ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಮೂರು ಗಿಫ್ಟ್ ! 2024 ರ ಆರಂಭದಲ್ಲಿಯೇ ಆಗುವುದು ವೇತನದಲ್ಲಿ ಹೆಚ್ಚಳ

7th pay commision latest update :ಇದೀಗ ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ಸಿಗುತ್ತದೆ. ಹೊಸ ವರ್ಷದ ಆರಂಭದಲ್ಲಿ ನೌಕರರ ವೇತನದಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆ ಇದೆ.

Written by - Ranjitha R K | Last Updated : Nov 14, 2023, 10:03 AM IST
  • ಮತ್ತೊಮ್ಮೆ ಏರಿಕೆಯಾಗಲಿದೆ ತುಟ್ಟಿಭತ್ಯೆ
  • ಡಿಎ ಹೆಚ್ಚಳದ ಜೊತೆಗೆ ಟಿಎ ಕೂಡಾ ಹೆಚ್ಚಾಗುವ ಸಾಧ್ಯತೆ
  • HRAಯಲ್ಲಿಯೂ ಪರಿಷ್ಕರಣೆ
ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಮೂರು ಗಿಫ್ಟ್ ! 2024 ರ ಆರಂಭದಲ್ಲಿಯೇ  ಆಗುವುದು ವೇತನದಲ್ಲಿ ಹೆಚ್ಚಳ title=

7th pay commision latest update : ಕೇಂದ್ರ ಸರ್ಕಾರಿ ನೌಕರರಿಗೆ ಈ ಬಾರಿಯ ದೀಪಾವಳಿ ಸಂತಸ ತಂದಿದೆ. ಹಬ್ಬದ ಮುನ್ನವೇ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಯಿತು. ಅಲ್ಲದೆ, ದೀಪಾವಳಿ ಬೋನಸ್ ಮತ್ತು ಡಿಎ ಅರಿಯರ್ ಕೂಡಾ ಖಾತೆ ಸೇರಿದೆ. ಇದೀಗ ಬಂದಿರುವ ಮತ್ತೊಂದು ಅಪ್ಡೇಟ್ ಉದ್ಯೋಗಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ. ಇದೀಗ ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ಸಿಗುತ್ತದೆ. ಹೊಸ ವರ್ಷದ ಆರಂಭದಲ್ಲಿ ನೌಕರರ ವೇತನದಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆ ಇದೆ.

ಮತ್ತೊಮ್ಮೆ ಏರಿಕೆಯಾಗಲಿದೆ ತುಟ್ಟಿಭತ್ಯೆ : 
ಕೇಂದ್ರ ಸರ್ಕಾರಿ ನೌಕರರಿಗೆ 2024 ರಿಂದಲೇ ವೇತನದಲ್ಲಿ  ಹೆಚ್ಚಳವಾಗುವುದು.  ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನ AICPI ಸೂಚ್ಯಂಕ ಸಂಖ್ಯೆಗಳು ಹೊರಬಂದಿವೆ. ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್‌ನ ಅಂಕಿಅಂಶಗಳು ಇನ್ನೂ ಬರಬೇಕಿದೆ. ಇಲ್ಲಿಯವರೆಗೆ ವೆಚ್ಚದ ಆಧಾರದ ಮೇಲೆ ಅಂಕೆಗಳು 2.50 ರಷ್ಟು ಹೆಚ್ಚಾಗಿದೆ. ಪ್ರಸ್ತುತ ಡಿಎ ಶೇಕಡಾ 46 ರಷ್ಟಿದೆ. ಆದರೆ, ಎಐಸಿಪಿಐ ಸೂಚ್ಯಂಕ ದತ್ತಾಂಶವನ್ನು ನೋಡಿದಾಗ, ಡಿಎ ಹೆಚ್ಚಳವು ಶೇಕಡಾ 48.54 ಕ್ಕೆ ತಲುಪಿದೆ. ಸೂಚ್ಯಂಕವು ಪ್ರಸ್ತುತ 137.5 ಪಾಯಿಂಟ್‌ಗಳಲ್ಲಿದೆ. ಅಂತಹ ಸನ್ನಿವೇಶದಲ್ಲಿ, ಮುಂದೆ 4-5 ಪ್ರತಿಶತದಷ್ಟು ಡಿಎ ಹೆಚ್ಚಳವಾಗುವ  ನಿರೀಕ್ಷೆಯಿದೆ.

ಇದನ್ನೂ ಓದಿ : ಹಬ್ಬದ ನಂತರವೂ ಇಳಿಯುತ್ತಲೇ ಇದೆ ಚಿನ್ನದ ಬೆಲೆ ! ಇಂದಿನ ಬೆಲೆಯನ್ನು ಇಲ್ಲಿ ಚೆಕ್ ಮಾಡಿ

ಡಿಎ ಹೆಚ್ಚಳದ ಜೊತೆಗೆ ಟಿಎ ಕೂಡಾ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಯಾಣ ಭತ್ಯೆಯನ್ನು ವೇತನ ಶ್ರೇಣಿಯ ಹೆಚ್ಚಳದೊಂದಿಗೆ ಸೇರಿಸಿದರೆ, ಟಿಎ ಹೆಚ್ಚಳವು ಇನ್ನೂ ಜಾಸ್ತಿಯಾಗುತ್ತದೆ. ಪ್ರಯಾಣ ಭತ್ಯೆಗಳನ್ನು ವಿವಿಧ ಪೇ ಬ್ಯಾಂಡ್‌ಗಳಿಗೆ ಲಗತ್ತಿಸಲಾಗುತ್ತದೆ. ಹೆಚ್ಚಿನ TPTA ನಗರಗಳಲ್ಲಿ, ಗ್ರೇಡ್ 1 ರಿಂದ 2ರ ದರಗಳು ಕ್ರಮವಾಗಿ 1800  ರೂ. ಮತ್ತು 1900 ರೂ., ಗ್ರೇಡ್ 3 ರಿಂದ 3600 ರೂ. + ತುಟ್ಟಿಭತ್ಯೆ .  

HRA ಪರಿಷ್ಕರಣೆ  : 
ಮೂರನೇ ಮತ್ತು ದೊಡ್ಡ ಬಹುಮಾನವು ಮನೆ ಬಾಡಿಗೆ ಭತ್ಯೆ (HRA) ರೂಪದಲ್ಲಿರಲಿದೆ. ಇದರ ಹೆಚ್ಚಳ ಕೂಡಾ ಮುಂದಿನ ವರ್ಷ ನಡೆಯಲಿದೆ. HRA ನಲ್ಲಿ ಮುಂದಿನ ಪರಿಷ್ಕರಣೆ ದರವು 3 ಪ್ರತಿಶತ ಇರುತ್ತದೆ. ನಿಯಮಗಳ ಪ್ರಕಾರ,  ತುಟ್ಟಿಭತ್ಯೆ 50 ಮೀರಿದರೆ ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕರಿಸಲಾಗುತ್ತದೆ. ಪ್ರಸ್ತುತ HRA ಅನ್ನು 27, 24, 18 ಶೇಕಡಾದಲ್ಲಿ ಒದಗಿಸಲಾಗಿದೆ. ಇದನ್ನು ನಗರಗಳ X, Y, Z, ವರ್ಗಗಳಾಗಿ ವಿಂಗಡಿಸಲಾಗಿದೆ.  ತುಟ್ಟಿಭತ್ಯೆ ಶೇಕಡಾ 50 ರಷ್ಟಿದ್ದರೆ, HRA ಶೇಕಡಾ 30, 27, 21 ಕ್ಕೆ ಏರುತ್ತದೆ.

ಇದನ್ನೂ ಓದಿ : Aadhaar Card: ಆಧಾರ್ ಕಾರ್ಡ್ ಕಳೆದುಹೋಗಿದ್ಯಾ? ಚಿಂತೆಬಿಡಿ, ಈ ರೀತಿ ಮತ್ತೆ ಪಡೆಯಿರಿ

ಈ 3  ಹೆಚ್ಚಳ ಯಾವಾಗ ಲಭ್ಯ?:
ಕೇಂದ್ರ ಉದ್ಯೋಗಿಗಳಿಗೆ ತುಟ್ಟಿ ಭತ್ಯೆ , ಪ್ರಯಾಣ ಹೆಚ್ಚಳ ಮತ್ತು ಎಚ್‌ಆರ್‌ಎ ಪರಿಷ್ಕರಣೆ ಎಲ್ಲವೂ ಮುಂದಿನ ವರ್ಷ ಮಾರ್ಚ್‌ ವೇಳೆಗೆ ಲಭ್ಯವಾಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ, ಸರ್ಕಾರವು ಮಾರ್ಚ್‌ನಲ್ಲಿ ಜನವರಿಯಿಂದ  ಮಾರ್ಚ್ ವರೆಗಿನ ತುಟ್ಟಿಭತ್ಯೆಯನ್ನು ಘೋಷಿಸುತ್ತದೆ. ತುಟ್ಟಿಭತ್ಯೆ ಶೇಕಡಾ 50 ಕ್ಕೆ ತಲುಪುತ್ತದೆಯೇ ಇಲ್ಲವೇ ಎಂಬುದನ್ನು ಮಾರ್ಚ್ 2024 ರೊಳಗೆ ಮಾತ್ರ ನಿರ್ಧರಿಸಲಾಗುತ್ತದೆ. ತುಟ್ಟಿಭತ್ಯೆ 50% ತಲುಪಿದರೆ, HRA 3% ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ, ಉದ್ಯೋಗಿಗಳ ದರ್ಜೆಗೆ ಅನುಗುಣವಾಗಿ ಪ್ರಯಾಣ ಭತ್ಯೆ ಕೂಡಾ ಹೆಚ್ಚಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News