SBI Customers Alert: ಆನ್‌ಲೈನ್‌ ವಂಚನೆ ಬಗ್ಗೆ ಮತ್ತೆ ಗ್ರಾಹಕರಿಗೆ ಎಚ್ಚರಿಸಿದ ಎಸ್‌ಬಿಐ!

ಆನ್‌ಲೈನ್‌ ವಂಚನೆ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆ ಗ್ರಾಹಕರು ಮೋಸದ ಜಾಲಕ್ಕೆ ಬೀಳದಂತೆ ಎಸ್‌ಬಿಐ ಎಚ್ಚರಿಕೆ ನೀಡಿದೆ.

Written by - Puttaraj K Alur | Last Updated : Jul 12, 2021, 04:49 PM IST
  • SBI ಗ್ರಾಹಕರ ಮೇಲೆ ಚೀನಾದ ಹ್ಯಾಕರ್ಸ್ ಕಣ್ಣು, ಸೈಬರ್ ಭದ್ರತಾ ಸಂಶೋಧಕರ ಎಚ್ಚರಿಕೆ
  • ವೈಯಕ್ತಿಕ ಹಾಗೂ ಹಣಕಾಸಿನ ಮಾಹಿತಿಯನ್ನು ಬೇರೆಲ್ಲೂ ಹಂಚಿಕೊಳ್ಳಬೇಡಿ
  • ಸ್ವಲ್ಪ ಎಚ್ಚರ ತಪ್ಪಿದರೂ ಬ್ಯಾಂಕ್ ಖಾತೆಯಲ್ಲಿರುವ ಹಣ ಸೊನ್ನೆಯಾಗುತ್ತದೆ ಹುಷಾರ್!
SBI Customers Alert: ಆನ್‌ಲೈನ್‌ ವಂಚನೆ ಬಗ್ಗೆ ಮತ್ತೆ ಗ್ರಾಹಕರಿಗೆ ಎಚ್ಚರಿಸಿದ ಎಸ್‌ಬಿಐ! title=
ವಂಚನೆ ಬಗ್ಗೆ ಗ್ರಾಹಕರಿಗೆ ಎಸ್‌ಬಿಐ ಎಚ್ಚರಿಕೆ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳು ಸೈಬರ್ ದಾಳಿಗೆ ತುತ್ತಾಗುತ್ತಿವೆ. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ(Digital Banking Services) ಜಾರಿಯಾದ ಬಳಿಕ ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ವಿವಿಧ ಮಾರ್ಗಗಳ ಮೂಲಕ ಸೈಬರ್ ವಂಚಕರು ಗ್ರಾಹಕರ ವೈಯಕ್ತಿಕ ಮಾಹಿತಿ ಸೇರಿದಂತೆ ಅವರ ಖಾತೆಯಿಂದ ಹಣವನ್ನು ಎಗರಿಸುವ ಅನೇಕ ಪ್ರಕರಣಗಳು ಪ್ರತಿದಿನವೂ ನಡೆಯುತ್ತವೆ. ಎಷ್ಟೇ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿದರೂ ಸೈಬರ್ ಅಪರಾಧಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. 

ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ಗ್ರಾಹಕರು ಮೋಸದ ಜಾಲಕ್ಕೆ ಬೀಳದಂತೆ ಎಸ್‌ಬಿಐ ಎಚ್ಚರಿಕೆ ನೀಡಿದೆ. ಯಾವುದೇ ಕಾರಣಕ್ಕೂ ವೈಯಕ್ತಿಕ ಅಥವಾ ಹಣಕಾಸಿನ ವಿವರಗಳನ್ನು ಬೇರೆಲ್ಲೂ ಹಂಚಿಕೊಳ್ಳದಂತೆ ಸಲಹೆ ನೀಡಿದೆ. ಇಲ್ಲದಿದ್ದಲ್ಲಿ ಸೈಬರ್ ಅಪರಾಧ(Cybercrime)ಕ್ಕೆ ತುತ್ತಾಗಿ, ಖಾತೆಯಲ್ಲಿರುವ ಎಲ್ಲ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ. 

ಇದನ್ನೂ ಓದಿ: LPG Subsidy Updates: ಗ್ಯಾಸ್ ಮೇಲಿನ ಸಬ್ಸಿಡಿ ನಿಂತು ಹೋಗಿರುವುದಕ್ಕೆ ಇದೂ ಕಾರಣವಾಗಿರಬಹುದು, ಪರಿಶೀಲಿಸಿಕೊಳ್ಳಿ

ಸದ್ಯ ಹಲವು ಮಾದರಿಯಲ್ಲಿ ಸೈಬರ್ ಅಪರಾಧ(Cybercrime)ಗಳು ಜರುಗುತ್ತಿವೆ. ಬ್ಯಾಂಕ್‌, ಎಟಿಎಂ, ಕ್ರೆಡಿಟ್ ಕಾರ್ಡ್‌ ಸೇರಿದಂತೆ ಇನ್ನಿತರ ಯಾವುದೇ ಗೌಪ್ಯ ಮಾಹಿತಿಯನ್ನು ಮೌಖಿಕವಾಗಿ, ಮೆಸೇಜ್‌ ಅಥವಾ ಆನ್‌ಲೈನ್‌ ಮೂಲಕ ಶೇರ್‌ ಮಾಡಿಕೊಳ್ಳದಿದ್ದರೆ ನಾವು ಹಣ ಕಳೆದುಕೊಳ್ಳುವುದನ್ನು ತಪ್ಪಿಸಬಹುದಾಗಿದೆ. 

1) ಪರಿಶೀಲಿಸದ ಮೂಲಗಳಿಂದ ಯಾವುದೇ ರೀತಿಯ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡದಂತೆ ಎಸ್‌ಬಿಐ ತನ್ನ ಗ್ರಾಹಕರಿಗೆ ಸೂಚಿಸಿದೆ. ‘ನಿಮ್ಮ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ! ವೈಯಕ್ತಿಕ ಹಾಗೂ ಹಣಕಾಸಿನ ವಿವರಗಳನ್ನು ಕಳೆದುಕೊಳ್ಳದಂತೆ ಎಚ್ಚರಿಕೆವಹಿಸಬಹುದಾದ ಭದ್ರತಾ ಸಲಹೆ ಇಲ್ಲಿದೆ!’ ಎಂದು ಎಸ್‌ಬಿಐ(SBI) ಟ್ವೀಟ್ ಮಾಡಿದೆ.

2)‘ಪರಿಶೀಲಿಸಿದ ಮೂಲಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ. ಅಪರಿಚಿತ ವ್ಯಕ್ತಿಗಳ ಸಲಹೆಯ ಮೇರೆಗೆ ಯಾವುದೇ ಆ್ಯಪ್ ಡೌನ್‌ಲೋಡ್ ಮಾಡಬೇಡಿ’ ಎಂದು ಎಸ್‌ಬಿಐ ತಿಳಿಸಿದೆ. ಒಟಿಪಿ, ಪಿನ್, ಸಿವಿವಿ ಸೇರಿದಂತೆ ಇನ್ನಿತರ ಗೌಪ್ಯ ಮಾಹಿತಿಗಳನ್ನು ಖದೀಯುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರವಹಿಸಿ ಎಂದು ಬ್ಯಾಂಕ್ ಹೇಳಿದೆ. 

ಇದನ್ನೂ ಓದಿ: Indian Railways, IRCTC: ಪ್ರಯಾಣಿಕರು ಈಗ ಈ 44 ರೈಲುಗಳಲ್ಲಿ ರಿಸರ್ವೇಶನ್ ಇಲ್ಲದೆಯೇ ಪ್ರಯಾಣಿಸಬಹುದು

3) ಕಳೆದ ವಾರ ಸೈಬರ್ ಭದ್ರತಾ ಸಂಶೋಧಕರು ಎಸ್‌ಬಿಐ ಗ್ರಾಹಕರಿಗೆ ವಿಶೇಷ ಎಚ್ಚರಿಕೆ ನೀಡಿದ್ದರು. ಚೀನಾದ ಹ್ಯಾಕರ್ಸ್(China Hackers)ಎಸ್‌ಬಿಐ ಗ್ರಾಹಕರ ಮೇಲೆ ಕಣ್ಣಿಟ್ಟಿದ್ದು, ಅವರ ಖಾತೆಗಳಿಂದ ಹಣವನ್ನು ಲಪಟಾಯಿಸುತ್ತಿದ್ದಾರೆ. ಹ್ಯಾಕರ್ಸ್ ಗಳು ಫಿಶಿಂಗ್ ವ್ಯವಸ್ಥೆ ಮೂಲಕ ಬ್ಯಾಂಕ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದ್ದಾರೆ. ಇದಕ್ಕಾಗಿ ಹ್ಯಾಕರ್ಸ್ ಗಳು ವಿಶೇಷ ವೆಬ್ ಸೈಟ್ ಲಿಂಕ್ ಬಳಸಿ ಕೆವೈಸಿ ನವೀಕರಿಸುವಂತೆ ಗ್ರಾಹಕರಿಗೆ ಕೇಳುತ್ತಿದ್ದಾರೆ. 

ವಾಟ್ಸಾಪ್ ಸಂದೇಶದ ಮೂಲಕ ಬ್ಯಾಂಕಿನಿಂದ ನಿಮಗೆ 50 ಲಕ್ಷ ರೂ.ಗಳ ಉಚಿತ ಉಡುಗೊರೆ ಬಂದಿದೆ ಎಂದು ಹೇಳಿ ಮೋಸ ಮಾಡುತ್ತಾರೆ. ಗ್ರಾಹಕರಿಗೆ ಮೋಸ ಮಾಡಲು ಬಳಸಿರುವ  ವೆಬ್ ಸೈಟ್ ಗಳ ಡೊಮೇನ್ ಹೆಸರುಗಳು ಚೀನಾದಲ್ಲಿ ನೋಂದಾಯಿತವಾಗಿವೆ. ಕೆಲವು ಸ್ಮಾರ್ಟ್‌ಫೋನ್ ಬಳಕೆ ಮಾಡುವ ಗ್ರಾಹಕರಿಗೆ ಎಸ್‌ಬಿಐ ಹೆಸರಿನಲ್ಲಿ ಈ ರೀತಿ ವಂಚನೆ(Online Fraud) ಮಾಡಲು ಪ್ರಯತ್ನಿಸಲಾಗಿದೆ ಎಂದು ಆಟೊಬೊಟ್ ಇನ್ಫೋಸೆಕ್ ಪ್ರೈವೇಟ್ ಲಿಮಿಟೆಡ್ ಜೊತೆಗೆ ದೆಹಲಿ ಮೂಲದ ಥಿಂಕ್ ಟ್ಯಾಂಕ್ ಸೈಬರ್‌ಪೀಸ್ ಫೌಂಡೇಶನ್‌ನ ಸಂಶೋಧನಾ ವಿಭಾಗ ನಡೆಸಿರುವ ಅಧ್ಯಯನದಲ್ಲಿ ತಿಳಿದುಬಂದಿದೆ. ಹೀಗಾಗಿ ಗ್ರಾಹಕರು ಈ ಬಗ್ಗೆ ಎಚ್ಚರದಿಂದ ಇರಬೇಕೆಂದು ಸೂಚಿಸಿದೆ. 

ಇದನ್ನೂ ಓದಿ: LIC Aadhar Shila scheme: ಪ್ರತಿದಿನ ಕೇವಲ 29 ರೂ. ಉಳಿಸಿದರೆ ಸಿಗಲಿದೆ 4 ಲಕ್ಷ ರೂ.

4) ಮಾರ್ಚ್ ತಿಂಗಳಿನಲ್ಲಿ ಎಸ್‌ಬಿಐನ ಹಲವಾರು ಬಳಕೆದಾರರನ್ನು ಫಿಶಿಂಗ್ ವ್ಯವಸ್ಥೆ ಮೂಲಕ ಗುರಿಯಾಗಿಸಲಾಗಿದೆ ಎಂದು ಸಂಶೋಧನಾ ತಂಡವು ತಿಳಿಸಿದೆ. ಹ್ಯಾಕರ್ಸ್ ಗಳು ಎಸ್‌ಬಿಐ ಗ್ರಾಹಕರಿಗೆ ಅನುಮಾನಾಸ್ಪದ ಪಠ್ಯ ಸಂದೇಶಗಳನ್ನು ಕಳಿಸಿ ವಂಚಿಸಲು ಪ್ರಯತ್ನಿಸಿರುವ ವಿಷಯ ತಿಳಿದಬಂದಿದೆ. ನಿಮಗೆ ಎಸ್‌ಬಿಐ ಕಡೆಯಿಂದ 9,870 ರೂ. ಮೌಲ್ಯದ ಕ್ರೆಡಿಟ್ ಪಾಯಿಂಟ್ಸ್ ಸಿಕ್ಕಿದೆ, ಕೂಡಲೇ ಅದನ್ನು ಬಳಸಿಕೊಳ್ಳಿ ಎಂದು ವಂಚಕರು ಗ್ರಾಹಕರಿಗೆ ಸಂದೇಶ ಕಳುಹಿಸಿದ್ದರು. ಒಂದು ವೇಳೆ ನಿಮಗೆ ಬರುವ ಸಂದೇಶಗಳ ಬಗ್ಗೆ ಅನುಮಾನವಿದ್ದಲ್ಲಿ ಕೂಡಲೇ ಬ್ಯಾಂಕ್ ಸಂಪರ್ಕಿಸಿ ವಿಚಾರಿಸಬೇಕು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News