ಎಸ್‌ಬಿಐ ಕಾರ್ಡ್ ಇದ್ದರೆ ಬಂಪರ್ , ಅಕ್ಟೋಬರ್ 3 ರಿಂದ ಹಬ್ಬದ ಆಫರ್ , ಆನ್‌ಲೈನ್ ಶಾಪಿಂಗ್‌ನಲ್ಲಿ ಸಿಗಲಿದೆ ಕ್ಯಾಶ್‌ಬ್ಯಾಕ್

ಎಸ್‌ಬಿಐ ಕಾರ್ಡ್  ವತಿಯಿಂದ ಜಾರಿಗೊಳಿಸಲಾದ ಹೇಳಿಕೆಯ ಪ್ರಕಾರ, ಈ ಮೂರು ದಿನಗಳ ಮೆಗಾ ಶಾಪಿಂಗ್ ಫೆಸ್ಟಿವ್ ಆಫರ್ ಆನ್‌ಲೈನ್ ಶಾಪಿಂಗ್ ಹಬ್ಬಗಳಲ್ಲಿ ಒಂದಾಗಿದೆ.

Written by - Ranjitha R K | Last Updated : Sep 29, 2021, 07:28 PM IST
  • ಎಸ್‌ಬಿಐ ಘೋಷಿಸಿದೆ ಮೂರು ದಿನಗಳ ಫೆಸ್ಟಿವ್ ಕ್ಯಾಶ್‌ಬ್ಯಾಕ್ ಆಫರ್
  • ಗ್ರಾಹಕರಿಗೆ ಸಿಗಲಿದೆ 10% ಕ್ಯಾಶ್‌ಬ್ಯಾಕ್
  • ಇಎಂಐ ವಹಿವಾಟಿನಲ್ಲಿಯೂ ಆಫರ್‌ಗಳು ಲಭ್ಯ
ಎಸ್‌ಬಿಐ ಕಾರ್ಡ್ ಇದ್ದರೆ ಬಂಪರ್ , ಅಕ್ಟೋಬರ್ 3 ರಿಂದ ಹಬ್ಬದ ಆಫರ್ , ಆನ್‌ಲೈನ್ ಶಾಪಿಂಗ್‌ನಲ್ಲಿ ಸಿಗಲಿದೆ ಕ್ಯಾಶ್‌ಬ್ಯಾಕ್   title=
ಗ್ರಾಹಕರಿಗೆ ಸಿಗಲಿದೆ 10% ಕ್ಯಾಶ್‌ಬ್ಯಾಕ್ (file photo)

ನವದೆಹಲಿ : ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ (SBI),  ಮೂರು ದಿನಗಳ ಫೆಸ್ಟಿವ್ ಕ್ಯಾಶ್‌ಬ್ಯಾಕ್ ಆಫರ್  (Festive cashback offer)ಅನ್ನು ಘೋಷಿಸಿದೆ. ಎಸ್‌ಬಿಐ ಕಾರ್ಡ್ ಗ್ರಾಹಕರು, ಎಲ್ಲಾ ದೇಶೀಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆನ್‌ಲೈನ್ ಶಾಪಿಂಗ್‌ ಮಾಡಿದರೆ (online shopping) ಈ ಆಫರ್ ಗಳನ್ನು ಪಡೆಯಬಹುದು. ಈ ಹಬ್ಬದ ಆಫರ್ ಅಕ್ಟೋಬರ್ 3 ರಿಂದ ಆರಂಭವಾಗಲಿದ್ದು, ಮುಂದಿನ ಮೂರು ದಿನಗಳವರೆಗೆ ಇರುತ್ತದೆ.

ಗ್ರಾಹಕರಿಗೆ ಸಿಗಲಿದೆ 10% ಕ್ಯಾಶ್‌ಬ್ಯಾಕ್ :
ಎಸ್‌ಬಿಐ ಕಾರ್ಡ್ (SBI Card)  ವತಿಯಿಂದ ಜಾರಿಗೊಳಿಸಲಾದ ಹೇಳಿಕೆಯ ಪ್ರಕಾರ, ಈ ಮೂರು ದಿನಗಳ ಮೆಗಾ ಶಾಪಿಂಗ್ ಫೆಸ್ಟಿವ್ ಆಫರ್ (Megha shopping festive offer), ಆನ್‌ಲೈನ್ ಶಾಪಿಂಗ್ ಹಬ್ಬಗಳಲ್ಲಿ ಒಂದಾಗಿದೆ. ಇದರಲ್ಲಿ, ಎಸ್‌ಬಿಐ ಕಾರ್ಡ್‌ನ (SBI Card) ರಿಟೇಲ್  ಕಾರ್ಡ್ ಹೊಂದಿರುವವರು ಯಾವುದೇ ದೇಶೀಯ ಇ-ಕಾಮರ್ಸ್ ಸೈಟ್‌ನಿಂದ ಶಾಪಿಂಗ್ ಮಾಡಬಹುದು. ಇದರಲ್ಲಿ, ಗ್ರಾಹಕರು ಇಷ್ಟೇ  ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಶಾಪಿಂಗ್ ಮಾಡಬೇಕು ಎನ್ನುವ ನಿಬಂಧನೆಗಳಿಲ್ಲ. ಗ್ರಾಹಕರು ಖರೀದಿ ಮೇಲೆ 10% ಕ್ಯಾಶ್‌ಬ್ಯಾಕ್ (Cashback) ಪಡೆಯಬಹುದು. 

ಇದನ್ನೂ ಓದಿ : SBI Alert! QR ಕೋಡ್‌ನೊಂದಿಗೆ ಆನ್‌ಲೈನ್‌ನಲ್ಲಿ Payment ಮಾಡುವ ಮುನ್ನ ಎಚ್ಚರ

ಇಎಂಐ ವಹಿವಾಟಿನಲ್ಲಿಯೂ ಆಫರ್‌ಗಳು ಲಭ್ಯ :  
“ಕಾರ್ಡ್ ಹೊಂದಿರುವವರು ಹೆಚ್ಚು ಆನ್‌ಲೈನ್ ಶಾಪಿಂಗ್ (Online shopping) ಮಾಡುತ್ತಿರುವುದನ್ನು ಡೇಟಾ ವಿಶ್ಲೇಷಣೆಯಲ್ಲಿ ಕಂಡುಕೊಂಡಿದ್ದೇವೆ. ಈ ಪ್ರವೃತ್ತಿಯು ಎಲ್ಲಾ ವೇದಿಕೆಗಳಲ್ಲಿ ಮತ್ತು ಉತ್ಪನ್ನ ವರ್ಗಗಳಲ್ಲಿ, ವಿಶೇಷವಾಗಿ ಹಬ್ಬದ ಸಮಯದಲ್ಲಿ ಕಂಡುಬರುತ್ತದೆ. ಈ ಕೊಡುಗೆಯ ಅಡಿಯಲ್ಲಿ, ಕಾರ್ಡ್ ಹೊಂದಿರುವವರು ಯಾವುದೇ ಸಮಯದಲ್ಲಿ ಸುರಕ್ಷಿತ ಮತ್ತು ಅನುಕೂಲಕರ ರೀತಿಯಲ್ಲಿ ಪೇಮೆಂಟ್  ಮಾಡಬಹುದು. ಆನ್‌ಲೈನ್ ಮರ್ಚೆಂಟ್ ಇಎಂಐ (EMI) ವಹಿವಾಟಿನಲ್ಲಿಯೂ ಈ ಕೊಡುಗೆ ಲಭ್ಯವಿರುತ್ತದೆ ಎಂದು ಎಸ್‌ಬಿಐ ಕಾರ್ಡ್‌ನ ಎಂಡಿ ಮತ್ತು ಸಿಇಒ ರಾಮ್ ಮೋಹನ್ ರಾವ್ ಅಮರ ತಿಳಿಸಿದ್ದಾರೆ.

ಈ ಉತ್ಪನ್ನಗಳ ಖರೀದಿ ಮೇಲೆ ಸಿಗಲಿದೆ ಕ್ಯಾಶ್‌ಬ್ಯಾಕ್ : 
ಎಸ್‌ಬಿಐ ಕಾರ್ಡ್‌ನ 2021 ರ ಹಬ್ಬದ ಕೊಡುಗೆಯಡಿಯಲ್ಲಿ, ಎಲ್ಲಾ ರೀತಿಯ ಉತ್ಪನ್ನಗಳ ಆನ್‌ಲೈನ್ ಶಾಪಿಂಗ್‌ನಲ್ಲಿ ಕ್ಯಾಶ್‌ಬ್ಯಾಕ್‌ನ ಪ್ರಯೋಜನವು ಲಭ್ಯವಿರುತ್ತದೆ. ಈ ಶ್ರೇಣಿಯು ಮೊಬೈಲ್ ಫೋನ್‌ಗಳು ಮತ್ತು ಪರಿಕರಗಳು, ಟಿವಿ ಮತ್ತು ದೊಡ್ಡ ಉಪಕರಣಗಳು, ಲ್ಯಾಪ್‌ಟಾಪ್‌ (Laptop), ಟ್ಯಾಬ್ಲೆಟ್‌, ಗೃಹೋಪಯೋಗಿ ವಸ್ತುಗಳು, ಕಿಚನ್ ವಸ್ತುಗಳು, ಫ್ಯಾಷನ್ , ಕ್ರೀಡೆ ಮತ್ತು ಫಿಟ್‌ನೆಸ್‌ನಂತಹ ಉತ್ಪನ್ನಗಳನ್ನು ಒಳಗೊಂಡಿರುತ್ತದೆ. 

ಇದನ್ನೂ ಓದಿ : Arecanut Price: ಕರ್ನಾಟಕದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಬಂಪರ್

ಯಾವುದರ ಮೇಲೆ ವಿನಾಯಿತಿ ಇಲ್ಲ :
ಕಂಪನಿಯ ಪ್ರಕಾರ, ವಿಮೆ, ಪ್ರಯಾಣ, ವಾಲೆಟ್, ಆಭರಣ, ಶಿಕ್ಷಣ, ಹೆಲ್ತ್ ಕೇರ್ (Health care) ಮತ್ತು ಯುಟಿಲಿಟಿ ಮರ್ಚೆಂಟ್ಸ್ ಈ ಆಫರ್ ಅಡಿಯಲ್ಲಿ ಬರುವುದಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News