ಗ್ಯಾಸ್ ಸಿಲಿಂಡರ್ ದರದಲ್ಲಿ ಇಳಿಕೆ : ಇಂದಿನಿಂದ 57.5 ರೂಪಾಯಿ ಅಗ್ಗವಾದ ಅಡುಗೆ ಅನಿಲ

Gas Cylinder Price Down:ಇಂದಿನಿಂದ ಗ್ಯಾಸ್ ಸಿಲಿಂಡರ್ ದರ ಇಳಿಕೆಯಾಗಿದೆ. ಸರ್ಕಾರಿ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇಳಿಸಿವೆ.

Written by - Ranjitha R K | Last Updated : Nov 16, 2023, 01:38 PM IST
  • ಇಂದಿನಿಂದ ಅಂದರೆ ನವೆಂಬರ್ 16 ರಿಂದ ಅಗ್ಗ
  • ಹೊಸ ದರಗಳನ್ನು ಇಲ್ಲಿ ಪರಿಶೀಲಿಸಿ
  • 14 ಕೆಜಿ ಸಿಲಿಂಡರ್ ದರ ಹೇಗಿದೆ ?
ಗ್ಯಾಸ್ ಸಿಲಿಂಡರ್ ದರದಲ್ಲಿ ಇಳಿಕೆ :  ಇಂದಿನಿಂದ 57.5  ರೂಪಾಯಿ ಅಗ್ಗವಾದ ಅಡುಗೆ ಅನಿಲ  title=

Gas Cylinder Price Down : ದೀಪಾವಳಿ ನಂತರ ಇದು ಸಂತಸದ ಸುದ್ದಿ. ಹೌದು ಇಂದಿನಿಂದ ಗ್ಯಾಸ್ ಸಿಲಿಂಡರ್ ದರ ಇಳಿಕೆಯಾಗಿದೆ. ಸರ್ಕಾರಿ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇಳಿಸಿವೆ. ಹೊಸ ಬೆಲೆಗಳು ಇಂದಿನಿಂದಲೇ ಜಾರಿಗೆ ಬಂದಿವೆ. 

ಸರ್ಕಾರಿ ತೈಲ ಕಂಪನಿ IOCL ಮಾಹಿತಿಯ ಪ್ರಕಾರ, ಗ್ಯಾಸ್ ಸಿಲಿಂಡರ್‌ಗಳು ಇಂದಿನಿಂದ ಅಂದರೆ ನವೆಂಬರ್ 16 ರಿಂದ ಅಗ್ಗವಾಗಿವೆ. ಈ ಬಾರಿ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಇಳಿಸಿವೆ. 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 57.50 ರೂ.ಗಳಷ್ಟು ಅಗ್ಗವಾಗಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. 14 ಕೆಜಿ ಸಿಲಿಂಡರ್ ದರಗಳು  ಹಿಂದಿನಂತೆಯೇ ಇದೆ. 

ಇದನ್ನೂ ಓದಿ : RBI ನಿಷೇಧದ ನಂತರ ಬಜಾಜ್ ಫೈನಾನ್ಸ್ ಸ್ಟಾಕ್ ಆರಂಭಿಕ ನಷ್ಟದಿಂದ ಚೇತರಿಸಿಕೊಳ್ಳುತ್ತಿದೆ; ವಿಶ್ಲೇಷಕರು ಸೀಮಿತ ಪರಿಣಾಮವಾಗಿದೆಯೆಂದು ಊಹಿಸಿದ್ದಾರೆ!

ಹೊಸ ದರಗಳನ್ನು ಪರಿಶೀಲಿಸಿ : 
ಇಂದಿನ ಕಡಿತದ ನಂತರ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1755.50 ರೂ. ೇ ಕೋಲ್ಕತ್ತಾದಲ್ಲಿ 1885.50 ರೂ., ಮುಂಬೈನಲ್ಲಿ 1728 ರೂ., ಚೆನ್ನೈನಲ್ಲಿ ಸಿಲಿಂಡರ್‌ಗೆ 1942 ರೂ.ಆಗಿದೆ. 

ನವೆಂಬರ್ 1ರಂದು ದರ ಹೆಚ್ಚಳ :
ದೀಪಾವಳಿಗೂ ಮುನ್ನ ಅಂದರೆ ನವೆಂಬರ್ 1 ರಂದು ವಾಣಿಜ್ಯ ಸಿಲಿಂಡರ್‌ಗಳ ದರವನ್ನು 101.50 ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು. ಆದರೆ ಆ ಸಮಯದಲ್ಲಿ ಕೂಡಾ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಆಗಿರಲಿಲ್ಲ. 

ಇದನ್ನೂ ಓದಿ : ಚಿನ್ನ ಖರೀದಿಗೆ ಬೆಲೆ ಇನ್ನಷ್ಟು ಇಳಿಕೆಯಾಗಲಿ ಎಂದು ಕಾಯುತ್ತಿದ್ದೀರಾ ? ಇಂದಿನ ಬಂಗಾರದ ಬೆಲೆ ಇಲ್ಲಿದೆ

ಆಗಸ್ಟ್ 30 ರಂದು ಬೆಲೆ ಇಳಿಕೆ : 
ಆಗಸ್ಟ್ 30 ರಂದು ದ ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಬದಲಾಯಿಸಲಾಗಿತ್ತು. ಆಗ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಸರ್ಕಾರ 200 ರೂ. ಕಡಿತಗೊಳಿಸಿತ್ತು. ಇದಾದ ಬಳಿಕ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 400 ರೂ.ಗಳ ಕಡಿತವನ್ನು ಘೋಷಿಸಲಾಯಿತು.

14.2 ಕೆಜಿ ಎಲ್‌ಪಿಜಿ ಸಿಲಿಂಡರ್ ದರ :
ದೆಹಲಿ- 903 ರೂ. 
ಕೋಲ್ಕತ್ತಾ - 929 ರೂ. 
ಮುಂಬೈ - 902.50 ರೂ. 
ಚೆನ್ನೈ - 918.50 ರೂ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News