Emergency Fund: ಜೀವನದಲ್ಲಿ ಯಾವಾಗ ಬೇಕಾದರೂ ಆರ್ಥಿಕ ಮುಗ್ಗಟ್ಟು ಎದುರಾಗಬಹುದು, ಹೀಗೆ ಸಿದ್ಧತೆ ಮಾಡಿಕೊಳ್ಳಿ

Emergency Fund: ಬಂಡವಾಳ ಮಾರುಕಟ್ಟೆಯಲ್ಲಿನ ನಷ್ಟ, ಉದ್ಯೋಗ ನಷ್ಟ, ವೈದ್ಯಕೀಯ ತುರ್ತುಸ್ಥಿತಿಯಂತಹ ಯಾವುದೇ ಹಠಾತ್ ತುರ್ತು ಪರಿಸ್ಥಿತಿಯನ್ನು ಎದುರಿಸಲು ತುರ್ತು ನಿಧಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಎಂದಿಗೂ ಕೂಡ ಉತ್ತಮ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.  

Written by - Nitin Tabib | Last Updated : May 27, 2022, 05:56 PM IST
  • ಶ್ರೀಸಾಮಾನ್ಯರ ಜೀವನದಲ್ಲಿ ಹಣದ ವಿಚಾರ ಬಂದಾಗ, ತುರ್ತು ಪರಿಸ್ಥಿತಿ ಯಾವಾಗ ಬೇಕಾದರೂ ಕೂಡ ಎದುರಾಗಬಹುದು.
  • ಹೀಗಾಗಿ ಅದರ ಬಗ್ಗೆ ಮುಂಚಿತವಾಗಿ ಜಾಗ್ರತರಾಗಿ, ಸಿದ್ಧತೆ ಮಾಡಿಕೊಳ್ಳುವುದು ಯಾವಾಗಲು ಉತ್ತಮ.
  • ಬಂಡವಾಳ ಮಾರುಕಟ್ಟೆ ನಷ್ಟ, ಉದ್ಯೋಗ ನಷ್ಟ, ವೈದ್ಯಕೀಯ ತುರ್ತುಸ್ಥಿತಿ ಮುಂತಾದ ಯಾವುದೇ ಹಠಾತ್ ತುರ್ತು ಪರಿಸ್ಥಿತಿಯನ್ನು ಎದುರಿಸಲು ಪ್ರತಿಯೊಬ್ಬರೂ ತುರ್ತು ನಿಧಿಯನ್ನು ಇಟ್ಟುಕೊಳ್ಳಬೇಕು
Emergency Fund: ಜೀವನದಲ್ಲಿ ಯಾವಾಗ ಬೇಕಾದರೂ ಆರ್ಥಿಕ ಮುಗ್ಗಟ್ಟು ಎದುರಾಗಬಹುದು, ಹೀಗೆ ಸಿದ್ಧತೆ ಮಾಡಿಕೊಳ್ಳಿ title=
Emergency Fund

Emergency Fund: ಶ್ರೀಸಾಮಾನ್ಯರ ಜೀವನದಲ್ಲಿ ಹಣದ ವಿಚಾರ ಬಂದಾಗ, ತುರ್ತು ಪರಿಸ್ಥಿತಿ ಯಾವಾಗ ಬೇಕಾದರೂ ಕೂಡ ಎದುರಾಗಬಹುದು. ಹೀಗಾಗಿ ಅದರ ಬಗ್ಗೆ ಮುಂಚಿತವಾಗಿ ಜಾಗ್ರತರಾಗಿ, ಸಿದ್ಧತೆ ಮಾಡಿಕೊಳ್ಳುವುದು ಯಾವಾಗಲು ಉತ್ತಮ. ಬಂಡವಾಳ ಮಾರುಕಟ್ಟೆ ನಷ್ಟ, ಉದ್ಯೋಗ ನಷ್ಟ, ವೈದ್ಯಕೀಯ ತುರ್ತುಸ್ಥಿತಿ ಮುಂತಾದ ಯಾವುದೇ ಹಠಾತ್ ತುರ್ತು ಪರಿಸ್ಥಿತಿಯನ್ನು ಎದುರಿಸಲು ಪ್ರತಿಯೊಬ್ಬರೂ ತುರ್ತು ನಿಧಿಯನ್ನು ಇಟ್ಟುಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಏನೇ ಆಗಲಿ, ಕಳೆದ 2 ರಿಂದ 2.5 ವರ್ಷಗಳಿಂದ ಕೊರೊನಾ ವೈರಸ್ ಮಹಾಮಾರಿ ಜನಸಾಮಾನ್ಯರ ಬದುಕು ಹಲವು ರೀತಿಯಲ್ಲಿ ಬದಲಾಗಿದೆ. ಅಂದಿನಿಂದ ತುರ್ತು ನಿಧಿಗಳ ಪ್ರಾಮುಖ್ಯತೆ ಹೆಚ್ಚಿದೆ. ಅನೇಕ ಜನರು ಈಗ ಈ ಬಗ್ಗೆ ಯೋಚಿಸಲು ಪ್ರಾರಂಭಿಸಿದ್ದಾರೆ.

ತಜ್ಞರು ಹೇಳುವ ಪ್ರಕಾರ, ಎಮೆರ್ಜೆನ್ಸಿ ಫಂಡ್ ಅಂದರೆ, ದೀರ್ಘಾವಧಿಗೆ ನಿಮ್ಮ ಹಣ ಬ್ಲಾಕ್ ಆಗದೆ ಇರುವ ಜಾಗದಲ್ಲಿ ಹಣದ ಹೂಡಿಕೆ ಎಂದರ್ಥ. ತುರ್ತು ಸಂದರ್ಭದಲ್ಲಿ ಲಿಕ್ವಿಡಿಟಿ ಸಮಸ್ಯೆ ಎದುರಾಗಬಾರದು ಎಂಬುದು ಎರಡನೇ ಉದ್ದೇಶ. ಹೀಗಿರುವಾಗ ಪ್ರಸ್ತುತ ಪರಿಸ್ಥಿತಿಯಲ್ಲಿ ಹೊಸ ಹೂಡಿಕೆದಾರರಿಗೆ ಡೆಟ್ ಫಂಡ್ ಗಳಲ್ಲಿ ಎಸ್ಐಪಿ ಅಂದರೆ ಸುವ್ಯವಸ್ಥಿತ ಹೂಡಿಕೆಯ ಯೋಜನೆಗಳ  ಮೂಲಕ ಹಣ ಹೂಡಿಕೆ ಮಾಡಬಹುದು. ಇವುಗಳಲ್ಲಿ ಓವರ್ ನೈಟ್ ಫಂಡ್, ಅಲ್ಟ್ರ ಶಾರ್ಟ್ ಟರ್ಮ್ ಹಾಗೂ ಶಾರ್ಟ್ ತರಂ ಫಂಡ್ ಉತ್ತಮ ಆಯ್ಕೆಗಳಾಗಿವೆ. ಇನ್ನೊಂದೆಡೆ ಲಿಕ್ವಿಡ್ ಫಂಡ್ ಗಳು ಕೂಡ ಉತ್ತಮ ಆಯ್ಕೆಗಳಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಷೇರು ಮಾರುಕಟ್ಟೆಯ ಅಂದಾಜು ವ್ಯಕ್ತಪಡಿಸುವುದು ತುಂಬಾ ಕ್ಲಿಷ್ಟಕರದ ಸಂಗತಿ. ಹೀಗಿರುವಾಗ ಸುರಕ್ಷಿತ ಹೂಡಿಕೆಯ ಆಯ್ಕೆಮಾಡುವುದು ಒಳ್ಳೆಯ ಸಂಗತಿ.

1. ಓವರ್ ನೈಟ್ ಫಂಡ್  - ಇದೊಂದು ಡೆಟ್ ಫಂಡ್ ಆಗಿದೆ. ಒಂದೇ ದಿನದಲ್ಲಿ ಮ್ಯಾಚ್ಯುರ್ ಆಗುವ ಬಂದ್ ಗಳಲ್ಲಿ ಹೂಡಿಕೆ ಮಾಡುತ್ತದೆ. ಪ್ರತಿಯೊಂದು ವಹಿವಾಟಿನ ದಿನದ ಆರಂಭದಲ್ಲಿ ಬಂದ್ ಗಳನ್ನು ಖರೀದಿಸಲಾಗುತ್ತದೆ ಮತ್ತು ಇದು ಎರಡನೇ ವಹಿವಾಟಿನ ದಿನ ಮ್ಯಾಚ್ಯೂರ್ ಆಗುತ್ತದೆ. ಸುರಕ್ಷಿತ ಹಾಗೂ ಸುನಿಶ್ಚಿತ ಆದಾಯ ಪಡೆಯಬೇಕೆನ್ನುವವರಿಗೆ  ಓವರ್ ನೈಟ್ ಫಂಡ್ ಒಂದು ಉತ್ತಮ ಆಯ್ಕೆಯಾಗಿದೆ. ಇದು ಒಂದೇ ದಿನದಲ್ಲಿ ಮ್ಯಾಚೂರ್ ಆಗುತ್ತದೆ. ಒಂದೇ ದಿನದಲ್ಲಿ ಮ್ಯಾಚೂರ್ ಆಗುವುದರಿಂದ ಶೇ.100ರಷ್ಟು ಹಣ ಕೋಲ್ಯಾಟರಲೈಸ್ದ್ ಬಾರೋಯಿಂಗ್ ಹಾಗೂ ಲೆಂಡಿಂಗ್ ಆಬ್ಲಿಗೆಶನ್  ಮಾರುಕಟ್ಟೆಯಲ್ಲಿ ಹೂಡಿಕೆಯಾವುದರ ಹಿನ್ನೆಲೆ ರಿಸ್ಕ್ ಕೂಡ ಕಡಿಮೆ ಇರುತ್ತದೆ. ಒಂದೇ ದಿನದ ಮ್ಯಾಚುರಿಟಿ ಇರುವ ಕಾರಣ ಇದರಲ್ಲಿ ಆದಾಯ ಕೂಡ ಸ್ವಲ್ಪ ಕಮ್ಮಿ ಬರುತ್ತದೆ.

2. ಅಲ್ಟ್ರಾ ಶಾರ್ಟ್ ಟರ್ಮ್ ಫಂಡ್ -  ಈ ಫಂಡ್ ಗಳು ಡೆಟ್ ಹಾಗೂ ಮನಿ ಮಾರ್ಕೆಟ್ ಇನ್ಸ್ಟ್ರುಮೆಂಟ್ ಗಳಲ್ಲಿ 3 ತಿಂಗಳ ಅವಧಿಗೆ ಹೂಡಿಕೆ ಮಾಡುತ್ತವೆ. ಇವುವಳಲ್ಲಿ ವಿವಿಧ ಫಂಡ್ ಗಳ ಆದಾಯವನ್ನು ಪರಿಶೀಲಿಸಿದರೆ 1 ವರ್ಷದಲ್ಲಿ ಹೂಡಿಕೆದಾರರಿಗೆ ಶೇ.9 ರಷ್ಟು ರಿಟರ್ನ್ ಸಿಗುವ ಸಾಧ್ಯತೆ ಇದೆ.  

3. ಶಾರ್ಟ್ ಡ್ಯೂರೆಶನ್ ಫಂಡ್ ಗಳು  - ಇವುಗಳಲ್ಲಿ ಸಾಮಾನ್ಯವಾಗಿ 6 ತಿಂಗಳಿಂದ 1 ವರ್ಷದ ಅವಧಿಗೆ ಹಣ ಹೂಡಿಕೆ ಮಾಡಲಾಗುತ್ತದೆ. ಇವುಗಳಲ್ಲಿನ ವಿವಿಧ ಫಂಡ್ ಗಳ ರಿಟರ್ನ್ ಅನ್ನು ಪರಿಶೀಲಿಸಿದರೆ, ಇವುಗಳಲ್ಲಿ ಶೇ.10 ರಿಂದ ಶೇ.12 ರಷ್ಟು ಆದಾಯ ಸಿಗುತ್ತದೆ.  

4. ಲಿಕ್ವಿಡ್ ಫಂಡ್  - ಲಿಕ್ವಿಡ್ ಫಂಡ್ ಉಳಿತಾಯ ಖಾತೆಯ ರೀತಿ ಕಾರ್ಯನಿರ್ವಹಿಸುತ್ತವೆ. ತುರ್ತು ಸಂದರ್ಭಗಳಲ್ಲಿ ನೀವು ಇವುಗಳಿಂದ ಹಣ ಕೂಡ ವಾಪಸ್ ಪಡೆಯಬಹುದು. ಈ ಫಂಡ್ ಗಳು ಓಪನ್ ಎಂಡೆಡ್ ಫಂಡ್ ಗಳಾಗಿರುತ್ತವೆ. ಇವು ಡೆಟ್ ಹಾಗೂ ಮನಿ ಮಾರ್ಕೆಟ್ ಇನ್ಸ್ಟ್ರುಮೆಂಟ್ ನಲ್ಲಿ 30 ದಿನಗಳ ಅವಧಿಯಿಂದ 91 ದಿನಗಳ ಅವಧಿಗೆ ಹೂಡಿಕೆ ಮಾಡುತ್ತವೆ.

5. ಒಂದು ವರ್ಷದ ಅವಧಿಯ ಸ್ಥಿರ ಠೇವಣಿ - 1 ವರ್ಷದ ಅವಧಿಗಾಗಿ ಸ್ಥಿರ ಠೇವಣಿ ಆಯ್ಕೆ ಕೂಡ ಒಂದು ಉತ್ತಮ ವಿಕಲ್ಪವಾಗಿದೆ. ಹೆಚ್ಚುವರಿ ಬ್ಯಾಂಕ್ ಗಳಲ್ಲಿ ಕನಿಷ್ಠ FD ಮೊತ್ತ ರೂ.1000 ಇದ್ದರೆ, ಗರಿಷ್ಟ ಠೇವಣಿಗೆ ಯಾವುದೇ ಮಿತಿ ಇಲ್ಲ.

ಇದನ್ನೂ ಓದಿ-ನೀವು ಆಧಾರ್ ಕಾರ್ಡ್ ಮೂಲಕ ಹಣ ಗಳಿಸಬಹುದು! ಹೇಗೆ ಇಲ್ಲಿದೆ

6. ರೆಕರಿಂಗ್ ಡಿಪಾಸಿಟ್ - ಪೋಸ್ಟ್ ಆಫಿಸ್ RD ಮೇಲೆ ಶೇ.5.8 ರಷ್ಟು ಬಡ್ಡಿ ಸಿಗುತ್ತದ್ದರೆ, ವಿವಿಧ ಬ್ಯಾಂಕ್ ಗಳಲ್ಲಿ  ಶೇ.5 ರಿಂದ ಶೇ.6 ರಷ್ಟು ಬಡ್ಡಿ ಲಭಿಸುತ್ತದೆ. ಒಂದು ವರ್ಷದ ಅವಧಿಯ RD ಅನ್ನು ನೀವು 10 ವರ್ಷಗಳವರೆಗೆ ಮುಂದುವರೆಸಬಹುದು.

ಇದನ್ನೂ ಓದಿ-Banking Rules change : ಇಂದಿನಿಂದ ಬ್ಯಾಂಕಿಂಗ್ ನಿಯಮಗಳಲ್ಲಿ ಬದಲಾವಣೆ : ನಗದು ವಹಿವಾಟಕ್ಕೆ ಪ್ಯಾನ್-ಆಧಾರ್ ಕಡ್ಡಾಯ!

(ಸೂಚನೆ - ಜೀ ಕನ್ನಡ ನ್ಯೂಸ್ ಯಾವುದೇ ರೀತಿಯ ಬಂಡವಾಳ  ಹೂಡಿಕೆಗೆ ಸಲಹೆಗಳನ್ನು ನೀಡುವುದಿಲ್ಲ. ಹೂಡಿಕೆ ಮಾಡುವ ಮೊದಲು ನಿಮ್ಮ ಸ್ಥಳೀಯ ಮಟ್ಟದಲ್ಲಿ ಹಾಗೂ ನಿಮ್ಮ ಆರ್ಥಿಕ ಸಲಹೆಗಾರರ ಜೊತೆಗೆ ಚರ್ಚಿಸಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News