PM Kisan : 9ನೇ ಕಂತು ಬಿಡುಗಡೆಗೆ ಮುನ್ನ ಯೋಜನೆಯಲ್ಲಾದ ಬದಲಾವಣೆ ಗೊತ್ತಿರಲಿ

ಪಿಎಂ ಕಿಸಾನ್ ಯೋಜನೆಯ  ಆರಂಭದಲ್ಲಿ, 2 ಹೆಕ್ಟೇರ್ ಅಥವಾ 5 ಎಕರೆ ಕೃಷಿ ಮಾಡುತ್ತಿದ್ದ ರೈತರನ್ನು ಮಾತ್ರ ಪರಿಗಣಿಸಲಾಗಿತ್ತು. ಆದರೆ ಈಗ ಮೋದಿ ಸರ್ಕಾರ ಈ ನಿಯಮವನ್ನು ಬದಲಾಯಿಸಲಾಗಿದೆ.

Written by - Ranjitha R K | Last Updated : Jul 12, 2021, 06:46 PM IST
  • ಈಗ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಹಿಡುವಳಿ ಮಿತಿಯನ್ನು ರದ್ದುಪಡಿಸಲಾಗಿದೆ
  • ಪಿಎಂ ಕಿಸಾನ್ ನಿಧಿಯ ಲಾಭ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ
  • ಈಗ ರೈತರಿಗೆ ಸ್ವಯಂ ನೋಂದಣಿ ಸೌಲಭ್ಯ ನೀಡಲಾಗಿದೆ.
PM Kisan : 9ನೇ ಕಂತು ಬಿಡುಗಡೆಗೆ ಮುನ್ನ ಯೋಜನೆಯಲ್ಲಾದ ಬದಲಾವಣೆ ಗೊತ್ತಿರಲಿ title=
ಪಿಎಂ ಕಿಸಾನ್ ನಿಧಿಯ ಲಾಭ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ (photo zee news)

ನವದೆಹಲಿ : PM Kisan Samman Nidhi Updates : ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆ (PM Kisan Samman Nidhi Yojana) ಅಡಿಯಲ್ಲಿ ಮೋದಿ ಸರ್ಕಾರ ಈವರೆಗೆ ರೈತರ ಖಾತೆಗೆ 8 ಕಂತುಗಳನ್ನು ಬಿಡುಗಡೆ ಮಾಡಿದೆ. ಈಗ ರೈತರು 9 ನೇ ಕಂತಿಗಾಗಿ ಕಾಯುತ್ತಿದ್ದಾರೆ. ಆದರೆ ಅದಕ್ಕೂ ಮೊದಲು ಈ ಯೋಜನೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. 

ಪಿಎಂ ಕಿಸಾನ್ ಯೋಜನೆಯ (PM Kisan Samman Nidhi Yojana) ಆರಂಭದಲ್ಲಿ, 2 ಹೆಕ್ಟೇರ್ ಅಥವಾ 5 ಎಕರೆ ಕೃಷಿ ಮಾಡುತ್ತಿದ್ದ ರೈತರನ್ನು ಮಾತ್ರ ಪರಿಗಣಿಸಲಾಗಿತ್ತು. ಆದರೆ ಈಗ ಮೋದಿ ಸರ್ಕಾರ (Modi Government)  ಈ ನಿಯಮವನ್ನು ಬದಲಾಯಿಸಲಾಗಿದೆ. ಇದರಿಂದ 14.5 ಕೋಟಿ ರೈತರುಯೋಜನೆಯ ಲಾಭ ಪಡೆಯುವಂತಾಯಿತು. 

ಇದನ್ನೂ ಓದಿ : SBI Customers Alert: ಆನ್‌ಲೈನ್‌ ವಂಚನೆ ಬಗ್ಗೆ ಮತ್ತೆ ಗ್ರಾಹಕರಿಗೆ ಎಚ್ಚರಿಸಿದ ಎಸ್‌ಬಿಐ!

ಆಧಾರ್ ಕಾರ್ಡ್ ಅಗತ್ಯ : 
ಆಧಾರ್ (adhaar) ಹೊಂದಿರುವ ರೈತರಿಗೆ ಮಾತ್ರ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಲಾಭ ಸಿಗಲಿದೆ. ಆಧಾರ್ ಇಲ್ಲದೆ, ನೀವು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಫಲಾನುಭವಿಗಳಿಗೆ ಸರ್ಕಾರ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿದೆ.

ನೋಂದಣಿ ಸೌಲಭ್ಯ :
ರೈತರು ಮನೆಯಲ್ಲಿ ಕುಳಿತುಕೊಂಡೆ ಸುಲಭವಾಗಿ ನೋಂದಾಯಿಸಿಕೊಳ್ಳಬಹುದು. ನಿಮ್ಮಲ್ಲಿ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಇದ್ದರೆ, ನೀವು pmkisan.nic.in ನಲ್ಲಿ ಫಾರ್ಮರ್ಸ್ ಕಾರ್ನರ್‌ಗೆ ಹೋಗಿ ನಿಮ್ಮನ್ನು ನೋಂದಾಯಿಸಿಕೊಳ್ಳಬಹುದು. ಅಲ್ಲದೆ, ಯಾವುದೇ ತಪ್ಪು ಇದ್ದರೆ, ಅದನ್ನು ನೀವೇ ಸರಿಪಡಿಸಿಕೊಲ್ಲಬಹುದು . 

ನಿಮ್ಮ ಸ್ಟೇಟಸ್ ಅನ್ನು ತಿಳಿದುಕೊಳ್ಳಿ :
ರೈತರ ಅನುಕೂಲಕ್ಕಾಗಿ ಸರ್ಕಾರ ದೊಡ್ಡ ಬದಲಾವಣೆಯನ್ನು ಮಾಡಿದೆ.  ನೋಂದಣಿಯ ನಂತರ ನಿಮ್ಮ ಸ್ಥಿತಿಯನ್ನು ನೀವೇ ಪರಿಶೀಲಿಸಬಹುದು. ನಿಮ್ಮ ಬ್ಯಾಂಕ್ ಖಾತೆಯಲ್ಲಿ (Bank accont) ಎಷ್ಟು ಕಂತು ಬಂದಿದೆ ಎಂಬುದನ್ನು ಪರಿಶೀಲಿಸಬಹುದು. ಪಿಎಂ ಕಿಸಾನ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ, ಯಾವುದೇ ರೈತ ತನ್ನ ಆಧಾರ್ ಸಂಖ್ಯೆ, ಮೊಬೈಲ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸುವ ಮೂಲಕ ಸ್ಟೇಟಸ್ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ : SBI ಹೊಸ Savings Account, ಸಿಗಲಿದೆ ಅಧಿಕ ಬಡ್ಡಿಯೊಂದಿಗೆ ಹೆಚ್ಚು ಸೌಲಭ್ಯ

ಕಿಸಾನ್ ಕ್ರೆಡಿಟ್ ಕಾರ್ಡ್:
ಈಗ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಅನ್ನು ಈ ಯೋಜನೆಯಡಿ ಸೇರಿಸಲಾಗಿದೆ. ಪಿಎಂ ಕಿಸಾನ್ ಅವರ ಫಲಾನುಭವಿಗಳು ಸುಲಭವಾಗಿ ಕೆಸಿಸಿಯನ್ನು ಪಡೆಯಬಹುದು. ರೈತರು ಕೆಸಿಸಿಯಲ್ಲಿ ಶೇ 4 ಬಡ್ಡಿದರಕ್ಕೆ ಕ್ಕೆ 3 ಲಕ್ಷ ರೂ.ಗಳವರೆಗೆ ಸಾಲ ಪಡೆಯಬಹುದು. 

ಮಾಂಧನ್ ಯೋಜನೆಯ ಪ್ರಯೋಜನಗಳು :
ಪಿಎಂ-ಕಿಸಾನ್ ಸಮ್ಮನ್ ನಿಧಿಯ ಲಾಭ ಪಡೆಯುವ ರೈತರು ಇನ್ನು ಮುಂದೆ ಪಿಎಂ ಕಿಸಾನ್ ಮಾಂಧನ್ ಯೋಜನೆಗಾಗಿ ಯಾವುದೇ ದಾಖಲೆಗಳನ್ನು ಒದಗಿಸಬೇಕಾಗಿಲ್ಲ. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಸರ್ಕಾರ ರೈತರಿಗೆ ಎಲ್ಲ ರೀತಿಯಲ್ಲೂ ಪ್ರಯೋಜನಗಳನ್ನು ನೀಡಲು ಪ್ರಯತ್ನಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News