/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಚಿನ್ನಾಭರಣಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.. ಚಿನ್ನವನ್ನು (Gold) ಖರೀದಿಸುವಾಗ, ಜನರು ಸಾಮಾನ್ಯವಾಗಿ ಇದು ಶುದ್ಧ ಚಿನ್ನ ಹೌದೋ/ಅಲ್ಲವೇ ಎಂದು ಭಯಪಡುತ್ತಾರೆ. ಚಿನ್ನದಲ್ಲಿ ಕಲಬೆರಕೆಯಾದರೆ ಅದರ ಹೊಳಪು ಹೋಗುತ್ತದೆ. ಜೊತೆಗೆ ಹಣವನ್ನೂ ಕಳೆದುಕೊಳ್ಳಬೇಕಾಗುತ್ತದೆ.

ವಿವಾಹ ಮತ್ತು ಹಬ್ಬ ಹರಿದಿನಗಳಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತದೆ. ಇತ್ತೀಚಿನ ದಿನಗಳಲ್ಲಿ ಚಿನ್ನವು 1 ತೊಲಕ್ಕೆ (10 ಗ್ರಾಂ) 50 ಸಾವಿರ ರೂಪಾಯಿಗಿಂತ ಹೆಚ್ಹಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಂಗಡಿಯವರು ಕೊಟ್ಟ ಚಿನ್ನದಲ್ಲಿ (Gold Jewellery) ಸ್ವಲ್ಪವಾದರೂ ಕಲಬೆರಕೆ ಮಾಡಿದರೆ ಕೆಲವೇ ಕ್ಷಣಗಳಲ್ಲಿ ಸಾವಿರಾರು ರೂಪಾಯಿ ವಂಚಿಸಬಹುದು. 

ಇದನ್ನೂ ಓದಿ:10 Rupee Coin: 10 ರೂಪಾಯಿಯ ಯಾವ ನಾಣ್ಯ ಮಾನ್ಯವಾಗಿದೆ? ಗೊಂದಲ ನಿವಾರಿಸಿದ ಸರ್ಕಾರ

ಇದಕ್ಕಾಗಿ, ಚಿನ್ನವನ್ನು ತಾಮ್ರ, ಸತು ಮತ್ತು ಬೆಳ್ಳಿಯೊಂದಿಗೆ ಬೆರೆಸಲಾಗುತ್ತದೆ. ಈ ಕಲಬೆರಕೆಯನ್ನು ಯಾರಿಂದಲೂ ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗದ ರೀತಿಯಲ್ಲಿ ಸೂಕ್ಷ್ಮವಾಗಿ ಮಾಡಲಾಗುತ್ತದೆ.

1.ಕೆಲವು ಮನೆಮದ್ದುಗಳ ಮೂಲಕ ನಿಮ್ಮ ಚಿನ್ನ ಎಷ್ಟು ಶುದ್ಧವಾಗಿದೆ ಎಂಬುದನ್ನು ನೀವು ಸುಲಭವಾಗಿ ಗುರುತಿಸಬಹುದು (ಚಿನ್ನದ ನೈಜತೆಯನ್ನು ಹೇಗೆ ಪರಿಶೀಲಿಸುವುದು). ಇದಕ್ಕಾಗಿ ನೀವು ಅಡುಗೆಮನೆಯಲ್ಲಿ ಇರುವ ವಿನೆಗರ್ (vinegar) ಅನ್ನು ಬಳಸಬಹುದು. ಚಿನ್ನದ ಆಭರಣಗಳ ಮೇಲೆ ಕೆಲವು ಹನಿ ವಿನೆಗರ್ ಹಾಕಲು ಪ್ರಯತ್ನಿಸಿ. ಅದರ ಬಣ್ಣದಲ್ಲಿ ಏನಾದರೂ ಬದಲಾವಣೆಯಾಗಿದ್ದರೆ ಅದು ನಕಲಿ ಎಂದು ಅರ್ಥಮಾಡಿಕೊಳ್ಳಿ ಮತ್ತು ಯಾವುದೇ ಬದಲಾವಣೆ ಇಲ್ಲದಿದ್ದರೆ ಅದು ಶುದ್ಧ ಬಂಗಾರ ಎಂದು ಅರ್ಥಮಾಡಿಕೊಳ್ಳಿ.

2.ಚಿನ್ನವನ್ನ ಬೆವರಿನೊಂದಿಗೆ ಸಂಪರ್ಕದಲ್ಲಿಟ್ಟುಕೊಳ್ಳುವುದು ಇನ್ನೊಂದು ಮಾರ್ಗವಾಗಿದೆ. ದೇಹವು ಬೆವರಿನೊಂದಿಗೆ ಸಂಪರ್ಕಕ್ಕೆ ಬಂದಾಗ ಚಿನ್ನವು ನಾಣ್ಯದಂತೆ ಕೆಟ್ಟ ವಾಸನೆಯನ್ನು ನೀಡಲು ಪ್ರಾರಂಭಿಸಿದರೆ, ಅದು ಕಲಬೆರಕೆಯಾಗಿದೆ ಎಂದು ಅರ್ಥಮಾಡಿಕೊಳ್ಳಿ. ಮತ್ತೊಂದೆಡೆ, ಶುದ್ಧ ಚಿನ್ನವು ಯಾವುದೇ ರೀತಿಯ ವಾಸನೆಯನ್ನು ಹೊಂದಿಲ್ಲ.

3.ಮೂರನೇ ಮಾರ್ಗವೆಂದರೆ ನೀವು ಚಿನ್ನದ ಆಭರಣಗಳನ್ನು ಕೆರೆದು ಅದರ ಮೇಲೆ ಕೆಲವು ಹನಿ ನೈಟ್ರಿಕ್ ಆಮ್ಲವನ್ನು (Nitric Acid) ಹಾಕಿ ಅದರ ಬಣ್ಣ ಹಸಿರು ಬಣ್ಣಕ್ಕೆ ಬದಲಾದರೆ ಚಿನ್ನವು ನಕಲಿಯಾಗಿದೆ. ನಿಜವಾದ ಚಿನ್ನವು ಬಣ್ಣವನ್ನು ಬದಲಾಯಿಸುವುದಿಲ್ಲ. ಆದಾಗ್ಯೂ, ಈ ಪರೀಕ್ಷೆಯಲ್ಲಿ ನೀವು ಜಾಗರೂಕರಾಗಿರಬೇಕು ಏಕೆಂದರೆ ಆಮ್ಲವು ನಿಮಗೆ ಹಾನಿ ಮಾಡುತ್ತದೆ.

4.ನಾಲ್ಕನೆಯ ಮಾರ್ಗವೆಂದರೆ ನೀರನ್ನು ಬಳಸುವುದು. ಒಂದು ಬಕೆಟ್‌ನಲ್ಲಿ ನೀರು (Water) ತುಂಬಿಸಿ ಅದರಲ್ಲಿ ಚಿನ್ನದ ಆಭರಣವನ್ನು ಹಾಕಿ. ಆ ಆಭರಣ ಮುಳುಗಿದರೆ, ಚಿನ್ನ ನಿಜ ಎಂದು ಅರ್ಥಮಾಡಿಕೊಳ್ಳಿ. ಮತ್ತೊಂದೆಡೆ, ಅದು ಸ್ವಲ್ಪ ಸಮಯದವರೆಗೆ ತೇಲುತ್ತಿದ್ದರೆ, ಚಿನ್ನವು ನಕಲಿ ಎಂದು ಅರ್ಥಮಾಡಿಕೊಳ್ಳಿ. ವಾಸ್ತವವಾಗಿ, ಚಿನ್ನವು ಎಷ್ಟು ಹಗುರವಾಗಿರಲಿ ಮತ್ತು ಎಷ್ಟು ಕಡಿಮೆ ಪ್ರಮಾಣದಲ್ಲಿರಲಿ, ಅದು ಯಾವಾಗಲೂ ನೀರಿನಲ್ಲಿ ಮುಳುಗುತ್ತದೆ.

ಇದನ್ನೂ ಓದಿ: 'ಜೇಮ್ಸ್‌' ಬಂದ್ರು ಜೇಮ್ಸ್..! ಪರಭಾಷೆಗಳಲ್ಲೂ ಹವಾ ಎಬ್ಬಿಸಿದ ಪುನೀತ್ ಸಿನಿಮಾ ಟೀಸರ್‌

ಚಿನ್ನದ ಕಲಬೆರಕೆಯನ್ನು ತಪ್ಪಿಸಲು, ಜನರು ಯಾವಾಗಲೂ ಐಎಸ್‌ಐನ ವಿಶಿಷ್ಟ ಲಕ್ಷಣವನ್ನು ನೋಡಿದ ನಂತರವೇ ಚಿನ್ನವನ್ನು ಖರೀದಿಸಬೇಕು. ಅದರ ಮೇಲೆ ಈ ಹಾಲ್‌ಮಾರ್ಕ್ ಇದ್ದರೆ ಚಿನ್ನವು ಶುದ್ಧವಾಗಿದೆ ಎಂದರ್ಥ. ಇದರೊಂದಿಗೆ, ಬ್ರಾಂಡೆಡ್ ಅಂಗಡಿಯಿಂದ ಮಾತ್ರ ಚಿನ್ನವನ್ನು ಖರೀದಿಸಲು ಪ್ರಯತ್ನಿಸಿ. ಅಲ್ಲಿ ಚಿನ್ನ ಖರೀದಿಗೆ ಅಗತ್ಯ ದಾಖಲೆಗಳನ್ನು ನೀಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಚಿನ್ನಕ್ಕೆ ಹಾನಿಯಾದರೆ ನೀವು ಪರಿಹಾರವನ್ನು ಸಹ ಪಡೆಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Gold is fake or real, with these 4 measures, you can check in a pinch; Learn How
News Source: 
Home Title: 

ಬಂಗಾರ ಅಸಲಿಯೋ/ನಕಲಿಯೋ? ಈ 4 ಸುಲಭ ತಂತ್ರಗಳ ಮೂಲಕ ಚಿಟಿಕಿ ಹೊಡೆಯುವಷ್ಟರಲ್ಲಿ ಕಂಡುಹಿಡಿಯಬಹುದು

ಬಂಗಾರ ಅಸಲಿಯೋ/ನಕಲಿಯೋ? ಈ 4 ಸುಲಭ ತಂತ್ರಗಳ ಮೂಲಕ ಚಿಟಿಕಿ ಹೊಡೆಯುವಷ್ಟರಲ್ಲಿ ಕಂಡುಹಿಡಿಯಬಹುದು
Caption: 
ಚಿನ್ನ
Yes
Is Blog?: 
No
Tags: 
Facebook Instant Article: 
Yes
Highlights: 

ಚಿನ್ನದ ಕಲಬೆರಕೆ ಹೇಗೆ?

ವಿನೆಗರ್ ನಿಂದ ಕಲಬೆರಕೆಯನ್ನು ಪರಿಶೀಲಿಸಬಹುದು

ಈ ಸುಲಭ ತಂತ್ರಗಳ ಮೂಲಕ  ಕಂಡುಹಿಡಿಯಬಹುದು

Mobile Title: 
ಬಂಗಾರ ಅಸಲಿಯೋ/ನಕಲಿಯೋ? ಈ 4 ಸುಲಭ ತಂತ್ರಗಳ ಮೂಲಕ ಚಿಟಿಕಿ ಹೊಡೆಯುವಷ್ಟರಲ್ಲಿ ಕಂಡುಹಿಡಿಯಬಹುದು
Zee Kannada News Desk
Publish Later: 
No
Publish At: 
Friday, February 11, 2022 - 19:34
Created By: 
Chethana Devarmani
Updated By: 
Chethana Devarmani
Published By: 
Chethana Devarmani
Request Count: 
2
Is Breaking News: 
No