Gold Today Rate: ವಾರಾಂತ್ಯದಲ್ಲಿ ಏರಿಕೆ ಕಂಡ ಚಿನ್ನ.. ಬಂಗಾರದಂಗಡಿಗೆ ಹೋಗುವ ಮುನ್ನ ಇಂದಿನ ದರ ತಿಳಿಯಿರಿ!

Today's Gold Market Insights: ನಿನ್ನೆಯಷ್ಟೇ ಇಳಿಕೆಕಂಡಿದ್ದ ಚಿನ್ನದ ದರ ಇಂದು (ಜನೇವರಿ 27) ಹೆಚ್ಚಾಗಿದೆ... ಸದ್ಯ 1 ಗ್ರಾಂ ಚಿನ್ನಕ್ಕೆ 10 ರೂ. ಹೆಚ್ಚಾಗಿದ್ದು.. ಗ್ರಾಂ ಬೆಳ್ಳಿ ಬೆಲೆ 75 ಪೈಸೆ ಏರಿಕೆ ಕಂಡಿದೆ.. ಹಾಗಾದರೆ ವಿವಿಧ ಸ್ಥಳಗಳಲ್ಲಿ ಚಿನ್ನದ ಬೆಲೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ..

Written by - Savita M B | Last Updated : Jan 27, 2024, 12:52 PM IST
  • ಸತತವಾಗಿ ಈ ವಾರದ 4 ದಿನಗಳು ಸ್ಥಿರವಾಗಿದ್ದು.. ನಂತರ ಇಳಿಕೆಯಾಗಿದ್ದ ಚಿನ್ನದ ದರ ಇಂದು ಏರಿಕೆ ಕಂಡಿದೆ
  • ಇದರ ಜೊತೆಗೆ ಬೆಳ್ಳಿ ಬೆಲೆ ಕೂಡಾ ಹೆಚ್ಚಾಗಿದೆ.
  • ಕರ್ನಾಟಕದಲ್ಲಿ ಚಿನ್ನದ ದರ ಹೇಗಿದೆ?
Gold Today Rate: ವಾರಾಂತ್ಯದಲ್ಲಿ ಏರಿಕೆ ಕಂಡ ಚಿನ್ನ.. ಬಂಗಾರದಂಗಡಿಗೆ ಹೋಗುವ ಮುನ್ನ ಇಂದಿನ ದರ ತಿಳಿಯಿರಿ!  title=

Daily Gold Price Update: ಸತತವಾಗಿ ಈ ವಾರದ 4 ದಿನಗಳು ಸ್ಥಿರವಾಗಿದ್ದು.. ನಂತರ ಇಳಿಕೆಯಾಗಿದ್ದ ಚಿನ್ನದ ದರ ಇಂದು ಏರಿಕೆ ಕಂಡಿದ್ದು.. ಇದರ ಜೊತೆಗೆ ಬೆಳ್ಳಿ ಬೆಲೆ ಕೂಡಾ ಹೆಚ್ಚಾಗಿದೆ..ಹಾಗಾದರೆ ಇಂದು ರಾಜ್ಯದ ಪ್ರಮುಖ ನಗರಗಳು ಹಾಗೂ ಹೊರ ರಾಜ್ಯಗಳಲ್ಲಿ 22 ಕ್ಯಾರೆಟ್‌ ಹಾಗೂ 24 ಕ್ಯಾರೆಟ್‌ ಚಿನ್ನದ ದರ ಹೇಗಿದೆ ಎಂಬುದನ್ನು ತಿಳಿಯೋಣ..

22 ಕ್ಯಾರೆಟ್‌ ಚಿನ್ನದ ದರ
1 ಗ್ರಾಂ ಚಿನ್ನಕ್ಕೆ 10 ರೂ. ಏರಿಕೆಯಾಗಿದ್ದು.. ಅದರಂತೆ ಇಂದು (ಜನೇವರಿ 27) 1 ಗ್ರಾಂ ಚಿನ್ನಕ್ಕೆ 5,780 ರೂ. ದರ ನಿಗದಿಯಾಗಿದೆ.. ನಿನ್ನೆಯಷ್ಟೇ 5,770 ರೂ. ಇತ್ತು.. ಹಾಗೆಯೇ 8 ಗ್ರಾಂ ಚಿನ್ನಕ್ಕೆ ಸದ್ಯ 46,240 ರೂ.. ನಿನ್ನೆ 46,160 ರೂ ಇತ್ತು... 10 ಗ್ರಾಂ ಚಿನ್ನಕ್ಕೆ 57,800 ರೂ. ಮತ್ತು.. 100 ಗ್ರಾಂ ಚಿನ್ನಕ್ಕೆ 5,78,000 ರೂ ದರ ಗೊತ್ತಾಗಿದೆ.. 

ಇದನ್ನೂ ಓದಿ-Mutual Fund vs SSY : ಹೆಣ್ಣು ಮಗುವಿಗೆ ಉತ್ತಮ ಉಳಿತಾಯ ಯೋಜನೆ ಯಾವುದು?

24 ಕ್ಯಾರೆಟ್‌ ಚಿನ್ನದ ದರ
24 ಕ್ಯಾರೆಟ್‌ ಚಿನ್ನದ ಬೆಲೆ 1 ಗ್ರಾಂಗೆ 6,305 ರೂ. ಆಗಿದ್ದು.. ನಿನ್ನೆಯಷ್ಟೇ ಗ್ರಾಂಗೆ 6,295 ರೂ. ಬೆಲೆ ಇತ್ತು.. ಅದರಂತೆ ಇದೀಗ 8 ಗ್ರಾಂಗೆ 50,440 ರೂ. ಹಾಗಯೇ 10 ಗ್ರಾಂಗೆ 63,050 ರೂ ಮತ್ತು.. 100 ಗ್ರಾಂಗೆ 6,30,500 ರೂ. ದರ ನಿಗದಿಯಾಗಿದೆ.. 

ಕರ್ನಾಟಕದಲ್ಲಿ ಚಿನ್ನದ ದರ ಹೇಗಿದೆ? 
ಬೆಂಗಳೂರಿನಲ್ಲಿ ಇಂದು ಬಂಗಾರದ ದರ 22 ಕ್ಯಾರೆಟ್‌ಗೆ 57,800 ರೂ. ಹಾಗೂ ಬೆಳ್ಳಿಯ ಬೆಲೆ 63,050 ರೂ. ಇದ್ದು.. ಮೈಸೂರು, ಬಳ್ಳಾರಿ,  ಮಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ.. ಆದರೆ ಮಜೂರಿ ಸೇರಿದಂತೆ ಇತರೆ ಶುಲ್ಕಗಳಲ್ಲಿ ಸ್ವಲ್ಪ ವ್ಯತ್ಯಾಸವುಂಟಾಗಬುದು..  

ಇದನ್ನೂ ಓದಿ-ಅಯೋಧ್ಯೆಯ ರಾಮ ಮಂದಿರ ನೀಡಲಿದೆಯೇ ಭಾರತದ 6.8% ಪ್ರವಾಸೋದ್ಯಮ ಜಿಡಿಪಿಗೆ ಉತ್ತೇಜನ?

ಹೊರ ರಾಜ್ಯಗಳಲ್ಲಿ ಚಿನ್ನದ ಬೆಲೆ ಹೀಗಿದೆ! 
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 57,950, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 63,200.. ಮುಂಬೈ, ಕೋಲ್ಕತ್ತಾ ನಗರಗಳಲ್ಲಿ... 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 57,800 ಆಗಿದ್ದರೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 63,050.. ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.58,400 ಆಗಿದ್ದರೆ, 24 ಕ್ಯಾರೆಟ್ ಚಿನ್ನ ರೂ.63,710 ಇದೆ.. 

ಹೆಚ್ಚಿದ ಬೆಳ್ಳಿ ಬೆಲೆ..
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ ಮತ್ತೊಮ್ಮೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ರೂ. 500 ಏರಿಕೆಯಾಗಿದೆ... ಅಂದರೆ ಇಂದು ಬೆಳ್ಳಿ ಗ್ರಾಂಗೆ 75 ಪೈಸೆ ಏರಿಕೆ ಆಗಿದೆ. ನಿನ್ನೆ ಒಂದು ಗ್ರಾಂ ಬೆಳ್ಳಿಗೆ 72.75 ರೂ. ಇದ್ದು.. ಆದರೆ ಇಂದು 73.50 ರೂ. ಆಗಿದೆ. ಸದ್ಯ ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ.73,500ಗೆ ನಿಗದಿ ಆಗಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News