7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ಶಾಕ್ !

7th Pay Commission Latest News: ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರ (Central Government) ಫಿಟ್‌ಮೆಂಟ್ ಫ್ಯಾಕ್ಟರ್ (Fitment Factor) ಹೆಚ್ಚಿಸುವ ಕುರಿತು ಯೋಚಿಸುತ್ತಿಲ್ಲವಾದರೂ, ತುಟ್ಟಿ ಭತ್ಯೆ  ಹೆಚ್ಚಳ ಖಚಿತ ಎನ್ನಲಾಗಿದೆ. ಕೋವಿಡ್ ಮತ್ತು ಹಣದುಬ್ಬರದಿಂದಾಗಿ ಸರ್ಕಾರದ ಆದಾಯದಲ್ಲಿನ ವ್ಯತ್ಯಾಸ ಉಂಟಾಗಿದ್ದು, ಸರ್ಕಾರವು ಪ್ರಸ್ತುತ ಈ ಹೆಚ್ಚುವರಿ ಆರ್ಥಿಕ ಹೊರೆಯನ್ನು ಹೊರುವ ಸ್ಥಿತಿಯಲ್ಲಿಲ್ಲ ಎನ್ನಲಾಗಿದೆ.  

Written by - Nitin Tabib | Last Updated : Mar 15, 2022, 06:58 PM IST
  • ನೌಕರರ ಫಿಟ್ಮೆಂಟ್ ಫ್ಯಾಕ್ಟರ್ ಕುರಿತು ಬಿಗ್ ಅಪ್ಡೇಟ್
  • ಈ ತಿಂಗಳು ಯಾವುದೇ ಬದಲಾವಣೆ ಇಲ್ಲ.
  • ಫಿಟ್ಮೆಂಟ್ ಫ್ಯಾಕ್ಟರ್ ಮೂರು ಪಟ್ಟು ಹೆಚ್ಚಿಸುವುದರ ಮೇಲೆ ಒತ್ತು
7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ! title=
7th Pay Commission Latest News (File Photo)

ನವದೆಹಲಿ: 7th Pay Commission - ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಒಂದು ಕಡೆ ನೌಕರರಿಗೆ ಒಳ್ಳೆಯ ಸುದ್ದಿ ಏನೆಂದರೆ, ಸರ್ಕಾರ ಶೀಘ್ರದಲ್ಲಿಯೇ ನೌಕರರ DA (Dearness Allowance) ಹೆಚ್ಚಿಸಲಿದೆ ಎನ್ನಲಾಗಿದೆ, ಇನ್ನೊಂದೆಡೆ ಸರ್ಕಾರ (Central Government) ಸದ್ಯಕ್ಕೆ ನೌಕರರ ಫಿಟ್‌ಮೆಂಟ್ ಫ್ಯಾಕ್ಟರ್ ಬಗ್ಗೆ ಯಾವುದೇ ಇದುವರೆಗೆ ನಿರ್ಧಾರ ತೆಗೆದುಕೊಂಡಿಲ್ಲ ಎನ್ನಲಾಗಿದೆ. ಅಂದರೆ, ಸದ್ಯಕ್ಕೆ ಸರ್ಕಾರ ತನ್ನ ನೌಕರರ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಪರಿಗಣಿಸುತ್ತಿಲ್ಲ ಎಂದರ್ಥ.

ಇದನ್ನೂ ಓದಿ-Bank Loan: ಸಾಲ ಪಡೆಯುವ ನಿಯಮಗಳನ್ನು ಬದಲಾಯಿಸಿದ RBI ! ಗ್ರಾಹಕರಿಗೆ ನೇರ ಲಾಭ

ಫಿಟ್‌ಮೆಂಟ್ ಫ್ಯಾಕ್ಟರ್ (Fitment Factor) ನಲ್ಲಿ ಬದಲಾವಣೆ ಇಲ್ಲ
ಅಂಕಿ-ಅಂಶಗಳ ಪ್ರಕಾರ, ಸರ್ಕಾರವು ತುಟ್ಟಿಭತ್ಯೆಯನ್ನು (DA Hike) ಶೇ.3ರಷ್ಟು ಹೆಚ್ಚಿಸಬಹುದು. ಆದರೆ, ಫಿಟ್‌ಮೆಂಟ್ ಫ್ಯಾಕ್ಟರ್ ಹೆಚ್ಚಿಸಬೇಕೆಂಬ ನೌಕರರ ಬಹುದಿನಗಳ ಬೇಡಿಕೆಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಅಂದರೆ, 2022 ರಲ್ಲಿ ಫಿಟ್‌ಮೆಂಟ್ ಅಂಶವು ಹೆಚ್ಚಾಗುವ ನಿರೀಕ್ಷೆಯಿಲ್ಲ ಎಂದರ್ಥ. ನಮ್ಮ ಪಾಲುದಾರ ವೆಬ್ ಸೈಟ್ Zee ಬ್ಯುಸಿನೆಸ್ ಗೆ ದೊರೆತ Exclusive ಮಾಹಿತಿ ಪ್ರಕಾರ, ಸರ್ಕಾರ ಪ್ರಸ್ತುತ ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಹೆಚ್ಚಿಸುವ ಪರ ಇಲ್ಲ ಎನ್ನಲಾಗಿದೆ. ಕೋವಿಡ್ ಮತ್ತು ಹಣದುಬ್ಬರದಿಂದಾಗಿ ಸರ್ಕಾರದ ಆದಾಯದಲ್ಲಿ ವ್ಯತ್ಯಾಸ ಉಂಟಾಗಿದ್ದು, ಸರ್ಕಾರ ಈ ಹೆಚ್ಚುವರಿ ಆರ್ಥಿಕ ಹೊರೆಯನ್ನು ಭರಿಸುವ ಮೂಡ್ ನಲ್ಲಿ ಇಲ್ಲ ಎನ್ನಲಾಗಿದೆ.

ಇದನ್ನೂ ಓದಿ-RBI Penalty On Banks: 8 ಬ್ಯಾಂಕುಗಳಿಗೆ ಭಾರಿ ದಂಡ ವಿಧಿಸಿದ RBI, ನಿಮ್ಮ ಬ್ಯಾಂಕ್ ಈ ಪಟ್ಟಿಯಲ್ಲಿ ಇದೆಯಾ?

ದೀರ್ಘ ಕಾಲದ ಬೇಡಿಕೆ
ವಾಸ್ತವದಲ್ಲಿ, ತಮ್ಮ ಫಿಟ್‌ಮೆಂಟ್ ಅಂಶವನ್ನು ಶೇ.2.57 ರಿಂದ ಶೇ.3.68 ಕ್ಕೆ ಹೆಚ್ಚಿಸಬೇಕು ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಯಾಗಿದೆ. ಮತ್ತೊಂದೆಡೆ, ಮಾರ್ಚ್ ತಿಂಗಳ ವೇತನದಲ್ಲಿ ಸರ್ಕಾರ ಈ ಹೆಚ್ಚಿನ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಘೋಷಿಸಬಹುದು ಎಂದು ನೌಕರರು ನಿರೀಕ್ಷಿಸಿದ್ದರು. ಆದರೆ ಈಗ ಈ ನಿಟ್ಟಿನಲ್ಲಿ ನೌಕರರಿಗೆ ನಿರಾಸೆ ಲಭಿಸಿದಂತಾಗಿದೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ-Aadhaar Card: ಆಧಾರ್ ಕಾರ್ಡ್ ಅನ್ನು ಲಾಕ್-ಅನ್‌ಲಾಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News