SBI Debit Card ಕಳೆದಿದೆಯೇ? ಇಲ್ಲಿದೆ ಮತ್ತೊಂದು ಕಾರ್ಡ್ ಪಡೆಯುವ ಸುಲಭ ವಿಧಾನ

ಫೋನ್​ ಕಾಲ್​ ಮೂಲಕವೂ ಕಾರ್ಡ್​ನ್ನು ಬ್ಲಾಕ್​ ಮಾಡಬಹುದಾಗಿದೆ.

Last Updated : Mar 20, 2021, 01:13 PM IST
  • ಡೆಬಿಟ್​ ಕಾರ್ಡ್​ ಕಳೆದು ಹೋದಲ್ಲಿ ಇಲ್ಲವೇ ಕಳುವಾದಲ್ಲಿ ಕಾರ್ಡ್​ನ್ನ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ
  • ಹೀಗಾಗಿ ಗ್ರಾಹಕರು ಆದಷ್ಟು ಬೇಗ ತಮ್ಮ ಕಾರ್ಡ್​ಗಳನ್ನ ಬ್ಲಾಕ್​ ಮಾಡಬೇಕು.
  • ಫೋನ್​ ಕಾಲ್​ ಮೂಲಕವೂ ಕಾರ್ಡ್​ನ್ನು ಬ್ಲಾಕ್​ ಮಾಡಬಹುದಾಗಿದೆ.
 SBI Debit Card ಕಳೆದಿದೆಯೇ? ಇಲ್ಲಿದೆ ಮತ್ತೊಂದು ಕಾರ್ಡ್ ಪಡೆಯುವ ಸುಲಭ ವಿಧಾನ

ದೇಶದ ಪ್ರತಿಷ್ಟಿತ ಬ್ಯಾಂಕ್​ ಎಸ್​ಬಿಐ ತನ್ನ ಗ್ರಾಹಕರಿಗೆ ಡೆಬಿಟ್​ ಕಾರ್ಡ್​ ಕಳೆದುಕೊಂಡಲ್ಲಿ ಅದನ್ನ ಬ್ಲಾಕ್​ ಮಾಡುವ ಕೆಲಸವನ್ನ ಫೋನ್​ ಕಾಲ್​ ಹಾಗೂ ಎಸ್​ಎಂಎಸ್​ ಮೂಲಕವೇ ಮಾಡುವ ಸೌಲಭ್ಯವನ್ನ ಒದಗಿಸಿದೆ. ಡೆಬಿಟ್​ ಕಾರ್ಡ್​ ಕಳೆದು ಹೋದಲ್ಲಿ ಇಲ್ಲವೇ ಕಳುವಾದಲ್ಲಿ ಕಾರ್ಡ್​ನ್ನ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ಗ್ರಾಹಕರು ಆದಷ್ಟು ಬೇಗ ತಮ್ಮ ಕಾರ್ಡ್​ಗಳನ್ನ ಬ್ಲಾಕ್​ ಮಾಡಬೇಕು.

ಹೀಗಾಗಿ ನೀವು ನಿಮ್ಮ ಎಸ್​ಬಿಐ ಡೆಬಿಟ್​ ಕಾರ್ಡ್​(SBI Debit Card)ನ್ನು ಕಳೆದುಕೊಂಡ ಕೂಡಲೇ ಮೆಸೇಜ್​ ಇಲ್ಲವೇ ಫೋನ್​ ಕಾಲ್​ ಮೂಲಕ ಕಾರ್ಡ್​ನ್ನು ಬ್ಲಾಕ್​ ಮಾಡಬಹುದು. ಇದಕ್ಕಾಗಿ ನೀವು ನೋಂದಾಯಿತ ಮೊಬೈಲ್​ ಸಂಖ್ಯೆಯಿಂದ BLOCK ಎಂದು ಟೈಪ್​ ಮಾಡಿ ಬಳಿಕ ನಿಮ್ಮ ಕಾರ್ಡ್​ನ ಕೊನೆಯ ನಾಲ್ಕು ಸಂಖ್ಯೆಯನ್ನ ನಮೂದಿಸಿ 567676ಗೆ ಎಸ್​ಎಂಎಸ್​ ಮಾಡಿ. ನಿಮ್ಮ ಬ್ಲಾಕ್​​ ಆಯ್ಕೆ ಯಶಸ್ವಿಯಾಗುತ್ತಿದ್ದಂತೆಯೇ ಬ್ಯಾಂಕ್​ನಿಂದ ನಿಮಗೆ ದೃಢೀಕರಣ ಮೆಸೇಜ್​ ಬರಲಿದೆ.

Gold-Silver Rate:ಆಭರಣ ಖರೀದಿಸಬೇಕಾ? ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ ವಿವರ!

ಫೋನ್​ ಕಾಲ್​ ಮೂಲಕವೂ ಕಾರ್ಡ್​ನ್ನು ಬ್ಲಾಕ್​ ಮಾಡಬಹುದಾಗಿದೆ. ಎಸ್​ಬಿಐ ಸಹಾಯವಾಣಿ ಸಂಖ್ಯೆ(SBI Help Line Number) 18004253800 or 1800112211ಗೆ ಕರೆ ಮಾಡಿ ಕಾರ್ಡ್​ನ್ನು ಬ್ಲಾಕ್​ ಮಾಡಬಹುದು.

ಫೋನ್​ ಕಾಲ್​ ಮೂಲಕ ಎಸ್​ಬಿಐ ಕಾರ್ಡ್​ ಬ್ಲಾಕ್​ ಮಾಡೋದು ಹೇಗೆ:

1800 112 211 ಸಂಖ್ಯೆಗೆ ಕರೆ(Customer Care) ಮಾಡಿ

ಎಸ್​ಬಿಐ ಕಾರ್ಡ್​ ಬ್ಲಾಕ್​ ಮಾಡಲು 2ನ್ನು ಒತ್ತಿ

'ವಿಮಾ ಕಂಪನಿಗಳು ಆರೋಗ್ಯ ವಿಮೆಯ ಪ್ರಿಮಿಯಂ ಹೆಚ್ಚಿಸುವಂತಿಲ್ಲ'

ನಿಮ್ಮ ಬ್ಯಾಂಕ್​ ಖಾತೆ(Bank Account)ಯ ಕೊನೆಯ 5 ಸಂಖ್ಯೆಯನ್ನ ನಮೂದಿಸಿ

ಕಾರ್ಡ್​ ಬ್ಲಾಕ್​ ಆಗಿರೋದ್ರ ಬಗ್ಗೆ ಎಸ್​ಎಂಎಸ್​(SMS) ಮೂಲಕ ಎಸ್​ಬಿಐ ಮಾಹಿತಿ ನೀಡಲಿದೆ.

ಹೊಸ ಡೆಬಿಟ್​ ಕಾರ್ಡ್ ಪಡೆಯಲು ಮಾರ್ಗಗಳನ್ನ ಬಳಸಿ: ವೆಬ್​ಸೈಟ್: sbicard.com ಗೆ ಲಾಗಿನ್​ ಆಗಿ ನೀವು ಹೊಸ ಕಾರ್ಡ್(New Card)​ಗೆ ಮನವಿ ಸಲ್ಲಿಸಬಹುದಾಗಿದೆ. ರಿಕ್ವೆಸ್ಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್​ ಮಾಡಿ ಬಳಿಕ ರಿ ಇಶ್ಯೂ / ರಿಪ್ಲೇಸ್​ ಕಾರ್ಡ್​ ಸೆಲೆಕ್ಟ್ ಮಾಡಿ. ಕಾರ್ಡ್ ನಂಬರ್​ನ್ನು ಆಯ್ಕೆ ಮಾಡಿ ಸಬ್​ಮಿಟ್​ ಕೊಡಿ.

EPFO update : ಕೆಲಸ ಬದಲಾಯಿತೆಂದು ಪಿಎಫ್ ವಿತ್ ಡ್ರಾ ಮಾಡಿದರೆ ಆಗಲಿದೆ ಭಾರೀ ನಷ್ಟ

ಮೊಬೈಲ್​ ಅಪ್ಲಿಕೇಶನ್​: ಎಸ್​ಬಿಐ ಮೊಬೈಲ್​​ ಅಪ್ಲಿಕೇಶನ್​ ಅಲ್ಲಿ ಲಾಗಿನ್​​ ಆಗಿ ಮೆನು ಟ್ಯಾಬ್​(Menu Tab)ನಲ್ಲಿ ಸರ್ವೀಸ್​ ರಿಕ್ವೆಸ್ಟ್ ಆಯ್ಕೆ ಮೇಲೆ ಕ್ಲಿಕ್​ ಮಾಡಿ. ಇಲ್ಲಿ ರಿ ಇಶ್ಯೂ / ರಿಪ್ಲೇಸ್​ ಕಾರ್ಡ್ ಆಯ್ಕೆ ಮಾಡಿ. ಕಾರ್ಡ್ ನಂಬರ್​ ಆಯ್ಕೆ ಮಾಡಿ ಸಬ್​ಮಿಟ್​ ಕೊಡಿ.

ಮೇಲ್​: sbicard.com/email ಗೆ ಅಧಿಕೃತ ಮೇಲ್​​ ಬರೆಯಬಹುದು.

ಸಹಾಯವಾಣಿ: 1800 425 3800 ಸಂಖ್ಯೆಗೆ ಕರೆ ಮಾಡಿ.

ಹೊಸ ಕಾರ್ಡ್​ಗಾಗಿ ನೀವು 100 ರೂಪಾಯಿ ಹಾಗೂ ಕೆಲ ತೆರಿಗೆ ಮೊತ್ತವನ್ನ ಪಾವತಿ ಮಾಡಬೇಕು. ಹೊಸ ಕಾರ್ಡ್​ಗೆ ವಿನಂತಿ ಸಲ್ಲಿಸಿದ 7 ದಿನಗಳಲ್ಲಿ ನಿಮ್ಮ ಕೈ ಸೇರಲಿದೆ.

Reliance Jio: ಗ್ರಾಹಕರಿಗೆ 'ಭಾರಿ ಅಗ್ಗದ ಪ್ಲಾನ್ ನೀಡಿದ 'ರಿಲಾಯನ್ಸ್ ಜಿಯೋ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News