Govt's gross liabilities rise by 3.4%: ಕೇಂದ್ರ ಸರ್ಕಾರದ ಒಟ್ಟು ಸಾಲವು ಡಿಸೆಂಬರ್ ಅಂತ್ಯದ ವೇಳೆಗೆ 166.14 ಲಕ್ಷ ಕೋಟಿ ರೂ.ಗಳಿಂದ 2024ರ ಮಾರ್ಚ್ ಅಂತ್ಯದ ವೇಳೆಗೆ 171.78 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಸಾರ್ವಜನಿಕ ಸಾಲ ನಿರ್ವಹಣೆ ತ್ರೈಮಾಸಿಕ ವರದಿ (ಜನವರಿ-ಮಾರ್ಚ್ 2024) 2023-24ರ 4ನೇ ತ್ರೈಮಾಸಿಕದಲ್ಲಿ ಶೇ.3.4ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಿದೆ.
ಈ ತ್ರೈಮಾಸಿಕದಲ್ಲಿ ಒಟ್ಟು ಹೊಣೆಗಾರಿಕೆಗಳಲ್ಲಿ ಸಾರ್ವಜನಿಕ ಸಾಲದ ಪಾಲು ಶೇ.90.2ರಷ್ಟಿದೆ ಎಂದು ವರದಿ ತಿಳಿಸಿದೆ. ತ್ರೈಮಾಸಿಕದಲ್ಲಿ FPI ಒಳಹರಿವು ಮತ್ತು ಸ್ಥಿರ ಹಣದುಬ್ಬರದಿಂದ ದೇಶೀಯ(ಭಾರತ) ಬಾಂಡ್‌ಗಳ ಇಳುವರಿ ಕುಸಿದಿದೆ, ಹಣಕಾಸು ವರ್ಷ 25ರ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.5.1ಕ್ಕೆ ಸರಿಹೊಂದಿಸಲಾಗಿದೆ.
ಇದನ್ನೂ ಓದಿ: Bank Holidays In July: ಜುಲೈನಲ್ಲಿ 12 ದಿನ ಬ್ಯಾಂಕ್‌ಗಳಿಗೆ ರಜೆ, ಇಲ್ಲಿದೆ ಲಿಸ್ಟ್
ಹಣಕಾಸು ವರ್ಷ 26ರ ವೇಳೆಗೆ ವಿತ್ತೀಯ ಕೊರತೆಯನ್ನು ಶೇ.4.5 ಅಥವಾ ಅದಕ್ಕಿಂತ ಕಡಿಮೆಗೆ ಇಳಿಸುವ ಗುರಿ ಹೊಂದಲಾಗಿದೆ. ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದ ಯೋಜಿತ ಸಾಲ ಯೋಜನೆಗಿಂತ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ. ಅಮೆರಿಕದ Treasury yields ತ್ರೈಮಾಸಿಕದಲ್ಲಿ ಅಸ್ಥಿರವಾಗಿ ಉಳಿದಿದೆ, ಮುಖ್ಯವಾಗಿ ಫೆಡರಲ್ ರಿಸರ್ವ್ ಕ್ರಮ, ಹಣದುಬ್ಬರ ಮತ್ತು ಉದ್ಯೋಗ ದತ್ತಾಂಶದಿಂದ ಪ್ರಭಾವಿತವಾಗಿದೆ ಎಂದು ವರದಿಯು ತಿಳಿಸಿದೆ.
ಅಮೆರಿಕದ 10 ವರ್ಷಗಳ ಇಳುವರಿ ತ್ರೈಮಾಸಿಕದಲ್ಲಿ ಶೇ.4.33ಕ್ಕೆ ತಲುಪಿದೆ. 2023-24ರ 3ನೇ ತ್ರೈಮಾಸಿಕದಲ್ಲಿ ಶೇ.7.37ರಷ್ಟಿದ್ದ Average yield of new subjects 2023-24ರ 4ನೇ ತ್ರೈಮಾಸಿಕದಲ್ಲಿ ಶೇ.7.19ಕ್ಕೆ ಇಳಿದಿದೆ. ಇದಲ್ಲದೆ 2023-24ರ 4ನೇ ತ್ರೈಮಾಸಿಕದಲ್ಲಿ (2023-24ರ 3ನೇ ತ್ರೈಮಾಸಿಕದಲ್ಲಿ 18.80 ವರ್ಷಗಳು) dated securities ವಿತರಣೆಯ ಸರಾಸರಿ ಮುಕ್ತಾಯವು 18.75 ವರ್ಷಗಳಿಗೆ ಏರಿದೆ. 2023-24ರ 3ನೇ ತ್ರೈಮಾಸಿಕದ ಕೊನೆಯಲ್ಲಿ 12.52 ವರ್ಷಗಳಷ್ಟಿದ್ದ dated securities ಬಾಕಿ ಇರುವ ಸ್ಟಾಕ್‌ನ ಸರಾಸರಿ ಮುಕ್ತಾಯವು 2023-24ರ 4ನೇ ತ್ರೈಮಾಸಿಕದ ಕೊನೆಯಲ್ಲಿ 12.54 ವರ್ಷಗಳಿಗೆ ಏರಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ಬಂಗಾರ ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ..? ಇಲ್ಲಿದೆ ಇಂದಿನ ಚಿನ್ನದ ದರದ ಮಾಹಿತಿ..
ಕೇಂದ್ರ ಸರ್ಕಾರಿ ಸೆಕ್ಯುರಿಟಿಗಳ ಮಾಲೀಕತ್ವದ ಮಾದರಿಯು ವಾಣಿಜ್ಯ ಬ್ಯಾಂಕುಗಳ ಪಾಲು ಮಾರ್ಚ್ 2023ರಲ್ಲಿ ಶೇ.36.6ರಿಂದ 2024ರ ಮಾರ್ಚ್ ಅಂತ್ಯದ ವೇಳೆಗೆ ಶೇ.37.7ಕ್ಕೆ ಏರಿದೆ ಎಂದು ಸೂಚಿಸುತ್ತದೆ. ಇದಲ್ಲದೆ ವಿಮಾ ಕಂಪನಿಗಳ ಪಾಲು ಮಾರ್ಚ್ 2024ರಲ್ಲಿ ಶೇ.26.0ರಷ್ಟು ಸ್ಥಿರವಾಗಿದ್ದರೆ, FPIಗಳ ಪಾಲು ಮಾರ್ಚ್ 2023ರಲ್ಲಿ ಶೇ.1.4ಕ್ಕೆ ಹೋಲಿಸಿದರೆ ಮಾರ್ಚ್ 2024ರ ಅಂತ್ಯದ ವೇಳೆಗೆ ಶೇ.2.3ಕ್ಕೆ ಏರಿದೆ. RBIನ ಪಾಲು 2024ರ ಮಾರ್ಚ್ ಅಂತ್ಯದ ವೇಳೆಗೆ ಶೇ.12.3ಕ್ಕೆ ಇಳಿದಿದೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ಶೇ.14.3ರಷ್ಟಿತ್ತು ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.