Bank of India: ವಿಶೇಷ ಯೋಜನೆ ಆರಂಭಿಸಿದ ಬ್ಯಾಂಕ್ ಆಫ್ ಇಂಡಿಯಾ, ಸಿಗುತ್ತೆ 1 ಕೋಟಿ ರೂ.ಗಳ ಲಾಭ

Bank of India: ಬ್ಯಾಂಕ್ ಆಫ್ ಇಂಡಿಯಾ ಸಂಬಳ ಪ್ಲಸ್ ಖಾತೆ ಯೋಜನೆಯನ್ನು ಆರಂಭಿಸಿದೆ. ಇದರಲ್ಲಿ ನೀವು ಗ್ರಾಹಕರು 1 ಕೋಟಿ ರೂ.ಗಳ ಲಾಭ ಪಡೆಯುತ್ತೀರಿ.

Written by - Yashaswini V | Last Updated : Sep 15, 2021, 01:31 PM IST
  • ಬ್ಯಾಂಕ್ ಆಫ್ ಇಂಡಿಯಾ (Bank of India) ವಿಶೇಷ ಯೋಜನೆಯನ್ನು ಆರಂಭಿಸಿದೆ
  • ಬ್ಯಾಂಕ್ ಆಫ್ ಇಂಡಿಯಾದ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ಯೋಜನೆಯಡಿ, ಬ್ಯಾಂಕ್ ಮೂರು ವಿಧದ ವೇತನ ಖಾತೆ ಸೌಲಭ್ಯವನ್ನು ಒದಗಿಸುತ್ತಿದೆ
  • BOI ಯ ಈ ಯೋಜನೆಯಲ್ಲಿ, ಗ್ರಾಹಕರು 2 ಲಕ್ಷ ರೂ.ವರೆಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ
Bank of India: ವಿಶೇಷ ಯೋಜನೆ ಆರಂಭಿಸಿದ ಬ್ಯಾಂಕ್ ಆಫ್ ಇಂಡಿಯಾ, ಸಿಗುತ್ತೆ 1 ಕೋಟಿ ರೂ.ಗಳ ಲಾಭ title=
BOI Salary Plus Account

Bank of India: ಬ್ಯಾಂಕ್ ಆಫ್ ಇಂಡಿಯಾ (Bank of India) ವಿಶೇಷ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆ ಸರ್ಕಾರಿ ನೌಕರರಿಗಾಗಿ ಆಗಿದೆ. ಬ್ಯಾಂಕ್ ಸರ್ಕಾರಿ ನೌಕರರಿಗೆ ಸಂಬಳ ಮತ್ತು ಖಾತೆಯ ಯೋಜನೆಯನ್ನು ತಂದಿದೆ. ಸ್ಯಾಲರಿ ಪ್ಲಸ್ ಅಕೌಂಟ್ ಸ್ಕೀಮ್ ಅಡಿಯಲ್ಲಿ, ಉದ್ಯೋಗಿಗಳು 1 ಕೋಟಿ ರೂಪಾಯಿಗಳ ವಾಯು ಅಪಘಾತದ ಲಾಭವನ್ನು ಉಚಿತವಾಗಿ ಪಡೆಯಬಹುದು. ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದೆ.

ಸ್ಯಾಲರಿ ಪ್ಲಸ್ ಖಾತೆ ಯೋಜನೆ ಎಂದರೇನು?
ಬ್ಯಾಂಕ್ ಆಫ್ ಇಂಡಿಯಾದ (Bank Of India) ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ಯೋಜನೆಯಡಿ, ಬ್ಯಾಂಕ್ ಮೂರು ವಿಧದ ವೇತನ ಖಾತೆ ಸೌಲಭ್ಯವನ್ನು ಒದಗಿಸುತ್ತಿದೆ. ಈ ಯೋಜನೆಯು ಅರೆಸೇನಾ ಪಡೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ವಿಶ್ವವಿದ್ಯಾಲಯ, ಕಾಲೇಜು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗಾಗಿ ಆಗಿದೆ. ಈ ಯೋಜನೆಯಡಿ, 30 ಲಕ್ಷ ರೂ.ಗಳ ಗುಂಪು ವೈಯಕ್ತಿಕ ಮರಣ ವಿಮಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇದಲ್ಲದೇ, 1 ಕೋಟಿ ಉಚಿತ ವಾಯು ಅಪಘಾತ ವಿಮೆಯನ್ನು ವೇತನ ಖಾತೆದಾರರಿಗೆ ನೀಡಲಾಗುತ್ತಿದೆ.

ಇದನ್ನೂ ಓದಿ- SBI Loan Rate- ಎಸ್‌ಬಿಐ ಸಾಲ ಅಗ್ಗ! ಬಡ್ಡಿ ದರ ಕಡಿತ, ಗೃಹ ಸಾಲ, ಆಟೋ ಇಎಂಐ ಇಳಿಕೆ

ಸ್ಯಾಲರಿ ಪ್ಲಸ್ ಖಾತೆಯ ಇತರ ಪ್ರಯೋಜನಗಳು:
>> BOI ಯ ಈ ಯೋಜನೆಯಲ್ಲಿ, ಗ್ರಾಹಕರು 2 ಲಕ್ಷ ರೂ.ವರೆಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ.
>> ಓವರ್‌ಡ್ರಾಫ್ಟ್ ಸೌಲಭ್ಯದ ಅಡಿಯಲ್ಲಿ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ (Account Balance) ಇಲ್ಲದಿದ್ದರೂ ಸಹ, ನೀವು 2 ಲಕ್ಷ ರೂ.ವರೆಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯಬಹುದು ಎಂಬುದು ವಿಶೇಷ.
>> ನಗದು ಹಿಂಪಡೆಯುವ ಮಿತಿ ರೂ. 50,000/- ಮತ್ತು ಉಚಿತ ಪ್ಲಾಟಿನಂ ಡೆಬಿಟ್ ಕಾರ್ಡ್ ಪಿಒಎಸ್ ಮಿತಿಯು 1 ಲಕ್ಷ ರೂ.ವರೆಗೆ ಇರುತ್ತದೆ.
>> ಗ್ರಾಹಕರು ಪ್ರತಿ ವರ್ಷ 100 ಚೆಕ್ ಲೀವ್ಸ್ ಹೊಂದಿರುವ ಚೆಕ್ ಬುಕ್ ಅನ್ನು ಉಚಿತವಾಗಿ ಪಡೆಯುತ್ತಾರೆ. ಅಲ್ಲದೆ, ಡಿಮ್ಯಾಟ್ ಖಾತೆಗಳಲ್ಲಿ ಎಎಮ್‌ಸಿಗೆ ಶುಲ್ಕ ವಿಧಿಸಲಾಗುವುದಿಲ್ಲ.
>> ಗೃಹ ಸಾಲ ಮತ್ತು ಕಾರು ಸಾಲದ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
>> BOI ಸಂಬಳ ಖಾತೆದಾರರಿಗೆ ಗೋಲ್ಡ್ ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ (Credit Card) ಅನ್ನು ಉಚಿತವಾಗಿ ನೀಡುತ್ತಿದೆ.

ಇದನ್ನೂ ಓದಿ- ICICI Bank Alert! ಖಾತೆಯ ಈ ವಿವರಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ, ಭಾರೀ ನಷ್ಟ ಅನುಭವಿಸಬೇಕಾಗಬಹುದು

ಖಾಸಗಿ ವಲಯದ ಉದ್ಯೋಗಿಗಳಿಗೆ ಸೌಲಭ್ಯಗಳು:
ಖಾಸಗಿ ವಲಯದ ಉದ್ಯೋಗಿಗಳು ಕೂಡ ಬ್ಯಾಂಕ್ ಆಫ್ ಇಂಡಿಯಾ ವೇತನ ಖಾತೆಯನ್ನು ಪಡೆಯಬಹುದು. ಈ ಯೋಜನೆಯಡಿ, ತಿಂಗಳಿಗೆ 10,000 ರೂ. ಗಳಿಸುವವರು ವೇತನ ಖಾತೆಯನ್ನು ತೆರೆಯಬಹುದು. ಇದಕ್ಕಾಗಿ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆ ಇಲ್ಲ. ಸಂಬಳ ಖಾತೆದಾರರಿಗೆ 5 ಲಕ್ಷ ರೂ.ಗಳ ವೈಯಕ್ತಿಕ ಅಪಘಾತ ಮೃತ್ಯು ವಿಮಾ ರಕ್ಷಣೆ ಸಿಗುತ್ತದೆ. ಇದರಲ್ಲಿ, ಎಲ್ಲರಿಗೂ ಉಚಿತ ಜಾಗತಿಕ ಡೆಬಿಟ್ ಕಮ್ ಎಟಿಎಂ ಕಾರ್ಡ್ ಸೌಲಭ್ಯವೂ ಸಿಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್

Trending News