Bank Holidays In July: ಜುಲೈನಲ್ಲಿ 12 ದಿನ ಬ್ಯಾಂಕ್‌ಗಳಿಗೆ ರಜೆ, ಇಲ್ಲಿದೆ ಲಿಸ್ಟ್

Bank Holidays In July: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಡೀ ವರ್ಷದ ಬಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪ್ರಕಾರ, ಜುಲೈ 2024ರಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 12 ದಿನ ರಜೆ ಇರುತ್ತದೆ. 

Written by - Yashaswini V | Last Updated : Jun 28, 2024, 03:25 PM IST
  • ಆರ್‌ಬಿ‌ಐ ರಜಾ ದಿನದ ಕ್ಯಾಲೆಂಡರ್ ದೇಶದಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೆ ಅನ್ವಯವಾಗುತ್ತದೆ
  • ಎಲ್ಲಾ ಬ್ಯಾಂಕುಗಳು ಪ್ರತಿ ತಿಂಗಳ ನಾಲ್ಕು ಭಾನುವಾರದಂದು ಮುಚ್ಚಿರುತ್ತವೆ.
  • ಇದಲ್ಲದೇ, ದೇಶದ ಬಹುತೇಕ ಬ್ಯಾಂಕ್‌ಗಳು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಮುಚ್ಚಿರುತ್ತವೆ.
Bank Holidays In July: ಜುಲೈನಲ್ಲಿ 12 ದಿನ ಬ್ಯಾಂಕ್‌ಗಳಿಗೆ ರಜೆ, ಇಲ್ಲಿದೆ ಲಿಸ್ಟ್  title=

Bank Holidays In July: ನೀವು ಜುಲೈ ತಿಂಗಳಿನಲ್ಲಿ ಬ್ಯಾಂಕಿಂಗ್ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಹೊಂದಿದ್ದರೆ ಬ್ಯಾಂಕ್‌ಗೆ ತೆರಳುವ ಮೊದಲು ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಪರಿಶೀಲಿಸುವುದನ್ನು ಮರೆಯಬೇಡಿ. 

ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರುವ ರಜಾ ದಿನಗಳ ಪಟ್ಟಿಯ ಪ್ರಕಾರ, 2024ರ ಜುಲೈ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 12 ದಿನಗಳ ಕಾಲ ರಜೆ ಇರುತ್ತದೆ. ಇದು ವಾರಾಂತ್ಯದ ರಜೆಗಳು ಹಾಗೂ ವಿವಿಧ ಪ್ರದೇಶಗಳ ಸ್ಥಳೀಯ ರಜೆಗಳನ್ನೂ ಒಳಗೊಂಡಿದೆ. 

ಇದನ್ನೂ ಓದಿ- ಜುಲೈಯಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳ ! ಹೇಗೆ ಎಷ್ಟು ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ

ನಿಮಗೆಲ್ಲರಿಗೂ ತಿಳಿದಿರುವಂತೆ ಬ್ಯಾಂಕ್‌ಗಳು  ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಮಾತ್ರ ತೆರೆದಿರುತ್ತವೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು  ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. 

ಆರ್‌ಬಿಐ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಜುಲೈ 2024ರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ, ಎಲ್ಲಾ ಭಾನುವಾರಗಳು ಹಾಗೂ ಪ್ರಾದೇಶಿಕ  ರಜೆಗಳನ್ನು ಒಳಗೊಂಡಂತೆ ಬ್ಯಾಂಕ್‌ಗಳು ಒಟ್ಟು 12 ದಿನ ಮುಚ್ಚಲ್ಪಡುತ್ತವೆ. 

ಇದನ್ನೂ ಓದಿ- Jio unlimited data plan: ಜುಲೈ 3ರಿಂದ ಜಿಯೋ ಹೊಸ ಅನ್‌ಲಿಮಿಟೆಡ್ ಪ್ಲಾನ್ಸ್!

ಬ್ಯಾಂಕ್ ರಜಾ ದಿನಗಳ ಪಟ್ಟಿ ಈ ಕೆಳಕಂಡಂತಿದೆ: 
ದಿನಾಂಕ  ದಿನ  ರಜೆ ರಾಜ್ಯ
ಜುಲೈ 03, 2024  ಬುಧವಾರ  ಬೆಹ್ ದಿಯೆಂಕ್ಲಾಮ್   ಮೇಘಾಲಯ
ಜುಲೈ 06, 2024         ಶನಿವಾರ MHIP ದಿನ            ಮಿಜೋರಾಂ
ಜುಲೈ 07, 2024          ಭಾನುವಾರ ವಾರದ ರಜೆ     ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 08, 2024      ಸೋಮವಾರ    ಕಾಂಗ್ (ರಥಜಾತ್ರಾ)     ಮಣಿಪುರ
ಜುಲೈ 09, 2024          ಮಂಗಳವಾರ   ದ್ರುಕ್ಪಾ ತ್ಸೆ-ಜಿ      ಸಿಕ್ಕಿಂ
ಜುಲೈ 13, 2024                ಎರಡನೇ ಶನಿವಾರ   ವಾರದ ರಜೆ   ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 14, 2024             ಭಾನುವಾರ    ಸಾಪ್ತಾಹಿಕ ರಜೆ    ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 16, 2024 ಮಂಗಳವಾರ ಹರೇಲಾ ಉತ್ತರಾಖಂಡ
ಜುಲೈ 17, 2024 ಬುಧವಾರ ಮೊಹರಂ/ಆಶೂರ/ಯು ಟಿರೋಟ್ ಸಿಂಗ್ ಡೇ ಭಾರತದಾದ್ಯಂತ ಬ್ಯಾಂಕ್‌ಗಳಿಗೆ ರಜೆ 
ಜುಲೈ 21, 2024  ಭಾನುವಾರ      ಸಾಪ್ತಾಹಿಕ ರಜೆ  ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 27, 2024  ನಾಲ್ಕನೇ ಶನಿವಾರ  ಸಾಪ್ತಾಹಿಕ ರಜೆ  ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 28 2024 ಭಾನುವಾರ      ಸಾಪ್ತಾಹಿಕ ರಜೆ  ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News