ಸಾಲು ಸಾಲು ಹಬ್ಬಗಳ ನಡುವೆ ಎಷ್ಟಾಗಿದೆ ಗೊತ್ತಾ ಚಿನ್ನ-ಬೆಳ್ಳಿ ದರ ?

Gold Price Today, 4 September:ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯ ಪರಿಣಾಮ ದೇಶಿಯ ಮಾರುಕಟ್ಟೆಯಲ್ಲೂ ಕಂಡುಬರುತ್ತಿದೆ. 10 ಗ್ರಾಂ ಚಿನ್ನದ ಇತ್ತೀಚಿನ ಬೆಲೆ  ಎಷ್ಟು ನೋಡೋಣ. 

Written by - Ranjitha R K | Last Updated : Sep 4, 2023, 01:02 PM IST
  • ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.
  • ಬೆಳ್ಳಿಯ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ.
  • MCX ನಲ್ಲಿ ಬೆಲೆ ಎಷ್ಟು?
ಸಾಲು ಸಾಲು ಹಬ್ಬಗಳ ನಡುವೆ ಎಷ್ಟಾಗಿದೆ ಗೊತ್ತಾ ಚಿನ್ನ-ಬೆಳ್ಳಿ ದರ ?  title=

Gold Price Today, 4 September : ವಾರದ ಮೊದಲ ವಹಿವಾಟಿನ ದಿನದಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಇದಲ್ಲದೇ ಇಂದು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX ಚಿನ್ನದ ಬೆಲೆ) ಚಿನ್ನದ ಬೆಲೆ 59500 ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯ ಪರಿಣಾಮ ದೇಶಿಯ ಮಾರುಕಟ್ಟೆಯಲ್ಲೂ ಕಂಡುಬರುತ್ತಿದೆ. 10 ಗ್ರಾಂ ಚಿನ್ನದ ಇತ್ತೀಚಿನ ಬೆಲೆ  ಎಷ್ಟು ನೋಡೋಣ.  

MCX ನಲ್ಲಿ ಬೆಲೆ ಎಷ್ಟು? : 
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ, ಶೇಕಡಾ 0.21 ರಷ್ಟು ಏರಿಕೆ ಯೊಂದಿಗೆ 10 ಗ್ರಾಂ ಚಿನ್ನದ ಬೆಲೆ 59,520 ರೂಪಾಯಿಗಳ ಮಟ್ಟದಲ್ಲಿದೆ.  ಇದಲ್ಲದೇ ಬೆಳ್ಳಿಯ ಬೆಲೆಯಲ್ಲಿ ಶೇ.0.16ರಷ್ಟು ಇಳಿಕೆಯಾಗಿದ್ದು, ಪ್ರತಿ ಕೆಜಿಗೆ 74968 ರೂ. ಆಗಿದೆ.

ಇದನ್ನೂ ಓದಿ : ವೇತನ ನಿಯಮಗಳಲ್ಲಿ ಬದಲಾವಣೆ : ಈ ತಿಂಗಳಿನಿಂದಲೇ ಕೈ ಸೇರುವುದು ಅಧಿಕ ವೇತನ

ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಎಷ್ಟು? :
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಕಾಮ್ಯಾಕ್ಸ್‌ನಲ್ಲಿ ಚಿನ್ನದ ಬೆಲೆ ಒಂದು ತಿಂಗಳ ದಾಖಲೆಯ ಮಟ್ಟವನ್ನು ತಲುಪಿದೆ. ಇಲ್ಲಿ ಬೆಳ್ಳಿ ಪ್ರತಿ ಔನ್ಸ್‌ಗೆ  24.5 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

22 ಕ್ಯಾರೆಟ್ ಚಿನ್ನದ ದರ : 
ದೇಶದ ರಾಜಧಾನಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 55,350 ರೂ. ಚೆನ್ನೈನಲ್ಲಿ 55,450 ರೂ., ಕೋಲ್ಕತ್ತಾದಲ್ಲಿ 55,200 ರೂ. ಮತ್ತು ಮುಂಬೈನಲ್ಲಿ 10 ಗ್ರಾಂಗೆ 55,200 ರೂ. ಆಗಿದೆ. 

ಇದನ್ನೂ ಓದಿ : Success Story: ಕೇವಲ 70 ಸಾವಿರ ಹೂಡಿಕೆ ಮಾಡಿ, 20 ಲಕ್ಷ ರೂ.ಗಳಿಸಿದ ಈ ಯುವ ರೈತನ ಸಕ್ಸೆಸ್ ಸ್ಟೋರಿ ನೀವೂ ಓದಿ!

ಬೆಳ್ಳಿಯ ಬೆಲೆ ಎಷ್ಟು? :
ಇದಲ್ಲದೇ ಬೆಳ್ಳಿ ಬೆಲೆಯ ಬಗ್ಗೆ ಹೇಳುವುದಾದರೆ ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿ 76,900 ರೂ. ಕೋಲ್ಕತ್ತಾದಲ್ಲಿ 76,900 ರೂ., ಚೆನ್ನೈನಲ್ಲಿ 80,000 ರೂ., ಮುಂಬೈನಲ್ಲಿ ಕೆಜಿಗೆ 76,900 ರೂ. ಆಗಿದೆ. 

ನಿಮ್ಮ ನಗರದ ದರವನ್ನು ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು. ನೀವು ಯಾವ ನಂಬರ್ ನಿಂದ ಮಿಸ್ ಕಾಲ್ ಕೊಡುತ್ತಿರೋ ಅದೇ ಸಂಖ್ಯೆಗೆ  ನಿಮಗೆ ಚಿನ್ನದ ದರದ ಬಗ್ಗೆ  ಸಂದೇಶವನ್ನು ಕಳುಹಿಸಲಾಗುತ್ತದೆ. 

ಇದನ್ನೂ ಓದಿ : Car Sales In August 2023: ಆಗಸ್ಟ್ ತಿಂಗಳಿನಲ್ಲಿ ಅತಿಹೆಚ್ಚು ಮಾರಾಟವಾದ ಟಾಪ್ 5 ಕಾರುಗಳು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News