Gold Price Today: ಚಿನ್ನಾಭರಣ ಪ್ರಿಯರೆ, ಇಂದಿನ ಚಿನ್ನದ ಬೆಲೆ ಎಷ್ಟಿದೆ ತಿಳಿಯಿರಿ

ಮಂಗಳವಾರ ದೇಶದಾದ್ಯಂತ ಚಿನ್ನದ ಬೆಲೆಯಲ್ಲಿ ಕುಸಿತವಾಗಿದೆ. ಇದು ಚಿನ್ನಾಭರಣ ಪ್ರಿಯರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

Written by - Puttaraj K Alur | Last Updated : Nov 23, 2021, 10:32 AM IST
  • ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ
  • ಮಂಗಳವಾರ ಪ್ರಮುಖ ನಗರಗಲ್ಲಿ ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ
  • ಬೆಲೆ ಕಡಿಮೆ ಇರುವಾಗಲೇ ಚಿನ್ನ ಖರೀದಿಸುವುದು ಉತ್ತಮವೆಂದ ಮಾರುಕಟ್ಟೆ ತಜ್ಞರು
Gold Price Today: ಚಿನ್ನಾಭರಣ ಪ್ರಿಯರೆ, ಇಂದಿನ ಚಿನ್ನದ ಬೆಲೆ ಎಷ್ಟಿದೆ ತಿಳಿಯಿರಿ title=
ಚಿನ್ನದ ಬೆಲೆ ಮತ್ತೆ ಕುಸಿತವಾಗಿದೆ

ನವದೆಹಲಿ: ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಚಿನ್ನದ ಬೆಲೆ(Gold Price) ಗಗನಕ್ಕೇರಿರುವುದು ಗೊತ್ತಿರುವ ಸಂಗತಿ. ದಸರಾ, ದೀಪಾವಳಿ ಜೊತೆಗೆ ಮದುವೆಯಂತಹ ಮಂಗಳಕರ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿತ್ತು. ಮಂಗಳವಾರ ದೇಶದಾದ್ಯಂತ ಚಿನ್ನದ ಬೆಲೆ(Gold Price Today)ಯಲ್ಲಿ ಕುಸಿತವಾಗಿದೆ. ಇದು ಚಿನ್ನಾಭರಣ ಪ್ರಿಯರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Arecanut Price Today: ಕರ್ನಾಟಕದ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಎಷ್ಟಿದೆ..?.

  • ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,850 ರೂ. ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 52,200 ರೂ. ಇದೆ.
  • ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 48,200 ರೂ. ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 49,200 ರೂ. ಇದೆ.
  • ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ(Gold Price inm Bengaluru) 45,050 ರೂ. ಇದ್ದರೆ,  24 ಕ್ಯಾರೆಟ್ ಚಿನ್ನದ ದರ 49,150 ರೂ. ಇದೆ.  
  • ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ದರ ರೂ. 45,340 ರೂ. ಆದರೆ,  24 ಕ್ಯಾರೆಟ್ ಚಿನ್ನದ ಬೆಲೆ 49,460 ರೂ. ಇದೆ.   
  • ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 48,200 ರೂ. ಇದ್ದರೆ, 24 ಕ್ಯಾರೆಟ್ ಚಿನ್ನದ ದರ 50,700 ರೂ. ಇದೆ.
  • ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 45,050 ರೂ. ಆಗಿದ್ದರೆ, 24 ಕ್ಯಾರೆಟ್ ಚಿನ್ನದ ದರ 49,150 ರೂ. ಇದೆ.
  • ಲಕ್ನೋದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 46,600 ರೂ. ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 49,600 ರೂ. ಇದೆ.  
  • ವಿಶಾಖಪಟ್ಟಣಂನಲ್ಲಿ  22 ಕ್ಯಾರೆಟ್ ಚಿನ್ನದ ದರ 45,050 ರೂ. ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 49,150 ರೂ. ಇದೆ.

ಇದನ್ನೂ ಓದಿ: SBI Alert: ಕಸ್ಟಮರ್ ಕೇರ್ ಅಧಿಕಾರಿಗಳ ಹೆಸರಿನಲ್ಲಿ ಕ್ಷಣದಲ್ಲಿ ಖಾಲಿಯಾಗುತ್ತೆ ಖಾತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News