Short Nap at Office: ಕಚೇರಿಯಲ್ಲಿ ಸಣ್ಣ ನಿದ್ದೆ- ಬೆಂಗಳೂರು ಮೂಲದ ಕಂಪನಿಯಿಂದ ಮಹತ್ವದ ಘೋಷಣೆ

Short Nap at Office: ಈಗ ಉದ್ಯೋಗಿಗಳು ಕಚೇರಿಗೆ ಹೋಗಿ ಅರ್ಧ ಗಂಟೆ ಮಲಗಲು ಸಾಧ್ಯವಾಗುತ್ತದೆ. ಬೆಂಗಳೂರು ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಈ ಸೌಲಭ್ಯವನ್ನು ಆರಂಭಿಸುವುದಾಗಿ ಘೋಷಿಸಿದೆ. 

Written by - Yashaswini V | Last Updated : May 7, 2022, 07:16 AM IST
  • ನಿತ್ಯ ಕಚೇರಿಯಲ್ಲಿ ಅರ್ಧ ಗಂಟೆ ಮಲಗಬಹುದು
  • ಈ ಭಾರತೀಯ ಕಂಪನಿಯಿಂದ ಮಹತ್ವದ ಘೋಷಣೆ
  • ಕಂಪನಿಯಿಂದ ಟೈಮ್ ಟೇಬಲ್ ಬಿಡುಗಡೆ
Short Nap at Office: ಕಚೇರಿಯಲ್ಲಿ ಸಣ್ಣ ನಿದ್ದೆ- ಬೆಂಗಳೂರು ಮೂಲದ ಕಂಪನಿಯಿಂದ ಮಹತ್ವದ ಘೋಷಣೆ  title=
Short Nap at Office

ಕಚೇರಿಯಲ್ಲಿ ಸಣ್ಣ ನಿದ್ರೆ:  ಕರೋನಾ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ, ಪ್ರಪಂಚದಾದ್ಯಂತದ ಕಂಪನಿಗಳ ನಿರ್ವಹಣೆಯ ಚಿಂತನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈಗ ಕಂಪನಿಗಳು ತಮ್ಮ ಉದ್ಯೋಗಿಗಳ ಅನುಕೂಲದ ಬಗ್ಗೆ ಹೆಚ್ಚು ಗಮನ ಹರಿಸುತ್ತಿವೆ. ವಿಶಿಷ್ಟ ಉಪಕ್ರಮವನ್ನು ಕೈಗೊಳ್ಳುವ ಮೂಲಕ, ಬೆಂಗಳೂರು ಮೂಲದ ಭಾರತೀಯ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ನಿತ್ಯ ಕೆಲಸದ ಸಮಯದಲ್ಲಿ ಸ್ವಲ್ಪ ನಿದ್ದೆ ಮಾಡಲು ಅವಕಾಶ ನೀಡುವುದಾಗಿ ಘೋಷಿಸಿದೆ. ಈ ಅವಧಿಯಲ್ಲಿ ಯಾವುದೇ ಉದ್ಯೋಗಿಯ ಸಂಬಳವನ್ನು ಕಡಿತಗೊಳಿಸಲಾಗುವುದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ನೌಕರರು ಕರ್ತವ್ಯದ ಸಮಯದಲ್ಲಿ ಅರ್ಧ ಗಂಟೆ ನಿದ್ರಿಸಲು ಸಾಧ್ಯವಾಗುತ್ತದೆ:
ಉದ್ಯೋಗಿಗಳ ಹಿತದೃಷ್ಟಿಯಿಂದ ಈ ಮಹತ್ತರವಾದ ಉಪಕ್ರಮವನ್ನು ಕೈಗೊಂಡ ಕಂಪನಿಯ ಹೆಸರು ವೇಕ್‌ಫಿಟ್ ಸೇಲ್ಯೂಶನ್ಸ್. ಬೆಂಗಳೂರಿನಲ್ಲಿರುವ ಈ ಭಾರತೀಯ ಸ್ಟಾರ್ಟ್ ಅಪ್ ಕಂಪನಿಯು ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ನಿತ್ಯ ಕೆಲಸದ ಅವಧಿಯಲ್ಲಿ 30 ನಿಮಿಷಗಳ ಕಾಲ ಅಂದರೆ ದೈನಂದಿನ ಕರ್ತವ್ಯದ ಸಮಯದಲ್ಲಿ ಅರ್ಧ ಗಂಟೆ ಮಲಗಲು ಸಾಧ್ಯವಾಗುತ್ತದೆ ಎಂದು ಘೋಷಿಸಿದೆ. 

ಇದನ್ನೂ ಓದಿ- ಉಚಿತ ಗ್ಯಾಸ್ ಸಿಲಿಂಡರ್‌ ಪಡೆಯಲು ಇಲ್ಲಿದೆ ಸುಲಭ ವಿಧಾನ

ಕಂಪನಿಯಿಂದ ಟೈಮ್ ಟೇಬಲ್ ಬಿಡುಗಡೆ:
ಈ ಉಪಕ್ರಮದಿಂದ ತನ್ನ ಉದ್ಯೋಗಿಗಳು ಫಿಟ್ ಆಗುತ್ತಾರೆ ಮತ್ತು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಕಂಪನಿಯ ಆಡಳಿತವು ಹೇಳುತ್ತದೆ. ಈ ಸಂಬಂಧ  ಟೈಮ್ ಟೇಬಲ್  ಅನ್ನು ಸಹ ಬಿಡುಗಡೆ ಮಾಡಿರುವ ಕಂಪನಿ ಈಗ ಉದ್ಯೋಗಿಗಳು ಪ್ರತಿದಿನ ಮಧ್ಯಾಹ್ನ 2 ರಿಂದ 2.30 ರ ನಡುವೆ ಅರ್ಧ ಗಂಟೆ ನಿದ್ದೆ ಮಾಡಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.ಕಚೇರಿಯಲ್ಲಿ ನೌಕರರು ತಾತ್ಕಾಲಿಕವಾಗಿ ಮಲಗಲು ವ್ಯವಸ್ಥೆ ಕೂಡ ಮಾಡಲಾಗಿದೆ. ಈ ಕಂಪನಿಯು ನಿದ್ರೆಯ ಪರಿಹಾರಗಳನ್ನು ಅಂದರೆ ಸ್ಲೀಪ್ ಸಲ್ಯೂಶನ್ ಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತದೆ ಎಂದು ತಿಳಿದುಬಂದಿದೆ. 

ಇದನ್ನೂ  ಓದಿ- ಐಆರ್‌ಸಿಟಿಸಿಯಿಂದ ಚಾರ್‌ಧಾಮ್ ಯಾತ್ರಾ ಪ್ಯಾಕೇಜ್ ಬಿಡುಗಡೆ: ಇಲ್ಲಿದೆ ಡೀಟೇಲ್ಸ್

ಕಂಪನಿಯ ನಿರ್ಧಾರಕ್ಕೆ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ:
ಕಂಪನಿಯ ಸಹ ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಅವರು ಎಲ್ಲಾ ಉದ್ಯೋಗಿಗಳಿಗೆ ಇಮೇಲ್ ಕಳುಹಿಸುವ ಮೂಲಕ ನಿರ್ಧಾರವನ್ನು ತಿಳಿಸಿದ್ದಾರೆ. ನಾಸಾ ಹೊವಾರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನವು ಮಧ್ಯಾಹ್ನ ಪ್ರತಿದಿನ ಅರ್ಧ ಗಂಟೆ ನಿದ್ರೆ ಮಾಡುವುದರಿಂದ ವ್ಯಕ್ತಿಯನ್ನು ಫ್ರೆಶ್ ಆಗಿರಿಸುತ್ತದೆ ಮತ್ತು ಅವನ ಕೆಲಸದ ಕಾರ್ಯಕ್ಷಮತೆಯು ಶೇಕಡಾ 33 ರಷ್ಟು ಸುಧಾರಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಕಂಪನಿಯ ಈ ನಿರ್ಧಾರದಿಂದ ಉದ್ಯೋಗಿಗಳು ತುಂಬಾ ಸಂತೋಷಗೊಂಡಿದ್ದಾರೆ ಮತ್ತು ಕೆಲಸವನ್ನು ಸುಧಾರಿಸಲು ಇದು ಉತ್ತಮ ಹೆಜ್ಜೆ ಎಂದು ಅವರು ಬಣ್ಣಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News