ವೈಯಕ್ತಿಕ ಸಾಲ ತೆಗೆದುಕೊಳ್ಳುವ ಬದಲು ಇಲ್ಲಿಂದ ಹಣ ಪಡೆದುಕೊಳ್ಳಿ, ಹೊರೆ ಕಮ್ಮಿಯಾಗುತ್ತೆ!

Best Loan Options: ಇಂದಿನ ಕಾಲದಲ್ಲಿ ನೀವು ವೈಯಕ್ತಿಕ ಸಾಲ ತೆಗೆದುಕೊಳ್ಳುವ ಬದಲು ನಿಮ್ಮ ಜೇಬಿಗೆ ಹೊರೆ ಕಡಿಮೆ ಬೀಳುವ ಜಾತದಿಂದ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದು. ಏಕೆಂದರೆ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರಗಳು ತುಂಬಾ ಜಾಸ್ತಿಯಾಗಿರುತ್ತವೆ, ಈ ಕಾರಣದಿಂದಾಗಿ ಗ್ರಾಹಕರು ಭಾರಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.(Business News In Kannada)  

Written by - Nitin Tabib | Last Updated : Nov 14, 2023, 08:57 PM IST
  • ಇಂದು ನಾವು ನಿಮಗಾಗಿ ಕೆಲ ಸಾಲದ ಸುಲಭ ವಿಕಲ್ಪಗಳನ್ನು ತಂದಿದ್ದು, ಈ ವಿಕಲ್ಪಗಳನ್ನು ಆಯ್ಕೆ ಮಾಡಿಕೊಂಡು ನೀವು ಟೆನ್ಷನ್ ಫ್ರೀ ಆಗಿ ಉಳಿಯಬಹುದು.
  • ನೀವು ಗೋಲ್ಡ್ ಲೋನ್, ಎಫ್‌ಡಿ ಲೋನ್ ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಗಳ ಮೇಲೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು.
  • ಇತರ ಸಾಲಗಳಿಗೆ ಹೋಲಿಸಿದರೆ ಈ ರೀತಿಯ ಸಾಲಗಳ ಮೇಲೆ ಬಡ್ಡಿ ದರ ಕಡಿಮೆ ಇರುತ್ತದೆ.
ವೈಯಕ್ತಿಕ ಸಾಲ ತೆಗೆದುಕೊಳ್ಳುವ ಬದಲು ಇಲ್ಲಿಂದ ಹಣ ಪಡೆದುಕೊಳ್ಳಿ, ಹೊರೆ ಕಮ್ಮಿಯಾಗುತ್ತೆ! title=

ನವದೆಹಲಿ: ನೀವೂ ಒಂದು ವೇಳೆ ಸಾಲ ಪಡೆದುಕೊಳ್ಳುವ ಯೋಚನೆಯಲ್ಲಿದ್ದರೆ. ಅಥವಾ ಹಣ ಬೇಕೇ ಬೇಕು ಎಂದಾದರೆ ಈಗ ಟೆನ್ಶನ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಈಗ ವೈಯಕ್ತಿಕ ಸಾಲದ ಬದಲಿಗೆ, ನೀವು ನಿಮ್ಮ ಜೇಬಿಗೆ ಕಡಿಮೆ ಹೊರೆ ಬೀಳುವ ಸ್ಥಳದಿಂದ ಸಾಲವನ್ನು ಪಡೆದುಕೊಳ್ಳಬಹುದು. ಏಕೆಂದರೆ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರಗಳು ತುಂಬಾ ಜಾಸ್ತಿಯಾಗಿರುತ್ತವೆ, ಈ ಕಾರಣದಿಂದಾಗಿ ಗ್ರಾಹಕರು ಅವುಗಳ ಮೇಲೆ ಭಾರಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಇಂದು ನಾವು ನಿಮಗಾಗಿ ಕೆಲ ಸಾಲದ ಸುಲಭ ವಿಕಲ್ಪಗಳನ್ನು ತಂದಿದ್ದು, ಈ ವಿಕಲ್ಪಗಳನ್ನು ಆಯ್ಕೆ ಮಾಡಿಕೊಂಡು ನೀವು ಟೆನ್ಷನ್ ಫ್ರೀ ಆಗಿ ಉಳಿಯಬಹುದು. ನೀವು ಗೋಲ್ಡ್ ಲೋನ್, ಎಫ್‌ಡಿ ಲೋನ್ ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಗಳ ಮೇಲೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು. ಇತರ ಸಾಲಗಳಿಗೆ ಹೋಲಿಸಿದರೆ ಈ ರೀತಿಯ ಸಾಲಗಳ ಮೇಲೆ ಬಡ್ಡಿ ದರ ಕಡಿಮೆ ಇರುತ್ತದೆ.

ಸಾರ್ವಜನಿಕ ಭವಿಷ್ಯ ನಿಧಿ ಖಾತೆಯ ಮೇಲೆ ಸಾಲ
ನಿಮ್ಮ ಸಾರ್ವಜನಿಕ ಭವಿಷ್ಯ ನಿಧಿಯ ಖಾತೆಯ ಮೂಲಕ ಕೂಡ ನೀವು ಸಾಲವನ್ನು ತೆಗೆದುಕೊಳ್ಳಬಹುದು. ನೀವು ಪಿಪಿಎಫ್‌ನಲ್ಲಿ ಹಣವನ್ನು ಹೂಡಿಕೆ ಮಾಡಿದ್ದರೆ ನೀವು ಅದರ ಲಾಭವನ್ನು ಪಡೆಯಬಹುದು. ಇದಕ್ಕಾಗಿ, ನಿಮ್ಮ PPF ಖಾತೆಯು ಸುಮಾರು 1 ವರ್ಷ ಹಳೆಯದಾಗಿರಬೇಕು. ನಿಮ್ಮ PPF ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ ಆಧಾರದ ಮೇಲೆ ಈ ಸಾಲ ಸಿಗುತ್ತದೆ. ಪ್ರಸ್ತುತ ಪಿಪಿಎಫ್ ಮೇಲೆ ಸಿಗುವ ಬಡ್ಡಿ ದರವು ಶೇಕಡಾ 7.1 ರಷ್ಟಿದೆ. ಇದೇ ವೇಳೆ, ಇದರ ಮೇಲೆ ಪಡೆಯಲಾಗುವ ಸಾಲದ ಶೇಕಡಾ 8.1 ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ-ದೇಶಾದ್ಯಂತದ ಅನ್ನದಾತರಿಗೆ ಕೃಷಿ ಸಚಿವರ ಉಡುಗೊರೆ, ಈ ದಿನ ಖಾತೆಗೆ ಬರಲಿದೆ ಪಿಎಂ ಕಿಸಾನ್ 15ನೇ ಕಂತು!

ಚಿನ್ನದ ಸಾಲ
ಚಿನ್ನದ ಸಾಲ ಕೂಡ ಉತ್ತಮ ಆಯ್ಕೆಯಾಗಿದೆ. ನೀವು ವೈಯಕ್ತಿಕ ಸಾಲದ ಬದಲಿಗೆ ಚಿನ್ನದ ಸಾಲವನ್ನು ತೆಗೆದುಕೊಳ್ಳಬಹುದು. ಸ್ಟೇಟ್ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ನೀವು ರೂ 3 ಲಕ್ಷದವರೆಗಿನ ಸಾಲದ ಮೇಲೆ ಯಾವುದೇ ರೀತಿಯ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಚಿನ್ನದ ಸಾಲವು ಒಂದು ರೀತಿಯ ಸುರಕ್ಷಿತ ಸಾಲವಾಗಿದೆ. ಇದರಲ್ಲಿ ನೀವು ನಿಮ್ಮ ಚಿನ್ನದ ಮೇಲೆ ಸಾಲ ಪಡೆದುಕೊಳ್ಳುವಿರಿ. ಪ್ರಸ್ತುತ, ಸ್ಟೇಟ್ ಬ್ಯಾಂಕ್‌ನಲ್ಲಿ ಚಿನ್ನದ ಸಾಲವು ಶೇಕಡಾ 8.70 ದರದಲ್ಲಿ ಲಭ್ಯವಿದೆ.

ಇದನ್ನೂ ಓದಿ-ಪಿಎಫ್ ಚಂದಾದಾರರಿಗೊಂದು ಗುಡ್ ನ್ಯೂಸ್, ಖಾತೆಗೆ ಬಡ್ಡಿ ಬಂತು, ಮನೆಯಲ್ಲಿಯೇ ಕುಳಿತು ಈ ರೀತಿ ಪರಿಶೀಲಿಸಿ

FD ಸಾಲ
ನೀವು ಯಾವುದೇ ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡಿದ್ದರೆ, ನೀವು ವೈಯಕ್ತಿಕ ಸಾಲದ ಬದಲಿಗೆ ಅದರ ಮೇಲೆ ಸಾಲವನ್ನು ತೆಗೆದುಕೊಳ್ಳಬಹುದು. ನಿಮ್ಮ ಬ್ಯಾಂಕ್ FD ಯ ಒಟ್ಟು ಮೌಲ್ಯದ ಸುಮಾರು 90 ರಿಂದ 95 ಪ್ರತಿಶತವನ್ನು ನೀವು ಪಡೆಯಬಹುದು. ಸ್ಥಿರ ಠೇವಣಿ ಮೇಲಿನ ಸಾಲವು ಸುಲಭವಾಗಿ ಲಭ್ಯವಿದೆ. ಎಫ್‌ಡಿ ವಿರುದ್ಧ ತೆಗೆದುಕೊಂಡ ಸಾಲದ ಮೇಲೆ ಸಹ ನೀವು ಯಾವುದೇ ರೀತಿಯ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇದರ ಮೇಲಿನ ಬಡ್ಡಿದರವು ಎಫ್‌ಡಿ ಮೇಲಿನ ಬಡ್ಡಿಗಿಂತ 1 ರಿಂದ 2 ಶೇಕಡಾ ಹೆಚ್ಚಾಗಿರುತ್ತದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News