ರೈಲು ಪ್ರಯಾಣದಲ್ಲಿ ಈ ಎರಡು ತಪ್ಪುಗಳಾದರೆ ಕಾದಿದೆ 3 ವರ್ಷ ಜೈಲು, ನಿಮಗೆ ತಿಳಿದಿರಲೇ ಬೇಕು.

ಸೋಶಿಯಲ್ ಮೀಡಿಯಾಗಳಲ್ಲಿ ರೈಲ್ವೆ ಒಂದು ಮಾಹಿತಿ ಹೊರಡಿಸಿದೆ. ರೈಲ್ವೆ  ಪ್ರಯಾಣದ ಸುರಕ್ಷತೆಯ ಹಿನ್ನೆಲೆಯಲ್ಲಿ ಪ್ರಯಾಣಿಕರು ಮಾಡಬಹುದಾದ ತಪ್ಪುಗಳ ಬಗ್ಗೆ ಎಚ್ಚರಿಕೆ ನೀಡಿದೆ.

Written by - Ranjitha R K | Last Updated : Aug 22, 2021, 11:03 AM IST
  • ರೈಲು ಪ್ರಯಾಣಿಕರು ತಿಳಿದು ಕೊಳ್ಳಲೇ ಬೇಕಾದ ಅತಿ ಮುಖ್ಯ ಮಾಹಿತಿ
  • ರೈಲಿನಲ್ಲಿ ತಪ್ಪಿಯೂ ಈ ಎರಡು ತಪ್ಪುಗಳನ್ನು ಮಾಡಬಾರದು
  • ಆ ತಪ್ಪನ್ನು ಭಾರತೀಯ ರೈಲ್ವೆ ಎಂದಿಗೂ ಸಹಿಸುವುದಿಲ್ಲ.
ರೈಲು ಪ್ರಯಾಣದಲ್ಲಿ ಈ ಎರಡು ತಪ್ಪುಗಳಾದರೆ ಕಾದಿದೆ 3 ವರ್ಷ ಜೈಲು, ನಿಮಗೆ ತಿಳಿದಿರಲೇ ಬೇಕು. title=
ರೈಲಿನಲ್ಲಿ ತಪ್ಪಿಯೂ ಈ ಎರಡು ತಪ್ಪುಗಳನ್ನು ಮಾಡಬಾರದು (file photo)

ನವದೆಹಲಿ : Indian Railways Alert: ರೈಲಿನಲ್ಲಿ ಪ್ರಯಾಣಿಸುವವರಿಗೆ ಒಂದು ಪ್ರಮುಖ ಸುದ್ದಿ ಇದೆ. ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ (Indian Railways) ಒಂದು ಎಚ್ಚರಿಕೆ ನೀಡಿದೆ. ರೈಲ್ವೆಯ  ಈ ಎಚ್ಚರಿಕೆಯನ್ನು ಕಡೆಗಣಿಸಿದರೆ ನೀವು ಮೂರು ವರ್ಷ ಜೈಲು (Jail) ಪಾಲಾಗುವ ಸಾಧ್ಯತೆ ಅತಿ ಹೆಚ್ಚು. ನೀವು ರೈಲಿನಲ್ಲಿ ಸಂಚರಿಸುತ್ತಿದ್ದಿರಾದರೆ ಖಂಡಿತಾ ಆ ಎರಡು ತಪ್ಪುಗಳನ್ನು ಮಾಡಲು ಹೋಗಬೇಡಿ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಆ ಎರಡು ತಪ್ಪುಗಳನ್ನು ರೈಲ್ವೆ ದಂಡನೀಯ ಅಪರಾಧ ಎಂದು ಪರಿಗಣಿಸಿದೆ. 

ಮೂರು ವರ್ಷ ಜೈಲಿಗೆ ತಳ್ಳುವ   ಆ ಎರಡು ತಪ್ಪುಗಳು ಯಾವುದು..? 
ಸೋಶಿಯಲ್ ಮೀಡಿಯಾಗಳಲ್ಲಿ (Social media) ರೈಲ್ವೆ ಒಂದು ಮಾಹಿತಿ ಹೊರಡಿಸಿದೆ. ರೈಲ್ವೆ (Indian Railway) ಪ್ರಯಾಣದ ಸುರಕ್ಷತೆಯ ಹಿನ್ನೆಲೆಯಲ್ಲಿ ಪ್ರಯಾಣಿಕರು ಮಾಡಬಹುದಾದ ತಪ್ಪುಗಳ ಬಗ್ಗೆ ಎಚ್ಚರಿಕೆ ನೀಡಿದೆ. ಇದರಿಂದ ಕಾನೂನಾತ್ಮಕ ಪರಿಣಾಮಗಳ ಸೂಚನೆಯನ್ನೂ ಹೊರಡಿಸಿದೆ. ಅಂದರೆ, ರೈಲಿನಲ್ಲಿ ಆ 2 ತಪ್ಪುಗಳನ್ನು ಮಾಡಿದರೆ, ನೀವು ಕಾರಾಗೃಹ ಸೇರಬಹುದು. 

 

ಇದನ್ನೂ ಓದಿ : Earn Money : ನಿಮ್ಮ ಬಳಿ ಈ 1 ರೂ. ವಿಶೇಷ ನಾಣ್ಯವಿದ್ದರೆ ನೀವು ರಾತ್ರೋರಾತ್ರಿ ಮಿಲಿಯನೇರ್ ಆಗಬಹುದು; ಹೇಗೆ ಗೊತ್ತಾ?

ಆ ಎರಡು ತಪ್ಪುಗಳು ಯಾವುದು.?
1. ಮೊದಲ ತಪ್ಪು : 
ರೈಲಿನಲ್ಲಿ ಬೆಂಕಿ ಹೊತ್ತಿಕೊಳ್ಳಲು ಪೂರಕವಾಗುವ ಅಂದರೆ ಜ್ವಲನಶೀಲ ವಸ್ತುಗಳನ್ನು ಸಾಗಿಸಬಾರದು. ಅಂದರೆ ಇನ್ ಫ್ಲಮೇಬಲ್ ವಸ್ತುಗಳನ್ನು ಸಾಗಿಸುವುದು ನಿಷಿದ್ಧ.   ತಪ್ಪು ಮಾಡಿ ಸಿಕ್ಕಿಹಾಕಿಕೊಂಡರೆ ಮೂರು ವರ್ಷ ಜೈಲು ಮತ್ತು ದಂಡ ವಿಧಿಸಲಾಗುತ್ತದೆ. ರೈಲ್ವೆಯ (Railway) ಟ್ವೀಟ್ ಪ್ರಕಾರ, ಈಗ ಪ್ರಯಾಣಿಕರು ರೈಲಿನಲ್ಲಿ ಸೀಮೆಎಣ್ಣೆ, ಒಣ ಹುಲ್ಲು, ಒಲೆ, ಪೆಟ್ರೋಲ್, ಸೀಮೆಎಣ್ಣೆ, ಗ್ಯಾಸ್ ಸಿಲಿಂಡರ್‌ಗಳು (Gas cylinder), ಬೆಂಕಿಕಡ್ಡಿ, ಪಟಾಕಿ ಇತ್ಯಾದಿ ಸರಕುಗಳನ್ನು ಸಾಗಿಸಬಾರದು. ಇವೆಲ್ಲವನ್ನೂ ರೈಲ್ವೆ ನಿಷೇಧಿಸಿದೆ. ಇದು ದಂಡನೀಯ ಅಪರಾಧ

2. ಎರಡನೇ ತಪ್ಪು : 
ರೈಲ್ವೆ ಆವರಣದಲ್ಲಿ ಧೂಮಪಾನ ನಿಷಿದ್ಧ ..ಯಾರಾದರೂ ರೈಲಿನಲ್ಲಿ ಧೂಮಪಾನ (Smoking) ಮಾಡುತ್ತಿದ್ದರೆ, ಆತನಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಇದರ ಹೊರತಾಗಿ, ದಂಡವನ್ನು ಸಹ ಪಾವತಿಸಬೇಕಾಗಬಹುದು. ರೈಲ್ವೆ ಆವರಣದಲ್ಲಿ ಸಿಗರೇಟ್/ಬೀಡಿ ಸೇದುವುದು ಕೂಡ ಶಿಕ್ಷಾರ್ಹ ಅಪರಾಧ.

ಇದನ್ನೂ ಓದಿ : Facebook Loan: ಫೇಸ್ ಬುಕ್ ನಲ್ಲಿ 5 ದಿನದಲ್ಲಿ ಸಿಗಲಿದೆ 50 ಲಕ್ಷ ರೂ. ಸಾಲ..! ಹೇಗೆ ಗೊತ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News