Mahindra Atom EV :ಕೇವಲ 3 ಲಕ್ಷ ರೂಪಾಯಿಗಳಿಗೆ ಮಹೀಂದ್ರ ಬಿಡುಗಡೆ ಮಾಡುತ್ತಿದೆ ಎಲೆಕ್ಟ್ರಿಕ್ ಕಾರು ..!

Mahindra Atom EV ಮಹೀಂದ್ರಾ ಎಲೆಕ್ಟ್ರಿಕ್ ಈಗ ಆಟೊಮ್‌ನ ತಾಂತ್ರಿಕ ವಿವರಗಳನ್ನು ಹಂಚಿಕೊಂಡಿದೆ. ಇದು ದೇಶದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರು ಆಗಿರಲಿದೆ. ಮಹೀಂದ್ರಾ ಶೀಘ್ರದಲ್ಲೇ ಭಾರತದಲ್ಲಿ ಆಟಮ್ ಕ್ವಾಡ್ರಿಸೈಕಲ್ ಅನ್ನು ಬಿಡುಗಡೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಇದು ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ.

Written by - Ranjitha R K | Last Updated : May 7, 2022, 01:05 PM IST
  • ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ಹೆಚ್ಚುತ್ತಿದೆ.
  • 4 ರೂಪಾಂತರಗಳಲ್ಲಿ EV ಬಿಡುಗಡೆಯಾಗಲಿದೆ
  • ಇದರ ಬೆಲೆ ಕೇವಲ 3 ಲಕ್ಷ ರೂಪಾಯಿ ಮಾತ್ರ
Mahindra Atom EV :ಕೇವಲ 3  ಲಕ್ಷ ರೂಪಾಯಿಗಳಿಗೆ ಮಹೀಂದ್ರ ಬಿಡುಗಡೆ ಮಾಡುತ್ತಿದೆ ಎಲೆಕ್ಟ್ರಿಕ್ ಕಾರು ..!  title=
Mahindra Atom EV (file photo)

ಬೆಂಗಳೂರು : Mahindra Atom EV: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ವಾಹನಗಳ  ಬಗ್ಗೆ ಗ್ರಾಹಕರು  ಹೆಚ್ಚು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ದೊಡ್ಡ ವಾಹನ ತಯಾರಕರೊಂದಿಗೆ, ಸ್ಟಾರ್ಟ್‌ಅಪ್‌ಗಳು ಸಹ ಈಗ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ತರುತ್ತಿವೆ. ಮಹೀಂದ್ರಾ ಎಲೆಕ್ಟ್ರಿಕ್ ಆಟೋಮ್ ಕ್ವಾಡ್ರಿಸೈಕಲ್ ಅನ್ನು ಟ್ರೆಯೋ ಆಟೋ, ಟ್ರಿಯೋ ಜೋರ್ ಡೆಲಿವರಿ ವ್ಯಾನ್, ಟ್ರೀಯೋ ಟಿಪ್ಪರ್ ರೂಪಾಂತರ ಮತ್ತು ಇ-ಆಲ್ಫಾ ಮಿನಿ ಟಿಪ್ಪರ್‌ ಮೂಲಕ ಪರಿಚಯಿಸಿದೆ. ಮಹೀಂದ್ರಾ ಎಲೆಕ್ಟ್ರಿಕ್ 3-ವೀಲರ್ ವಿಭಾಗದಲ್ಲಿ 73.4 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ. 

 4 ರೂಪಾಂತರಗಳಲ್ಲಿ EV ಬಿಡುಗಡೆಯಾಗಲಿದೆ :
K1, K2, K3 ಮತ್ತು K4 ಎಂಬ ನಾಲ್ಕು ರೂಪಾಂತರಗಳಲ್ಲಿ ಮಹೀಂದ್ರ ಆಟಮ್ ಅನ್ನು ಬಿಡುಗಡೆ ಮಾಡಲಾಗುವುದು. ಮೊದಲ ಎರಡು ರೂಪಾಂತರಗಳು 7.4 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತವೆ. ಆದರೆ ಇತರ ಎರಡು ಶಕ್ತಿಶಾಲಿ 11.1 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತವೆ. ಆಟಮ್‌ನ K1 ಮತ್ತು K3 ಮೂಲ ರೂಪಾಂತರಗಳು ಹವಾನಿಯಂತ್ರಣ ವ್ಯವಸ್ಥೆಯೊಂದಿಗೆ ಬರುವುದಿಲ್ಲ. ಆದರೆ K2 ಮತ್ತು K4 ಈ ವೈಶಿಷ್ಟ್ಯವನ್ನು ಹೊಂದಿವೆ. ಕಂಪನಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಆಟಮ್ ಕ್ವಾಡ್ರಿಸೈಕಲ್ ಅನ್ನು ಬಿಡುಗಡೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : Honda Affordable Bikes: ಪ್ರತಿಯೊಬ್ಬರ ಬಜೆಟ್‌ಗೆ ಸರಿಹೊಂದುವ ಬೈಕ್ ಬಿಡುಗಡೆ ಮಾಡಲಿದೆ ಹೋಂಡಾ , ಶೀಘ್ರದಲ್ಲೇ ಮಾರುಕಟ್ಟೆಗೆ

ಮಹೀಂದ್ರ ಆಟಮ್ ಕ್ವಾಡ್ರಿಸೈಕಲ್ :
ಎಲೆಕ್ಟ್ರಿಕ್ ಚಾಲಿತ ಮಹೀಂದ್ರ ಆಟಮ್ ಆರಾಮದಾಯಕ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಕ್ಲೀನ್ ಎನರ್ಜಿಯೊಂದಿಗೆ ಬರುತ್ತದೆ. ಆಟಮ್ ಜೊತೆಗೆ, ಮಹೀಂದ್ರಾ ಇ-ಆಲ್ಫಾ ಮಿನಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಎಲೆಕ್ಟ್ರಿಕ್ ಆಲ್ಫಾ ಟಿಪ್ಪರ್ ಅನ್ನು ಮಾರುಕಟ್ಟೆಗೆ  ಪರಿಚಯಿಸಿದೆ. ಇ-ಆಲ್ಫಾ ಮಿನಿ ಟಿಪ್ಪರ್ 1.5 kWh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು ಒಂದೇ ಚಾರ್ಜ್‌ನಲ್ಲಿ 80 ಕಿಮೀ ವರೆಗೆ ವ್ಯಾಪ್ತಿಯನ್ನು ನೀಡುತ್ತದೆ. ಇದರ ಲೋಡಿಂಗ್ ಸಾಮರ್ಥ್ಯ 310 ಕೆ.ಜಿ. ಪ್ರಸ್ತುತ, ಮಹೀಂದ್ರ ಆಟಮ್ ಅನ್ನು ವಾಣಿಜ್ಯ ವಾಹನವಾಗಿ ಬಿಡುಗಡೆ ಮಾಡಲಾಗಿದ್ದು, ಇದನ್ನು ವೈಯಕ್ತಿಕ ಬಳಕೆಗಾಗಿ ಬಿಡುಗಡೆ ಮಾಡಲಾಗುತ್ತದೆಯೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 

ಬೆಲೆ ಬರೀ 3 ಲಕ್ಷ ರೂ.  :
ಮಹೀಂದ್ರಾ ಆಟಮ್ ವಿನ್ಯಾಸ  ಮತ್ತು ವೈಶಿಷ್ಟ್ಯಗಳಲ್ಲಿ ಪೈಸಾ ವಸೂಲ್ ಕಾರು ಎಂದೇ ಹೇಳಲಾಗಿದೆ. ಅದರ ಬೆಲೆಯು ತುಂಬಾ ಕಡಿಮೆ. ಮೂಲಗಳ ಪ್ರಕಾರ ಈ ಕಾರಿನ ಬೆಲೆ ಸುಮಾರು 3 ಲಕ್ಷ ರೂ . ಇರಬಹುದು ಎಂದು ಅಂದಾಜಿಸಲಾಗಿದೆ. ಮಹೀಂದ್ರ ಆಟಮ್ ಗರಿಷ್ಠ 50 ಕಿಮೀ / ಗಂ ವೇಗವನ್ನು ಹೊಂದಿರುತ್ತದೆ. ಅದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆಟಮ್ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿ.ಮೀ ವರೆಗೆ ಓಡಿಸಬಹುದು. ಎಲೆಕ್ಟ್ರಿಕ್ ಆಟೋ-ರಿಕ್ಷಾಕ್ಕೆ ಇದು ಉತ್ತಮ ಆಯ್ಕೆಯಾಗಿ ಹೊರಹೊಮ್ಮಿದೆ ಎನ್ನಲಾಗಿದೆ. 

ಇದನ್ನೂ ಓದಿ : LPG Price Increases: LPG ಬೆಲೆಯಲ್ಲಿ 50 ರೂಪಾಯಿ ಏರಿಕೆ , ಜನಸಾಮಾನ್ಯನ ಮೇಲೆ ಮತ್ತೆ ಬೆಲೆ ಏರಿಕೆ ಬರೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News