ನವದೆಹಲಿ : ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಮಾನ್ಯತೆ ಪಡೆದ ಪರೀಕ್ಷಾ ಸೌಲಭ್ಯಗಳಲ್ಲಿ ಗ್ರಾಹಕರು ಈಗ ತಮ್ಮ ಹಾಲ್‌ಮಾರ್ಕ್ ಇಲ್ಲದ ಚಿನ್ನದ ಆಭರಣಗಳನ್ನು ಶುದ್ಧತೆಯನ್ನು ಪರೀಕ್ಷಿಸಬಹುದು (Halmark Gold).
ಈ ಕುರಿತು ಶುಕ್ರವಾರ ಸರ್ಕಾರದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. '4 ಚಿನ್ನದ ಆಭರಣಗಳ ಪರೀಕ್ಷೆಗೆ 200 ರೂ. ಪಾವತಿಸಬೇಕಾಗುತ್ತದೆ (Halmark Gold). ಆದರೆ 5 ಅಥವಾ ಅದಕ್ಕಿಂತ ಹೆಚ್ಚಿನ ಆಭರಣಗಳಿಗೆ ಪ್ರತಿ ಯೂನಿಟ್‌ಗೆ 45 ರೂ. ಶುಲ್ಕ ವಿಧಿಸಲಾಗುತ್ತದೆ. ಕಡ್ಡಾಯ ಹಾಲ್‌ಮಾರ್ಕಿಂಗ್ ಅನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು, ಪ್ರತಿದಿನ 3 ಲಕ್ಷ ಚಿನ್ನದ ವಸ್ತುಗಳನ್ನು HUID ( ಹಾಲ್‌ಮಾರ್ಕ್ ಯೂನಿಕ್ ಐಡೆಂಟಿಫಿಕೇಶನ್) ಮೂಲಕ ದೃಢೀಕರಿಸಲಾಗುತ್ತಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ : DL ಸಂಬಂಧಿಸಿದ ಈ ಮಹತ್ವದ ಕೆಲಸ ನಾಳೆಯೊಳಗೆ ಪೂರ್ಣಗೊಳಿಸಿ, ಇಲ್ಲದಿದ್ದರೆ ಸಮಸ್ಯೆ ತಪ್ಪಿದಲ್ಲ
ಗ್ರಾಹಕರು ಪರೀಕ್ಷಾ ವರದಿಯನ್ನು ಪಡೆಯಬಹುದು :
'ಬಿಐಎಸ್ (BIS) ಮಾನ್ಯತೆ ಪಡೆದ ಯಾವುದೇ ಅಸ್ಸೇಯಿಂಗ್ ಮತ್ತು ಹಾಲ್‌ಮಾರ್ಕಿಂಗ್ ಸೆಂಟರ್‌ಗಳಲ್ಲಿ (AHCs) ತನ್ನ ಹಾಲ್‌ಮಾರ್ಕ್ ಮಾಡದ ಚಿನ್ನದ ಆಭರಣಗಳ ಶುದ್ಧತೆಯನ್ನು ಪರೀಕ್ಷಿಸಲು ಸಾಮಾನ್ಯ ಗ್ರಾಹಕನಿಗೆ ಅವಕಾಶ ಕಲ್ಪಿಸಲಾಗಿದೆ'. AHC ಸಾಮಾನ್ಯ ಗ್ರಾಹಕರಿಂದ ಚಿನ್ನದ ಆಭರಣಗಳನ್ನು ಆದ್ಯತೆಯ ಆಧಾರದ ಮೇಲೆ ಪರೀಕ್ಷಿಸಬೇಕು ಮತ್ತು ಗ್ರಾಹಕರಿಗೆ ಪರೀಕ್ಷಾ ವರದಿಯನ್ನು ಒದಗಿಸಬೇಕು.
ಕೇರ್ ಆ್ಯಪ್‌ನಲ್ಲಿ ಪರಿಶೀಲಿಸಬಹುದು :
"ಗ್ರಾಹಕರಿಗೆ ನೀಡಲಾದ ಪರೀಕ್ಷಾ ವರದಿಯು ಗ್ರಾಹಕರಿಗೆ ಅವರ ಆಭರಣಗಳ ಶುದ್ಧತೆಯ ಬಗ್ಗೆ ತಿಳಿಸುತ್ತದೆ (how to check gold purity) ಮತ್ತು ಗ್ರಾಹಕರು ತಮ್ಮ ಬಳಿ ಇರುವ ಆಭರಣಗಳನ್ನು ಮಾರಾಟ ಮಾಡಲು ಬಯಸಿದರೆ ಇದು ಅವರಿಗೆ ಉಪಯುಕ್ತವಾಗಿರುತ್ತದೆ." ಗ್ರಾಹಕರು ಖರೀದಿಸಿದ HUID ಸಂಖ್ಯೆಯೊಂದಿಗೆ ಹಾಲ್‌ಮಾರ್ಕ್ ಮಾಡಲಾದ ಚಿನ್ನದ ಆಭರಣಗಳ ದೃಢೀಕರಣ ಮತ್ತು ಶುದ್ಧತೆಯನ್ನು BIS CARE ಅಪ್ಲಿಕೇಶನ್ ಬಳಸಿ ಪರಿಶೀಲಿಸಬಹುದು. 'ವೆರಿಫೈ HUID', ಇದನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು.
ಇದನ್ನೂ ಓದಿ : RBI On Paytm Payments Bank: ಪೇಟಿಎಂ ಬ್ಯಾಂಕ್ ಗೆ ಹೊಸ ಗ್ರಾಹಕರ ಸೇರ್ಪಡೆ ನಿಷೇಧಿಸಿದ RBI
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.