ಮಾರುಕಟ್ಟೆಗೆ ಕಾಲಿಟ್ಟಿದೆ Kawasaki Ninja 650 ಬೈಕ್ .! ಬೆಲೆ ಎಷ್ಟು ಗೊತ್ತಾ ?

Kawasaki Ninja 650:  ಪ್ರಸ್ತುತ ಮಾದರಿಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು  2023 ಕವಾಸಕಿ ನಿಂಜಾ 650 ಹೊಂದಿದೆ. 2023 ಕವಾಸಕಿ ನಿಂಜಾ 650 ಈಗ ಕವಾಸಕಿಯಲ್ಲಿ ಟ್ರಾಕ್ಶನ್ ಕಂಟ್ರೋಲ್ ಸಿಸ್ಟಮ್ ಅನ್ನು ನೀಡಲಾಗಿದೆ. 

Written by - Ranjitha R K | Last Updated : Nov 18, 2022, 10:38 AM IST
  • ಕವಾಸಕಿ 2023 ನಿಂಜಾ 650 ಭಾರತದಲ್ಲಿ ಬಿಡುಗಡೆ
  • ಇದರ ಬೆಲೆ 7.12 ಲಕ್ಷ ರೂಪಾಯಿ
  • ಕವಾಸಕಿ 2023 ನಿಂಜಾ 650 ಬೆಲೆ ಎಷ್ಟು ಗೊತ್ತಾ ?
ಮಾರುಕಟ್ಟೆಗೆ ಕಾಲಿಟ್ಟಿದೆ Kawasaki Ninja 650 ಬೈಕ್ .! ಬೆಲೆ ಎಷ್ಟು ಗೊತ್ತಾ ?  title=
Kawasaki Ninja 650

Kawasaki Ninja 650 : ಕವಾಸಕಿ 2023 ನಿಂಜಾ 650 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಬೆಲೆ  7.12 ಲಕ್ಷ  ರೂಪಾಯಿ. ಹೊಸ ಕವಾಸಕಿ ನಿಂಜಾ 650 ಪ್ರಸ್ತುತ ಮಾದರಿಗಿಂತ 17,000 ರೂಪಾಯಿ ದುಬಾರಿ. ಆದರೂ ಇದು ಪ್ರಸ್ತುತ ಮಾದರಿಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು  ಹೊಂದಿದೆ. 2023 ಕವಾಸಕಿ ನಿಂಜಾ 650 ಈಗ ಕವಾಸಕಿಯಲ್ಲಿ ಟ್ರಾಕ್ಶನ್ ಕಂಟ್ರೋಲ್ ಸಿಸ್ಟಮ್ ಅನ್ನು ನೀಡಲಾಗಿದೆ.   

ಟ್ರಾಕ್ಶನ್ ಕಂಟ್ರೋಲ್ ಸಿಸ್ಟಮ್  ನಲ್ಲಿ ಎರಡು ಮೋಡ್ ಗಳನ್ನು ನೀಡಲಾಗಿದೆ. ಇದು ಇಂಟೆರ್ ವೆಂಶನ್ ಲೆವೆಲ್ ಅನ್ನು ಸರಿದೂಗಿಸುತ್ತದೆ. ಮಾತ್ರವಲ್ಲ,    ಟ್ರಾಕ್ಷನ್ ಕಂಟ್ರೋಲ್ ಅನ್ನು ಆಫ್ ಮಾಡಿ ಕೂಡಾ ಇಡಬಹುದು. ಟ್ರಾಕ್ಶನ್ ಕಂಟ್ರೋಲ್ ಸಿಸ್ಟಮ್  ಅನ್ನು ಹೊರು ಪಡಿಸಿದರೆ ಉಳಿದಂತೆ ಹೊಸ ಕವಾಸಕಿ ನಿಂಜಾ 650, ಅಸ್ತಿತ್ವದಲ್ಲಿರುವ ಕವಾಸಕಿ ನಿಂಜಾ 650ಯನ್ನೇ ಹೋಲುತ್ತದೆ. ಇದರಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವುದಿಲ್ಲ.  ಆದರೆ ಇದು ಅಪ್ಡೇಟೆಡ್ ಲೈಮ್ ಗ್ರೀನ್ ಬಾಡಿ ಗ್ರಾಫಿಕ್ಸ್ ನೊಂದಿಗೆ ಬರುತ್ತದೆ. 
 
 ಇದನ್ನೂ ಓದಿ :
 ನವೆಂಬರ್ 30 ರೊಳಗೆ ರೈತರ ಖಾತೆಗೆ ಎರಡು ಸಾವಿರ ರೂಪಾಯಿ.! ನಿಮ್ಮ ಖಾತೆಯನ್ನೊಮ್ಮೆ ಚೆಕ್ ಮಾಡಿಕೊಳ್ಳಿ

2023 ಕವಾಸಕಿ ನಿಂಜಾ 650 ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು, ಹಿಂಭಾಗದಲ್ಲಿ ಮೊನೊಶಾಕ್, ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಹೊಂದಿರುವ ಸಿಂಗಲ್ ಡಿಸ್ಕ್ ಬ್ರೇಕ್ ಮತ್ತು ಎಲ್ಇಡಿ ಲೈಟಿಂಗ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು  ಹೊಂದಿದೆ.  ಆದರೆ  ಟ್ರಾಕ್ಶನ್ ಕಂಟ್ರೋಲ್ ಸಿಸ್ಟಮ್  ಅನ್ನು ಆಫ್ ಮಾಡಬಹುದಾದ ರೀತಿಯಲ್ಲಿ ಭಿನ್ನವಾಗಿ, ABS ಅನ್ನು ಆಫ್ ಮಾಡಲಾಗುವುದಿಲ್ಲ. ಎಬಿಎಸ್ ನಿರಂತರವಾಗಿ ಆನ್ ಆಗಿರುತ್ತದೆ.  

ಹೊಸ ಕವಾಸಕಿ ನಿಂಜಾ 650ಯಲ್ಲಿ 649cc ಪ್ಯಾರಲಲ್-ಟ್ವಿನ್ ಲಿಕ್ವಿಡ್-ಕೂಲ್ಡ್ ಎಂಜಿನ್ ಇರುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ನೊಂದಿಗೆ  67 bhp ಮತ್ತು 64 Nm ಔಟ್ ಪುಟ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಅನ್ನು ಸ್ಲಿಪ್ಪರ್ ಕ್ಲಚ್‌ ನೊಂದಿಗೆ ಜೋಡಿಸಲಾಗಿದೆ. ಈ ಮಧ್ಯಮ ಗಾತ್ರದ ಸ್ಪೋರ್ಟ್ ಟೂರರ್ ಗರಿಷ್ಠ 210 kmph ವೇಗವನ್ನು ತಲುಪಬಹುದು.

 ಇದನ್ನೂ ಓದಿ : Hackers: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೂ ಈ 4 ಅಪ್ಲಿಕೇಶನ್‌ಗಳಿದ್ದರೆ ತಕ್ಷಣ ಡಿಲೀಟ್ ಮಾಡಿ- ಗೂಗಲ್ ಎಚ್ಚರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News