Income Tax Return Filing:75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ITR ದಾಖಲಿಸಬೇಕಿಲ್ಲ, ಇಲ್ಲಿದೆ ವಿವರ

Income Tax Return Filing: 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ತಮ್ಮ ಆದಾಯದ ಮೂಲವು ಕೇವಲ ಪಿಂಚಣಿ ಮತ್ತು ಬ್ಯಾಂಕ್‌ನಿಂದ ಬಡ್ಡಿಯನ್ನು ಒಳಗೊಂಡಿದ್ದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅಗತ್ಯವಿಲ್ಲ.

Written by - Nitin Tabib | Last Updated : Dec 6, 2021, 10:02 PM IST
  • 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ
  • ಆದಾಯದ ಮೂಲ ಕೇವಲ ಪಿಂಚಣಿ ಹಾಗೂ ಬ್ಯಾಂಕ್ ನಿಂದ ಬರುವ ಬಡ್ಡಿ ಆಗಿದ್ದರೆ,
  • ಅಂತಹ ಹಿರಿಯ ನಾಗರಿಕರು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಅವಶ್ಯಕತೆ ಇಲ್ಲ.
Income Tax Return Filing:75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ITR ದಾಖಲಿಸಬೇಕಿಲ್ಲ, ಇಲ್ಲಿದೆ ವಿವರ title=
Income Tax Return Filing (File Photo)

Income Tax Return: ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ. ಆದರೆ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತಮ್ಮ ಆದಾಯದ ಮೂಲವು ಕೇವಲ ಪಿಂಚಣಿ ಮತ್ತು ಬ್ಯಾಂಕಿನಲ್ಲಿ ಠೇವಣಿ ಮಾಡಿದ ಹಣದ ಬಡ್ಡಿಯನ್ನು ಮಾತ್ರ ಒಳಗೊಂಡಿದ್ದರೆ ಅವರು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಅಗತ್ಯವಿಲ್ಲ ಎಂಬುದು ನಿಮಗೆ ತಿಳಿದಿದೆಯೇ?  ಹೌದು,  ಹಣಕಾಸು ಕಾಯಿದೆ 2021 ರ ಅಡಿಯಲ್ಲಿ ಆದಾಯ ತೆರಿಗೆ ಕಾಯಿದೆ, 1961 ರಲ್ಲಿ 194P ಹೊಸ ಸೆಕ್ಷನ್  ಅನ್ನು ಸೇರಿಸಲಾಗಿದೆ, ಇದರ ಅಡಿಯಲ್ಲಿ 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು(Senior Citizens Tax Benefits), ತಮ್ಮ ಆದಾಯದ ಮೂಲವು ಕೇವಲ ಪಿಂಚಣಿ ಮತ್ತು ಬ್ಯಾಂಕಿನಲ್ಲಿ ಠೇವಣಿ ಇರಿಸಿರುವ ಹಣದ ಬಡ್ಡಿ ಮಾತ್ರ ಒಳಗೊಂಡಿದ್ದರೆ, ಐಟಿಆರ್ ಸಲ್ಲಿಸುವುದರಿಂದ ವಿನಾಯಿತಿ ಪಡೆಯಬಹುದು. 

ಇದನ್ನೂ ಓದಿ-ಮನೆಯ ಟೆರೆಸ್ ಮೇಲೆ ಉಚಿತವಾಗಿ ಸೋಲಾರ್ ಪ್ಯಾನಲ್ ಅಳವಡಿಸಿ, 20 ವರ್ಷ ಉಚಿತ ವಿದ್ಯುತ್ ಪಡೆಯಿರಿ

ಆದಾಯ ತೆರಿಗೆ ಇಲಾಖೆಯೂ (Income Tax Department Of India) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ ಮೂಲಕ ಈ ಕುರಿತು ಮಾಹಿತಿಯನ್ನು ನೀಡಿದೆ. ಈ ಕುರಿತು ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ ಆದಾಯ ತೆರಿಗೆ ಇಲಾಖೆ, 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ ಬಳಿ ಒಂದು ವೇಳೆ ಪೆನ್ಶನ್ ಆದಾಯ ಮತ್ತು ಬ್ಯಾಂಕ್ ನಲ್ಲಿ ಇರಿಸಿದ ಠೇವಣಿಯ ಬಡ್ಡಿಯನ್ನು ಹೊರತುಪಡಿಸಿ ಯಾವುದೇ ಆದಾಯ ಇಲ್ಲದಿದ್ದರೆ. ಅವರು ಪಿಂಚಣಿಯಿಂದ ಪಡೆಯುವ ಆದಾಯದಕ್ಕೆ ಐಟಿಆರ್ (Senior Citizens No Need To File IT Return)  ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗುವುದು. 

ಇದನ್ನೂ ಓದಿ-LPG Cylinder:ಅಡುಗೆ ಅನಿಲ ಸಿಲಿಂಡರ್ ನಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಕೇಂದ್ರ, ಮಹಿಳೆಯರಿಗೆ ಸಿಗಲಿದೆ ಲಾಭ

ಅಂದರೆ,  ಆದಾಯ ತೆರಿಗೆಯ ಹೊಸ ನಿಯಮಗಳ ಅಡಿಯಲ್ಲಿ, 75 ವರ್ಷಕ್ಕಿಂತ ಮೇಲ್ಪಟ್ಟ ಜನರು, ಪಿಂಚಣಿ ಹೊರತುಪಡಿಸಿ ಬೇರೆ ಆದಾಯದ ಮೂಲವನ್ನು ಹೊಂದಿರದ ಜನರು ಐಟಿಆರ್ ಅನ್ನು ಸಲ್ಲಿಸುವ ಅಗತ್ಯವಿಲ್ಲ. ಈ ಹೊಸ ನಿಬಂಧನೆಯೊಂದಿಗೆ, ಅಂತಹ ಹಿರಿಯ ನಾಗರಿಕರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅಗತ್ಯವಿಲ್ಲ.

ಇದನ್ನೂ ಓದಿ-Omicron ಕುರಿತು ಟೆನ್ಶನ್ ಹೆಚ್ಚಿಸುವ ವರದಿ ಬಹಿರಂಗ, ಹೊಸ ರಿಪೋರ್ಟ್ ಹೇಳಿದ್ದಾದರೂ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News