ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನವ ವಿನ್ಯಾಸದ ಹೈಟೆಕ್ ಲಾಂಝ್ ಅನಾವರಣ

ಬೆಂಗಳೂರಿನ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೀಗ ಕೆಐಎನಲ್ಲಿ ದೇಶಿಯ ಮತ್ತು ವಿದೇಶಿ ಪ್ರಯಾಣಿಕರಿಗಾಗಿ ಎರಡು ಭಿನ್ನ-ವಿಭಿನ್ನ ಐಶಾರಾಮಿಯ ಎರಡು ಹೊಸ ಲಾಂಝ್ ಗಳನ್ನು ಅನಾವರಣ‌ ಮಾಡಿದೆ.‌ ವಿಶ್ವದಲ್ಲೇ ಅತ್ಯುತ್ತಮ ಲಾಂಝ್ ಇದಾಗಿದ್ದು ಐಷಾರಾಮಿ ಸೌಲಭ್ಯಗಳು ಈ ಲಾಂಝ್ ಗಳಲ್ಲಿ ಲಭ್ಯವಿವೆ‌.

Written by - Yashaswini V | Last Updated : Jun 10, 2022, 12:24 PM IST
  • ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾಗಿ 14ವರ್ಷ ಕಳೆದಿವೆ.
  • ಹಲವು ದಾಖಲೆಗಳೊಂದಿಗೆ ವಿಶ್ವದಲ್ಲೇ ಪ್ರಯಾಣಿಕ ಸ್ನೇಹಿ ಎಂಬ ಹೆಗ್ಗಳಿಕೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.
  • ಇದರ ನಡುವೆ ಇದೀಗ ವಿಶ್ವದಲ್ಲೆ ಹೊಸ ವಿನ್ಯಾಸದ ಹೈಟೆಕ್ ಲಾಂಝ್ ಅನಾವರಣ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನವ ವಿನ್ಯಾಸದ ಹೈಟೆಕ್ ಲಾಂಝ್ ಅನಾವರಣ title=
High-tech Lounge at Bengaluru Airport

ಬೆಂಗಳೂರು: ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡುವ ದೃಷ್ಟಿಯಿಂದ  ಕೆಂಪೇಗೌಡ ವಿಮಾನ ನಿಲ್ದಾಣ ವಿಶ್ವದಲ್ಲೇ ಅತ್ಯುತ್ತಮ ಲಾಂಝ್ ಅನ್ನು ನಿರ್ಮಿಸಿದೆ. ಇದರಿಂದ ದೇಶಿಯ ಮತ್ತು  ವಿದೇಶಿ ಪ್ರಯಾಣಿಕರಿಗೆ ಐಷಾರಾಮಿ ಸೌಲಭ್ಯ ಸಿಗಲಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾಗಿ 14ವರ್ಷ ಕಳೆದಿವೆ. ಹಲವು ದಾಖಲೆಗಳೊಂದಿಗೆ ವಿಶ್ವದಲ್ಲೇ ಪ್ರಯಾಣಿಕ ಸ್ನೇಹಿ ಎಂಬ ಹೆಗ್ಗಳಿಕೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.  ಇದರ ನಡುವೆ ಇದೀಗ ವಿಶ್ವದಲ್ಲೇ ಹೊಸದು ಎನಿಸುವ ನವ ವಿನ್ಯಾಸದ ಹೈಟೆಕ್ ಲಾಂಝ್ ಅನಾವರಣ ಮಾಡುವ ಮೂಲಕ ಮತ್ತಷ್ಟು ಮೆಚ್ಚುಗೆಗೆ ಪಾತ್ರವಾಗಲಿದೆ. ಐಷಾರಾಮಿ ಲಾಂಝ್ ನಲ್ಲಿ ಪ್ರಯಾಣಿಕರಿಗೆ ಸಕಲ ಸೌಲಭ್ಯ ಒದಗಿಸಲಾಗಿದೆ.

ಇದನ್ನೂ ಓದಿ- Hijab Row : ಹಿಜಾಬ್ ಧರಿಸಿ ಅಮಾನತಾಗಿದ್ದ 6 ವಿದ್ಯಾರ್ಥಿನಿಯರು ಇಂದು ಮರಳಿ ಕಾಲೇಜಿಗೆ!

ಹೌದು, ಬೆಂಗಳೂರಿನ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೀಗ ಕೆಐಎನಲ್ಲಿ ದೇಶಿಯ ಮತ್ತು ವಿದೇಶಿ ಪ್ರಯಾಣಿಕರಿಗಾಗಿ ಎರಡು ಭಿನ್ನ-ವಿಭಿನ್ನ ಐಶಾರಾಮಿಯ ಎರಡು ಹೊಸ ಲಾಂಝ್ ಗಳನ್ನು ಅನಾವರಣ‌ ಮಾಡಿದೆ.‌ ವಿಶ್ವದಲ್ಲೇ ಅತ್ಯುತ್ತಮ ಲಾಂಝ್ ಇದಾಗಿದ್ದು ಐಷಾರಾಮಿ ಸೌಲಭ್ಯಗಳು ಈ ಲಾಂಝ್ ಗಳಲ್ಲಿ ಲಭ್ಯವಿವೆ‌. ಬೆಂಗಳೂರಿನ ಟ್ರಂಕ್ ಡಯಲ್ ನಂಬರ್ 180 ಹೆಸರನ್ನೇ ಈ ಲಾಂಝ್ ಗೆ ಇಡಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ- 'ಪ್ರಭುತ್ವ ನಡೆಸುತ್ತಿರುವ ನಿರಂತರ ದಾಳಿಯಿಂದ ದೇಶದ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ'-ಸಿದ್ಧರಾಮಯ್ಯ

ಎರಡು ಹೊಚ್ಚ ಹೊಸ ಲಾಂಝ್ ಗಳಲ್ಲಿ ಅತ್ಯಾಕರ್ಷಕ ವಿಶ್ರಾಂತಿ ಧಾಮಗಳು, ಸೆಲಬ್ರೆಟಿ ಷೆಫ್ ಅಭಿಜಿತ್ ಸಹಾ ನೇತೃತ್ವದಲ್ಲಿ ತಯಾರಾಗೋ ತರಹೇವಾರಿ ರಾಸಾಯನಿಕ ಮುಕ್ತ ಊಟ. ತಿಂಡಿ ತಿನಿಸಿಗಳ ಜೊತೆಗೆ ಗ್ರಂಥಾಲಯವಿದೆ. ಹೀಗೆ ಹತ್ತು ಹಲವು ಸೌಲಭ್ಯ ನೀಡುವ ಮೂಲಕ ವಿಶ್ವದಲ್ಲೇ ಯಾವುದೇ ವಿಮಾನ ನಿಲ್ದಾಣದಲ್ಲೂ ಇರದಂತಹ ಸೌಲಭ್ಯ ಕಲ್ಪಿಸಲಾಗಿದೆ. ವಿಶೇಷ ಸೀಟಿಂಗ್ ಝೋನ್ಗಳು, ಮದ್ಯದಂಗಡಿ, ವಿಶ್ರಾಂತಿಗೆ ಸುಸಜ್ಜಿತ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ಕಡೆ ಹಸಿರುಮಯ ಮಾಡುವ ಮೂಲಕ ಉದ್ಯಾನಗರಿ ಬೆಂಗಳೂರಿನ ಕೀರ್ತಿ ಪತಾಕೆ  ಹೆಚ್ಚಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News