವೇ ಗೂಳಿ ಆ ವ್ಯಕ್ತಿಯ ಆತ್ಮವಿಶ್ವಾಸವನ್ನು ಮುರಿಯುತ್ತದೆ. 

Written by - Ranjitha R K | Last Updated : Jan 25, 2022, 05:04 PM IST
  • ಗೂಳಿಯ ಮೇಲೇರಿದ ವ್ಯಕ್ತಿಗೆ ಏನಾಯಿತು ?
  • ವೈರಲ್ ಆಯಿತು ವಿಡಿಯೋ
  • ವಿಡಿಯೋ ವೀಕ್ಷಿಸಿದವರಿಂದ ಭಾರೀ ಮೆಚ್ಚುಗೆ
Viral Video: ಸವಾರಿ ಮಾಡಲು ಗೂಳಿ ಮೇಲೆ ಏರಿದವನಿಗೆ ಆಯಿತು ತಕ್ಕ ಶಾಸ್ತಿ  title=
Viral video

ನವದೆಹಲಿ : Viral Video: ಆತ್ಮ ವಿಶ್ವಾಸ ಇರಬೇಕು, ಆದರೆ ಅತಿಯಾದ ಆತ್ಮವಿಶ್ವಾಸ ಯಾವತ್ತು ಒಳ್ಳೆಯದಲ್ಲ. ಅತಿಯಾದ ಆತ್ಮವಿಶ್ವಾಸದಿಂದ ಮುನ್ನುಗ್ಗುವವರ ಜೊತೆ ಏನಾಗುತ್ತದೆ ಎನ್ನುವುದನ್ನು ಅನೇಕ ಬಾರಿ ಕೇಳಿರಬಹುದು, ಓದಿರಬಹುದು. ಅತಿಯಾದ ಆತ್ಯ್ಮವಿಶ್ವಾಸ ತೋರುವ ವ್ಯಕ್ತಿ ಜೊತೆ  ಏನಾಗುತ್ತದೆ ಎಂದು ತೋರಿಸುವ ವಿಡಿಯೋವೊಂದು ಈಗ ವೈರಲ್ Viral video) ಆಗುತ್ತಿದೆ.   

ಇಲ್ಲಿ ವ್ಯಕ್ತಿಯೊಬ್ಬ ಗೂಳಿಯ ಮೇಲೆ ಕುಳಿತುಕೊಂಡು ಅದನ್ನು ನಿಯಂತ್ರಿಸುತ್ತೇನೆ ಎಂದು ಅತಿಯಾದ ಆತ್ಮವಿಶ್ವಾಸದಿಂದ ಮುನ್ನುಗುತ್ತಾನೆ.  ಆದರೆ ಮರು ಕ್ಷಣವೇ ಗೂಳಿ ಆ ವ್ಯಕ್ತಿಯ ಆತ್ಮವಿಶ್ವಾಸವನ್ನು ಮುರಿಯುತ್ತದೆ. ಆವರಣದಲ್ಲಿರುವ ಗೂಳಿ ತನ್ನ ಮೇಲೆ ಕುಳಿತ ವ್ಯಕ್ತಿಯನ್ನು ಕ್ಷಣ ಮಾತ್ರದಲ್ಲಿ ನೆಲಕ್ಕಪ್ಪಳಿಸುತ್ತದೆ (Animal video). ಇಲ್ಲಿ ವ್ಯಕ್ತಿ ಬಿದ್ದ ರೀತಿಯನ್ನು ನೋಡಿದರೆ ಆತನಿಗೆ ಸಾಕಷ್ಟು ಗಾಯಗಳಾಗಿರಬೇಕೆಂದು ಎನ್ನುವುದನ್ನು ಸ್ಪಷ್ಟವಾಗಿ ಊಹಿಸಬಹುದು.

ಇದನ್ನೂ ಓದಿ :  Viral Video: ತನ್ನನ್ನು ತಾನೇ ನುಂಗುವ ಹಾವು, ಬೆಚ್ಚಿ ಬೀಳಿಸುವ ವಿಡಿಯೋ ವೈರಲ್.!

ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಗೂಳಿ ಆವರಣದಲ್ಲಿ ನಿಂತಿರುವುದು ಕಂಡು ಬರುತ್ತಿದೆ. ಆ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಬಂದು ಗೂಳಿಯ ಮೇಲೆ ಸವಾರಿ ಮಾಡುತ್ತಾನೆ. ತನ್ನ ಮೇಲೆ ಸವಾರಿ ಮಾಡುತ್ತಿರುವ ವ್ಯಕ್ತಿಯನ್ನು ನೋಡಿ, ಗೂಳಿಯು ಕೋಪಗೊಂಡು ಎತ್ತರಕ್ಕೆ ಜಿಗಿಯುತ್ತದೆ. ಕಣ್ಣು ಮಿಟುಕಿಸುವುದರೊಳಗೆ ಗೂಳಿ ವ್ಯಕ್ತಿಯನ್ನು ನೆಲಕ್ಕುರುಳಿಸಿ ಬಿಡುತ್ತದೆ. 

 
 
 
 

 
 
 
 
 
 
 
 
 
 
 

A post shared by طبیعت (@nature27_12)

 

 ಸಾಕಷ್ಟು ವೀಕ್ಷಿಸಲಾಗುತ್ತಿದೆ ಈ ವೀಡಿಯೊವನ್ನು :
nature27_12 ಹೆಸರಿನ Instagram ಖಾತೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೋ (video) ನೋಡಿದ ಜನರು ಬಹಳಷ್ಜ್ತು ಸಂಖ್ಯೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.  ಅಲ್ಲದೆ, ಈ ವಿಡಿಯೋಗೆ ಸಾಕಷ್ಟು ಲೈಕ್ ಸಿಗುತ್ತಿದೆ. 

ಇದನ್ನೂ ಓದಿ : ಕುಡಿದು ತೂರಾಡುತ್ತಾ ಬಾಳೆ ಗಿಡಕ್ಕೆ ಪಂಚ್, ಕುಡುಕನ ಕಿತಾಪತಿಯ ವಿಡಿಯೋ ವೈರಲ್.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News