ಈ ಬ್ಯಾಂಕ್ ನಲ್ಲಿ ನಿಮ್ಮ ಅಕೌಂಟ್ ಇದೆಯಾ? ಹಾಗಿದ್ದರೆ ತಿಳಿದಿರಲಿ ಬದಲಾದ ನಿಯಮ

IDBI Bank Alert :ಐಡಿಬಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯಲ್ಲಿ ಜುಲೈ 1 ರಿಂದ ಜಾರಿಯಾಗಲಿರುವ ಹೊಸ ನಿಯಮಗಳ ಬಗ್ಗೆ ಉಲ್ಲೇಖಿಸಲಾಗಿದೆ. 

Written by - Ranjitha R K | Last Updated : Jun 13, 2021, 11:51 AM IST
  • ಐಡಿಬಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಅಧಿಸೂಚನೆ ಹೊರಡಿಸಿದೆ
  • ವರ್ಷಕ್ಕೆ ಕೇವಲ 20 ಪುಟಗಳ ಚೆಕ್ ಬುಕ್ ಮಾತ್ರ ಉಚಿತ
  • ನಂತರ ಹೊಸ ಚೆಕ್ ಗೆ 5 ರೂಪಾಯಿ ಪಾವತಿಸಬೇಕಾಗುತ್ತದೆ.
ಈ ಬ್ಯಾಂಕ್ ನಲ್ಲಿ  ನಿಮ್ಮ ಅಕೌಂಟ್ ಇದೆಯಾ? ಹಾಗಿದ್ದರೆ ತಿಳಿದಿರಲಿ ಬದಲಾದ ನಿಯಮ title=
ಹೊಸ ಅಧಿಸೂಚನೆ ಹೊರಡಿಸಿದ IDBIBank (photo zee news)

ನವದೆಹಲಿ : ಐಡಿಬಿಐ ಬ್ಯಾಂಕ್  (IDBI Bank) ತನ್ನ ಗ್ರಾಹಕರಿಗೆ ಹೊಸ ಅಧಿಸೂಚನೆ ಹೊರಡಿಸಿದೆ (New Notification). ಈ ಅಧಿಸೂಚನೆಯಲ್ಲಿ ಜುಲೈ 1 ರಿಂದ ಜಾರಿಯಾಗಲಿರುವ ಹೊಸ ನಿಯಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಹೊಸ ನಿಯಮಗಳ ಪ್ರಕಾರ, ಇನ್ನು ವರ್ಷಕ್ಕೆ ಕೇವಲ 20 ಪುಟಗಳ ಚೆಕ್ ಬುಕ್ (Cheque Book) ಮಾತ್ರ ಉಚಿತವಾಗಿ ಸಿಗಲಿದೆ. ಇದರ ನಂತರ ಹೊಸ ಚೆಕ್ ಗೆ 5 ರೂಪಾಯಿ ಪಾವತಿಸಬೇಕಾಗುತ್ತದೆ. 

ಜುಲೈ 1 ರಿಂದ ಅನ್ವಯವಾಗಲಿದ ಹೊಸ ನಿಯಮ : 
ಇಲ್ಲಿಯವರೆಗೆ, ಅಕೌಂಟ್ ಓಪನ್ ಮಾಡುವ ವೇಳೆ ಮೊದಲ ವರ್ಷಕ್ಕೆ ಐಡಿಬಿಐ ಬ್ಯಾಂಕ್ (IDBI Bank) ತನ್ನ ಗ್ರಾಹಕರಿಗೆ 60 ಪುಟಗಳ ಚೆಕ್ ಬುಕ್ ಅನ್ನು ಉಚಿತವಾಗಿ ನೀಡುತ್ತದೆ.  ನಂತರದ ವರ್ಷಕ್ಕೆ 50 ಪುಟಗಳ ಚೆಕ್ ಬುಕ್ ನೀಡುತ್ತದೆ. ಅದರ ನಂತರ ಗ್ರಾಹಕರು ಪ್ರತಿ ಚೆಕ್‌ಗೆ 5 ರೂ ಪಾವತಿಸಬೇಕಾಗುತ್ತಿತ್ತು. ಆದರೆ ಬ್ಯಾಂಕ್ ಇದೀಗ ಹೊಸ ನೋಟಿಸ್ ಜಾರಿ ಮಾಡಿದ್ದು, ಚೆಕ್ ಲೀಫ್ ಚಾರ್ಜ್ (Chque Leaf Charge) , ಸೇವಿಂಗ್ ಅಕೌಂಟ್ ಚಾರ್ಜ್ (Saving Account Charge) ಮತ್ತು ಲಾಕರ್ ಚಾರ್ಜ್ ನಲ್ಲಿ (Locker Charge)  ಬದಲಾವಣೆಗಳನ್ನು ಪ್ರಕಟಿಸಿದೆ. 

ಇದನ್ನೂ ಓದಿ : Narendra Modi ಸರ್ಕಾರದ ಹೊಸ ದಾಖಲೆ, ಈ ವಿಷಯದಲ್ಲಿ US ಹಿಂದಿಕ್ಕಿ 5ನೇ ಅತಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ

ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ಸಿಗಲಿದೆ ರಿಯಾಯಿತಿ : 
 'ಹೊಸ ನಿಯಮಗಳು ಉಳಿತಾಯ ಖಾತೆಯ (Saving Account) ಅಡಿಯಲ್ಲಿ ಬರುವ ಗ್ರಾಹಕರಿಗೆ ಅನ್ವಯಿಸುವುದಿಲ್ಲ. ಅವರು ಒಂದು ವರ್ಷದಲ್ಲಿ ಅನಿಯಮಿತ ಚೆಕ್‌ಗಳನ್ನು ಉಚಿತವಾಗಿ ಪಡೆಯಬಹುದು ಎಂದು ಬ್ಯಾಂಕ್ (Bank) ನೋಟಿಸ್‌ನಲ್ಲಿ ತಿಳಿಸಿದೆ. ಇದಲ್ಲದೆ, ಅರೆ ನಗರ ಮತ್ತು ಗ್ರಾಮೀಣ ಶಾಖೆಗಳಲ್ಲಿ ನಗದು ಠೇವಣಿ ಉಚಿತ ಸೌಲಭ್ಯವನ್ನು (home and non-home) 7 ಮತ್ತು 10 ರಿಂದ 5-5ಕ್ಕೆ ಇಳಿಸಿದೆ. ಅಂತೆಯೇ, ಸೂಪರ್ ಸೇವರ್ ಅಕೌಂಟ್ ಗಳಲ್ಲಿ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ವಹಿವಾಟುಗಳನ್ನು  ಈಗ ಅಸ್ತಿತ್ವದಲ್ಲಿರುವ 10 ಮತ್ತು 12 ರಿಂದ ತಲಾ 8 ಕ್ಕೆ ಇಳಿಸಲಾಗಿದೆ. ಬ್ಯಾಂಕ್ ಇತರ ಕೆಲವು ಸೇವೆಗಳಲ್ಲಿ ಬದಲಾವಣೆಗಳನ್ನು ಮಾಡಿದೆ.

ಇದನ್ನೂ ಓದಿ : E-Vehicles: ದ್ವಿಚಕ್ರ ವಾಹನ ಖರೀದಿದಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ Modi Government

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News