LED lights Price news: ಮುಂದಿನ ದಿನಗಳಲ್ಲಿ ನೀವು ಎಲ್ಇಡಿ ದೀಪಗಳಿಗಾಗಿ ಹೆಚ್ಚು ಪಾವತಿಸಬೇಕಾಗಬಹುದು. ಕಂಪೆನಿಗಳು ಸುಮಾರು 5-10 ರಷ್ಟು ಬೆಲೆ ಹೆಚ್ಚಾಗಬಹುದು ಎಂದು ಸೂಚಿಸಿವೆ. ವಾಸ್ತವವಾಗಿ ಕೆಲವು ಘಟಕಗಳ ಮೇಲೆ ಕಸ್ಟಮ್ಸ್ ಸುಂಕದ ಹೆಚ್ಚಳದೊಂದಿಗೆ, ಬಲ್ಬ್ಗಳು ಸೇರಿದಂತೆ ಎಲ್ಇಡಿ ಲೈಟ್ಸ್ ಉತ್ಪನ್ನಗಳ ಬೆಲೆಗಳು 5-10 ಪ್ರತಿಶತದಷ್ಟು ಹೆಚ್ಚಾಗಬಹುದು. ಪಿಟಿಐ ಸುದ್ದಿಯ ಪ್ರಕಾರ ದೇಶೀಯ ತಯಾರಕರು ಈ ಬಗ್ಗೆ ಮಾಹಿತಿ ನೀಡಿದರು. ಆದರೆ, ಈ ಸಮಸ್ಯೆಯನ್ನು ಕೂಡಲೇ ಸರ್ಕಾರದಿಂದ ಬಗೆಹರಿಸಲು ಒತ್ತಾಯಿಸುತ್ತಿದ್ದೇವೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಇನ್ಪುಟ್ ಮತ್ತು ಭಾಗಗಳು ದುಬಾರಿಯಾಗಿದೆ (Effect of input and parts being expensive) :
ಎಲ್‌ಇಡಿ ಲೈಟ್ಸ್ (LED Lights) ಉತ್ಪನ್ನಗಳನ್ನು ತಯಾರಿಸಲು ಇನ್‌ಪುಟ್ ಮತ್ತು ಕಾಂಪೊನೆಂಟ್ ಶುಲ್ಕವನ್ನು ಹೆಚ್ಚಿಸುವ ಸರ್ಕಾರದ ನಿರ್ಧಾರವು ಸ್ಥಳೀಯವಾಗಿ ತಯಾರಿಸಿದ ಲೈಟ್ಸ್ ಉತ್ಪನ್ನಗಳಿಗೆ ಅಲ್ಪಾವಧಿಯಲ್ಲಿ ಬೆಲೆ ಏರಿಕೆಗೆ ಕಾರಣವಾಗುತ್ತದೆ ಎಂದು ಎಲೆಕ್ಟ್ರಿಕ್ ಲ್ಯಾಂಪ್ ಮತ್ತು ಕಾಂಪೊನೆಂಟ್ ತಯಾರಕರ ಸಂಘದ (ಅಲ್ಕೋಮಾ) ಅಧ್ಯಕ್ಷ ಸುಮಿತ್ ಜೋಶಿ ಹೇಳಿದ್ದಾರೆ. ಸ್ಥಳೀಯ ಕಾರ್ಖಾನೆಗಳ ಕೊರತೆಯಿಂದಾಗಿ ಬಹುತೇಕ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳನ್ನು ಭಾರತದಲ್ಲಿ ಆಮದು ಮಾಡಿಕೊಳ್ಳುವುದೇ ಇದಕ್ಕೆ ಕಾರಣ.
ಇದನ್ನೂ ಓದಿ - LED lights ಬಿಸಿನೆಸ್ ಆರಂಭಿಸಿ, ಕೇವಲ ರೂ.5000 ಹೂಡಿಕೆಯ ನಂತರ...?
ಸ್ಥಳೀಯ ಉತ್ಪನ್ನಗಳು ದುಬಾರಿಯಾಗುತ್ತವೆ (Local products will be expensive) :
ಎಲ್ಇಡಿ (LED) ದೀಪಗಳನ್ನು ತಯಾರಿಸಲು ಬಳಸುವ ಘಟಕಗಳ ಮೇಲಿನ ಕಸ್ಟಮ್ಸ್ ಸುಂಕ ಮತ್ತು ಎಂಸಿಪಿಸಿಬಿ ಸೇರಿದಂತೆ ಘಟಕಗಳ ಆಮದು 5 ರಿಂದ 10 ಪ್ರತಿಶತದಷ್ಟು ಹೆಚ್ಚಾದ ನಂತರ ಸ್ಥಳೀಯವಾಗಿ ತಯಾರಿಸಿದ ಸರಕುಗಳ ಬೆಲೆ ಏರಿಕೆಯಾಗಲಿದೆ ಎಂದು ಎಲ್ಕೋಮಾ ಹೇಳಿದೆ. ಜೋಶಿ ಸಿಗ್ನೇಚರ್ ಇನ್ನೋವೇಶನ್ಸ್ ಇಂಡಿಯಾದ (ಹಿಂದೆ ಇದನ್ನು ಫಿಲಿಪ್ಸ್ ಲೈಟಿಂಗ್ ಇಂಡಿಯಾ ಎಂದು ಕರೆಯಲಾಗುತ್ತಿತ್ತು) ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಇದನ್ನೂ ಓದಿ - ವಿಶ್ವದ ಈ ನಗರದಲ್ಲಿ ಕತ್ತಲಾಗುತ್ತಿದ್ದಂತೆ ನೇರಳೆ ಬಣ್ಣಕ್ಕೆ ತಿರುಗುವ ಆಕಾಶ
ಸರ್ಕಾರದ ನಿರ್ಧಾರವು ಆಶ್ಚರ್ಯವನ್ನುಂಟು ಮಾಡಿದೆ (Government's decision surprised) :
ಈ ನಿರ್ಧಾರವು ಉದ್ಯಮವನ್ನು ಬೆಚ್ಚಿಬೀಳಿಸಿದೆ ಎಂದು ಹ್ಯಾವೆಲ್ಸ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ಮತ್ತು ಎಸ್‌ಬಿಯು ಮುಖ್ಯಸ್ಥ ಪರಾಗ್ ಭಟ್ನಾಗರ್ ಹೇಳಿದ್ದಾರೆ. ಇದು ತಪ್ಪು ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ, ಏಕೆಂದರೆ ಸುಂಕದ ಹೆಚ್ಚಳದಿಂದಾಗಿ ದೇಶೀಯ ಉತ್ಪಾದನೆಗೆ ಯಾವುದೇ ಸಹಾಯ ಮತ್ತು ಪ್ರೋತ್ಸಾಹ ಸಿಗುತ್ತಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.