ಚಿನ್ನ ಪ್ರಿಯರಿಗೆ ಸಂತಸದ ಸುದ್ದಿ.. ಮತ್ತೆ ಭಾರೀ ಇಳಿಕೆಯಾದ ಚಿನ್ನ ಬೆಳ್ಳಿ ಬೆಲೆ! 10 ಗ್ರಾಂ ದರ ಎಷ್ಟಾಗಿದೆ ಗೊತ್ತಾ?

Gold Price 23-06-2023: 10 ಗ್ರಾಂ 22 ಕ್ಯಾರೆಟ್ ಬೆಲೆ 54,500 ರೂ.ಗಳಾಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 59,450 ರೂ ಇದೆ. ಇನ್ನು ಬೆಳ್ಳಿಯ ಬೆಲೆ 10 ಗ್ರಾಂಗೆ 10 ರೂಪಾಯಿ ಇಳಿಕೆಯಾಗಿ (ಕೆಜಿಗೆ 1000 ರೂಪಾಯಿ) 720 ರೂಪಾಯಿಗೆ ತಲುಪಿದೆ. ಈ ಕ್ರಮದಲ್ಲಿ, ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗಿವೆ ಎಂಬುದನ್ನು ಈಗ ನೋಡೋಣ.

Written by - Bhavishya Shetty | Last Updated : Jun 23, 2023, 08:18 AM IST
    • ಕಳೆದ ನಾಲ್ಕು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನ, ಬೆಳ್ಳಿ ಬೆಲೆ
    • ಶುಕ್ರವಾರ (ಜೂನ್ 23) ಚಿನ್ನ ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿಯೋಣ
    • 10 ಗ್ರಾಂ 22 ಕ್ಯಾರೆಟ್ ಬೆಲೆ 54,500 ರೂ.ಗಳಾಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 59,450 ರೂ ಇದೆ
ಚಿನ್ನ ಪ್ರಿಯರಿಗೆ ಸಂತಸದ ಸುದ್ದಿ.. ಮತ್ತೆ ಭಾರೀ ಇಳಿಕೆಯಾದ ಚಿನ್ನ ಬೆಳ್ಳಿ ಬೆಲೆ! 10 ಗ್ರಾಂ ದರ ಎಷ್ಟಾಗಿದೆ ಗೊತ್ತಾ? title=
Gold price

Today Gold and Silver Price: ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಪ್ರಿಯರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಕಳೆದ ನಾಲ್ಕು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನ, ಬೆಳ್ಳಿ ಬೆಲೆ ಶುಕ್ರವಾರವೂ ಅಲ್ಪ ಇಳಿಕೆ ಕಂಡಿದೆ. ಈ ಕ್ರಮದಲ್ಲಿ ಶುಕ್ರವಾರ (ಜೂನ್ 23) ಚಿನ್ನ ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿಯೋಣ.

ಇದನ್ನೂ ಓದಿ: Top 10 Selling Cars: ಮೇ ತಿಂಗಳಿನಲ್ಲಿ ಅತಿಹೆಚ್ಚು ಮಾರಾಟವಾದ ಟಾಪ್ 10 ಕಾರುಗಳು

10 ಗ್ರಾಂ 22 ಕ್ಯಾರೆಟ್ ಬೆಲೆ 54,500 ರೂ.ಗಳಾಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 59,450 ರೂ ಇದೆ. ಇನ್ನು ಬೆಳ್ಳಿಯ ಬೆಲೆ 10 ಗ್ರಾಂಗೆ 10 ರೂಪಾಯಿ ಇಳಿಕೆಯಾಗಿ (ಕೆಜಿಗೆ 1000 ರೂಪಾಯಿ) 720 ರೂಪಾಯಿಗೆ ತಲುಪಿದೆ. ಈ ಕ್ರಮದಲ್ಲಿ, ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗಿವೆ ಎಂಬುದನ್ನು ಈಗ ನೋಡೋಣ.

ಚಿನ್ನದ ಬೆಲೆ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,650 ರೂ. ಮತ್ತು 24 ಕ್ಯಾರೆಟ್ ಬೆಲೆ 59,600 ರೂ ಆಗಿದೆ. ಅದೇ ರೀತಿ ಮುಂಬೈ, ಬೆಂಗಳೂರು ಮತ್ತು ಕೇರಳದಲ್ಲಿ 22 ಕ್ಯಾರೆಟ್ ಪಸಿಡಿ ರೂ.54,500 ಮತ್ತು 24 ಕ್ಯಾರೆಟ್ ಚಿನ್ನ ರೂ.59,450 ಆಗಿದೆ. ಇನ್ನು ಹೈದರಾಬಾದ್, ವಿಶಾಖಪಟ್ಟಣಂ ಮತ್ತು ವಿಜಯವಾಡದಲ್ಲಿ 22 ಕ್ಯಾರೆಟ್ ಪಸಿಡಿಯ ಬೆಲೆ ರೂ.54,500 ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ ರೂ.59,450 ಆಗಿದೆ.

ಬೆಳ್ಳಿ ಬೆಲೆ: ಈ ಹಿಂದೆ ಹೇಳಿದಂತೆ ಶುಕ್ರವಾರ ಬೆಳ್ಳಿ ಬೆಲೆ ಕೆಜಿಗೆ 1000 ರೂ. ಇಳಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 72000 ರೂ ಇದೆ. ಹಾಗೆಯೇ ದೆಹಲಿ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 72000 ರೂ. ಆಗಿದ್ದು, ಕೇರಳ ಮತ್ತು ಚೆನ್ನೈನಲ್ಲಿ ಪ್ರತಿ ಕೆಜಿಗೆ 75000 ರೂ ಇದೆ. ತೆಲುಗು ರಾಜ್ಯ ಹೈದರಾಬಾದ್, ವಿಶಾಖ ಮತ್ತು ವಿಜಯವಾಡದಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 75000 ರೂ. ಇದೆ

ಇದನ್ನೂ ಓದಿ: Stock Market Update: ಎಲ್ಲಾ ಕಡೆಗಳಿಂದ ಮಾರಾಟದ ಹಿನ್ನೆಲೆ 285 ಅಂಕಗಳಿಂದ ಕುಸಿದ ಸೆನ್ಸೆಕ್ಸ್, ನಿಫ್ಟಿಯಲ್ಲಿಯೂ ಕೂಡ 86 ಅಂಕಗಳ ಕುಸಿತ

ಗಮನಿಸಿ: ಈ ಲೇಖನದಲ್ಲಿ ತಿಳಿಸಲಾದ ಬೆಲೆ ವಿವರಗಳು ಶುಕ್ರವಾರ ಬೆಳಿಗ್ಗೆ 6 ಗಂಟೆಯವರಿಗಿನ ದಾಖಲೆಗಳಾಗಿದೆ. ಆದ್ದರಿಂದ ದಯವಿಟ್ಟು ಚಿನ್ನವನ್ನು ಖರೀದಿಸುವ ಮೊದಲು ಒಮ್ಮೆ ಬೆಲೆಗಳನ್ನು ಪರಿಶೀಲಿಸಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News