Hyundai 7 Seater SUV: ಹ್ಯುಂಡೈ ಕ್ರೆಟಾ ಕಾಂಪ್ಯಾಕ್ಟ್ SUV ಆಗಿದ್ದು, ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟವಾಗುತ್ತಿದೆ. ಆದರೆ ಇದು 5 ಆಸನಗಳನ್ನು ಒಳಗೊಂಡಿದೆ. ನೀವು 7 ಸೀಟರ್ ಹ್ಯುಂಡೈಯನ್ನು ಖರೀದಿಸಲು ಬಯಸಿದರೆ, ಅಲ್ಕಾಜರ್ ಬಗ್ಗೆ ಯೋಚಿಸಬಹುದು. ಇದು 7 ಸೀಟರ್ ಕಾನ್ಫಿಗರೇಶನ್ ಮಾದರಿದ್ದಾಗಿದೆ. ಅಲ್ಕಾಜರ್ ನ ಬಹಳಷ್ಟು ವಿನ್ಯಾಸ ಅಂಶಗಳು ಹ್ಯುಂಡೈ ಕ್ರೆಟಾಗೆ ಹೊಂದಿಕೆಯಾಗುತ್ತವೆ. ಅದು ಹೆಡ್‌ಲ್ಯಾಂಪ್‌ಗಳು, DRL ಗಳು, ಒಳಾಂಗಣದಲ್ಲಿನ ಸ್ಟೀರಿಂಗ್, ಸೆಂಟರ್ ಕನ್ಸೋಲ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅಥವಾ AC ನಿಯಂತ್ರಣಗಳು ಇತ್ಯಾದಿಗಳನ್ನು ಹೊಂದಿದೆ. ಇವೆಲ್ಲವೂ ಬಹುತೇಕ ಕ್ರೆಟಾದಂತೆ ಕಾಣುತ್ತವೆ. ಆದಾಗ್ಯೂ, ಅನೇಕ ಹೆಚ್ಚುವರಿ ವೈಶಿಷ್ಟ್ಯಗಳು ಸಹ ಇದರಲ್ಲಿ ಲಭ್ಯವಿದೆ
ಭಾರಿ ಬೆಲೆ ವ್ಯತ್ಯಾಸ: ಕ್ರೆಟಾ ಮತ್ತು ಅಲ್ಕಾಜರ್ ನಡುವೆ ಭಾರಿ ಬೆಲೆ ವ್ಯತ್ಯಾಸವಿದೆ. ಅಲ್ಕಾಜರ್ ಬೆಲೆ 16,77,500 - 21,12,600 ರೂ. ಆದರೆ ಕ್ರೆಟಾ ಬೆಲೆ 10,87,000 - 19,20,199 ರೂ. ಆಗಿದೆ. ಎರಡರ ಬೇಸ್ ವೆರಿಯಂಟ್ ನಲ್ಲಿ ಸುಮಾರು 6 ಲಕ್ಷ ರೂಪಾಯಿ ವ್ಯತ್ಯಾಸವಿದ್ದು, ಟಾಪ್ ವೆರಿಯಂಟ್ ನಲ್ಲಿ ಸುಮಾರು 2 ಲಕ್ಷ ರೂಪಾಯಿ ವ್ಯತ್ಯಾಸವಿದೆ.
ಇದನ್ನೂ ಓದಿ: Top Selling Cars: ಮಾರ್ಚ್‌ನಲ್ಲಿಅತಿಹೆಚ್ಚು ಮಾರಾಟವಾದ ಟಾಪ್ 10 ಕಾರುಗಳು
ಎಂಜಿನ್: ಹುಂಡೈ ಅಲ್ಕಾಜರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದು 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 160PS ಪವರ್ ಮತ್ತು 253Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‌ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು 7 ಸ್ಪೀಡ್ ಡಿಸಿಟಿ (ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್) ಆಯ್ಕೆ ಇದೆ.
SUV 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದರೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಇದೆ. ಇದು 116PS ಪವರ್ ಮತ್ತು 250Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡೂ ಎಂಜಿನ್‌ಗಳು ಐಡಲ್ ಸ್ಟಾರ್ಟ್/ಸ್ಟಾಪ್ ಫಂಕ್ಷನ್‌ನೊಂದಿಗೆ ಬರುತ್ತವೆ. ಕಾರು ಮೂರು ಡ್ರೈವ್ ಮೋಡ್‌ಗಳು (ಇಕೋ, ಸಿಟಿ ಮತ್ತು ಸ್ಪೋರ್ಟ್) ಮತ್ತು ಮೂರು ಟ್ರಾಕ್ಷನ್ ಮೋಡ್‌ಗಳೊಂದಿಗೆ (ಮೋಡ್ ಸ್ನೋ, ಸ್ಯಾಂಡ್ ಮತ್ತು ಮಡ್) ಬರುತ್ತದೆ.
ವೈಶಿಷ್ಟ್ಯಗಳು: ಇದರಲ್ಲಿ 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಸಂಪರ್ಕಿತ ಕಾರ್ ತಂತ್ರಜ್ಞಾನ, ಪನೋರಮಿಕ್ ಸನ್‌ರೂಫ್, ಪ್ಯಾಡಲ್ ಶಿಫ್ಟರ್‌ಗಳು (ಸ್ವಯಂಚಾಲಿತ), 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC), ವಾಹನ ಸ್ಥಿರತೆ ನಿರ್ವಹಣೆ (VSM) ಮತ್ತು ಎಲ್ಲಾ ಚಕ್ರದ ಡಿಸ್ಕ್ ಬ್ರೇಕ್‌ನಂತಹ ವೈಶಿಷ್ಟ್ಯಗಳು ಬರುತ್ತವೆ.
ಇದನ್ನೂ ಓದಿ: ಕೇವಲ 5 ಲಕ್ಷಕ್ಕೆ ಅತಿ ಹೆಚ್ಚು ಮೈಲೇಜ್, ಹಲವು ವೈಶಿಷ್ಟ್ಯ.. ಈ 3 ಕಾರು ಖರೀದಿಸಲು ಜನ ಮುಗಿಬೀಳುತ್ತಿದ್ದಾರೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.