Aadhaar Security Tips: ನಿಮ್ಮ ಆಧಾರ್ ಅನ್ನು ಸೇಫ್ ಆಗಿರಿಸಲು UIDAI ಸಲಹೆಗಳಿವು

Aadhaar Security Tips: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಅನ್ನು ಹೇಗೆ ಸುರಕ್ಷಿತವಾಗಿರಿಸುವುದು ಎಂಬುದರ ಕುರಿತು ಕೆಲವು ಸಲಹೆಗಳನ್ನು ಹಂಚಿಕೊಂಡಿದೆ.

Written by - Yashaswini V | Last Updated : Jun 6, 2022, 05:36 PM IST
  • ಯುಐಡಿಎಐ ಆಧಾರ್ ಕಾರ್ಡ್ ಹೊಂದಿರುವವರಿಗೆ ಆಧಾರ್ ದುರ್ಬಳಕೆಯನ್ನು ತಡೆಯಲು ಏಳು ಮಾರ್ಗಗಳನ್ನು ಹೇಳಿದೆ.
  • ನಿಮ್ಮ ಹೆಸರು, ವಿಳಾಸ, ಲಿಂಗ, ಹುಟ್ಟಿದ ದಿನಾಂಕ, ಹತ್ತು ಫಿಂಗರ್‌ಪ್ರಿಂಟ್‌ಗಳು, ಎರಡು ಐರಿಸ್ ಸ್ಕ್ಯಾನ್‌ಗಳು, ಮುಖದ ಛಾಯಾಚಿತ್ರ, ಮೊಬೈಲ್ ಸಂಖ್ಯೆ (ಐಚ್ಛಿಕ), ಮತ್ತು ಇಮೇಲ್ ಐಡಿ (ಐಚ್ಛಿಕ) ಇವೆಲ್ಲವೂ ನಿಮ್ಮ ಆಧಾರ್ ರುಜುವಾತುಗಳ ಭಾಗವಾಗಿದೆ
  • ನೀವು ಇವುಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ ನಿಮ್ಮ ಆಧಾರ್ ದುರ್ಬಳಕೆಯಾಗಬಹುದು.
Aadhaar Security Tips: ನಿಮ್ಮ ಆಧಾರ್ ಅನ್ನು ಸೇಫ್ ಆಗಿರಿಸಲು UIDAI ಸಲಹೆಗಳಿವು title=
UIDAI Tips to keep Aadhaar safe

ಆಧಾರ್ ಭದ್ರತಾ ಸಲಹೆಗಳು: ಪ್ರಸ್ತುತ ಪ್ರತಿ ಭಾರತೀಯರಿಗೂ ಪ್ರತಿ ಕೆಲಸಕ್ಕೂ ಅಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಸರ್ಕಾರದ ವತಿಯಿಂದ ಲಭ್ಯವಾಗುವ ಸೌಲಭ್ಯಗಳ ಪ್ರಯೋಜನಗಳನ್ನು ಪಡೆಯಬೇಕಾದರೆ ಅದಕ್ಕಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಇಲ್ಲದೆ, ನೀವು ಅನೇಕ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಆಧಾರ್ ದುರ್ಬಳಕೆ ಬಗೆಗಿನ ಸುದ್ದಿಗಳು ಆತಂಕ ಸೃಷ್ಟಿಸಿವೆ. ಈ ಬಗ್ಗೆ ನೀವೂ ಚಿಂತಿತರಾಗಿದ್ದರೆ ಅದರ ಅಗತ್ಯವಿಲ್ಲ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಅನ್ನು ಹೇಗೆ ಸುರಕ್ಷಿತವಾಗಿರಿಸುವುದು ಎಂಬುದರ ಕುರಿತು ಕೆಲವು ಸಲಹೆಗಳನ್ನು ಹಂಚಿಕೊಂಡಿದೆ.

ಯುಐಡಿಎಐ ಆಧಾರ್ ಕಾರ್ಡ್ ಹೊಂದಿರುವವರಿಗೆ ಆಧಾರ್ ದುರ್ಬಳಕೆಯನ್ನು ತಡೆಯಲು ಏಳು ಮಾರ್ಗಗಳನ್ನು ಹೇಳಿದೆ. ನಿಮ್ಮ ಹೆಸರು, ವಿಳಾಸ, ಲಿಂಗ, ಹುಟ್ಟಿದ ದಿನಾಂಕ, ಹತ್ತು ಫಿಂಗರ್‌ಪ್ರಿಂಟ್‌ಗಳು, ಎರಡು ಐರಿಸ್ ಸ್ಕ್ಯಾನ್‌ಗಳು, ಮುಖದ ಛಾಯಾಚಿತ್ರ, ಮೊಬೈಲ್ ಸಂಖ್ಯೆ (ಐಚ್ಛಿಕ), ಮತ್ತು ಇಮೇಲ್ ಐಡಿ (ಐಚ್ಛಿಕ) ಇವೆಲ್ಲವೂ ನಿಮ್ಮ ಆಧಾರ್ ರುಜುವಾತುಗಳ ಭಾಗವಾಗಿದೆ. ನೀವು ಇವುಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ ನಿಮ್ಮ ಆಧಾರ್ ದುರ್ಬಳಕೆಯಾಗಬಹುದು. ಹಾಗಾಗಿ ಆಧಾರ್ ಕಾರ್ಡಿಗೆ ಸಂಬಂಧಿಸಿದಂತೆ ಕೆಲವು ತಪ್ಪುಗಳಾಗದಂತೆ ನಿಗಾವಹಿಸುವುದು ಅತ್ಯಗತ್ಯ.

ಇದನ್ನೂ ಓದಿ- Sukanya Samriddhi ಯೋಜನೆಯಲ್ಲಿ ಸರ್ಕಾರದಿಂದ 5 ಪ್ರಮುಖ ಬದಲಾವಣೆಗಳು!

ಆಧಾರ್ ಕಾರ್ಡ್ ವಿಷಯದಲ್ಲಿ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ:
ಆಧಾರ್ ಅನ್ನು ಸುರಕ್ಷಿತವಾಗಿರಿಸಬೇಕಾದರೆ ಆಧಾರ್ ಕಾರ್ಡಿಗೆ ಸಂಬಂಧಿಸಿದಂತೆ ಕೆಲವು ತಪ್ಪುಗಳು ಆಗದಂತೆ ನಿಗಾವಹಿಸುವುದು ಬಹಳ ಮುಖ್ಯ. ಈ ಕುರಿತಂತೆ ಆಧಾರ್ ಒದಗಿಸುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)  ಕೆಲವು ಸಲಹೆಗಳನ್ನೂ ಅನುಸರಿಸಿ ನಿಮ್ಮ ಆಧಾರ್ ಅನ್ನು ಸೇಫ್ ಆಗಿಸಬಹುದು.
>> ಆಧಾರ್ OTP ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ. 
>> ಕೆಲವೊಮ್ಮೆ ಕೆಲವರು ಆಧಾರ್ ಡೌನ್‌ಲೋಡ್ ಮಾಡಲು ಸಾರ್ವಜನಿಕ ಕಂಪ್ಯೂಟರ್ ಅನ್ನು ಬಳಸುತ್ತಾರೆ ಮತ್ತು ನಂತರ ಅದನ್ನು ಅಳಿಸಲು ಮರೆತುಬಿಡುತ್ತಾರೆ. ಆದರೆ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.
>> ನಿಮ್ಮ ಆಧಾರ್ ಅನ್ನು ಅಧಿಕೃತ ಯುಐಡಿಎಐ ವೆಬ್‌ಸೈಟ್ ಮೂಲಕ ಮಾತ್ರ ಪರಿಶೀಲಿಸಿ ಮತ್ತು ಅದನ್ನು ನಿಮ್ಮ ವೈಯಕ್ತಿಕ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಲ್ಲಿ ಮಾಡಲು ಸಲಹೆ ನೀಡಲಾಗುತ್ತದೆ. 

ಇದನ್ನೂ ಓದಿ- LPG Subsidy: ಉಚಿತ ಎಲ್ಪಿಜಿ ಸಿಲಿಂಡರ್ ನಿಯಮಗಳಲ್ಲಿ ಬದಲಾವಣೆ ಸಾಧ್ಯತೆ! ನೀವೂ ತಿಳಿದುಕೊಳ್ಳಿ

ನೀವು ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡಬಹುದು:
* ಮೊದಲು ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ. ಇಲ್ಲಿ ಮುಖಪುಟದಲ್ಲಿ, ನನ್ನ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 
* ಆಧಾರ್ ಸೇವೆಗಳಲ್ಲಿ ಲಾಕ್/ಅನ್ಲಾಕ್ ಬಯೋಮೆಟ್ರಿಕ್ ಅನ್ನು ಕ್ಲಿಕ್ ಮಾಡಿ. 
* ಅದರ ನಂತರ ಹೊಸ ಪುಟ ತೆರೆಯುತ್ತದೆ, ಬಾಕ್ಸ್ ಅನ್ನು ಟಿಕ್ ಮಾಡಿ. 
* ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ, ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
* OTP ಅನ್ನು ನಮೂದಿಸಿ ಮತ್ತು ಲಾಕ್ ಮಾಡುವ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News