Big Relief: ಜೂನ್ ತಿಂಗಳಿನಲ್ಲಿ ಇಳಿಕೆಯಾದ ಹಣದುಬ್ಬರ, ಆರ್ಥಿಕತೆಯ ಕುರಿತೂ ಕೂಡ ಬಂತು ಗುಡ್ ನ್ಯೂಸ್

Retail inflation CPI: ಭಾರತದ ಚಿಲ್ಲರೆ ಹಣದುಬ್ಬರ ದರವು ಜೂನ್ ತಿಂಗಳಲ್ಲಿ ಶೇ 6.26 ಕ್ಕೆ ಇಳಿಕೆಯಾಗಿದೆ. ಮೇ ತಿಂಗಳಿಗೆ  ಹೋಲಿಸಿದರೆ ಇದರಲ್ಲಿ ಅತ್ಯಲ್ಪ ಪರಿಹಾರ ದೊರೆತಿದೆ ಎಂದೇ ಹೇಳಬಹುದು. ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ ಶೇ 6.30 ರಷ್ಟಿತ್ತು.

Written by - Nitin Tabib | Last Updated : Jul 12, 2021, 07:07 PM IST
  • ಭಾರತದ ಚಿಲ್ಲರೆ ಹಣದುಬ್ಬರ ದರವು ಜೂನ್ ತಿಂಗಳಲ್ಲಿ ಶೇ 6.26 ಕ್ಕೆ ಇಳಿಕೆಯಾಗಿದೆ.
  • ಮೇ ತಿಂಗಳಿಗೆ ಹೋಲಿಸಿದರೆ ಇದರಲ್ಲಿ ಅತ್ಯಲ್ಪ ಪರಿಹಾರ ದೊರೆತಿದೆ ಎಂದೇ ಹೇಳಬಹುದು.
  • ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ ಶೇ 6.30 ರಷ್ಟಿತ್ತು.
Big Relief: ಜೂನ್ ತಿಂಗಳಿನಲ್ಲಿ ಇಳಿಕೆಯಾದ ಹಣದುಬ್ಬರ, ಆರ್ಥಿಕತೆಯ ಕುರಿತೂ ಕೂಡ ಬಂತು ಗುಡ್ ನ್ಯೂಸ್ title=
Retail Inflation CPI Numbers (File Photo)

Retail Inflation CPI Numbers - ಹಣದುಬ್ಬರದ ದೃಷ್ಟಿಯಿಂದ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ. ಮೇ ತಿಂಗಳಿಗೆ ಹೋಲಿಸಿದರೆ ಜೂನ್ ತಿಂಗಳಲ್ಲಿ ಹಣದುಬ್ಬರ ಕಡಿಮೆಯಾಗಿದೆ. ಆದರೆ, ಇದು ಅತ್ಯಲ್ಪ ಇಳಿಕೆ ಎಂದೇ ಹೇಳಬಹುದು. ಹೆಚ್ಚುತ್ತಿರುವ ಹಣದುಬ್ಬರದ ಮಧ್ಯೆ, ಇದೊಂದು ಉತ್ತಮ ಸಂಕೇತ ಎಂದೇ ಹೇಳಬಹುದು. ಭಾರತದ ಚಿಲ್ಲರೆ ಹಣದುಬ್ಬರ ದರ (June Retail Inflation CPI) ಜೂನ್ ತಿಂಗಳಲ್ಲಿ ಶೇ 6.26 ಕ್ಕೆ ಇಳಿದಿದೆ. ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ ಶೇ 6.30 ರಷ್ಟಿತ್ತು.

ಎಲ್ಲಿ ಹಣದುಬ್ಬರ ಎಷ್ಟಿದೆ? (Consumer Price Index)
>> ಜೂನ್: ಕೋರ್ ಹಣದುಬ್ಬರವು 6.4% ರಿಂದ 6.2% (MoM)ಕ್ಕೆ ಇಳಿದಿದೆ
>> ಜೂನ್: ಆಹಾರ ಹಣದುಬ್ಬರ 5.01% ರಿಂದ 5.15% (MoM)ಕ್ಕೆ ಏರಿದೆ
>> ಜೂನ್: ಗ್ರಾಮೀಣ ಹಣದುಬ್ಬರ 6.55% ರಿಂದ 6.16% (MoM)ಕ್ಕೆ ಇಳಿದಿದೆ
>> ಜೂನ್: ನಗರ ಹಣದುಬ್ಬರ 5.91% ರಿಂದ 6.37% (MoM)ಕ್ಕೆ ಏರಿದೆ
>> ಜೂನ್: ದ್ವಿದಳ ಧಾನ್ಯಗಳ ಹಣದುಬ್ಬರವು 9.39% ರಿಂದ 10.10% (MoM)ಕ್ಕೆ ಏರಿಕೆಯಾಗಿದೆ.
>> ಜೂನ್: ತರಕಾರಿಗಳಲ್ಲಿನ ಹಣದುಬ್ಬರವು -1.92% ರಿಂದ -0.70% (MoM)ಕ್ಕೆ ಏರಿದೆ
>> ಜೂನ್: ವಿದ್ಯುತ್, ಇಂಧನ ಹಣದುಬ್ಬರವು 11.58% ರಿಂದ 12.68% (MoM)ಕ್ಕೆ ಏರಿದೆ
>> ಜೂನ್: ವಸತಿ ಹಣದುಬ್ಬರವು 3.86% ರಿಂದ 3.75% (MoM)ಕ್ಕೆ ಏರಿದೆ
>> ಜೂನ್: ಬಟ್ಟೆಗಳಲ್ಲಿನ ಹಣದುಬ್ಬರ, ಪಾದರಕ್ಷೆಗಳು 5.32% ರಿಂದ 6.21% (MoM)ಕ್ಕೆ ಏರಿದೆ.

ಆರ್ಥಿಕತೆಗೆ ಸಂಬಂಧಿಸಿದಂತೆ (Economic Growth Rate) ಗುಡ್ ನ್ಯೂಸ್ 
ಕೊರೊನಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಆರ್ಥಿಕತೆಯ ಬಗ್ಗೆಯೂ ಕೂಡ ಒಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಮೇ ತಿಂಗಳಲ್ಲಿ, ಭಾರತ ಕೈಗಾರಿಕಾ ಉತ್ಪಾದನೆ (IIP) ವರ್ಷದಿಂದ ವರ್ಷಕ್ಕೆ 29.27 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಈ ಮಾಹಿತಿಯನ್ನು ಅಂಕಿ -ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಹಂಚಿಕೊಂಡಿದೆ.

ಇದನ್ನೂ ಓದಿ- PM Kisan : 9ನೇ ಕಂತು ಬಿಡುಗಡೆಗೆ ಮುನ್ನ ಯೋಜನೆಯಲ್ಲಾದ ಬದಲಾವಣೆ ಗೊತ್ತಿರಲಿ

ಮೇ ತಿಂಗಳಿನಲ್ಲಿ IIP ಅಭಿವೃದ್ಧಿ ದರ (YoY)
>> ಮೇ ತಿಂಗಳಲ್ಲಿ ಐಐಪಿ ಬೆಳವಣಿಗೆ ದರ -33.4% ರಿಂದ 29.3% (YOY)ಕ್ಕೆ ಏರಿಕೆಯಾಗಿದೆ.
>> ಮೇ: ಉತ್ಪಾದನಾ ಬೆಳವಣಿಗೆ -37.8% ರಿಂದ 34.5% (YOY)ಕ್ಕೆ ಏರಿಕೆಯಾಗಿದೆ.
>> ಮೇ: ಎಲೆಕ್ಟ್ರಿಸಿಟಿ ಬೆಳವಣಿಗೆ -14.9% ರಿಂದ 7.5% (YOY)ಕ್ಕೆ ಏರಿಕೆಯಾಗಿದೆ.
>> ಮೇ: ಮೈನಿಂಗ್ ಬೆಳವಣಿಗೆ -20.4% ರಿಂದ 23.3% (YOY)ಕ್ಕೆ ಏರಿಕೆಯಾಗಿದೆ.
>> ಮೇ: ಪ್ರಿಮೈರಿ ಸರಕುಗಳ ಬೆಳವಣಿಗೆ -19.6% ರಿಂದ 15.8% (YOY)ಕ್ಕೆ ಏರಿಕೆಯಾಗಿದೆ.
>> ಮೇ: ಕ್ಯಾಪಿಟಲ್ ಸರಕುಗಳ ಬೆಳವಣಿಗೆ -65.9% ರಿಂದ 85.3% (YOY)ಕ್ಕೆ ಏರಿಕೆಯಾಗಿದೆ.
>> ಮೇ: ಇಂಟರ್ಮಿಡಿಯೇಟ್ ಸರಕುಗಳ ಬೆಳವಣಿಗೆ -39.7% ರಿಂದ 55.2% (YOY)ಕ್ಕೆ ಏರಿಕೆಯಾಗಿದೆ.
 >> ಮೇ: ಇನ್ಫ್ರಾ ಸರಕುಗಳ ಬೆಳವಣಿಗೆ -39% ರಿಂದ 46.8% ಕ್ಕೆ ಏರಿದೆ (YOY)ಕ್ಕೆ ಏರಿಕೆಯಾಗಿದೆ.
>> ಮೇ: ಕನ್ಸೂಮರ್ ಡ್ಯೂರೆಬಲ್  ಬೆಳವಣಿಗೆ -70.3% ರಿಂದ 98.2% (YOY)ಕ್ಕೆ ಏರಿಕೆಯಾಗಿದೆ.
>> ಮೇ: ಕನ್ಸೂಮರ್ ನಾನ್ ಡ್ಯೂರೆಬಲ್ ಬೆಳವಣಿಗೆ -9.7% ರಿಂದ 0.8% (YOY)ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ- SBI Customers Alert: ಆನ್‌ಲೈನ್‌ ವಂಚನೆ ಬಗ್ಗೆ ಮತ್ತೆ ಗ್ರಾಹಕರಿಗೆ ಎಚ್ಚರಿಸಿದ ಎಸ್‌ಬಿಐ!

ಹಣದುಬ್ಬರದ ಗುರಿ ಶೇ.4ರಷ್ಟು
ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಚಿಲ್ಲರೆ ಹಣದುಬ್ಬರದ ಗುರಿಯನ್ನು ಶೇ 4 ರಷ್ಟು ಇರಿಸಿದ್ದು, ಇದರಲ್ಲಿ ಶೇಕಡಾ 2 ರಷ್ಟು ಕುಸಿತ ಮತ್ತು ಏರಿಕೆ ಗಮನಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸತತ ಎರಡನೇ ತಿಂಗಳು ಚಿಲ್ಲರೆ ಹಣದುಬ್ಬರವು ಆರ್‌ಬಿಐನ ಶೇಕಡಾ 6 ರ ಅಪರ್ ಸರ್ಕ್ಯೂಟ್ ಅನ್ನು ದಾಟಿದೆ. ಅದಕ್ಕೂ ಮೊದಲು, ಸತತ ಐದು ತಿಂಗಳು, ಚಿಲ್ಲರೆ ಹಣದುಬ್ಬರವು ಶೇಕಡಾ 6 ರ ವ್ಯಾಪ್ತಿಯಲ್ಲಿತ್ತು. ಚಿಲ್ಲರೆ ಹಣದುಬ್ಬರವನ್ನು ಕಾಪಾಡುವ ಗುರಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸದ್ಯಕ್ಕೆ ಶೇ.4 ರ (+/- 2%) ಗುರಿಯನ್ನು ಹೊಂದಿದೆ.

ಇದನ್ನೂ ಓದಿ- LPG Subsidy Updates: ಗ್ಯಾಸ್ ಮೇಲಿನ ಸಬ್ಸಿಡಿ ನಿಂತು ಹೋಗಿರುವುದಕ್ಕೆ ಇದೂ ಕಾರಣವಾಗಿರಬಹುದು, ಪರಿಶೀಲಿಸಿಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News