ಪಡಿತರ ಚೀಟದಾರರಿಗೆ ಮಹತ್ವದ ಸುದ್ದಿ: ಬೇಗ ಈ ಕೆಲಸ ಮಾಡಿ ಇಲ್ಲದಿದ್ದರೆ ರೇಷನ್ ಸಿಗಲ್ಲ!

ರೇಷನ್ ಕಾರ್ಡ್-ಆಧಾರ್ ಲಿಂಕ್: ರೇಷನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ದಿನಾಂಕವನ್ನು ಮಾರ್ಚ್ 31 ರಿಂದ ಜೂನ್ 30, 2022 ರವರೆಗೆ ವಿಸ್ತರಿಸಲಾಗಿದೆ. ನಿಮ್ಮ ಪಡಿತರವನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಭವಿಷ್ಯದಲ್ಲಿ ಸರ್ಕಾರದ ಯೋಜನೆಗಳನ್ನು ಪಡೆಯಲು ನೀವು ತೊಂದರೆ ಎದುರಿಸಬೇಕಾಗಬಹುದು. 

Written by - Yashaswini V | Last Updated : Apr 26, 2022, 12:44 PM IST
  • ಸರ್ಕಾರವು 'ಒನ್ ನೇಷನ್, ಒನ್ ರೇಷನ್' ಎಂಬ ಮಹತ್ವದ ಯೋಜನೆಯಡಿ ಕೆಲಸ ಮಾಡುತ್ತಿದೆ
  • ಇದರ ಅಡಿಯಲ್ಲಿ, ನೀವು ಯಾವುದೇ ರಾಜ್ಯದ ಯಾವುದೇ ಅಂಗಡಿಯಿಂದ ಪಡಿತರವನ್ನು ಪಡೆಯಲು ಸಾಧ್ಯವಾಗುತ್ತದೆ
  • 'ಒನ್ ನೇಷನ್, ಒನ್ ರೇಷನ್' ಮಹಾತ್ವಾಕಾಂಕ್ಷೆಯ ಯೋಜನೆಯಿಂದ ಲಕ್ಷಾಂತರ ಜನರಿಗೆ ಪ್ರಯೋಜನ
ಪಡಿತರ ಚೀಟದಾರರಿಗೆ ಮಹತ್ವದ ಸುದ್ದಿ: ಬೇಗ ಈ ಕೆಲಸ ಮಾಡಿ ಇಲ್ಲದಿದ್ದರೆ ರೇಷನ್ ಸಿಗಲ್ಲ! title=
Ration card aadhar link

ರೇಷನ್ ಕಾರ್ಡ್-ಆಧಾರ್ ಲಿಂಕ್:  ನೀವೂ ಸಹ ಪಡಿತರ ಚೀಟಿ ಬಳಕೆದಾರರಾಗಿದ್ದರೆ ಈ ಸುದ್ದಿ ನಿಮಗೆ ನೇರವಾಗಿ ಸಂಬಂಧಿಸಿದೆ. ವಾಸ್ತವವಾಗಿ, ಸರ್ಕಾರವು 'ಒನ್ ನೇಷನ್, ಒನ್ ರೇಷನ್' ಎಂಬ ಮಹತ್ವದ ಯೋಜನೆಯಡಿ ಕೆಲಸ ಮಾಡುತ್ತಿದೆ.  ಇದರ ಅಡಿಯಲ್ಲಿ, ನೀವು ಯಾವುದೇ ರಾಜ್ಯದ ಯಾವುದೇ ಅಂಗಡಿಯಿಂದ ಪಡಿತರವನ್ನು ಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಫಲಾನುಭವಿಗಳು ಪಡಿತರ ಚೀಟಿ ಮತ್ತು ಆಧಾರ್ ಜೊತೆಗೆ ಲಿಂಕ್ ಮಾಡುವುದು ಅತ್ಯಗತ್ಯವಾಗಿದೆ.

ರೇಷನ್ ಕಾರ್ಡ್-ಆಧಾರ್ ಲಿಂಕ್ ಮಾಡಲು ಜೂನ್ 30 ರವರೆಗೆ ಗಡುವು ವಿಸ್ತರಣೆ: 
ನೀವು ಇನ್ನೂ ನಿಮ್ಮ ಪಡಿತರ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ,  ಭವಿಷ್ಯದಲ್ಲಿ ಸರ್ಕಾರದ ಯೋಜನೆಗಳನ್ನು ಪಡೆಯಲು ನೀವು ತೊಂದರೆ ಎದುರಿಸಬೇಕಾಗಬಹುದು. ಇದನ್ನು ತಪ್ಪಿಸಲು ನಿರ್ದಿಷ್ಟ ಗಡುವಿನ ಒಳಗೆ ನಿಮ್ಮ ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಬೇಕಾಗಿದೆ.  ರೇಷನ್ ಕಾರ್ಡ್-ಆಧಾರ್ ಲಿಂಕ್ ಮಾಡಲು ಈ ಮೊದಲು ಮಾರ್ಚ್ 31ರವರೆಗೆ ಸರ್ಕಾರ ಗಡುವನ್ನು ನಿಗದಿಪಡಿಸಿತ್ತು. ಆದರೆ ಈಗ ಆಧಾರ್ ಲಿಂಕ್ ಮಾಡುವ ದಿನಾಂಕವನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ- ರೇಷನ್ ಕಾರ್ಡ್ ಹೊಸ ನಿಯಮ, ಇಂತಹವರು ಕೂಡಲೇ ನಿಮ್ಮ ಕಾರ್ಡ್ ಸರೆಂಡರ್ ಮಾಡಿ ಇಲ್ಲವೇ....

'ಒನ್ ನೇಷನ್, ಒನ್ ರೇಷನ್' ಮಹಾತ್ವಾಕಾಂಕ್ಷೆಯ ಯೋಜನೆಯಿಂದ ಲಕ್ಷಾಂತರ ಜನರಿಗೆ ಪ್ರಯೋಜನ:
ಪಡಿತರ ಚೀಟಿ ಫಲಾನುಭವಿಗಳಿಗೆ ಕಡಿಮೆ ದರದಲ್ಲಿ ಪಡಿತರ ಸಿಗುವುದಲ್ಲದೆ ಇನ್ನೂ ಹಲವು ಸವಲತ್ತುಗಳು ಲಭ್ಯವಿದೆ. ಆದರೆ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋದಾಗ ಇದರ ಲಾಭವನ್ನು ಪಡೆಯಲು ತೊಂದರೆಯಾಗುತ್ತಿತ್ತು. ಕೇಂದ್ರ ಸರ್ಕಾರವು ಈ ರೀತಿಯ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ  ಮಹಾತ್ವಾಕಾಂಕ್ಷೆಯ‘ಒನ್ ನೇಷನ್ ಒನ್ ರೇಷನ್’ ಯೋಜನೆ ಆರಂಭಿಸಿದೆ. ಇದರ ಅಡಿಯಲ್ಲಿ ಲಕ್ಷಾಂತರ ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ, ದೇಶಾದ್ಯಂತ ಪಡಿತರ ಚೀಟಿದಾರರು ಈ ಸೌಲಭ್ಯವನ್ನು ಪಡೆಯಲು ಮೊದಲು ಪಡಿತರ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡುವುದು ಬಹಳ ಮುಖ್ಯ. ಆಗ ಮಾತ್ರ ನೀವು 'ಒನ್ ನೇಷನ್ ಒನ್ ರೇಷನ್ ಕಾರ್ಡ್' ಯೋಜನೆಯ ಲಾಭವನ್ನು ಪಡೆಯಬಹುದು.

ಪಡಿತರ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ?
1. ಮೊದಲನೆಯದಾಗಿ ಆಧಾರ್ ವೆಬ್‌ಸೈಟ್ uidai.gov.in ಗೆ ಹೋಗಿ.
2. ಇಲ್ಲಿ 'ಸ್ಟಾರ್ಟ್ ನೌ' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
3. ಇಲ್ಲಿ, ನಿಮ್ಮ ವಿಳಾಸ ಮತ್ತು ಜಿಲ್ಲೆಯ ವಿವರಗಳನ್ನು ಭರ್ತಿ ಮಾಡಿ.
4. ಇದರ ನಂತರ 'ರೇಷನ್ ಕಾರ್ಡ್ ಬೆನಿಫಿಟ್' ಆಯ್ಕೆಯನ್ನು ಕ್ಲಿಕ್ ಮಾಡಿ.
5. ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ, ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ನಮೂದಿಸಿ.
6. ಅದನ್ನು ಭರ್ತಿ ಮಾಡಿದ ನಂತರ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
7. ನೀವು ಒಟಿಪಿ ಅನ್ನು ನಮೂದಿಸಿದ ತಕ್ಷಣ, ನಿಮ್ಮ ಪರದೆಯ ಮೇಲೆ ಪ್ರಕ್ರಿಯೆ ಪೂರ್ಣಗೊಂಡ ಸಂದೇಶವನ್ನು ನೀವು ಪಡೆಯುತ್ತೀರಿ.
8. ಈ ಪ್ರಕ್ರಿಯೆಯ ಪೂರ್ಣಗೊಂಡ ನಂತರ, ನಿಮ್ಮ ಆಧಾರ್ ಅನ್ನು ಪರಿಶೀಲಿಸಲಾಗುತ್ತದೆ. ನಂತರ ಆಧಾರ್ ಮತ್ತು ಪಡಿತರ ಚೀಟಿಯನ್ನು ಲಿಂಕ್ ಮಾಡಲಾಗುತ್ತದೆ.

ಇದನ್ನೂ ಓದಿ- Ration Card : ಪಡಿತರ ಚೀಟಿಯಲ್ಲಿ ಮನೆಯ ಹೊಸ ಸದಸ್ಯರ ಹೆಸರನ್ನು ಹೀಗೆ ಸೇರಿಸಿ!

ಆಧಾರ್ ಅನ್ನು ಆಫ್‌ಲೈನ್‌ನಲ್ಲಿ ಲಿಂಕ್ ಮಾಡುವುದು ಹೇಗೆ?
ಆನ್ಲೈನ್ ಮೂಲಕ ಮಾತ್ರವಲ್ಲದೆ ಆಫ್‌ಲೈನ್‌ನಲ್ಲಿಯೂ ಪಡಿತರ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡಬಹುದು. ಇದಕ್ಕಾಗಿ, ಮೊದಲು ಅಗತ್ಯವಿರುವ ದಾಖಲೆಗಳನ್ನು ಪಡಿತರ ಚೀಟಿ ಕೇಂದ್ರದಲ್ಲಿ ಸಲ್ಲಿಸಬೇಕಾಗುತ್ತದೆ. ಆಧಾರ್ ಕಾರ್ಡ್ ನಕಲು, ಪಡಿತರ ಚೀಟಿಯ ನಕಲು ಮತ್ತು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಇದಕ್ಕೆ ಅಗತ್ಯ ದಾಖಲೆಗಲಾಗಿದೆ. ಇದಲ್ಲದೆ, ನಿಮ್ಮ ಆಧಾರ್ ಕಾರ್ಡ್‌ನ ಬಯೋಮೆಟ್ರಿಕ್ ಡೇಟಾ ಪರಿಶೀಲನೆಯನ್ನು ಸಹ ಪಡಿತರ ಚೀಟಿ ಕೇಂದ್ರದಲ್ಲಿ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News