LIC IPO Share Allotment Status: ಒಂದು ವೇಳೆ ನೀವೂ ಕೂಡ ಎಲ್ಐಸಿ ಐಪಿಓಗಾಗಿ ಅರ್ಜಿಯನ್ನು ಸಲ್ಲಿಸಿದ್ದರೆ, ಈ ಸುದ್ದಿ ನಿಮಗಾಗಿ. ದೇಶದ ಅತಿ ದೊಡ್ಡ ಐಪಿಓ ಆಗಿರುವ ಎಲ್ಐಸಿಯ ಷೇರುಗಳ ಹಂಚಿಕೆ ಪ್ರಕ್ರಿಯೆ ಇಂದು ಅಂದರೆ ಮೇ 12ರಂದು ನಡೆಯಲಿದೆ. ಒಂದು ವೇಳೆ ನೀವೂ ಕೂಡ ಈ ಹಂಚಿಕೆಗಾಗಿ ಕಾಯುತ್ತಿದ್ದರೆ, ಈ ಕೆಳಗೆ ನೀಡಲಾಗಿರುವ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಹಂಚಿಕೆಯ ಸ್ಟೇಟಸ್ ಅನ್ನು ನೀವು ಎನ್ಎಸ್ಇ, ಬಿಎಸ್ಇ ಹಾಗೂ ಕೆಫಿನ್ ಟೆಕ್ನಾಲಜಿಸ್ ಮೂಲಕ ಪರಿಶೀಲಿಸಬಹುದು.
ಎನ್ಎಸ್ಇ ಮೇಲೆ ಎಲ್ಐಸಿ ಐಪಿಓ ಹಂಚಿಕೆಯ ಸ್ಥಿತಿಯನ್ನು ಈ ರೀತಿ ಪರಿಶೀಲಿಸಿ
1) ನಿಮ್ಮ ಷೇರುಗಳ ಹಂಚಿಕೆಯ ಸ್ಥಿತಿಯನ್ನು ಪರಿಶೀಲಿಸಲು, ಮೊದಲು ನೀವು ಎನ್ಎಸ್ಇ ಯ ಅಧಿಕೃತ ವೆಬ್‌ಸೈಟ್ https://www.nseindia.com/ ಗೆ ಭೇಟಿ ನೀಡಿ.
2) ಈಗ ಅಲ್ಲಿ 'ಇಕ್ವಿಟಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರಾಪ್‌ಡೌನ್‌ನಲ್ಲಿ 'LIC IPO' ಆಯ್ಕೆಮಾಡಿ.
3) ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
4) ಇದರ ನಂತರ ನೀವು 'ನಾನು ರೋಬೋಟ್ ಅಲ್ಲ' ಎಂದು ಪರಿಶೀಲಿಸಿ ಮತ್ತು ಸಬ್ಮಿಟ್ ಮೇಲೆ ಕ್ಲಿಕ್ಕಿಸಿ.
5) ಎಲ್ಐಸಿ ಷೇರು ಹಂಚಿಕೆಯ ಸ್ಥಿತಿಯು ನಿಮ್ಮ ಮುಂದೆ ಪ್ರಕಟವಾಗಲಿದೆ.
ಬಿಎಸ್ಇ ಮೇಲೆ ಎಲ್ಐಸಿ ಷೇರುಗಳ ಹಂಚಿಕೆಯ ಸ್ಥಿತಿ ಹೀಗೆ ಪರಿಶೀಲಿಸಿ
1) ಇದಕ್ಕಾಗಿ, ಮೊದಲು ಬಿಎಸ್ಇ ಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
2) 'ಇಕ್ವಿಟಿ' ಆಯ್ಕೆಯನ್ನು ಆಯ್ದುಕೊಳ್ಳಿ ಮತ್ತು ಡ್ರಾಪ್‌ಡೌನ್‌ನಿಂದ 'ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್' ಅನ್ನು ಆಯ್ಕೆಮಾಡಿ.
3) ಈಗ ನಿಮ್ಮ 'ಅರ್ಜಿ ಸಂಖ್ಯೆ' ಮತ್ತು 'ಪ್ಯಾನ್ ಸಂಖ್ಯೆ' ನಮೂದಿಸಿ.
4) ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ (ನಾನು ರೋಬೋಟ್ ಅಲ್ಲ) ಮತ್ತು 'ಹುಡುಕಾಟ' ಬಟನ್ ಮೇಲೆ ಟ್ಯಾಪ್ ಮಾಡಿ.
5) ಇದರ ನಂತರ ಷೇರು ಹಂಚಿಕೆಯ ಸ್ಥಿತಿ ನಿಮ್ಮ ಮುಂದೆ ಬಿತ್ತರಗೊಳ್ಳಲಿದೆ.
ಕೆಫಿನ್ ಟೆಕ್ ಮೂಲಕ ಎಲ್ಐಸಿ ಐಪಿಓ ಹಂಚಿಕೆಯ ಸ್ಥಿತಿಯನ್ನು ಹೀಗೆ ಪರಿಶೀಲಿಸಿ
ನೀವು ಬಯಸಿದರೆ ಎಲ್ಐಸಿ ಷೇರುಗಳ ಹಂಚಿಕೆಯ ಸ್ಥಿತಿಯನ್ನು ಕೆಫಿನ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ನ ಅಧಿಕೃತ ತಾಣವಾಗಿರುವ https://kcas.kfintech.com/ipostatus ಭೇಟಿ ನೀಡುವ ಮೂಲಕ ಕೂಡ ಪರಿಶೀಲಿಸಬಹುದು.
1) ಇದಕ್ಕಾಗಿ ಮೊದಲು KFin Technologies Private Limited ನ ಪೋರ್ಟಲ್‌ಗೆ ಭೇಟಿ ನೀಡಿ.
2) 'LIC IPO' ಮೇಲೆ ಕ್ಲಿಕ್ ಮಾಡಿ.
3) ಇಲ್ಲಿ ನಿಮಗೆ ನಿಮ್ಮ ಸ್ಥಿತಿಯನ್ನು ಪರಿಶೀಲಿಸಲು 3 ಆಯ್ಕೆಗಳು ಸಿಗಲಿವೆ
4) ನಿಮ್ಮ ಅಪ್ಲಿಕೇಶನ್ ಸಂಖ್ಯೆ, ಕ್ಲೈಂಟ್ ಐಡಿ ಅಥವಾ ಪ್ಯಾನ್ ಐಡಿಯನ್ನು ನಮೂದಿಸುವ ಮೂಲಕ ನೀವು ನಿಮ್ಮ ಸ್ಥಿತಿಯನ್ನು ಪರಿಶೀಲಿಸಬಹುದು.
5) ನಂತರ ಅದರಲ್ಲಿ ನಿಮ್ಮ ವಿವರಗಳನ್ನು ಭರ್ತಿ ಮಾಡಿ.
5) ಭದ್ರತೆಗಾಗಿ ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು 'ಸಬ್ಮಿಟ್' ಗುಂಡಿಯನ್ನೊಮ್ಮೆ ಕ್ಲಿಕ್ಕಿಸಿ.
6) ಹಂಚಿಕೆ ಸ್ಥಿತಿಯು ನಿಮ್ಮ ಮುಂದೆ ತೆರೆದುಕೊಳ್ಳಲಿದೆ.
ಇದನ್ನೂ ಓದಿ-Bank-Post Office ವಹಿವಾಟಿನ ನಿಯಮಗಳಲ್ಲಿ ಬದಲಾವಣೆ, ನಿಮಗೂ ತಿಳಿದಿರಲಿ
ಯಾವಾಗ ನಿಮ್ಮ ಖಾತೆಗೆ ಷೇರುಗಳು ಬರಲಿವೆ
ಎಲ್ಐಸಿ ಐಪಿಓ ಹೂಡಿಕೆದಾರರ ಡಿಮ್ಯಾಟ್ ಖಾತೆಗೆ ಮೇ 16, 2022ರವರೆಗೆ ಅವರ ಷೇರುಗಳು ಜಮೆಯಾಗಲಿವೆ.
ಇದನ್ನೂ ಓದಿ-ಗ್ರಾಹಕರಿಗೆ ಕೊಂಚ ರಿಲೀಫ್: ಇಲ್ಲಿದೆ ಇಂದಿನ ತರಕಾರಿ ಬೆಲೆ
ಷೇರುಗಳ ಟ್ರೇಡಿಂಗ್ ಯಾವಾಗ ಆರಂಭ?
ಮೇ 17, 2022 ರಂದು ಎಲ್ಐಸಿಯ ಷೇರುಗಳು ಸ್ಟಾಕ್ ಮಾರ್ಕೆಟ್ ನಲ್ಲಿ ಪಟ್ಟಿಯಾಗಲಿವೆ. ದೇಶದ ಅತಿ ದೊಡ್ಡ ಐಪಿಓ ಆಗಿರುವ ಎಲ್ಐಸಿ ಐಪಿಓಗಾಗಿ ಪ್ರತಿ ಷೇರಿನ ಬೆಲೆಯನ್ನು ರೂ.902 ರಿಂದ ರೂ. 949 ಕ್ಕೆ ನಿಗದಿಪಡಿಸಲಾಗಿತ್ತು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.