Gold-Silver Rate: ಚಿನ್ನ ಖರೀದಿಸಲು ಒಳ್ಳೆಯ ಸಮಯ; ಬಂಗಾರದ ಬೆಲೆಯಲ್ಲಿ ಇಳಿಕೆ!

1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ಇಳಿಕೆ ಕಂಡು ₹4,479 ದಾಖಲಾಗಿದೆ. ಕಳೆದ 5ದಿನದಲ್ಲಿ 490 ರೂ ಕಡಿಮೆಯಾಗಿದೆ

Last Updated : Mar 23, 2021, 12:15 PM IST
  • ಮಾರ್ಚ್‌ ತಿಂಗಳ ಆರಂಭದಿಂದಲೂ ಹಂತಹಂತವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ
  • ಮಂಗಳವಾರ ಬೆಳಗಿನ ವೇಳೆ ಚಿನ್ನದ ಬೆಲೆ ನೋಡೋದಾದ್ರೆ,
  • 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ಇಳಿಕೆ ಕಂಡು ₹4,479 ದಾಖಲಾಗಿದೆ. ಕಳೆದ 5ದಿನದಲ್ಲಿ 490 ರೂ ಕಡಿಮೆಯಾಗಿದೆ
Gold-Silver Rate: ಚಿನ್ನ ಖರೀದಿಸಲು ಒಳ್ಳೆಯ ಸಮಯ; ಬಂಗಾರದ ಬೆಲೆಯಲ್ಲಿ ಇಳಿಕೆ! title=

ಬೆಂಗಳೂರು: ಮಾರ್ಚ್‌ ತಿಂಗಳ ಆರಂಭದಿಂದಲೂ ಹಂತಹಂತವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ, ಆಭರಣ ಖರೀದಿಸಲು ಹೊರಟಿರುವವರಿಗೆ ಗಾಯದ ಮೇಲೆ ಬರೆ ಎಳೆದಂತೆ ಭಾಸವಾಗ್ತಿತ್ತು. ಈ ವಾರವೂ ಇದಕ್ಕೆ ಹೊರತೇನಲ್ಲ. ಆದರೆ ಮಂಗಳವಾರ ಬೆಳಗಿನ ವೇಳೆ ಚಿನ್ನದ ಬೆಲೆ ನೋಡೋದಾದ್ರೆ, 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ಇಳಿಕೆ ಕಂಡು ₹4,479 ದಾಖಲಾಗಿದೆ. ಕಳೆದ 5ದಿನದಲ್ಲಿ 490 ರೂ ಕಡಿಮೆಯಾಗಿದೆ. 

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆ(Gold Rate)ಗೆ ₹41,900 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹45,700 ರೂಪಾಯಿಗೆ ದಾಖಲಾಗಿದೆ.

Home Loan: ನೀವು ಕೂಡ ಮನೆ ಖರೀದಿಸಲು ಯೋಚಿಸುತ್ತಿದ್ದರೆ ತಡ ಮಾಡದಿರಿ, ಕೊನೆಗೊಳ್ಳಲಿದೆ ಈ ಕೊಡುಗೆ

ಬೆಳ್ಳಿ ದರ: ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ ಇಂದು ಒಂದು ಕೆಜಿಗೆ 67,500 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ(Silver Rate) ₹67,500 ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿ ₹71,800 ರೂ ನಿಗದಿಯಾಗಿದೆ.

Mutual Funds: SWF ಹಾಗೂ STPಗಳ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ: ಬೆಂಗಳೂರು(Bengaluru) ₹41,900 (22 ಕ್ಯಾರಟ್‌) ₹45,940(24 ಕ್ಯಾರಟ್‌) ಚೆನ್ನೈ ₹42,110 (22 ಕ್ಯಾರಟ್‌) ₹46,360 (24 ಕ್ಯಾರಟ್‌) ದಿಲ್ಲಿ ₹44,190 (22 ಕ್ಯಾರಟ್‌), ₹48,210 (24 ಕ್ಯಾರಟ್‌) ಹೈದರಾಬಾದ್‌ ₹41,900 (22 ಕ್ಯಾರಟ್‌) ₹45,700 (24 ಕ್ಯಾರಟ್‌) ಕೋಲ್ಕತಾ ₹44,530 (22 ಕ್ಯಾರಟ್‌), ₹47,200 (24 ಕ್ಯಾರಟ್‌) ಮಂಗಳಳೂರು ₹41,900 (22 ಕ್ಯಾರಟ್‌) ₹45,700 (24 ಕ್ಯಾರಟ್‌) ಮುಂಬಯಿ ₹43,910(22 ಕ್ಯಾರಟ್‌), ₹44,910 (24 ಕ್ಯಾರಟ್‌) ಮೈಸೂರು ₹41,900(22 ಕ್ಯಾರಟ್‌) ₹45,700 (24 ಕ್ಯಾರಟ್‌)

Gold Purchase: ಚಿನ್ನ ಖರೀದಿ ಆಲೋಚನೆಯಲ್ಲಿದ್ದೀರಾ? ಹಾಗಾದ್ರೆ ಇಲ್ಲಿದೆ ಮಹತ್ವದ ಮಾಹಿತಿ!

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತುಸು ಏರಿಕೆ ಕಂಡು ಬಂದಿದ್ದರೆ, ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿ ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

ಹನ್ನೆರಡು ಲಕ್ಷಕ್ಕೂ ಅಧಿಕ ಡೆಬಿಟ್ ಕ್ರೆಡಿಟ್ ಕಾರ್ಡ್ ಡಾಟಾ ಕಳ್ಳತನವಾಗಿರುವುದು ನಿಜಾನಾ ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News