Diffuse Batteries Recycle: ನಿಮ್ಮ ಬಳಿಯೂ ಕೂಡ ಹಾಳಾದ ಬ್ಯಾಟರಿಗಳಿವೆಯಾ? ಎಸೆಯುವ ಮುನ್ನ ಒಮ್ಮೆ ಈ ಸುದ್ದಿ ಓದಿ

Diffuse Batteries Recycle:ಈ ಕುರಿತು ಬ್ಯಾಟರಿ ಸೆಲ್ ತಯಾರಕ ಕಂಪನಿಗಳಿಗೆ ಸೂಚಿಸಿರುವ ಸರ್ಕಾರ ಬ್ಯಾಟರಿ ತ್ಯಾಜ್ಯ ನಿರ್ವಹಣೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿದೆ.  

Written by - Nitin Tabib | Last Updated : Aug 25, 2022, 01:30 PM IST
  • ನೀವೂ ಕೂಡ ಹಾಳಾದ ಫೋನ್, ರಿಮೋಟ್, ಕಾರ್ ಇತ್ಯಾದಿಗಳ ಬ್ಯಾಟರಿಗಳನ್ನು ಎಸೆಯುತ್ತಿದ್ದರೆ, ಈ ಸುದ್ದಿ ನಿಮಗಾಗಿ.
  • ಏಕೆಂದರೆ ಅವುಗಳನ್ನು ಎಸೆಯುವ ಅಗತ್ಯವಿಲ್ಲ ಮತ್ತು ಅವುಗಳನ್ನು ಸುರಕ್ಷಿತವಾಗಿರಿಸಿ.
  • ಬ್ಯಾಟರಿ ತ್ಯಾಜ್ಯ ನಿರ್ವಹಣೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬ್ಯಾಟರಿ ತಯಾರಿಕಾ ಕಂಪನಿಗಳಿಗೆ ಸರ್ಕಾರ ಸೂಚಿಸಿದೆ.
Diffuse Batteries Recycle: ನಿಮ್ಮ ಬಳಿಯೂ ಕೂಡ ಹಾಳಾದ ಬ್ಯಾಟರಿಗಳಿವೆಯಾ? ಎಸೆಯುವ ಮುನ್ನ ಒಮ್ಮೆ ಈ ಸುದ್ದಿ ಓದಿ title=
Diffuse Batteries Recycle

Diffuse Batteries Recycle: ನೀವೂ ಕೂಡ ಹಾಳಾದ ಫೋನ್, ರಿಮೋಟ್, ಕಾರ್ ಇತ್ಯಾದಿಗಳ ಬ್ಯಾಟರಿಗಳನ್ನು ಎಸೆಯುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಏಕೆಂದರೆ ಅವುಗಳನ್ನು ಎಸೆಯುವ ಅಗತ್ಯವಿಲ್ಲ ಮತ್ತು  ಅವುಗಳನ್ನು ಸುರಕ್ಷಿತವಾಗಿರಿಸಿ. ಬ್ಯಾಟರಿ ತ್ಯಾಜ್ಯ ನಿರ್ವಹಣೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬ್ಯಾಟರಿ ತಯಾರಿಕಾ ಕಂಪನಿಗಳಿಗೆ ಸರ್ಕಾರ ಸೂಚಿಸಿದೆ. ಇದಕ್ಕಾಗಿ ಕಂಪನಿಗಳಿಗೆ ಸರ್ಕಾರದಿಂದ ವಿವಿಧ ಸಲಹೆಗಳನ್ನು ನೀಡಲಾಗಿದೆ. ದೋಷಪೂರಿತ ಬ್ಯಾಟರಿಗಳನ್ನು ಗ್ರಾಹಕರಿಂದ ಸಂಗ್ರಹಿಸಲು ಬ್ಯಾಟರಿ ತಯಾರಕರನ್ನು ಸರ್ಕಾರ ಕೇಳಿಕೊಂಡಿದೆ. ಈ ಕುರಿತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಕೆಟ್ಟ ಬ್ಯಾಟರಿಯನ್ನು ಹೇಗೆ ಸಂಗ್ರಹಿಸುವುದು
ದೋಷಪೂರಿತ ಬ್ಯಾಟರಿಗಳನ್ನು ಗ್ರಾಹಕರಿಂದ ಸಂಗ್ರಹಿಸಬೇಕು ಎಂದು ಬ್ಯಾಟರಿ ಉತ್ಪಾದನಾ ಕಂಪನಿಗಳಿಗೆ ಸರ್ಕಾರ ಸೂಚಿಸಿದೆ. ಇದಕ್ಕಾಗಿ, ಕಂಪನಿಗಳು ಬ್ಯಾಟರಿ ಮರುಪಾವತಿ ಅಥವಾ ಠೇವಣಿ ಮರುಪಾವತಿಯಂತಹ ಯೋಜನೆಗಳನ್ನು ಪ್ರಾರಂಭಿಸಬಹುದು ಎಂದು ಸರ್ಕಾರ ಹೇಳಿದೆ.

ಸರ್ಕ್ಯೂಲರ್ ಏಕಾನಾಮಿ ಉತ್ತೇಜಿಸುವತ್ತ ಗಮನಹರಿಸಿ
ಈ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರ ಸರ್ಕ್ಯೂಲರ್ ಏಕಾನಾಮಿಗೆ ಒತ್ತು ನೀಡಲು ಬಯಸುತ್ತಿದೆ. ಇದು ತ್ಯಾಜ್ಯವನ್ನು ಅಂದರೆ ಕೆಟ್ಟ ವಸ್ತುಗಳನ್ನು ಕಡಿಮೆ ಮಾಡಲು ಕೂಡ ಸಹಕಾರಿಯಾಗಲಿದೆ. ಅಷ್ಟೇ ಅಲ್ಲ ಇದು ಖನಿಜಗಳ ಮೇಲೆ ಕಂಪನಿಗಳ ಅವಲಂಬನೆ ಕೂಡ  ಕಡಿಮೆ ಮಾಡಲಿದೆ ಮತ್ತು ಗಣಿಗಾರಿಕೆ ಮತ್ತು ಬ್ಯಾಟರಿಗಳು (ಪೋರ್ಟೆಬಲ್  ಅಥವಾ EV) ಮೊದಲಿಗಿಂತ ಆಗವಾಗಲಿದೆ ಎಂಬುದು ಸರ್ಕಾರದ ಅಭಿಮತ. 

ಇದರ ಜೊತೆಗೆ ಮರುಬಳಕೆಗಾಗಿ ಕಚ್ಚಾ ವಸ್ತುಗಳನ್ನು ಬಳಸುವ ಗಡುವನ್ನು ಸರ್ಕಾರ ನಿಗದಿಪಡಿಸಿದೆ ಹಾಗೂ ಸರ್ಕಾರದ ಆದೇಶವನ್ನು ಅನುಸರಿಸದೆ ಹೋದಲ್ಲಿ ದಂಡ ವಿಧಿಸುವ ಯೋಜನೆಯನ್ನು ಕೂಡ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಮಿತಿಯೊಂದನ್ನು ರಚಿಸಲಿದ್ದು, ಅದು ಮೇಲ್ವಿಚಾರಣೆ ನಡೆಸಲಿದೆ.

ಎಷ್ಟು ಮತ್ತು ಯಾವ ರೀತಿಯ ದಂಡ ಬೀಳಲಿದೆ
ಈ ಕುರಿತು ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಪರಿಸರ ಪರಿಹಾರದ ದಂಡವು ಉತ್ಪಾದಕರ ವಿಸ್ತೃತ ಉತ್ಪಾದನೆಯ ಜವಾಬ್ದಾರಿಯನ್ನು ಕೊನೆಗೊಳಿಸುವುದಿಲ್ಲ. 3 ವರ್ಷಗಳಲ್ಲಿ, ವಿಧಿಸಲಾದ ಪರಿಸರ ಪರಿಹಾರವನ್ನು ತಯಾರಕರಿಗೆ ಹಿಂದಿರುಗಿಸಲಾಗುವುದು ಎನ್ನಲಾಗಿದೆ.
1. ಪರಿಸರ ಪರಿಹಾರವನ್ನು 1 ವರ್ಷದೊಳಗೆ - ಶೇ.75 ಪರಿಹಾರ ಮರುಪಾವತಿ.
2. 2 ವರ್ಷಗಳಲ್ಲಿ - ಶೇ.60 ಪರಿಹಾರ ಮರುಪಾವತಿ
3. 3 ವರ್ಷಗಳಲ್ಲಿ - ಶೇ. 40 ಪರಿಹಾರ ಮರುಪಾವತಿ

Waste Battery Management Rules, 2022 ಏನು ಹೇಳುತ್ತವೆ?
>> ಬ್ಯಾಟರಿ ತಯಾರಕರ ಮೇಲೆ ವಿಸ್ತೃತ ಉತ್ಪಾದಕ ಜವಾಬ್ದಾರಿ
>> ಉತ್ಪಾದನೆ ಮತ್ತು ಮರುಬಳಕೆಯ ಜವಾಬ್ದಾರಿ
>> ಬಳಸಿದ ಬ್ಯಾಟರಿಗಳ ಮರುಬಳಕೆ ಕಡ್ಡಾಯ
>> ಲ್ಯಾಂಡ್ಫಿಲ್ ಅನ್ನು ಸಂಗ್ರಹಿಸಿ ನೇರವಾಗಿ ಸೈಟ್ಗೆ ಕಳುಹಿಸಬಾರದು

ಮರುಬಳಕೆಯ ವಸ್ತುಗಳನ್ನು ಬಳಸುವುದು ಅವಶ್ಯಕ
2027-28 ರ ವೇಳೆಗೆ ಶೇ.5 ಪೋರ್ಟಬಲ್ ಮತ್ತು EV ಬ್ಯಾಟರಿಗಳಲ್ಲಿ ಮರುಬಳಕೆಯ ವಸ್ತುಗಳ ಬಳಕೆ. ಇದಾದ ನಂತರ ಪ್ರತಿ ವರ್ಷ ಶೇ.5ರಂತೆ ಈ ದರದಲ್ಲಿ ಮತ್ತು 2030-31ರ ವೇಳೆಗೆ ಶೇ.20ಕ್ಕೆ ಹೆಚ್ಚಿಸಬೇಕು. ಇದರ ಹೊರತಾಗಿ, 2024-26ರ ವೇಳೆಗೆ ಆಟೋಮೋಟಿವ್ ಮತ್ತು ಕೈಗಾರಿಕಾ ಬಳಕೆಗೆ ಬ್ಯಾಟರಿ ಉತ್ಪಾದನೆಯ ಶೇ.35% ಮತ್ತು 2026-27ರ ವೇಳೆಗೆ ಶೇ.40 ಬಳಸಲಾಗುವುದು.

ಇದನ್ನೂ ಓದಿ-10 ಲಕ್ಷದೊಳಗಿನ 5 ಅತ್ಯುತ್ತಮ ಕಾರುಗಳು: ಇಲ್ಲಿದೆ ಸಂಪೂರ್ಣ ಮಾಹಿತಿ

ಕಂಪನಿಗಳಿಗೆ ಪ್ರಮಾಣಪತ್ರಗಳನ್ನು ನೀದಲಾಗುವುದು
ಇದಕ್ಕಾಗಿ ಎಲ್ಲಾ ಉತ್ಪಾದಕರು ಕೇಂದ್ರ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಇದಕ್ಕಾಗಿ ಪ್ರಮಾಣಪತ್ರವನ್ನು ಸಹ ನೀಡಲಾಗುವುದು. ಉತ್ಪಾದಕರು ಪ್ರತಿ ವರ್ಷ ಜೂನ್ 30 ರೊಳಗೆ CPCB (ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ) ಗೆ ಮರುಬಳಕೆ ಯೋಜನೆಯನ್ನು ಸಲ್ಲಿಸಬೇಕು.

ಇದನ್ನೂ ಓದಿ-ನಿಮ್ಮ ಹೆಸರಿನಲ್ಲಿ ಮನೆ ಇದ್ದರೆ ವೃದ್ಧಾಪ್ಯದಲ್ಲಿ ಪಿಂಚಣಿ ಸಿಗುತ್ತದೆ! ಕೇವಲ ಈ ಕೆಲಸ ಮಾಡಬೇಕು

2022-23 ನೇ ಸಾಲಿಗೆ, ಮುಂದಿನ 3 ತಿಂಗಳಲ್ಲಿ ಯೋಜನೆಯನ್ನು ಸಲ್ಲಿಸಬೇಕಾಗುತ್ತದೆ. ಇದರ ಹೊರತಾಗಿ, ಬ್ಯಾಟರಿ ಲೈಫ್ ಮುಕ್ತಾಯವನ್ನು ಸಹ ನಿರ್ಧರಿಸಬೇಕು . ಮರುಬಳಕೆಯು 2024-25 ರ ವೇಳೆಗೆ ಪೋರ್ಟಬಲ್ ಮತ್ತು EV ಗಾಗಿ ಶೇ.70 ಕಚ್ಚಾ ವಸ್ತುಗಳನ್ನು ಗುರಿಯಾಗಿಸುತ್ತದೆ, ಇದು 2026-27 ರ ವೇಳೆಗೆ ಶೇ.90 ಆಗಿರುತ್ತದೆ. ಇದು ಆಟೋಮೋಟಿವ್ ಮತ್ತು ಕೈಗಾರಿಕಾ ಬ್ಯಾಟರಿಗಳ ವಿಷಯಕ್ಕೆ ಬಂದಾಗ ಶೇ.55% ಆಗಲಿದ್ದು, 2026-27 ರ ವೇಳೆಗೆ ಶೇ. 60 ಆಗಲಿದೆ. ಅಷ್ಟೇ ಅಲ್ಲ, ಮರುಬಳಕೆಯ ಗುರಿಯನ್ನು ತಲುಪದಿದ್ದಕ್ಕಾಗಿ ಪರಿಸರ ಪರಿಹಾರವನ್ನು ಪಾವತಿಸಬೇಕಾಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News