Cardless Cash Withdrawal : ಈಗ ಡೆಬಿಟ್ ಕಾರ್ಡ್ ಇಲ್ಲದೆಯೇ ATM ನಿಂದ ಹಣ ವಿತ್ ಡ್ರಾ ಮಾಡಬಹುದು

Cardless Cash Withdrawal:ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಗ್ರಾಹಕರು ಕಾರ್ಡ್‌ಲೆಸ್ ಕ್ಯಾಶ್ ಸೌಲಭ್ಯದ  ಮೂಲಕ ದಿನಕ್ಕೆ ಕನಿಷ್ಠ 100 ರೂ ಮತ್ತು ಗರಿಷ್ಠ 10,000 ರೂ.ಗಳನ್ನೂ ವಿತ್ ಡ್ರಾ ಮಾಡಬಹುದು.

Written by - Ranjitha R K | Last Updated : Aug 2, 2021, 01:36 PM IST
  • ಡೆಬಿಟ್ ಕಾರ್ಡ್ ಇಲ್ಲದಿದ್ದರೂ ಎಟಿಎಂನಿಂದ ಹಣವನ್ನು ತೆಗೆಯಬಹುದು
  • HDFC ಬ್ಯಾಂಕ್ ಈ ಸೌಲಭ್ಯವನ್ನು ಆರಂಭಿಸಿದೆ
  • ಎಟಿಎಂಗೆ ಡೆಬಿಟ್ ಕಾರ್ಡ್ ಕೊಂಡೊಯ್ಯುವ ಅಗತ್ಯವಿಲ್ಲ
Cardless Cash Withdrawal : ಈಗ ಡೆಬಿಟ್ ಕಾರ್ಡ್ ಇಲ್ಲದೆಯೇ  ATM ನಿಂದ ಹಣ ವಿತ್ ಡ್ರಾ ಮಾಡಬಹುದು title=
ಎಟಿಎಂಗೆ ಡೆಬಿಟ್ ಕಾರ್ಡ್ ಕೊಂಡೊಯ್ಯುವ ಅಗತ್ಯವಿಲ್ಲ (photo zee news)

ನವದೆಹಲಿ : Cardless Cash Withdrawal: ನೀವು ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಾಗಿದ್ದರೆ ಎಟಿಎಂನಿಂದ ಹಣ ತೆಗೆಯಲು ಡೆಬಿಟ್ ಕಾರ್ಡ್ ಅಗತ್ಯವಿಲ್ಲ. ಎಚ್ ಡಿಎಫ್ ಸಿ ಬ್ಯಾಂಕ್ "ಕಾರ್ಡ್ ಲೆಸ್ ಕ್ಯಾಶ್ ವಿಡ್ರಾಲ್" (Cardless Cash Withdrawal") ಸೌಲಭ್ಯವನ್ನು ಆರಂಭಿಸಿದೆ. ಗ್ರಾಹಕರ ಬಳಿ ಡೆಬಿಟ್ ಕಾರ್ಡ್ ಇಲ್ಲದಿದ್ದರೂ ಎಟಿಎಂನಿಂದ ಹಣ ತೆಗೆಯುವುದು ಸಾಧ್ಯವಾಗುತ್ತದೆ.  

ಡೆಬಿಟ್ ಕಾರ್ಡ್ ಇಲ್ಲದೆ ತೆಗೆಯಬಹುದು ಎಟಿಎಂನಿಂದ ಹಣ : 
HDFC ಬ್ಯಾಂಕ್ ಈ ಸೌಲಭ್ಯದ ಬಗ್ಗೆ ಟ್ವಿಟರ್ ಮೂಲಕ ಮಾಹಿತಿ ನೀಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಗ್ರಾಹಕರು ಕಾರ್ಡ್‌ಲೆಸ್ ಕ್ಯಾಶ್ ಸೌಲಭ್ಯದ (Cardless Cash Withdrawal) ಮೂಲಕ ದಿನಕ್ಕೆ ಕನಿಷ್ಠ 100 ರೂ ಮತ್ತು ಗರಿಷ್ಠ 10,000 ರೂ.ಗಳನ್ನೂ ವಿತ್ ಡ್ರಾ ಮಾಡಬಹುದು. ಅಥವಾ ತಿಂಗಳಿಗೆ 25,000 ರೂ. ತೆಗೆಯಬಹುದು.   ಕಾರ್ಡ್‌ಲೆಸ್ ಕ್ಯಾಶ್ ಪಡೆಯಲು ಮಾಡುವ  ವಿನಂತಿಯು 24 ಗಂಟೆಗಳವರೆಗೆ ಮಾನ್ಯವಾಗಿರುತ್ತದೆ.
 

ಇದನ್ನೂ ಓದಿ : Aadhaar Card Update: ಈಗ ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೂ ಚಿಂತಿಸಬೇಕಿಲ್ಲ

HDFC ಬ್ಯಾಂಕ್ ಖಾತೆದಾರರು ಡೆಬಿಟ್ ಕಾರ್ಡ್ ಇಲ್ಲದೆ ಎಟಿಎಂನಿಂದ ಹಣವನ್ನು ತೆಗೆಯಲು ಅಥವಾ ಹಣ ವರ್ಗಾಯಿಸಲು ಈ ಹಂತಗಳನ್ನು ಅನುಸರಿಸಬೇಕು.

ಹಂತ 1- ಫಲಾನುಭವಿಗಳನ್ನು ಸೇರಿಸಿ:
-ಮೊದಲನೆಯದಾಗಿ, ನೀವು ನೆಟ್ ಬ್ಯಾಂಕಿಂಗ್ (net banking) ಮೂಲಕ ಫಲಾನುಭವಿಯನ್ನು (Befeficiary) ಸೇರಿಸಬೇಕು. 
- ಇದಕ್ಕಾಗಿ, ನೀವು ಲಾಗ್ ಇನ್ ಮಾಡಿದ ನಂತರ 'Funds Transfer tab'ಗೆ ಹೋಗಿ,  Request ಮೇಲೆ ಕ್ಲಿಕ್ ಮಾಡಿ.
- ನಂತರ Add a Beneficiary ಮೇಲೆ ಕ್ಲಿಕ್ ಮಾಡಿ 
-ನಂತರ Cardless Cash Withdrawalಗೆ   ಹೋಗಿ.
- ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ''Confirm' ಮೇಲೆ ಕ್ಲಿಕ್ ಮಾಡಿ. 
-ಇದರ ನಂತರ ಒಂದು OTP ಬರುತ್ತದೆ ಅದನ್ನು ತುಂಬಿ. 

ಹಂತ 2- ಫಲಾನುಭವಿಗೆ ಹಣವನ್ನು ಕಳುಹಿಸಿ :
-ಲಾಗಿನ್ ಆದ ನಂತರ, 'Funds Transfer'  ಮೇಲೆ ಕ್ಲಿಕ್ ಮಾಡಿ 
-ನಂತರ 'Cardless Cash Withdrawal' ಅನ್ನು ಆಯ್ಕೆ ಮಾಡಿ.
-ಇದರ ನಂತರ 'Debit Bank Account' ಆಯ್ಕೆ ಮಾಡಿ, ನಂತರ Befeficiaryಯನ್ನು ಆಯ್ಕೆ ಮಾಡಿ
- ಮೊತ್ತವನ್ನು ನಮೂದಿಸಿದ ನಂತರ, confirm ಮಾಡಿ .
- OTP ಬರುತ್ತದೆ. ಇದೊಂದಿಗೆ ಆರ್ಡರ್ ID ಮತ್ತು ಅಮೌಂಟ್ SMS ಮೂಲಕ ಕಳುಹಿಸಲಾಗುತ್ತದೆ.

ಇದನ್ನೂ ಓದಿ : LPG Cylinder Booking: ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡಲು ಈ ಸುಲಭ ಮಾರ್ಗಗಳನ್ನು ಅನುಸರಿಸಿ

ಹಂತ 3- ಎಟಿಎಂನಿಂದ ಹಣವನ್ನು ಪಡೆಯುವುದು :
-HDFC ಬ್ಯಾಂಕ್ ATM ಗೆ ಹೋಗಿ, ಇಲ್ಲಿ ಮೆನುವಿನಲ್ಲಿ ಕಾರ್ಡ್ ಲೆಸ್ ಕ್ಯಾಶ್ ಆಯ್ಕೆಯನ್ನು ಆರಿಸಿ. 
-ಭಾಷೆಯನ್ನು ಆಯ್ಕೆ ಮಾಡಿ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
-ಇದರ ನಂತರ, ಪರಿಶೀಲನೆಗಾಗಿ SMS ಮೂಲಕ ಸ್ವೀಕರಿಸಿದ OTP ಅನ್ನು ನಮೂದಿಸಿ.
-ಇದರ ನಂತರ, ಆರ್ಡರ್ ಐಡಿ ಹಾಕಿ ಮತ್ತು ನೀವು ತೆಗೆಯಬೇಕಾಗಿರುವ ಮೊತ್ತವನ್ನು ನಮೂದಿಸಿ, 
-ನೀವು ಈ ಎಲ್ಲಾ ಮಾಹಿತಿ ನಿಮಗೆ ಎಸ್ಎಂಎಸ್ ಮೂಲಕ ಬಂದಿರುತ್ತದೆ.  ನೆನಪಿಡಿ, ಎಸ್ಎಂಎಸ್ ನಲ್ಲಿ ಬಂದಿರುವ ಮೊತ್ತವನ್ನು ತುಂಬಬೇಕು.ಇಲ್ಲವಾದರೆ ಟ್ರಾನ್ಸಾಕ್ಶನ್  ಪೂರ್ತಿಯಾಗುವುದಿಲ್ಲ. 
-ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ಎಟಿಎಂನಿಂದ ಹಣವನ್ನು ತೆಗೆಯಬಹುದು .

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News