Sale: ಈ ಜಬರ್ದಸ್ತ್ 5G ಸ್ಮಾರ್ಟ್ ಫೋನ್ ರೂ.549ಕ್ಕೆ ಖರೀದಿಸಲು ಇಂದೇ ಕೊನೆಯ ದಿನ

Flipkart Big Saving Days: ಒಂದು ವೇಳೆ ನೀವೂ ಕೂಡ ಹೊಸ ಸ್ಮಾರ್ಟ್ ಫೋನ್ ಖರೀದಿಸಲು ಯೋಜನೆ ರೂಪಿಸುತ್ತಿದ್ದು, ನಿಮ್ಮ ಬಜೆಟ್ ಕೂಡ ಕಮ್ಮಿಯಾಗಿದ್ದಾರೆ. ಈ ಅವಕಾಶ ತಪ್ಪಿಸಿಕೊಳ್ಳಬೇಡಿ. ಹೌದು, Motorolaದ 5G ಸ್ಮಾರ್ಟ್‌ಫೋನ್‌ ಮೇಲೆ ಅತ್ಯದ್ಭುತ ಕೊಡುಗೆ ಲಭ್ಯವಿದೆ. ಫ್ಲಿಪ್ ಕಾರ್ಟ್ ಮೇಲೆ ನೀವು Motorola G51 5G ಸ್ಮಾರ್ಟ್‌ಫೋನ್ ಅನ್ನು ಕೇವಲ 549 ರೂಗಳಲ್ಲಿ ಖರೀದಿಸಬಹುದು. ಹೇಗೆ ತಿಳಿಯೋಣ ಬನ್ನಿ

Written by - Nitin Tabib | Last Updated : Dec 21, 2021, 07:15 PM IST
  • Flipkart ನಲ್ಲಿ Big Saving Days ಸೆಲ್ ನಡೆಯುತ್ತಿದೆ.
  • ಮೋಟೋರೋಲಾ ಕಂಪನಿಯ 5ಜಿ ಸ್ಮಾರ್ಟ್ ಫೋನ್ ಮೇಲೆ ಅದ್ಭುತ ಕೊಡುಗೆ ಲಭ್ಯವಿದೆ.
  • Motorola G51 5G ಸ್ಮಾರ್ಟ್ ಫೋನ್ ಅನ್ನು ನೀವು ಕೇವಲ ರೂ. 549ಕ್ಕೆ ಖರೀದಿಸಬಹುದು.
Sale: ಈ ಜಬರ್ದಸ್ತ್ 5G ಸ್ಮಾರ್ಟ್ ಫೋನ್ ರೂ.549ಕ್ಕೆ ಖರೀದಿಸಲು ಇಂದೇ ಕೊನೆಯ ದಿನ title=
Flipkart Big Saving Days (File Photo)

ನವದೆಹಲಿ: Flipkart Sale Ending Today - ಫ್ಲಿಪ್‌ಕಾರ್ಟ್‌ನಲ್ಲಿ (Flipkart Big Saving Days Sale) ಬಿಗ್ ಸೇವಿಂಗ್ ಡೇಸ್ ಮಾರಾಟ ನಡೆಯುತ್ತಿದೆ ಮತ್ತು ಇಂದು ಮಾರಾಟದ ಕೊನೆಯ ದಿನವಾಗಿದೆ. ಸೆಲ್  ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ರಿಯಾಯಿತಿಗಳನ್ನು ನೀಡಲಾಗುತ್ತಿದೆ. Apple, Samsung, Xiaomi, Oppo ಮತ್ತು Motorola ಸ್ಮಾರ್ಟ್‌ಫೋನ್‌ಗಳು ಮಾರಾಟದ ಸಮಯದಲ್ಲಿ ಫುಲ್  ಸ್ವಿಂಗ್‌ನಲ್ಲಿವೆ. ಮಾರಾಟದ ಸಮಯದಲ್ಲಿ 5G ಫೋನ್‌ಗಳು ಅತ್ಯಂತ ಅಗ್ಗದ ದರದಲ್ಲಿ ಸಿಗುತ್ತಿವೆ. ನೀವು ಒಂದು ವೇಳೆ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಮತ್ತು ನಿಮ್ಮ ಬಜೆಟ್ ಕೂಡ ಕಡಿಮೆಯಾಗಿದ್ದರೆ, ಇದು ನಿಮ್ಮ ಪಾಲಿಗೆ ಸರಿಯಾದ ಅವಕಾಶವಾಗಿದೆ. Motorola ನ 5G ಸ್ಮಾರ್ಟ್‌ಫೋನ್‌ನಲ್ಲಿ ಅದ್ಭುತವಾದ ಆಫ್ ಲಭ್ಯವಿದೆ. ನೀವು Motorola G51 5G ಸ್ಮಾರ್ಟ್‌ಫೋನ್ ಅನ್ನು ಕೇವಲ 549 ರೂಗಳಲ್ಲಿ ಖರೀದಿಸಬಹುದು (Motorola G51 5G On Flipkart). ಹೇಗೆ ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.

Motorola G51 5G ಕೊಡುಗೆಗಳು ಮತ್ತು ರಿಯಾಯಿತಿಗಳು (Motorola G51 5G Offers And Discounts)
Motorola G51 5G 4GB RAM + 64GB ಸ್ಟೋರೇಜ್ ರೂಪಾಂತರದ ಬಿಡುಗಡೆ ಬೆಲೆ 17,999 ರೂ. ಆದರೆ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಈ ಫೋನ್ 14,999 ರೂ.ಗೆ ಲಭ್ಯವಿದೆ (Motorola G51 5G Price In India). ಅಂದರೆ ಫೋನ್ ಮೇಲೆ ಶೇ.16ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇದರ ನಂತರ, ಫೋನ್‌ನಲ್ಲಿ ಎಕ್ಸ್‌ಚೇಂಜ್ ಆಫರ್ ಕೂಡ ಇದೆ, ಇದರಿಂದಾಗಿ ಫೋನ್‌ನ ಬೆಲೆ ಮತ್ತಷ್ಟು ಗಮನಾರ್ಹ ಇಳಿಕೆಯಾಗಲಿದೆ.

Motorola G51 5G ಎಕ್ಸ್ಚೇಂಜ್ ಆಫರ್ (Motorola G51 5G Latest News)
Motorola G51 5G ನಲ್ಲಿ ರೂ.14450 ವಿನಿಮಯ ಲಭ್ಯವಿದೆ. ನಿಮ್ಮ ಹಳೆಯ ಫೋನ್ ಅನ್ನು ನೀವು ವಿನಿಮಯ ಮಾಡಿಕೊಂಡರೆ, ನೀವು ಈ ರಿಯಾಯಿತಿ ಪಡೆಯಬಹುದು. ನಿಮ್ಮ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ ನೀವು ರೂ 14,450 ರಿಯಾಯಿತಿಯನ್ನು ಪಡೆಯಬಹುದು. ನೀವು ಸಂಪೂರ್ಣ ಆಫ್ ಪಡೆಯಲು ಯಶಸ್ವಿಯಾದರೆ, ಫೋನ್‌ನ ಬೆಲೆ 549 ರೂ. ಗೆ ಇಳಿಕೆಯಾಗಲಿದೆ. 

ಇದನ್ನೂ ಓದಿ-Googleನಲ್ಲಿ ಅಪ್ಪಿತಪ್ಪಿಯೂ ಕೂಡ ಈ 5 ಸಂಗತಿಗಳ ಹುಡುಕಾಟ ನಡೆಸಬೇಡಿ, ಇಲ್ದಿದ್ರೆ ಜೈಲು ಶಿಕ್ಷೆ ಗ್ಯಾರಂಟಿ

Motorola G51 5G ಬ್ಯಾಂಕ್ ಆಫರ್ (Motorola G51 5G Offers)
ನೀವು ಫೋನ್ ವಿನಿಮಯ ಮಾಡಿಕೊಳ್ಳಲು ಬಯಸದಿದ್ದರೆ, ಫೋನ್‌ನಲ್ಲಿ ಬ್ಯಾಂಕ್ ಆಫರ್ ಸಹ ಇದೆ. ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಮೂಲಕ ಹಣವನ್ನು ಪಾವತಿಸಿದರೆ, ನೀವು ಫೋನ್‌ನಲ್ಲಿ ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ. ಅಂದರೆ, ಫೋನ್ ಬೆಲೆ 13,999 ರೂ. ತಲುಪಲಿದೆ.

ಇದನ್ನೂ ಓದಿ-Best Recharge Plan: ರೂ.400ಕ್ಕೂ ಕಮ್ಮಿ ಬೆಲೆಗೆ 300 ದಿನಗಳ ವ್ಯಾಲಿಡಿಟಿ, ನಿತ್ಯ 2GB ಡೇಟಾ, ಉಚಿತ ಕಾಲಿಂಗ್

Motorola G51 5G ವೈಶಿಷ್ಟ್ಯಗಳು (Motorola G51 5G)
Motorola G51 5G 6.8 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನ್ ಬೃಹತ್ 5000mAH ಬ್ಯಾಟರಿಯನ್ನು ಹೊಂದಿದೆ. ಕ್ಯಾಮೆರಾ  ಬಗ್ಗೆ ಹೇಳುವುದಾದರೆ, ಇದು 50MP ಪ್ರಾಥಮಿಕ ಕ್ಯಾಮೆರಾ, 8MP ಮತ್ತು 2MP ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ 13MP ಸ್ನ್ಯಾಪರ್ ಇದೆ.

ಇದನ್ನೂ ಓದಿ-Disney+ Hotstarನಿಂದ ಉತ್ತಮ ಕೊಡುಗೆ! ಚಲನಚಿತ್ರಗಳು, ವೆಬ್ ಸರಣಿಗಳನ್ನು ಕೇವಲ 49 ರೂ.ಗೆ ವೀಕ್ಷಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News