ದಾಖಲೆ ಬೆಲೆಗೆ ಮಾರಾಟವಾದ ಹಳ್ಳಿಕಾರ್ ತಳಿಯ ಎರಡು ಹಲ್ಲಿನ ಒಂಟಿ ಎತ್ತು: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

Hallikar Breed Bull: ಬ್ರಾಂಡ್ ಜಾಗ್ವಾರ್ ಹೆಸರಿನ ಈ ಎತ್ತು ರಾಜ್ಯವು ಸೇರಿದಂತೆ ಹೊರ ರಾಜ್ಯಗಳಲ್ಲಿ ಎತ್ತು ಗಾಡಿ ರೇಸ್ ನಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿ ಗಳಿಸಿತ್ತು. ತಮಿಳುನಾಡಿನಲ್ಲಿ ನಡೆದ ರೇಸ್ ನಲ್ಲಿ ಈ ಎತ್ತು ತನ್ನ ವೇಗದಿಂದ ಸಾಕಷ್ಟು ಪ್ರಸಿದ್ದಿ ಪಡೆದಿತ್ತು. 

Written by - Yashaswini V | Last Updated : Jul 27, 2023, 10:36 AM IST
  • ದಾಖಲೆ ಬೆಲೆಗೆ ಮಾರಾಟ ಆಯ್ತು ಹಳ್ಳಿಕಾರ್ ತಳಿಯ ಒಂಟಿ ಎತ್ತು
  • ಇದು ಮಾರಾಟವಾದ ಬೆಲೆ ಕೇಳಿದ್ರೆ ಹೌಹಾರೋದು ಗ್ಯಾರಂಟಿ!
  • ಹಳ್ಳಿಕಾರ್ ತಳಿಯ ಎರಡು ಹಲ್ಲಿನ ಒಂಟಿ ಎತ್ತು ಮಾರಾಟ ಎಷ್ಟು ಲಕ್ಷಕ್ಕೆ ಮಾರಾಟವಾಯ್ತು ಗೊತ್ತಾ!
ದಾಖಲೆ ಬೆಲೆಗೆ ಮಾರಾಟವಾದ ಹಳ್ಳಿಕಾರ್ ತಳಿಯ ಎರಡು ಹಲ್ಲಿನ ಒಂಟಿ ಎತ್ತು: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!  title=
Hallikar Breed Bull

Hallikar Breed Bull: ಸಾಮಾನ್ಯವಾಗಿ ನಮ್ಮ ಅಕ್ಕ-ಪಕ್ಕದ ತಾಲೂಕುಗಳಲ್ಲಿ, ಗ್ರಾಮಗಳ ಸಂತೆಗಳಲ್ಲಿ ಜಾನುವಾರುಗಳ ಮಾರಾಟದ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಇಂತಹ ಜಾಗಗಳಲ್ಲಿ ಜಾನುವಾರುಗಳನ್ನು ಹರಾಜು ಪ್ರಕ್ರಿಯೆಯ ಮೂಲಕವೂ ಭಾರೀ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದೀಗ ಹಳ್ಳಿಕಾರ್ ತಳಿಯ ಎರಡು ಹಲ್ಲಿನ ಒಂಟಿ ಎತ್ತು ದಾಖಲೆ ಬೆಲೆಗೆ ಮಾರಾಟವಾಗಿದ್ದು, ಇದು ಮಾರಾಟವಾದ ಬೆಲೆ ಕೇಳಿದ್ರೆ ಹೌಹಾರೋದು  ಗ್ಯಾರಂಟಿ!

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮಸ್ಥರಾದ ನವೀನ್ ಎಂಬುವವರು ಸಾಕಿದ್ದ  ಹಳ್ಳಿಕಾರ್ ತಳಿಯ  ಎರಡು ಹಲ್ಲಿನ ಒಂಟಿ ಎತ್ತನ್ನು ಇದೀಗ ತಮಿಳುನಾಡು ಮೂಲದ ಸಿರವೈ ತಂಬಿ ಎಂಬುವ ಗ್ರಾಹಕರು ಬರೋಬ್ಬರಿ 9 ಲಕ್ಷದ 20 ಸಾವಿರ ರೂ.ಗಳಿಗೆ ಖರೀದಿಸಿದ್ದಾರೆ. 

ಇದನ್ನೂ ಓದಿ- ವಿಜಯನಗರ ಅರಸರು ಆಳಿದ ಈ ಪ್ರದೇಶಗಳಲ್ಲಿ ಜುಲೈನಿಂದ ಸೆಪ್ಟೆಂಬರ್ ವರೆಗೂ ಸಿಗುತ್ತಂತೆ ವಜ್ರ!

ಬ್ರಾಂಡ್ ಜಾಗ್ವಾರ್ ಹೆಸರಿನ ಈ ಎತ್ತು ರಾಜ್ಯವು ಸೇರಿದಂತೆ ಹೊರ ರಾಜ್ಯಗಳಲ್ಲಿ ಎತ್ತು ಗಾಡಿ ರೇಸ್ ನಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿ ಗಳಿಸಿತ್ತು. ತಮಿಳುನಾಡಿನಲ್ಲಿ ನಡೆದ ರೇಸ್ ನಲ್ಲಿ ಈ ಎತ್ತು ತನ್ನ ವೇಗದಿಂದ ಸಾಕಷ್ಟು ಪ್ರಸಿದ್ದಿ ಪಡೆದಿತ್ತು. ಈ ಜಾಗ್ವಾರ್ ಹೆಸರಿನ ಹಳ್ಳಿಕಾರ್ ತಳಿಯ ಎತ್ತಿನ ವೇಗ, ಅದರ ಸಾಧನೆಗಳ ಬಗ್ಗೆ ಕೇಳಿದ್ದ ಗ್ರಾಹಕರು ಈ ಎತ್ತನ್ನು 9.20ಲಕ್ಷ ರೂ.ಗಳ ಭಾರೀ ಮೊತ್ತಕ್ಕೆ ಖರೀದಿಸುವ ಮೂಲಕ ದಾಖಲೆ ಬರೆದಿದ್ದಾರೆ. 

ಇದನ್ನೂ ಓದಿ- ನದಿ ದಡದ ಮೇಲೆ ಬೃಹತ್‌ ಮೊಸಳೆ ಕಂಡು ಹೌಹಾರಿದ ಜನ

ದಾಖಲೆ ಬೆಲೆಗೆ ಮಾರಾಟವಾದ ಈ ಎತ್ತಿಗೆ ಗ್ರಾಮದಲ್ಲಿ ಅದ್ದೂರಿ  ಮೆರವಣಿಗೆ ಮಾಡಿ ಬೀಳ್ಕೋಡಿಗೆ ನೀಡಲಾಗಿದೆ. ಇನ್ನೂ ಈ ಎತ್ತನ್ನು ಇಷ್ಟು ವರ್ಷಗಳ ಕಾಲ ಸಾಕಿ ಸಲಹಿದ್ದ ಕುಟುಂಬಸ್ಥರು ಬೀಳ್ಕೋಡಿಗೆ ವೇಳೆ ಎತ್ತಿಗೆ ಆರತಿ ಬೆಳಗಿ ನಮಸ್ಕರಿಸಿ ಭಾರದ ಮನಸ್ಸಿನಿಂದ  ಬೀಳ್ಕೊಟ್ಟರು‌. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News