Indian Railway: ಇ-ಕ್ಯಾಟರಿಂಗ್ ಸೇವೆ ಪುನರಾರಂಭಿಸಿದ ಐಆರ್‌ಸಿಟಿಸಿ, ನೀವು ಈ ರೀತಿ ಫುಡ್ ಆರ್ಡರ್ ಮಾಡಬಹುದು

ಐಆರ್‌ಸಿಟಿಸಿಯ ಈ ಇ-ಕ್ಯಾಟರಿಂಗ್ ಸೇವೆಯನ್ನು 200 ಕ್ಕೂ ಹೆಚ್ಚು ರೈಲ್ವೇ ನಿಲ್ದಾಣಗಳಲ್ಲಿ ಪುನರಾರಂಭಿಸಲಾಗುತ್ತಿದೆ. ಐಆರ್‌ಸಿಟಿಸಿಯ ಇ-ಕ್ಯಾಟರಿಂಗ್ ಆಪ್ ಡೌನ್‌ಲೋಡ್ ಮಾಡುವ ಮೂಲಕ ಪ್ರಯಾಣಿಕರು ಫುಡ್ ಆನ್ ಟ್ರ್ಯಾಕ್ಸ್ ಅಡಿಯಲ್ಲಿ ತಮ್ಮ ಆಯ್ಕೆಯ ಆಹಾರವನ್ನು ಆರ್ಡರ್ ಮಾಡಬಹುದು.

Written by - Yashaswini V | Last Updated : Aug 5, 2021, 09:12 AM IST
  • ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಆಹಾರ ಮತ್ತು ಪಾನೀಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ, ರೈಲ್ವೆ ತನ್ನ ಇ-ಕ್ಯಾಟರಿಂಗ್ ಸೇವೆಯನ್ನು ಮತ್ತೊಮ್ಮೆ ಆರಂಭಿಸಲಿದೆ
  • ಐಆರ್‌ಸಿಟಿಸಿ (IRCTC) ಮೂಲಕ 200ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ರೈಲ್ವೆ ಮತ್ತೆ ಇ-ಕ್ಯಾಟರಿಂಗ್ ಸೇವೆಯನ್ನು ಆರಂಭಿಸುತ್ತಿದೆ
  • ಪ್ರಯಾಣಿಕರು ಆಹಾರವನ್ನು ಟ್ರ್ಯಾಕ್‌ನಲ್ಲಿ ಆರ್ಡರ್ ಮಾಡಲು IRCTC ಯ ಇ-ಕ್ಯಾಟರಿಂಗ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು
Indian Railway: ಇ-ಕ್ಯಾಟರಿಂಗ್ ಸೇವೆ ಪುನರಾರಂಭಿಸಿದ ಐಆರ್‌ಸಿಟಿಸಿ, ನೀವು ಈ ರೀತಿ ಫುಡ್ ಆರ್ಡರ್ ಮಾಡಬಹುದು title=
IRCTC resumes e-Catering service

ನವದೆಹಲಿ: ಕರೋನಾ ಯುಗದಲ್ಲಿ ಲಾಕ್‌ಡೌನ್‌ ಸಡಿಲಿಕೆಯ ಬಳಿಕ ರೈಲ್ವೇ ಪ್ರತಿ ಹೆಜ್ಜೆಯನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳುತ್ತಿದೆ. ಮೊದಲು ಅನ್‌ಲಾಕ್ ಅಡಿಯಲ್ಲಿ ಕೆಲವು ರೈಲುಗಳನ್ನು ಆರಂಭಿಸಲಾಯಿತು, ನಂತರ ಕ್ರಮೇಣ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಇದರೊಂದಿಗೆ ಎಲ್ಲೆಡೆ ಸುರಕ್ಷತೆಗೆ ಭಾರೀ ಒತ್ತು ನೀಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಸೇವೆಯನ್ನು ಆರಂಭಿಸಲಾಯಿತಾದರೂ ಇನ್ನೂ ಕೂಡ ಬೆಡ್ ರೋಲ್ ಇತ್ಯಾದಿ ಸೇವೆಗಳನ್ನು ನೀಡಲಾಗುತ್ತಿಲ್ಲ. ಆದರೆ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಆಹಾರ ಮತ್ತು ಪಾನೀಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ, ರೈಲ್ವೆ ತನ್ನ ಇ-ಕ್ಯಾಟರಿಂಗ್ ಸೇವೆಯನ್ನು ಮತ್ತೊಮ್ಮೆ ಆರಂಭಿಸಲಿದೆ.

ಐಆರ್‌ಸಿಟಿಸಿ (IRCTC) ಮೂಲಕ 200ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ರೈಲ್ವೆ ಮತ್ತೆ ಇ-ಕ್ಯಾಟರಿಂಗ್ ಸೇವೆಯನ್ನು ಆರಂಭಿಸುತ್ತಿದೆ. ಪ್ರಯಾಣಿಕರು ಆಹಾರವನ್ನು ಟ್ರ್ಯಾಕ್‌ನಲ್ಲಿ ಆರ್ಡರ್ ಮಾಡಲು IRCTC ಯ ಇ-ಕ್ಯಾಟರಿಂಗ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಆನ್‌ಲೈನ್ ಆರ್ಡರ್ ಮಾಡುವ ಸೇವೆಗೆ ಇಂಟರ್ನೆಟ್ ಇಲ್ಲದಿದ್ದಲ್ಲಿ, ಪ್ರಯಾಣಿಕರು 1323 ಗೆ ಕರೆ ಮಾಡುವ ಮೂಲಕ ಆಹಾರವನ್ನು ಆರ್ಡರ್ ಮಾಡಬಹುದು.

ಇದನ್ನೂ ಓದಿ- Train Ticket Insurance Benefits: ರೈಲ್ವೆ ಟಿಕೆಟ್ ಬುಕಿಂಗ್ ವೇಳೆ ವಿಮೆ ಮಾಡಿಸುವುದರಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನ

ಇ-ಕ್ಯಾಟರಿಂಗ್ ಮೂಲಕ ಆಹಾರವನ್ನು ಆರ್ಡರ್ ಮಾಡುವುದು ಹೇಗೆ?
ರೈಲ್ವೆಯಲ್ಲಿ ಪ್ರಯಾಣಿಸುವಾಗ ಇ-ಕ್ಯಾಟರಿಂಗ್ (e-Catering Service) ಮೂಲಕ ಆಹಾರವನ್ನು ಹೇಗೆ ಆರ್ಡರ್ ಮಾಡಬಹುದು ಎಂದು ತಿಳಿಯಿರಿ...

ಮೊದಲಿಗೆ IRCTC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://www.ecatering.irctc.co.in/. ಇದರ ನಂತರ, ನಿಮ್ಮ ಟಿಕೆಟ್‌ನಲ್ಲಿ ನೀಡಿರುವ PNR ಸಂಖ್ಯೆಯನ್ನು ನಮೂದಿಸಿ. ಇದರ ನಂತರ, ಮೆನುವಿನಲ್ಲಿ ನೀಡಿರುವ ಆಹಾರ ಪದಾರ್ಥಗಳನ್ನು ಬುಕ್ ಮಾಡಿ ಮತ್ತು ಆರ್ಡರ್ ಮಾಡಿ.

ಇದನ್ನೂ ಓದಿ- Indian Railways: ಆನ್‌ಲೈನ್ ಟಿಕೆಟ್‌ಗಳಿಗಾಗಿ IRCTC ಹೊಸ ನಿಯಮ ನಿಮಗೂ ತಿಳಿದಿರಲಿ

ಆಹಾರವನ್ನು ಆರ್ಡರ್ ಮಾಡುವಾಗ ಪ್ರಯಾಣಿಕರು ಪಾವತಿಗಾಗಿ ನಗದು ಪಾವತಿಯನ್ನು ಸಹ ಆಯ್ಕೆ ಮಾಡಬಹುದು. ಆಹಾರವನ್ನು ಆರ್ಡರ್ ಮಾಡಿದ ನಂತರ, ನೀವು ನಮೂದಿಸಿರುವ ಸೀಟಿನ ಬಳಿ ಆಹಾರವನ್ನು ತಲುಪಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News