Budget 2022: ಸರ್ಕಾರಿ ನೌಕರರಿಗೊಂದು ಭಾರಿ ನೆಮ್ಮದಿಯ ಸುದ್ದಿ, ಈ ಹಣಕ್ಕೆ ನೀವು ತೆರಿಗೆ ಪಾವತಿಸಬೇಕಾಗಿಲ್ಲ

7th Pay Commission Latest News - ಕರೋನಾ ಅವಧಿಯಲ್ಲಿ (Corona Pandemic) ಸರ್ಕಾರಿ ಉದ್ಯೋಗಿಗಳಿಗೆ ಪರಿಹಾರ ಒದಗಿಸಿದ್ದ ಕೇಂದ್ರ ಸರ್ಕಾರ, LTC ಕ್ಯಾಶ್ ವೋಚರ್ ಯೋಜನೆಯನ್ನು (LTC Cash Voucher Scheme) ಘೋಷಿಸಿತ್ತು. ಈ ಯೋಜನೆಯಡಿಯಲ್ಲಿ, ಉದ್ಯೋಗಿಗಳಿಗೆ ಪ್ರಯಾಣ ಭತ್ಯೆಯ ಬದಲಾಗಿ ನಗದು ಮೊತ್ತವನ್ನು ನೀಡಲಾಗುತ್ತದೆ. ಈ ಮೊತ್ತಕ್ಕೆ ಯಾವುದೇ ತೆರಿಗೆ (Tax Benefit) ವಿಧಿಸಲಾಗುವುದಿಲ್ಲ.

Written by - Nitin Tabib | Last Updated : Jan 25, 2022, 02:00 PM IST
  • ಕೇಂದ್ರ ನೌಕರರಿಗೆ ಬಿಗ್ ರಿಲೀಫ್.
  • LTC ನಗದು ವೋಚರ್ ಯೋಜನೆಯ ಮೊತ್ತಕ್ಕೆ ಯಾವುದೇ ತೆರಿಗೆ ಇಲ್ಲ
  • ಕಳೆದ ಬಜೆಟ್‌ನಲ್ಲಿ ಹಣಕಾಸು ಸಚಿವರು ಘೋಷಣೆ ಮಾಡಿದ್ದರು
Budget 2022: ಸರ್ಕಾರಿ ನೌಕರರಿಗೊಂದು ಭಾರಿ ನೆಮ್ಮದಿಯ ಸುದ್ದಿ, ಈ ಹಣಕ್ಕೆ ನೀವು ತೆರಿಗೆ ಪಾವತಿಸಬೇಕಾಗಿಲ್ಲ  title=
7th Pay Commission (File Photo)

LTC Budget - ಕೇಂದ್ರ ಸರ್ಕಾರವು ಕಳೆದ ಬಜೆಟ್‌ನಲ್ಲಿ (Budget-2021) ಕೇಂದ್ರ ನೌಕರರಿಗೆ ದೊಡ್ಡ ಪರಿಹಾರವನ್ನು ಒದಗಿಸಿತ್ತು.  ವಾಸ್ತವದಲ್ಲಿ ಸರ್ಕಾರವು 2021 ರ ಬಜೆಟ್‌ನಲ್ಲಿ ಉದ್ಯೋಗಿಗಳಿಗೆ (Central Governent Employees) ಪ್ರಯಾಣ ಭತ್ಯೆ ರಜೆ ಯೋಜನೆಯಲ್ಲಿ ನಗದು ವೋಚರ್ ಯೋಜನೆ Cash Voucher Scheme) ಯನ್ನು ಸೂಚಿಸಿದೆ. ಇದರ ನಂತರ, ಕೇಂದ್ರ ನೌಕರರು ಈ ಮೊತ್ತಕ್ಕೆ ತೆರಿಗೆ (Income Tax) ಪಾವತಿಸಬೇಕಾಗಿಲ್ಲ. 2022 ರ ಬಜೆಟ್‌ನಲ್ಲಿ (Budget 2022) ಕೇಂದ್ರ ಉದ್ಯೋಗಿಗಳಿಗೆ ದೊಡ್ಡ ಘೋಷಣೆಯಾಗುವ ಸಾಧ್ಯತೆಯನ್ನು ನಿರೀಕ್ಷಿಸಲಾಗುತ್ತಿದೆ.

ನಗದು ವೋಚರ್ ಯೋಜನೆ ಎಂದರೇನು?
ಈ ಯೋಜನೆಯನ್ನು 12 ಅಕ್ಟೋಬರ್ 2020 ರಂದು ಘೋಷಿಸಲಾಗಿದೆ. ಮೊದಲು ಈ ಯೋಜನೆಯು ಕೇಂದ್ರೀಯ ಉದ್ಯೋಗಿಗಳಿಗೆ ಮಾತ್ರವಾಗಿತ್ತು ಆದರೆ ನಂತರ ಖಾಸಗಿ ಮತ್ತು ಇತರ ರಾಜ್ಯ ಉದ್ಯೋಗಿಗಳನ್ನು ಸಹ ಈ ಯೋಜನೆಗೆ ಸೇರಿಸಲಾಯಿತು. ಕೋವಿಡ್ 19 ಮಹಾಮಾರಿಯಿಂದಾಗಿ LTC ಯನ್ನು ತೆರಿಗೆ ವಿನಾಯಿತಿಯಲ್ಲಿ ಇರಿಸಲಾಗಿದೆ ಎಂದು ಬಜೆಟ್ (Union Budget) ಭಾಷಣದಲ್ಲಿ ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದರು. ಈ ಯೋಜನೆಯಿಂದ ಸರ್ಕಾರಿ ನೌಕರರ ಜೇಬಿಗೂ ಹೆಚ್ಚು ಹಣ ಬರಲಿ, ಹಣ ಇದ್ದಾಗ ಅದನ್ನು ಖರ್ಚು ಮಾಡಲಿ ಎಂಬುದು ಸರ್ಕಾರದ ಆಶಯ. ಈ ಸಂಪೂರ್ಣ ವ್ಯವಸ್ಥೆಯಿಂದ ಆರ್ಥಿಕತೆಗೆ ಲಾಭವಾಗಲಿದೆ ಎಂದು ಸೀತಾರಾಮನ್ ಹೇಳಿದ್ದರು. ಕರೋನಾದಿಂದಾಗಿ ಎಲ್‌ಟಿಸಿಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗದ ಉದ್ಯೋಗಿಗಳಿಗೆ, ಪ್ರಯಾಣ ಭತ್ಯೆ ರಜೆ ಯೋಜನೆಯಲ್ಲಿ ನಗದು ವೋಚರ್ ಯೋಜನೆಯ ಲಾಭವನ್ನು ನೀಡಲಾಗುತ್ತದೆ.

ಇದನ್ನೂ ಓದಿ-ಭಾರತಕ್ಕೆ ಓಮಿಕ್ರಾನ್ ಹೊಸ ರೂಪಾಂತರಿ BA.2 ಎಂಟ್ರಿ, ಎಷ್ಟು ಅಪಾಯಕಾರಿ ಈ ವೈರಸ್?

LTC ಎಂದರೇನು?
ಕೇಂದ್ರ ನೌಕರರಿಗೆ 4 ವರ್ಷಗಳಿಗೊಮ್ಮೆ ಎಲ್ ಟಿಸಿ ಸಿಗುತ್ತದೆ. ಈ ಭತ್ಯೆಯಲ್ಲಿ, ಅವರು ಈ ಅವಧಿಯಲ್ಲಿ ಒಮ್ಮೆ ದೇಶದ ಯಾವುದೇ ಸ್ಥಳಕ್ಕೆ ಪ್ರಯಾಣಿಸಬಹುದು. ಈ ಸಮಯದಲ್ಲಿ, ಉದ್ಯೋಗಿ ತನ್ನ ಊರಿಗೆ ಅಂದರೆ ಮನೆಗೆ ಎರಡು ಬಾರಿ ಹೋಗುವ ಅವಕಾಶವನ್ನು ಪಡೆಯುತ್ತಾನೆ. ಈ ಪ್ರಯಾಣ ಭತ್ಯೆಯಲ್ಲಿ, ಉದ್ಯೋಗಿ ವಿಮಾನ ಪ್ರಯಾಣ ಮತ್ತು ರೈಲು ಪ್ರಯಾಣದ ವೆಚ್ಚವನ್ನು ಪಡೆಯುತ್ತಾನೆ. ಇದರೊಂದಿಗೆ ಉದ್ಯೋಗಿಗಳಿಗೆ 10 ದಿನಗಳ ಪಿಎಲ್ (Priviledged Leave) ಕೂಡ ಸಿಗುತ್ತದೆ.

ಇದನ್ನೂ ಓದಿ-University of Bangalore: ಬೆಂಗಳೂರು ವಿಶ್ವವಿದ್ಯಾಲಯದಿಂದ ಮಹಾ ಯಡವಟ್ಟು , ಮಾರ್ಕ್ ಕಂಡು ತಬ್ಬಿಬ್ಬಾದ ವಿದ್ಯಾರ್ಥಿಗಳು

ನಗದು ವೋಚರ್ ಯೋಜನೆಗಾಗಿ ಮಾರ್ಗಸೂಚಿಗಳು
>> LTC ಬದಲಿಗೆ ಉದ್ಯೋಗಿಗಳಿಗೆ ನಗದು ಪಾವತಿಯನ್ನು ನೀಡಲಾಗುತ್ತದೆ.
>> ಉದ್ಯೋಗಿಯ ದರ್ಜೆಗೆ ಅನುಗುಣವಾಗಿ ಪ್ರಯಾಣ ದರವನ್ನು ಪಾವತಿಸಲಾಗುತ್ತದೆ.
>> ಶುಲ್ಕ ಪಾವತಿಯು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.
>> ಈ ಯೋಜನೆಯ ಲಾಭ ಪಡೆಯುವ ಉದ್ಯೋಗಿ ಮೂರು ಪಟ್ಟು ಶುಲ್ಕವನ್ನು ಖರ್ಚು ಮಾಡಬೇಕಾಗುತ್ತದೆ.
>> ರಜೆ ನಗದಿಗಾಗಿ, ಅದೇ ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ.
>>  31 ಮಾರ್ಚ್ 2021 ರ ಮೊದಲು ಖರ್ಚು ಮಾಡಬೇಕಾಗುತ್ತದೆ.
>>  ಯಾವ ಸರಕಿನ ಮೇಲೆ ಶೇ.12 ರಷ್ಟು GST ಇರುತ್ತದೆಯೋ, ನೌಕರರು ಆ ಸರಕಿನ ಮೇಲೆ ಹಣ ಖರ್ಚು ಮಾಡಬೇಕು.
>> ಸೇವೆಗಳು ಅಥವಾ ಸರಕುಗಳನ್ನು GST ನೋಂದಾಯಿತ ಮಾರಾಟಗಾರ ಅಥವಾ ವ್ಯಾಪಾರಿಯಿಂದ ಮಾತ್ರ ಪಡೆದುಕೊಳ್ಳಬೇಕು.
>> ಸೇವೆಗಳು ಅಥವಾ ಸರಕುಗಳ ಪಾವತಿಯನ್ನು ಸಹ ಡಿಜಿಟಲ್ ರೂಪದಲ್ಲಿ  ಮಾಡಬೇಕಾಗುತ್ತದೆ.
>> ಪ್ರಯಾಣ ಭತ್ಯೆ ಅಥವಾ ರಜೆ ಭತ್ಯೆಯನ್ನು ಕ್ಲೈಮ್ ಮಾಡುವಾಗ GST ರಶೀದಿಯನ್ನು ನೀಡಬೇಕಾಗುತ್ತದೆ.

ಇದನ್ನೂ ಓದಿ-3ನೇ ಮಹಾಯುದ್ಧದ ಮುನ್ಸೂಚನೆಯೇ ಇದು! ಪೂರ್ವ ಯುರೋಪ್ ಗೆ NATO ವತಿಯಿಂದ ಯುದ್ಧ ಸಾಮಗ್ರಿಗಳ ರವಾನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News