SBI Latest Rule: SBI ATMನಿಂದ ಕ್ಯಾಶ್ ಹಿಂಪಡೆಯುವ ನಿಯಮಗಳಲ್ಲಿ ಬದಲಾವಣೆ, ನೀವೂ ಪ್ರೋಸೆಸ್ ತಿಳಿದುಕೊಳ್ಳಿ

Sbi Offers OTP - ATMನಿಂದ ಕ್ಯಾಶ್ ಹಿಂಪಡೆಯುವ ನಿಯಮಗಳು ಬದಲಾಗಿವೆ. ಕ್ಯಾಶ್ ಪಡೆಯುವಾಗ ಗ್ರಾಹಕರ ಮೊಬೈಲ್ ಗೆ ಬರುವ OTP ನಮೂದಿಸುವ ಅವಶ್ಯಕತೆ ಇದೆ. OTP ನಮೂದಿಸಿದ ಬಳಿಕವೇ ATM ನಿಂದ ಕ್ಯಾಶ್ ಬರಲಿದೆ.

Written by - Nitin Tabib | Last Updated : Jan 17, 2022, 04:19 PM IST
  • SBI ಗ್ರಾಹಕರಿಗೆ ಹೊಸ ನಿಯಮ ಜಾರಿಗೆ ಬಂದಾಗಿದೆ.
  • 10,000 ಹಾಗೂ ಅದಕ್ಕಿಂತ ಹೆಚ್ಚಿನ ಹಣ ಹಿಂಪಡೆಯಲು OTP ಕಡ್ಡಾಯವಾಗಿದೆ.
  • OTP ನಮೂದಿಸುವ ಸಂಪೂರ್ಣ ಪ್ರೋಸೆಸ್ ತಿಳಿದುಕೊಳ್ಳೋಣ ಬನ್ನಿ.
SBI Latest Rule: SBI ATMನಿಂದ ಕ್ಯಾಶ್ ಹಿಂಪಡೆಯುವ ನಿಯಮಗಳಲ್ಲಿ ಬದಲಾವಣೆ, ನೀವೂ ಪ್ರೋಸೆಸ್ ತಿಳಿದುಕೊಳ್ಳಿ title=
Cash Withdrawal New Rule (File Photo)

ನವದೆಹಲಿ: SBI New Rule - ಒಂದು ವೇಳೆ ನೀವೂ ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾನಲ್ಲಿ ಖಾತೆ ಹೊಂದಿದ್ದರೆ, ಈ ಸುದ್ದಿ ನಿಮಗಾಗಿ. ಎಟಿಎಂಗಳಿಂದ ನಗದು ಹಿಂಪಡೆಯುವ (Sbi Transaction Rule) ನಿಯಮಗಳನ್ನು ಬ್ಯಾಂಕ್ ಬದಲಾಯಿಸಿದೆ. ಎಟಿಎಂ ವಹಿವಾಟುಗಳನ್ನು ಹೆಚ್ಚು ಸುರಕ್ಷಿತಗೊಳಿಸಲು ಎಸ್‌ಬಿಐ ಹೊಸ ಉಪಕ್ರಮವನ್ನು ಕೈಗೊಂಡಿದೆ. ಈಗ ನೀವು ಎಸ್‌ಬಿಐ ಎಟಿಎಂನಿಂದ ಹಣವನ್ನು ಹಿಂಪಡೆಯಲು ಒಟಿಪಿ ನಮೂದಿಸುವುದು ಕಡ್ಡಾಯವಾಗಿದೆ.

ಈಗ ಹೊಸ ನಿಯಮದ ಪ್ರಕಾರ ಗ್ರಾಹಕರು ಒಟಿಪಿ ಇಲ್ಲದೆ ನಗದು ಹಿಂಪಡೆಯುವಂತಿಲ್ಲ. ಇದರಲ್ಲಿ, ನಗದು ಹಿಂಪಡೆಯುವ ಸಮಯದಲ್ಲಿ, ಗ್ರಾಹಕರು ತಮ್ಮ ಮೊಬೈಲ್ ಫೋನ್‌ನಲ್ಲಿ OTP ಅನ್ನು ಸ್ವೀಕರಿಸಲಿದ್ದಾರೆ. ಅದನ್ನು ನಮೂದಿಸಿದ ನಂತರವೇ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು.

ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ SBI (Cash Withdrawal New Rule)
ಎಟಿಎಂಗಳಲ್ಲಿನ ವಹಿವಾಟುಗಳಿಗಾಗಿ ತನ್ನ ಒಟಿಪಿ ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯು ವಂಚಕರ ವಿರುದ್ಧ ವ್ಯಾಕ್ಸಿನೇಷನ್ ಆಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವೀಟ್ ಮಾಡಿ, ಮಾಹಿತಿ ನೀಡಿದೆ. ನಿಮ್ಮನ್ನು ವಂಚನೆಯಿಂದ ರಕ್ಷಿಸುವುದು ಯಾವಾಗಲೂ ನಮ್ಮ ಪ್ರಮುಖ ಆದ್ಯತೆಯಾಗಿರುತ್ತದೆ ಎಂದು ಬ್ಯಾಂಕ್ ಹೇಳಿದೆ. OTP ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು SBI ಗ್ರಾಹಕರು ತಿಳಿದಿರಬೇಕು.

ನಿಯಮ ಏನು ಗೊತ್ತಾ?
10,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಳ್ಳುವಾಗ ಈ ನಿಯಮ ಅನ್ವಯಿಸಲಿದೆ. ಎಸ್‌ಬಿಐ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಿಂದ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಅವರ ಡೆಬಿಟ್ ಕಾರ್ಡ್ ಪಿನ್‌ಗೆ ಕಳುಹಿಸಲಾದ OTP ಯೊಂದಿಗೆ ಪ್ರತಿ ಬಾರಿ ತಮ್ಮ ATM ನಿಂದ ರೂ 10,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಅನುಮತಿಸುತ್ತದೆ. ಅದರ ಸಂಪೂರ್ಣ ಪ್ರಕ್ರಿಯೆ ಈ ಕೆಳಗಿನಂತಿದೆ.

ಇದನ್ನೂ ಓದಿ-Bank Holidays : ಬ್ಯಾಂಕ್ ಗ್ರಾಹಕರೆ ಗಮನಿಸಿ : ನಾಳೆಯಿಂದ 6 ದಿನ ಬ್ಯಾಂಕ್ ಬಂದ್!

ಪ್ರಕ್ರಿಯೆ
>> SBI ATM ನಿಂದ ಹಣವನ್ನು ಹಿಂಪಡೆಯಲು ನಿಮಗೆ OTP ಅಗತ್ಯವಿರುತ್ತದೆ.
>> ಇದಕ್ಕಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
>> ಈ OTP ನಾಲ್ಕು ಅಂಕಿಗಳ ಸಂಖ್ಯೆಯಾಗಿದ್ದು, ಗ್ರಾಹಕರು ಒಂದೇ ವಹಿವಾಟಿಗೆ ಪಡೆಯುತ್ತಾರೆ.
>> ಒಮ್ಮೆ ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ನಮೂದಿಸಿದ ನಂತರ, ATM ಪರದೆಯಲ್ಲಿ OTP ಅನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ.
>> ನಗದು ಹಿಂಪಡೆಯಲು ಈ ಪರದೆಯಲ್ಲಿ ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ನೀವು ಸ್ವೀಕರಿಸಿದ OTP ಅನ್ನು ನಮೂದಿಸಬೇಕು.

ಇದನ್ನೂ ಓದಿ-Cheque clearance: ಫೆಬ್ರವರಿ 1 ರಿಂದ ಚೆಕ್ ಕ್ಲಿಯರೆನ್ಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ

ಇದರ ಅವಶ್ಯಕತೆ ಏಕೆ ಬಂತು?
ಗ್ರಾಹಕರನ್ನು ವಂಚನೆಯಿಂದ ರಕ್ಷಿಸಲು ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI ಭಾರತದಲ್ಲಿ 71,705 BC ಔಟ್‌ಲೆಟ್‌ಗಳೊಂದಿಗೆ 22,224 ಶಾಖೆಗಳು ಮತ್ತು 63,906 ATM/CDMಗಳ ದೊಡ್ಡ ಜಾಲವನ್ನು ಹೊಂದಿದೆ. ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಬಳಸುವ ಗ್ರಾಹಕರ ಸಂಖ್ಯೆ ಸರಿಸುಮಾರು 91 ಮಿಲಿಯನ್ ಮತ್ತು 20 ಮಿಲಿಯನ್ ಗಳಷ್ಟಿದೆ.

ಇದನ್ನೂ ಓದಿ-17-01-2022 Today Gold Price: ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News